HOME » NEWS » State » BENGALURU CRIME BANGALORE BOY MURDERS HIS LOVER AFTER SHE REJECTING HIS PROPOSAL RRK SCT

Crime News: ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ ಪ್ರೇಯಸಿಯ ಮನೆಗೆ ನುಗ್ಗಿ ಕೊಂದ ಭಗ್ನ ಪ್ರೇಮಿ!

Crime News: ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಪ್ರಿಯಾಂಕ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೆರಳಿದ್ದ ರಾಜೇಶ್,  ಯುವತಿ ಬೇರೊಬ್ಬರನ್ನು ಪ್ರೀತಿ ಮಾಡುತ್ತಿದ್ದುದಾಗಿ ಶಂಕಿಸಿ ಮನೆಯಲ್ಲಿ‌ ಯಾರೂ ಇಲ್ಲದಿದ್ದಾಗ ಬಂದು, ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ.

news18-kannada
Updated:March 12, 2021, 7:58 AM IST
Crime News: ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ ಪ್ರೇಯಸಿಯ ಮನೆಗೆ ನುಗ್ಗಿ ಕೊಂದ ಭಗ್ನ ಪ್ರೇಮಿ!
ಭಗ್ನಪ್ರೇಮಿ ರಾಜೇಶ್
  • Share this:
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರಿಯಾಂಕಾ ಕೆಲ ದಿನಗಳಿಂದ ಕಾಲೇಜಿಗೂ ಹೋಗಿರಲಿಲ್ಲ, ಬದಲಾಗಿ ಕೆಲಸಕ್ಕೆ ಹೋಗಿದ್ದ ಪೋಷಕರು, ಮರಳಿ ಮನೆಗೆ ವಾಪಾಸ್ ಬರುವಷ್ಟರಲ್ಲಿ ಮಗಳು ಶವವಾಗಿ ಹಾಸಿಗೆ ಮೇಲೆ ಬಿದ್ದಿದ್ದಳು.  ಕೂಡಲೇ ಅಕ್ಕಪಕ್ಕದ ಮನೆಯಲ್ಲಿ ವಿಚಾರಣೆ ಮಾಡಿದ ಪೋಷಕರಿಗೆ,  ಅಪರಿಚಿತ ಯುವಕನೊಬ್ಬ ಬಂದಿದ್ದನೆಂದು ನೆರೆ ಹೊರೆಯವರು ಮಾಹಿತಿ ನೀಡಿದ್ದರು. ಇನ್ನು  ಘಟನೆಯ ದಿನ ಸ್ಥಳ ಪರಿಶೀಲನೆ ಮಾಡಿದ್ದ ಎಸ್ಪಿ ಕಾರ್ತಿಕ್ ರೆಡ್ಡಿ ವಿಶೇಷ ತಂಡವನ್ನು ರಚಿಸಿ ಆರೋಪಿಯನ್ನ ಪತ್ತೆಗೆ ಬಲೆ ಬೀಸಿದ್ದರು.

ಇದೀಗ ಮನೆಯಲ್ಲೇ ಯುವತಿಯನ್ನು ಕೊಲೆ ಮಾಡಿದ ಪ್ರಕರಣವನ್ನ ಮುಳಬಾಗಿಲು ನಗರ ಪೊಲೀಸರು ಭೇದಿಸಿದ್ದಾರೆ.  ಮಹಿಳಾ ದಿನಾಚರಣೆ ದಿನದಂದು ಮನೆಯಲ್ಲೆ ಅನುಮಾನಾಸ್ಪದವಾಗಿ ಪ್ರಿಯಾಂಕ  ಕೊಲೆಯಾಗಿತ್ತು.  ಪ್ರಕರಣ ಸಂಬಂಧ ಬೆಂಗಳೂರಿನ ಹುಳಿಮಾವಿನಲ್ಲಿ ವಾಸವಿದ್ದ  ರಾಜೇಶ್​ನನ್ನು ಪೊಲೀಸರು ಬಂಧಿಸಿದ್ದು, ಯುವತಿ ಪ್ರೀತಿಯನ್ನು ನಿರಾಕರಿಸಿದ್ದೇ ಕೊಲೆಗೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.

ಮೂಲತಃ ಆಂಧ್ರ ಪ್ರದೇಶದ ಪುಂಗನೂರಿನ ನಿವಾಸಿಯಾಗಿರೊ ರಾಜೇಶ್,  ಬೆಂಗಳೂರಿನ ಮಾಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಪ್ರಿಯಾಂಕ ಹಾಗೂ ರಾಜೇಶ್ ಮಧ್ಯೆ ಇತ್ತೀಚೆಗೆ ಪರಿಚಯವಾಗಿತ್ತು. ಬಳಿಕ ತನ್ನನ್ನು  ಪ್ರೀತಿ ಮಾಡುವಂತೆ ರಾಜೇಶ್ ಪ್ರಿಯಾಂಕ ಬೆನ್ನು ಬಿದ್ದಿದ್ದ ಎಂದು ಹೇಳಲಾಗುತ್ತಿದೆ. ಆದರೆ, ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೆರಳಿದ್ದ ರಾಜೇಶ್,  ಯುವತಿ ಬೇರೊಬ್ಬರನ್ನು ಪ್ರೀತಿ ಮಾಡುತ್ತಿದ್ದುದಾಗಿ ಶಂಕಿಸಿ ಮನೆಯಲ್ಲಿ‌ ಯಾರೂ ಇಲ್ಲದಿದ್ದಾಗ ಬಂದು, ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಇನ್ನು ಈ ಬಗ್ಗೆ ಮುಳಬಾಗಿಲು ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆಯು ವ್ಯಕ್ತವಾಗಿದೆ‌.

ಇದನ್ನೂ ಓದಿ: Crime News: ಹೆಂಡತಿಯನ್ನು ಅಪಘಾತದಲ್ಲಿ ಕೊಂದ ಟ್ರಕ್‌ ಬಾಗಿಲು‌ ಹಿಡಿದು 30 ಕಿ.ಮೀ ಸಾಗಿದ ಗಂಡ!

ಕಳೆದ 15 ವರ್ಷಗಳಿಂದ, ಸಾಂಸಾರಿಕ ಕಲಹಗಳಿಂದ ಪ್ರಿಯಾಂಕಳ ತಂದೆ ರವಿಪ್ರಸಾದ್​ ಮತ್ತು ತಾಯಿ ಮೀನಾಕ್ಷಿ ದೂರವಾಗಿ ಬೇರೆ ಬೇರೆ ವಾಸವಿದ್ದಾರೆ.  ಈ ಕುರಿತು ಮಾತನಾಡಿರುವ ತಂದೆ ರವಿಕುಮಾರ್, ಮಗಳು  ಶೇಷಾದ್ರಿಪುರಂ ಕಾಲೇಜಿಗೆ ಹೋಗುತ್ತಿರುವ ವೇಳೆ,   ಬೆಂಗಳೂರಿನ ಹುಳಿಮಾವಿನ ಬಡಾವಣೆಯ ರಾಜೇಶ್​ ಎಂಬ ಯುವಕ  ಪ್ರೀತಿಸುವಂತೆ ಪ್ರಿಯಾಂಕಾಳನ್ನ ಇನ್ನಿಲ್ಲದಂತೆ ಒತ್ತಾಯಿಸಿದ್ದ. ಹೀಗಾಗಿ ಈ ವಿಚಾರವನ್ನ ನನಗೂ ತಿಳಿಸಿದ್ದಳು.  ಕೂಡಲೇ ನಾನು ಆ ಯುವಕನೊಂದಿಗೆ ಮಾತನಾಡಿದ್ದೆ.  ಆದರೂ ಇದ್ದಕ್ಕಿದ್ದಂತೆ ಕಳೆದ ಐದು ದಿನದಿಂದ ಮಗಳು ಪ್ರಿಯಾಂಕ,  ನಾನು ಕಾಲೇಜಿಗೆ ಹೋಗೋದಿಲ್ಲ ಎಂದು ಹಠ ಹಿಡಿದಿದ್ದಳು. ಬಳಿಕ ದಿಢೀರನೇ ಕೊಲೆಯಾಗಿದ್ದು ಈ ಕೃತ್ಯವನ್ನು ರಾಜೇಶ್ ಮಾಡಿದ್ದಾನೆಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಕಾಲೇಜಿಗೆ ಹೋಗಲ್ಲ ಎಂದು ಹಠದಿಂದ ಮನೆಯಲ್ಲಿದ್ದ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾದ ಪ್ರಕರಣವನ್ನ, ಪೊಲೀಸರು ಬಂಧಿಸಿದ್ದು, ಕೊಲೆಗೆ ಪ್ರೀತಿ ನಿರಾಕರಿಸಿದ್ದೆ ಕಾರಣ ಎಂದು‌ ತಿಳಿದುಬಂದಿದ್ದು ಪೊಲೀಸರು ಇನ್ನಷ್ಟೆ ಮಾಹಿತಿಯನ್ನು ಖಚಿತಪಡಿಸಬೇಕಿದೆ
Published by: Sushma Chakre
First published: March 12, 2021, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories