Bangalore Crime: ಬೆಂಗಳೂರಿನಲ್ಲಿ ಅಗ್ನಿ ಅವಘಡ; ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸುಟ್ಟು ಭಸ್ಮ

Bengaluru Fire Accident: ಬೆಂಗಳೂರಿನ ಮೇದರಹಳ್ಳಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೀಣ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ಆರಿಸುವ ಕಾರ್ಯ ನಡೆಸಿದರು.

news18-kannada
Updated:July 5, 2020, 7:49 AM IST
Bangalore Crime: ಬೆಂಗಳೂರಿನಲ್ಲಿ ಅಗ್ನಿ ಅವಘಡ; ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸುಟ್ಟು ಭಸ್ಮ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು. 5): ಅಕ್ರಮವಾಗಿ ಪಟಾಕಿಯನ್ನು ಶೇಖರಣೆ ಮಾಡಿದ್ದ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿದ್ದ ರಾಶಿ ರಾಶಿ ಪಟಾಕಿಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರಿನಲ್ಲಿ ನಿನ್ನೆ ನಡುರಾತ್ರಿ ನಡೆದಿದೆ. ಜನನಿಬಿಡ ಪ್ರದೇಶವಾಗಿರುವ ಈ ಭಾಗದಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದರಿಂದ ಭಾರೀ ಅಪಾಯವೊಂದು ತಪ್ಪಿದಂತಾಗಿದೆ.

ಬೆಂಗಳೂರಿನ ಮೇದರಹಳ್ಳಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೀಣ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ಆರಿಸುವ ಕಾರ್ಯ ನಡೆಸಿದರು. ಹನುಮಂತರಾಜು ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ಮಾಲೀಕ ಅಕ್ರಮವಾಗಿ ಪಟಾಕಿ ಇಟ್ಟುಕೊಂಡಿದ್ದ. ಅಕ್ರಮ ಪಟಾಕಿ ಅಂಗಡಿ ಮಾಲೀಕನ ವಿವರಣೆ ಕೇಳಲು ಮುಂದಾಗಿದ್ದ ಮಾಧ್ಯಮಗಳ ಮೇಲೆ ಗರಂ ಆಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 42 ಸಾವು; 1,839 ಪ್ರಕರಣ ದಾಖಲು

ಘಟನೆ ನಡೆದ ಸ್ಥಳದಲ್ಲಿ ಸೋಲದೇವನಹಳ್ಳಿ ಠಾಣೆ ಪೋಲಿಸರು ಇದ್ದರೂ ವಿಡಿಯೋ ಚಿತ್ರೀಕರಣ ಮಾಡದಂತೆ ಮಾಧ್ಯಮಗಳಿಗೆ ಅಡ್ಡಿಪಡಿಸಲಾಗಿದೆ. ಸೋಲದೇವನಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published by: Sushma Chakre
First published: July 5, 2020, 7:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading