ಸಾಕುನಾಯಿ ಬೊಗಳಿದ್ದಕ್ಕೆ ಅಟ್ಟಾಡಿಸಿ ಕೊಂದ ಫುಡ್ ಡೆಲಿವರಿ ಬಾಯ್​; ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ

ತೇಜ್ ಕೈಯಲ್ಲಿದ್ದ ಕೋಲನ್ನು ನೋಡಿ ಓಡಿಹೋದ ನಾಯಿಯ ಹಿಂದೆ ಓಡಿದ್ದ. ಓಡುತ್ತಿದ್ದ ನಾಯಿಯನ್ನು ಹಿಡಿದು ಮನಸಿಗೆ ಬಂದಂತೆ ಹೊಡೆದಿದ್ದ. ಮೈತುಂಬ ಜೋರಾಗಿ ಪೆಟ್ಟು ಬಿದ್ದಿದ್ದರಿಂದ ಆ ನಾಯಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

news18-kannada
Updated:December 2, 2019, 9:37 AM IST
ಸಾಕುನಾಯಿ ಬೊಗಳಿದ್ದಕ್ಕೆ ಅಟ್ಟಾಡಿಸಿ ಕೊಂದ ಫುಡ್ ಡೆಲಿವರಿ ಬಾಯ್​; ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ. 2): ಸಾಮಾನ್ಯವಾಗಿ ಬೆಂಗಳೂರಿನ ಬಹುತೇಕ ಮನೆಗಳ ಮುಂದೆ 'ನಾಯಿ ಇದೆ ಎಚ್ಚರಿಕೆ' ಎಂಬ ಬೋರ್ಡ್​ ಇರುತ್ತದೆ. ನಾಯಿಗಳು ಇದ್ದರೂ ಇಲ್ಲದೇ ಇದ್ದರೂ ತಮ್ಮ ಎಚ್ಚರಿಕೆಗಾಗಿ ಈ ರೀತಿ ಬೋರ್ಡ್​ಗಳನ್ನು ಹಾಕಿಕೊಳ್ಳುವವರೂ ಇದ್ದಾರೆ.

ಊಟ ಆರ್ಡರ್ ಮಾಡಿದ್ದ ಮನೆಯವರಿಗೆ ಊಟ ಕೊಡಲು ಹೋಗಿದ್ದ ಡೆಲಿವರಿ ಬಾಯ್​ನನ್ನು ನೋಡಿ ಸಾಕು ನಾಯಿ ಬೊಗಳಲಾರಂಭಿಸಿತು. ಅದರಿಂದ ಕೋಪಗೊಂಡ ಡೆಲಿವರಿ ಬಾಯ್ ಆ ನಾಯಿಗೆ ಹೊಡೆದು ಸಾಯಿಸಿದ್ದಾನೆ. ಆ ಡೆಲಿವರಿ ಬಾಯ್​ ಮೇಲೆ ನಾಯಿಯ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಊಬರ್ ಈಟ್ಸ್​ ಡೆಲಿವರಿ ಬಾಯ್ ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ 2ನೇ ಹಂತದ ಕೊಲೀವ್ ಹಡ್ಸನ್ ಬಿಲ್ಡಿಂಗ್​ ಬಳಿ ಘಟನೆ ನಡೆದಿದೆ. ಊಟ ಡೆಲಿವರಿ ಕೊಡಲು ಬಂದ ಊಬರ್ ಈಟ್ಸ್​ ಡೆಲಿವರಿ ಬಾಯ್ ತೇಜ್ ಎಂಬಾತನನ್ನು ನೋಡಿ ಸಾಕುನಾಯಿ ಬೊಗಳಿತ್ತು. ನಾಯಿ ಬೊಗಳಿದ್ದಕ್ಕೆ ಕೋಪಗೊಂಡ ತೇಜ್ ಗೇಟಿನ ಹೊರಗೆ ಬಿದ್ದಿದ್ದ ದಪ್ಪನೆಯ ಕೋಲನ್ನು ತೆಗೆದುಕೊಂಡು ನಾಯಿಗೆ ಬಾರಿಸಿದ್ದ.

ಇದನ್ನೂ ಓದಿ: ನನ್ನ ಮಗನ ಗಲ್ಲಿಗೇರಿಸಿ, ಬೆಂಕಿ ಹಚ್ಚಿ ಸಾಯಿಸಿ; ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಂದವನ ತಾಯಿಯ ಆಕ್ರೋಶದ ನುಡಿ

ತೇಜ್ ಕೈಯಲ್ಲಿದ್ದ ಕೋಲನ್ನು ನೋಡಿ ಓಡಿಹೋದ ನಾಯಿಯ ಹಿಂದೆ ಓಡಿದ್ದ. ಓಡುತ್ತಿದ್ದ ನಾಯಿಯನ್ನು ಹಿಡಿದು ಮನಸಿಗೆ ಬಂದಂತೆ ಹೊಡೆದಿದ್ದ. ಮೈತುಂಬ ಜೋರಾಗಿ ಪೆಟ್ಟು ಬಿದ್ದಿದ್ದರಿಂದ ಆ ನಾಯಿ ಸಾವನ್ನಪ್ಪಿತ್ತು. ಕಳೆದ ಬುಧವಾರ ಫುಡ್ ಡೆಲಿವರಿ ಕೊಡಲು ಬಂದಿದ್ದಾಗ ಈ ಘಟನೆ ನಡೆದಿತ್ತು. ತಮ್ಮ ಮನೆಯ ನಾಯಿಯನ್ನು ಹೊಡೆದು ಸಾಯಿಸಿದ್ದಾನೆ ಎಂದು ಡೆಲಿವರಿ ಬಾಯ್ ತೇಜ್ ವಿರುದ್ಧ ಬಂಡೇಪಾಳ್ಯ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.
First published: December 2, 2019, 9:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading