'ಅಮ್ಮಾ ನನ್ನನ್ನು ಕ್ಷಮಿಸಿಬಿಡು...; ವರದಕ್ಷಿಣೆ ಕಿರುಕುಳ ತಾಳಲಾರದೇ ಸಿನಿಮಾ ಗಾಯಕಿ ಆತ್ಮಹತ್ಯೆ

ಮೃತ ಸುಶ್ಮಿತಾ ಅನೇಕ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಹಾಲುತುಪ್ಪ, ಶ್ರೀ ಸಾಮಾನ್ಯ ಸಿನಿಮಾಗಳಿಗೆ ಹಾಡಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಗಾಯಕಿ ಸುಶ್ಮಿತಾ ಗಂಡನ ಜೊತೆಯಲ್ಲಿ

ಆತ್ಮಹತ್ಯೆ ಮಾಡಿಕೊಂಡ ಗಾಯಕಿ ಸುಶ್ಮಿತಾ ಗಂಡನ ಜೊತೆಯಲ್ಲಿ

 • Share this:
  ಬೆಂಗಳೂರು(ಫೆ.17): ಹಲವಾರು ಕನ್ನಡ ಸಿನಿಮಾಗಳಿಗೆ ಹಾಡಿದ್ದ ಗಾಯಕಿ ವರದಕ್ಷಿಣೆ ಕಿರುಕುಳ ತಾಳಲಾರದೆ ಇಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ. 

  ಸುಷ್ಮಿತಾ(26) ಆತ್ಮಹತ್ಯೆಗೆ ಶರಣಾದ ಗಾಯಕಿ. ಈಕೆಯ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ಸುಷ್ಮಿತಾ ಇಂದು  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

  ಸಾಯುವ ಮುನ್ನ ತನ್ನ ತಾಯಿ ಮತ್ತು ತಮ್ಮನಿಗೆ ವಾಟ್ಸ್ಯಾಪ್ ಮೂಲಕ ಮೆಸೇಜ್​ ಕಳುಹಿಸಿದ್ದಾಳೆ.

  ಅಮ್ಮ ನನ್ನನ್ನು ಕ್ಷಮಿಸಿಬಿಡು, ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು, ನನಗೆ ಅವರ ದೊಡ್ಡಮ್ಮ ಮತ್ತು ಚಿತ್ರ ಹಿಂಸೆ ಕೊಡುತ್ತಿದ್ದರು. ಮಾತೆತ್ತಿದರೆ ಮನೆ ಬಿಟ್ಟು ಹೋಗು ಅಂತಿದ್ರು, ಮಾನಸಿಕವಾಗಿ ತುಂಬಾ ಹಿಂಸೆ ಆಗುತ್ತಿತ್ತು. ಅವರನ್ನು ಮಾತ್ರ ಸುಮ್ನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರವಾಗಿ ಕಾರಣರಾಗುತ್ತಾರೆ. ಎಷ್ಟು ಬೇಡಿಕೊಂಡರೂ, ಕಾಲು ಹಿಡಿದುಕೊಂಡರೂ ಅವನ ಮಸನು ಕರಗಲಿಲ್ಲ. ಅವರ ಮನೆಯಲ್ಲಿ ಸಾಯಲು ನನಗೆ ಇಷ್ಟವಿರಲಿಲ್ಲ. ಮದುವೆಯಾದಾಗಿನಿಂದ ಇದೇ ರೀತಿ ಹಿಂಸೆ ಅಮ್ಮ, ಯಾರ ಹತ್ರಾನೂ ಹೇಳಿಕೊಂಡಿರಲಿಲ್ಲ. ನನನ್ನು ನಮ್ಮ ಊರಿನಲ್ಲಿ ಮಣ್ಣು ಮಾಡು ಅಥವಾ ಸುಡು. ನನ್ನ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ, ಅವರನ್ನು ಮಾತ್ರ ಸುಮ್ಮನೆ ಬಿಡಬೇಡ, ಇಲ್ಲವಾದರೆ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ. ಅಮ್ಮ ಮಿಸ್​ ಯೂ.. ನಿನಗೋಸ್ಕರ ನನ್ನ ತಮ್ಮ ಸಚಿನ್​ ಇದ್ದಾನೆ. ಅವನನ್ನು ಚೆನ್ನಾಗಿ ನೋಡಿಕೋ.. ಮತ್ತೊಮ್ಮೆ ಕ್ಷಮೆಯಾಚಿಸುತ್ತಿದ್ದೇನೆ..


   

  Breaking News - ಮುಂಬೈನ ಜಿಎಸ್​ಟಿ ಭವನದಲ್ಲಿ ಭಾರೀ ಅಗ್ನಿ ಅವಘಡ

  ಮೃತ ಸುಷ್ಮಿತಾ ಅನೇಕ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಹಾಲುತುಪ್ಪ, ಶ್ರೀ ಸಾಮಾನ್ಯ ಸಿನಿಮಾಗಳಿಗೆ ಹಾಡಿದ್ದಾರೆ.

  ಒಂದೂವರೆ ವರ್ಷದ ಹಿಂದೆ ಕನಕಪುರ ಮೂಲದ ಶರತ್ ಜೊತೆ ಸುಷ್ಮಿತಾ ಮದುವೆಯಾಗಿದ್ದರು. ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ ಸುಷ್ಮಿತಾ ಗಂಡ,  ಮದುವೆ ಬಳಿಕ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಆರೇಳು ತಿಂಗಳಿಂದ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

  ಕುಮಾರಸ್ವಾಮಿ ಲೇಔಟ್​​ನಲ್ಲಿರುವ ಗಂಡನ ಮನೆಯಲ್ಲಿ ಸುಷ್ಮಿತಾ ವಾಸವಿದ್ದಳು. ಕಳೆದ ರಾತ್ರಿ ನಾಗರಭಾವಿಯಲ್ಲಿರುವ ತಾಯಿ ಮನೆಗೆ ಬಂದಿದ್ದಳು. ಸಾಯುವ ಮುನ್ನ ಇಂಗ್ಲಿಷ್​​​ನಲ್ಲಿ ತಾಯಿಗೆ ಮೆಸೇಜ್ ಕಳುಹಿಸಿದ್ದಾಳೆ. ಆದರೆ ತಾಯಿಗೆ ಇಂಗ್ಲಿಷ್ ಬರದ ಕಾರಣ ಸುಮ್ಮನಾಗಿದ್ದರು. ಬೆಳಗ್ಗೆ ಆಕೆಯ ತಮ್ಮ ಸಚಿನ್ ಕೆಲಸಕ್ಕೆ ಹೋಗುವಾಗ ಮೆಸೇಜ್ ನೋಡಿ ಶಾಕ್​ ಆಗಿದ್ದಾನೆ. ಆ ಬಳಿಕ ಘಟನೆ ಬೆಳಕಿಗೆ ಬಂದಿದೆ.

  ಮುಂಬೈನ ಜಿಎಸ್​ಟಿ ಭವನದಲ್ಲಿ ಭಾರೀ ಅಗ್ನಿ ಅವಘಡ

  ಸಾವಿನಲ್ಲೂ ಸಾರ್ಥಕತೆ ಮೆರೆಯಲು ಸುಷ್ಮಿತಾ ಪೋಷಕರು ಮುಂದಾಗಿದ್ದಾರೆ. ಸುಷ್ಮಿತಾಳ ಕಣ್ಣು ದಾನ ಮಾಡಲು ಆಕೆಯ ಪೋಷಕರು ನಿರ್ಧರಿಸಿದ್ದಾರೆ.ಈ ಸಂಬಂಧ  ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  First published: