ನಡುರಸ್ತೆಯಲ್ಲಿ ಗಂಡನಿಂದಲೇ ಹೆಂಡತಿ ಹತ್ಯೆ ಪ್ರಕರಣ; ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ

Bengaluru Crime: ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಹೆಂಡತಿಯನ್ನು ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದ ಮಂಜುನಾಥ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

news18-kannada
Updated:July 1, 2020, 1:24 PM IST
ನಡುರಸ್ತೆಯಲ್ಲಿ ಗಂಡನಿಂದಲೇ ಹೆಂಡತಿ ಹತ್ಯೆ ಪ್ರಕರಣ; ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಜು. 1): ಹೆಂಡತಿಯನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದ ಬೆಂಗಳೂರಿನ ರಾಜಗೋಪಾಲ ನಗರದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಹೊರಟಿದ್ದ ಹೆಂಡತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾಗಿ ಆರೋಪಿ ಮಂಜುನಾಥ್ ಒಪ್ಪಿಕೊಂಡಿದ್ದಾನೆ.

ಬೆಂಗಳೂರಿನ ರಾಜಗೋಪಾಲನಗರ ನಿವಾಸಿ 32 ವರ್ಷದ ಹೇಮಾ ಎಂಬಾಕೆಯನ್ನು ಆಕೆಯ ಗಂಡನೇ ಕೊಚ್ಚಿ ಕೊಲೆ ಮಾಡಿದ್ದ. ಬಳಿಕ ಆಕೆಯ ಗಂಡ ಮಂಜುನಾಥ್ ನಾಪತ್ತೆಯಾಗಿದ್ದ. ಮಂಗಳವಾರ ರಾತ್ರಿ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಹೇಮಾ ಗಂಡ ಮಂಜುನಾಥ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಳು. ಪತ್ನಿ ತನ್ನ ವಿರುದ್ಧ ಪೊಲೀಸ್ ಠಾಣೆಗೆ ಹೋಗುವ ವಿಷಯ ತಿಳಿದ ಮಂಜುನಾಥ್ ಪತ್ನಿ ಮೇಲೆ ಜೋರು ಗಲಾಟೆ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಗೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದ.

Bangalore Man Murders his Wife on Road Bengaluru Police Arrested Killer
ಕೊಲೆ ಆರೋಪಿ ಮಂಜುನಾಥ್


ಇದನ್ನೂ ಓದಿ: ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಹೆಂಡತಿಯನ್ನು ಅಟ್ಟಾಡಿಸಿ ಕೊಚ್ಚಿ ಕೊಂದ ಗಂಡ

ಆದರೆ, ಗಂಡನಿಂದ ತಪ್ಪಿಸಿಕೊಂಡು ಮನೆಯಿಂದ ಹೊರ ಓಡಿ ಬಂದ ಹೇಮಾಳ ಬೆನ್ನತ್ತಿದ್ದ ಗಂಡ ಮಂಜುನಾಥ್ ಲವಕುಶನಗರದ ನಡುರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಹೇಮಾಳ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಹೇಮಾ ಸ್ಥಳದಲ್ಲೇ ಮೃತಪಟ್ಟಿದ್ದಳು. ಮೃತ ಹೇಮಾ ಚನ್ನರಾಯಪಟ್ಟಣ ನಿವಾಸಿಯಾಗಿದ್ದು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಗಂಡ ಮಂಜುನಾಥ್ ಕುಣಿಗಲ್ ಮೂಲದ ವ್ಯಕ್ತಿಯಾಗಿದ್ದು, ಬೆಂಗಳೂರಿನಲ್ಲಿ ಕ್ಯಾಬ್ ಓಡಿಸುತ್ತಿದ್ದ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾಗಿ ನಾಳೆ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರ; 7,800 ಗ್ರಾಮ ಪಂಚಾಯ್ತಿಗಳಲ್ಲಿ ಸಮಾರಂಭ ನೇರಪ್ರಸಾರ

ನಿನ್ನೆ ರಾತ್ರಿ ಈ ಕೊಲೆ ನಡೆದಿದ್ದು, ಇಂದು ಆರೋಪಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಹೆಂಡತಿಯನ್ನು ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದ ಮಂಜುನಾಥ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಪ್ರಕರಣ ಸಂಬಂಧ ಉತ್ತರ ವಿಭಾಗ ಡಿಸಿಪಿ ಎನ್. ಶಶಿಕುಮಾರ್ ಹೇಳಿಕೆ ನೀಡಿದ್ದು, ಆರೋಪಿ ಮಂಜುನಾಥ್ ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ. ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ, ಹೇಮಾ ತನ್ನ ಗಂಡನಿಂದ ವಿಚ್ಚೇದನ ಪಡೆಯಲು ಮುಂದಾಗಿದ್ದಳು. ಈ ಬಗ್ಗೆ ಗಂಡನ ಜೊತೆ ಚರ್ಚಿಸಿದ್ದಳು.

ಆದರೆ, ಹೆಂಡತಿಗೆ ವಿಚ್ಛೇದನ ನೀಡಲು ಒಪ್ಪದ ಆರೋಪಿ ಮಂಜುನಾಥ್ 2 ದಿನಗಳಿಂದ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಗಂಡನ ಹಿಂಸೆ ತಾಳಲಾರದೆ ಹೇಮಾ ನಿನ್ನೆ ಸಂಜೆ ಪೊಲೀಸ್ ಠಾಣೆಗೆ ದೂರು ಕೊಡ್ತೀನಿ ಎಂದು ಮನೆಯಿಂದ ಹೊರಟಿದ್ದಳು. ಈ ವೇಳೆ ನಿನ್ನ ಕೊಲೆ ಮಾಡಿ ನಾನೇ ಸ್ಟೇಷನ್​ಗೆ ಹೋಗುತ್ತೇನೆ ಎಂದು ಮಂಜುನಾಥ್ ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಆಗ ಹೆದರಿ ಆಕೆ ತಪ್ಪಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಹಿಂಬಾಲಿಸಿ ಬಂದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
First published: July 1, 2020, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading