Bengaluru Crime: ಕಳ್ಳತನ ಮಾಡಲು ಬೆತ್ತಲಾಗ್ತಾರೆ ಈ ಖದೀಮರು; ಬೆಂಗಳೂರಿನಲ್ಲೊಂದು ವಿಚಿತ್ರ ಗ್ಯಾಂಗ್

ಇವರು ಕದ್ದಂತಹ ವಸ್ತುಗಳನ್ನು ಟವೆಲ್​ನಲ್ಲಿ ಕಟ್ಟಿ ಬೆನ್ನಿಗೆ ಕಟ್ಟಿಕೊಳ್ಳುತ್ತಾರೆ. ಎದುರಿನಿಂದ ಬರುವವರಿಗೆ ಈತ ಕಳ್ಳ ಎನ್ನುವ ಒಂದು ಚಿಕ್ಕ ಸೂಚನೆಯೂ ಸಿಗುವುದಿಲ್ಲ. ಇದರ ಸಿಸಿಟಿವಿ ದೃಶ್ಯಾವಳಿಗಳು ನ್ಯೂಸ್​18 ಕನ್ನಡಕ್ಕೆ ಲಭ್ಯವಾಗಿದೆ.

Rajesh Duggumane | news18-kannada
Updated:November 11, 2019, 8:45 AM IST
Bengaluru Crime: ಕಳ್ಳತನ ಮಾಡಲು ಬೆತ್ತಲಾಗ್ತಾರೆ ಈ ಖದೀಮರು; ಬೆಂಗಳೂರಿನಲ್ಲೊಂದು ವಿಚಿತ್ರ ಗ್ಯಾಂಗ್
ಕಳ್ಳತನ ಮಾಡುತ್ತಿರುವ ದೃಶ್ಯ
  • Share this:
ಬೆಂಗಳೂರು (ನ.11): ಕದ್ದು ಮುಚ್ಚಿ ಕಳ್ಳತನ ಮಾಡುವುದನ್ನು ನೀವು ನೋಡಿರುತ್ತೀರಿ. ಗೋಡೆ ಕೊರೆದು ಕನ್ನ ಹಾಕಿ ದೋಚುವುದನ್ನು ಕಂಡಿರುತ್ತೀರಿ. ಯಾರಿಗೂ ಗೊತ್ತಾಗಬಾರದು ಎಂದು ಮಾಸ್ಕ್​​ ಹಾಕೊಂಡು ಕದಿಯೋದು ಮಾಮೂಲಿ. ಆದರೆ, ಬೆಂಗಳೂರಿನಲ್ಲೊಂದು ವಿಚಿತ್ರ ಗ್ಯಾಂಗ್​ ಪ್ರತ್ಯಕ್ಷವಾಗಿದೆ. ಈ ಖದೀಮರು ಕಳ್ಳತನ ಮಾಡುವಾಗ ಬಟ್ಟೆ ಬಿಚ್ಚಿಟ್ಟು ಹೋಗುತ್ತಾರೆ ಎನ್ನುವುದು ವಿಚಿತ್ರ.

ಹೌದು, ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಗ್ಯಾಂಗ್​ ಪತ್ತೆ ಆಗಿದೆ. ಈ ಗ್ಯಾಂಗ್​ ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯುತ್ತದೆ. ಎಲ್ಲರೂ ಮಲಗಿದ್ದಾಗ ಕಾರ್ಯಾಚರಣೆ ನಡೆಸುವ ಇವರು ಮೈ ಮೇಲೆ ಚಿಕ್ಕ ಚಡ್ಡಿ ಬಿಟ್ಟು ಮತ್ತೇನನ್ನೂ ಇಟ್ಟುಕೊಳ್ಳುವುದಿಲ್ಲ. ಸಪ್ಪಳ ಆಗಬಾರದು ಎನ್ನುವ ಕಾರಣಕ್ಕೆ ಇವರು ಚಪ್ಪಲಿಯನ್ನೂ ಕೈಯಲ್ಲೇ ಇಟ್ಟುಕೊಂಡು ಓಡಾಡುತ್ತಾರೆ!

ಮತ್ತೊಂದು ವಿಚಿತ್ರ ಎಂದರೆ, ಇವರ ಕೈಯಲ್ಲಿ ಕಲ್ಲಿರುತ್ತದೆ. ಯಾರಾದರೂ ಹಿಡಿಯಲು ಮುಂದಾದರೆ ಕಲ್ಲಿನಿಂದ ದಾಳಿ ಮಾಡಿ ಬಿಡುತ್ತಾರೆ. ಹತ್ತಿರ ಬಂದರೆ ಚಾಕುವಿನಿಂದ ಇರಿಯುತ್ತಾರೆ. ಯಾರ ಹಿಡಿತಕ್ಕೂ ಸಿಗಬಾರದು ಎನ್ನುವ ಕಾರಣಕ್ಕೆ ಮೈಗೆ ಎಣ್ಣೆ ಹಚ್ಚಿಕೊಳ್ಳುತ್ತಾರೆ.

ಇದನ್ನೂ ಓದಿ: ವಿಚಾರಣೆ ಹೆಸರಲ್ಲಿ ಬೆಂಗಳೂರಿನ ಪೊಲೀಸರಿಂದ ಮಹಿಳೆ ಮೇಲೆ ನಡೆಯಿತು ಮಾರಣಾಂತಿಕ ಹಲ್ಲೆ

ಇವರು ಎಷ್ಟು ಚಾಲಾಕಿ ಎನ್ನುವುದಕ್ಕೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳೇ ಸಾಕ್ಷಿ. ಈ ತಂಡ ಮನೆಯೊಂದರಲ್ಲಿ ಕಳ್ಳತನ ನಡೆಸಿದೆ.  ಆ ಮನೆಯವರು ನಾಯಿಯನ್ನು ಕೂಡ ಸಾಕಿದ್ದರು. ಆದರೆ, ನಾಯಿಗೂ ಗೊತ್ತಾಗದಂತೆ ಕಳ್ಳತನ ಮಾಡಿ ಈ ಗ್ಯಾಂಗ್​ ಮನೆಯಿಂದ ಹೊರ ಬಿದ್ದಿದೆ.

ಇವರು ಕದ್ದಂತಹ ವಸ್ತುಗಳನ್ನು ಟವೆಲ್​ನಲ್ಲಿ ಕಟ್ಟಿ ಬೆನ್ನಿಗೆ ಕಟ್ಟಿಕೊಳ್ಳುತ್ತಾರೆ. ಎದುರಿನಿಂದ ಬರುವವರಿಗೆ ಈತ ಕಳ್ಳ ಎನ್ನುವ ಒಂದು ಚಿಕ್ಕ ಸೂಚನೆಯೂ ಸಿಗುವುದಿಲ್ಲ. ಒಂದೊಮ್ಮೆ ಸಿಕ್ಕರೆ ಎದುರಿದ್ದವರ ಕೊಲೆ ಗ್ಯಾರಂಟಿ. ಇದರ ಸಿಸಿಟಿವಿ ದೃಶ್ಯಾವಳಿಗಳು ನ್ಯೂಸ್​18 ಕನ್ನಡಕ್ಕೆ ಲಭ್ಯವಾಗಿದೆ.

First published: November 11, 2019, 8:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading