ಬೆಂಗಳೂರು (ಫೆ): ಕಳೆದ ತಿಂಗಳು ನಗರದಲ್ಲಿ ಬಿಎಂಟಿಸಿ ಬಸ್ ಬ್ರೇಕ್ಫೇಲ್ ಆಗಿ ಇಬ್ಬರು ಮೃತಪಟ್ಟಿದ್ದರು. ಈಗ ಬಿಎಂಟಿಸಿಗೆ ಮತ್ತೋರ್ವ ಯುವಕ ಮೃತಪಟ್ಟಿದ್ದಾನೆ. ಚಾಲಕರ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದನೂರು ಚಿಂತನ್ (26) ಮೃತ ಯುವಕ.
ಶಾಂತಿನಗರ ಬಸ್ ನಿಲ್ದಾಣದ ಬಿಟಿಎಸ್ ರಸ್ತೆ ಬಳಿ ಈ ಘಟನೆ ನಡೆದಿದೆ. ಚಿಂತನ್ ಚಿಂತನ್ ಮೆಜೆಸ್ಟಿಕ್ಗೆ ಹೋಗುವವನಿದ್ದ. ಆದರೆ, ತಿಳಿಯದೆ ಶಿವಾಜಿನಗರಕ್ಕೆ ಹೋಗುವ ಬಸ್ ಹತ್ತಿದ್ದ. ಕಂಡಕ್ಟರ್ ಈ ಬಸ್ ಮೆಜೆಸ್ಟಿಕ್ ಗೆ ಹೋಗುವುದಿಲ್ಲ ಎಂದಾಗ ಓಪನ್ ಇದ್ದ ಡೋರ್ನಿಂದ ಚಿಂತನ್ ಇಳಿಯಲು ಹೋಗಿದ್ದ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದ.
ಕೆಳಗೆ ಬಿದ್ದ ವೇಳೆ
ಚಿಂತನ್ ಬಸ್ ಕೆಳಗೆ ನಡೆದಿದ್ದ. ಹೀಗಾಗಿ ಬಿಎಂಟಿಸಿ ಬಸ್ನ ಹಿಂದಿನ ಚಕ್ರ ಚಿಂತನ್ ತಲೆ ಮೇಲೆ ಹರಿದಿದೆ. ಹೀಗಾಗಿ ಚಿಂತನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಯಾಣಿಕರನ್ನು ಹತ್ತಿಸಿಕೊಂಡು ಬಾಗಿಲು ಹಾಕದ ಹಿನ್ನಲೆಯಲ್ಲಿ ಚಾಲಕನ ಮೇಲೆ ಕೇಸ್ ದಾಖಲು ಮಾಡಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ಯೂರ್; ಸರಣಿ ಅಪಘಾತ – ಇಬ್ಬರು ಸಾವು; 10ಕ್ಕೂ ಹೆಚ್ಚು ಮಂದಿಗೆ ಗಾಯ
ಜನವರಿ 6ರಂದು ನಗರ
ಮಾಗಡಿ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ ಸಮೀಪ ಭೀಕರ್ ಅಪಘಾತ ಸಂಭವಿಸಿತ್ತು. ಸುಂಕದಕಟ್ಟೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ನ ಬ್ರೇಕ್ ವಿಫಲಗೊಂಡ ಹಿನ್ನೆಲೆಯಲ್ಲಿ ಸರಣಿ ಅಪಘಾತ ಸಂಭವಿಸಿತ್ತು. ಈ ವೇಳೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ