Bengaluru Crime: ಜಾಮೀನು ಪಡೆದು ಹೊರಬಂದಿದ್ದ ಆರೋಪಿಯಿಂದ ವಕೀಲರ ಮನೆಯಲ್ಲೇ ಲಕ್ಷ-ಲಕ್ಷ ದರೋಡೆ

ಆರೋಪಿ ಜಯಂತ್‌ನನ್ನು 2019ರ ಮಾರ್ಚ್ 22ರಂದು ಬಂಧಿಸುವ ವೇಳೆ ಪೊಲೀಸರ ಮೇಲೆ‌ ಹಲ್ಲೆಗೆ ಯತ್ನಿಸಿದ್ದ. ನಂತರ ಪೊಲೀಸರು ಜಯಂತನ ಕಾಲಿಗೆ ಗುಂಡಿಕ್ಕಿ ಆತನನ್ನು ಬಂಧಿಸಿ, ಜೈಲಿಗಟ್ಟಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದ ಆತ ಮತ್ತೆ ದರೋಡೆ ಮುಂದುವರೆಸಿದ್ದ.

news18-kannada
Updated:September 29, 2020, 8:30 AM IST
Bengaluru Crime: ಜಾಮೀನು ಪಡೆದು ಹೊರಬಂದಿದ್ದ ಆರೋಪಿಯಿಂದ ವಕೀಲರ ಮನೆಯಲ್ಲೇ ಲಕ್ಷ-ಲಕ್ಷ ದರೋಡೆ
ನೆಲಮಂಗಲದಲ್ಲಿ ದರೋಡೆ ಮಾಡಿ ಬಂಧಿತರಾಗಿರುವ ಆರೋಪಿಗಳು
  • Share this:
ಬೆಂಗಳೂರು (ಸೆ. 29): ಪೊಲೀಸರಿಂದ ಗುಂಡೇಟು ತಿಂದು ಜೈಲು ಪಾಲಾಗಿದ್ದರೂ ಹಳೆಯ ಚಾಳಿ ಬಿಡದ ಕಳ್ಳ ವಕೀಲರ ಮನೆಯಲ್ಲೇ ಕಳ್ಳತನ ಮಾಡಿದ್ದಾನೆ. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಸುಭಾಷ್ ‌ನಗರದ ನಿವಾಸಿ ವಕೀಲ ಹನುಮಂತರಾಯಪ್ಪ ಇದೇ ತಿಂಗಳ 11 ನೇ ತಾರೀಕು ಪಿತೃಪಕ್ಷಕ್ಕೆಂದು ತಮ್ಮ ಊರಿಗೆ ತೆರಳಿದ್ದರು. ಈ ವೇಳೆ ಪಕ್ಕದ ಮನೆಯಲ್ಲೇ ಇದ್ದುಕೊಂಡು ಹೊಂಚುಹಾಕಿದ್ದ ಆರೋಪಿ ಜಯಂತ್ ಹಾಗೂ ಉಮೇಶ್ ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

ಈ ದರೋಡೆ ಮಾಡಲು ಸರಿ ಸುಮಾರು ನಾಲ್ಕೈದು ತಿಂಗಳುಗಳಿಂದ ಆರೋಪಿಗಳು ಹೊಂಚು ಹಾಕಿದ್ದು, ಸಂಪೂರ್ಣ ರೂಪುರೇಷೆ ರಚಿಸಿಕೊಂಡು ದರೋಡೆಗೆ ಯತ್ನಿಸಿ ಐದು ಲಕ್ಷ ಮೌಲ್ಯದ ‍ಚಿನ್ನಾಭರಣವನ್ನು ಅಪಹರಿಸಿ ಪರಾರಿಯಾಗಿದ್ದಾರೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಇನ್​ಸ್ಪೆಕ್ಟರ್​ ಶಿವಣ್ಣ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ, ಆರೋಪಿಗಳ ಚಲನವಲನಗಳನ್ನ ಗಮನಿಸಿ ಅನುಮಾನದ ಮೇಲೆ ಆರೋಪಿಗಳಾದ ಜಯಂತ್‌ನನ್ನು ವಿಚಾರಣೆ ನಡೆಸಿದಾಗ ಜಯಂತ್ ತನ್ನ ಸ್ನೇಹಿತ ಉಮೇಶನೊಂದಿಗೆ ಸೇರಿಕೊಂಡು ದರೋಡೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಇದನ್ನೂ ಓದಿ: Chikmagalur: ದತ್ತಪೀಠದ ಗುಹೆಯೊಳಗಿನ ಸಿ.ಟಿ. ರವಿ ಫೋಟೋ ವೈರಲ್; ಸಾರ್ವಜನಿಕರಿಂದ ಆಕ್ರೋಶ

ಆರೋಪಿಗಳನ್ನು ನೆಲಮಂಗಲ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ ಕದ್ದಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.‌ ಇದೀಗ ಮತ್ತೊಮ್ಮೆ ಬಂಧನಕ್ಕೊಳಗಾಗಿರುವ ಆರೋಪಿ ಜಯಂತ್ ನೆಲಮಂಗಲ ನಗರ, ನೆಲಮಂಗಲ ಗ್ರಾಮಾಂತರ, ಡಾಬಸ್‌ಪೇಟೆ ಹಾಗೂ ತುಮಕೂರಿನ ಕೆಲ ಠಾಣೆಗಳು ಸೇರಿದಂತೆ 9ಕ್ಕೂ ಹೆಚ್ಚು ಠಾಣೆಗೆ ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದ ಆರೋಪಿಯಾಗಿದ್ದ.

ಆರೋಪಿ ಜಯಂತ್‌ನನ್ನು 2019ರ ಮಾರ್ಚ್ 22ರಂದು ಬಂಧಿಸುವ ವೇಳೆ ಪೊಲೀಸರ ಮೇಲೆ‌ ಹಲ್ಲೆಗೆ ಯತ್ನಿಸಿದ್ದ. ನಂತರ ಪೊಲೀಸರು ಜಯಂತನ ಕಾಲಿಗೆ ಗುಂಡಿಕ್ಕಿ ಆತನನ್ನು ಬಂಧಿಸಿ, ಜೈಲಿಗಟ್ಟಿದ್ದರು. ಆದರೆ, ಆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಆರೋಪಿ ಜಯಂತ್ ತನ್ನ ಹಳೆ ಚಾಳಿ ಮುಂದುವರೆಸಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.
Published by: Sushma Chakre
First published: September 29, 2020, 8:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading