Bengaluru: ನಾಯಿ ವಿಚಾರಕ್ಕೆ ಮಗಳ ಜೊತೆ ಆತ್ಮಹತ್ಯೆಗೆ ಶರಣಾದ ತಾಯಿ

ದಿವ್ಯಾ ಮತ್ತು ಶ್ರೀನಿವಾಸ್ ಮದುವೆ 2008ರಲ್ಲಿ ನಡೆದಿತ್ತು. ಕಳೆದ ಕೆಲವು ದಿನಗಳಿಂದ ದಿವ್ಯಾ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯಲ್ಲಿ ನಾಯಿ (Pet Dog) ಇರಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಮಗಳು ಆತ್ಮಹತ್ಯೆ (Mother Daughter Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ದಿವ್ಯಾ (36) ಮತ್ತು 13 ವರ್ಷದ ಹೃದಯಾ ಎಸ್ ಮೃತ ದುರ್ದೈವಿಗಳು. ಮೃತರು ಬೆಂಗಳೂರಿನ ಪೂರ್ವದ ಬಾಣಸವಾಡಿಯ ಎಚ್‌ಬಿಆರ್ ಲೇಔಟ್‌ನಲ್ಲಿ (HBR Layout) ವಾಸವಾಗಿದ್ದರು. ದಿವ್ಯಾ ಗೃಹಿಣಿಯಾಗಿದ್ದು, ಮಗಳು ಹೃದಯಾ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಳು. ಮಗಳು ಮತ್ತು ಮೊಮ್ಮಗಳ ಸಾವಿನ ಬಗ್ಗೆ ದಿವ್ಯಾ ತಂದೆ ರಾಮನ್ ಮೂವರ ವಿರುದ್ಧ ದೂರು ದಾಖಲಿಸಿದ್ದರು. ಸದ್ಯ ದಿವ್ಯಾ ಪತಿ ಶ್ರೀನಿವಾಸ್, ಅತ್ತೆ ವಸಂತಾ ಮತ್ತು ಮಾವ ಜನಾರ್ದನ್ ವಿರುದ್ಧ ಐಪಿಸಿ ಸೆಕ್ಷನ್ 306ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಶ್ರೀನಿವಾಸ್ ಬಂಧನವಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚರ್ಮದ ಅಲರ್ಜಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಿವ್ಯಾ

ದಿವ್ಯಾ ಮತ್ತು ಶ್ರೀನಿವಾಸ್ ಮದುವೆ 2008ರಲ್ಲಿ ನಡೆದಿತ್ತು. ಕಳೆದ ಕೆಲವು ದಿನಗಳಿಂದ ದಿವ್ಯಾ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರು ಮನೆಯಲ್ಲಿರುವ ಸಾಕುಪ್ರಾಣಿಗಳಿಂದ ದೂರ ಇರುವಂತೆ ಸಲಹೆ ನೀಡಿದ್ದರು. ಆದರೆ ಮನೆಯಲ್ಲಿರುವ ನಾಯಿಯನ್ನು ಬೇರೆ ಅವರಿಗೆ ನೀಡಲು ಶ್ರೀನಿವಾಸ್ ಮತ್ತು ಆತನ ಪೋಷಕರು ಒಪ್ಪಿರಲಿಲ್ಲ.

ಮನೆಯಲ್ಲಿ ಕಿರುಕುಳ ಆರೋಪ

ಈ ಸಂಬಂಧ ದಿವ್ಯಾ ಮತ್ತು ಪತಿ ಹಾಗೂ ಅತ್ತೆ, ಮಾವನ ಜೊತೆ ಜಗಳ ನಡೆದಿತ್ತು. ನಾಯಿ ಬೇರೆಯವರಿಗೆ ನೀಡದಿದ್ದರೆ ಮಗಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಹೇಳಿದ್ದರು. ಆದ್ರೆ ಕುಟುಂಬಸ್ಥರು ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ. ಮಗಳಿಗೆ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂದು ರಾಮನ್ ಆರೋಪಿಸಿದ್ದಾರೆ.

Bengaluru Crime News Mother committed suicide with daughter over dog issue mrq
ಸಾಂದರ್ಭಿಕ ಚಿತ್ರ


ಡೆತ್​ನೋಟ್ ಇಲ್ಲ

ಸೋಮವಾರ ಬೆಳಗ್ಗೆ 7.30 ಆದರೂ ದಿವ್ಯಾ ಮತ್ತು ಹೃದಯಾ ಕೋಣೆಯಿಂದ ಹೊರ ಬಂದಿರಲಿಲ್ಲ. ನಂತರ ಪತಿ ನೋಡಿದಾಗ ಇಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ನಮಗೆ ಯಾವುದೇ ಡೆತ್​ ನೋಟ್ ಲಭ್ಯವಾಗಿಲ್ಲ. ದಿವ್ಯಾ ತಂದೆ ರಾಮನ್ ನೀಡಿದ ದೂರಿನಡಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Rain Disaster: ಬೆಳಗಾವಿಯಲ್ಲಿ ಮಳೆ ಅವಾಂತರ; ಒಂದೇ ವಾರದಲ್ಲಿ ‌ಮೂವರು ಬಲಿ!

ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಮೃತದೇಹ ಪತ್ತೆ

ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರ ಮೃತದೇಹಗಳು (UP Dalit Sisters Death) ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ (Lakhimpur Kheri) ನಿಘಸನ್ ಪ್ರದೇಶದಲ್ಲಿ ಈ ಸಹೋದರಿಯರ ಮೃತದೇಹ ಪತ್ತೆಯಾಗಿದೆ. ಪೊಲೀಸ್ ತಂಡವು (Police) ಸ್ಥಳಕ್ಕೆ ಧಾವಿಸಿದ್ದು, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Bengaluru Crime News Mother committed suicide with daughter over dog issue mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Karnataka Assembly Elections: ಮಂಗಳೂರು ದಕ್ಷಿಣದಲ್ಲಿ ಬಿಜೆಪಿಗಿಲ್ಲ ಟೆನ್ಶನ್: ಕಾಂಗ್ರೆಸ್​ಗೆ ಬಿಸಿ ತುಪ್ಪವಾದ ಅಭ್ಯರ್ಥಿ ಆಯ್ಕೆ!

ಮೂವರು ಬಾಲಕಿಯರು ನಾಪತ್ತೆ

ಬೆಂಗಳೂರು ನಗರದಲ್ಲಿ ಮೂವರು ಬಾಲಕಿಯರು (Girls) ನಾಪತ್ತೆಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಪುಲಕೇಶಿನಗರ (Pulakeshinagar) ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 3 ವಿದ್ಯಾರ್ಥಿನಿಯರು (Student) ನಾಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 6 ರಂದು ಮೂವರು ಬಾಲಕಿಯರು ನಾಪತ್ತೆಯಾಗಿದ್ದು, ಈ ಸಂಬಂಧ ಪೋಷಕರು (Parents) ಪುಲಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
Published by:Mahmadrafik K
First published: