news18-kannada Updated:January 15, 2021, 9:07 AM IST
ಸ್ವರೂಪ್ ಶೆಟ್ಟಿ
ಬೆಂಗಳೂರು (ಜ. 15): ಆತ ವಿಕೃತ ಮನಸಿನ ವ್ಯಕ್ತಿತ್ವದ ಆಸಾಮಿಯಾಗಿದ್ದ. ಹೈಫೈ ಹೋಟೆಲ್ಗೆ ಹೋಗಿ ರಾಜ ದರ್ಬಾರ್ ಮಾಡುತ್ತಾ ಜನರನ್ನು ಬಲೆಗೆ ಕೆಡವುತ್ತಿದ್ದ. ಆದರೀಗ ಆತ ಪೊಲೀಸರ ಬಲೆಗೆ ಬಿದ್ದ ಮೇಲೆ ಒಬ್ಬೊಬ್ಬರಾಗಿಯೇ ಬಂದು ದೂರು ಕೊಡುತ್ತಿದ್ದಾರೆ. ಆ ಭೂಪನ ಹೆಸರು ಸ್ವರೂಪ್ ಶೆಟ್ಟಿ. ಕಲರ್ ಕಲರ್ ಕಾಗೆ ಹಾರಿಸುತ್ತಾ ಯಾಮಾರಿಸೋದ್ರಲ್ಲಿ ಎಕ್ಸ್ಪರ್ಟ್. ಇವನ ಮಾತನ್ನು ನಂಬಿದರೆ ಲಕ್ಷ ಲಕ್ಷಕ್ಕೆ ಉಂಡೇ ನಾಮ ಹಾಕೋದರಲ್ಲಿ ನಿಪುಣ. ಕಾಸ್ ಕೊಟ್ಟು ಲಾಸ್ ಆದಮೇಲೆ ಇವನ ವರಸೆಯೇ ಬದಲಾಗಿಬಿಡುತ್ತದೆ.
ಈತ ಮನೆಯಲ್ಲೇ ಗಾಂಜಾ ಸೇದುತ್ತಾ, ಕಿಕ್ ಬಾಕ್ಸಿಂಗ್ ಎಲ್ಲವನ್ನೂ ಮಾಡುತ್ತಾನೆ! ಅಂದಹಾಗೆ ಹೀಗೆ ಒದೆಯನ್ನು ತಿಂದಿದ್ದು ಅರ್ಶಾದ್. ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ನಲ್ಲಿ ಕೆಲಸ ಮಾಡುವ ಅರ್ಶಾದ್ ಎಂಬಾತನನ್ನು ಮೂರು ತಿಂಗಳು ಅಕ್ರಮ ಬಂಧನದಲ್ಲಿಟ್ಟಿದ್ದ ಸ್ವರೂಪ್ನನ್ನು ಬಂಧಿಸಲಾಗಿದೆ. ಹೋಟೆಲ್ನಲ್ಲಿಯೇ ಅರ್ಶಾದ್ ಹಾಗೂ ಆರೋಪಿ ಸ್ವರೂಪ್ ಶೆಟ್ಟಿಗೆ ಪರಿಚಯವಾಗಿತ್ತು. ಈ ನಡುವೆ ಸಮಸ್ಯೆಯಾಗಿದೆ ಎಂದು ಸ್ವರೂಪ್ ಬಳಿ ಅರ್ಶಾದ್ ಹಣ ಕೇಳಿದ್ದ. ಆ ಹಣ ಕೊಡಲು 5 ಲಕ್ಷ ರೂ. ಖರ್ಚಾಗುತ್ತದೆ ಎಂದು ಸ್ವರೂಪ್ ಅರ್ಶಾದ್ನಿಂದ ಹಣ ವಸೂಲಿ ಮಾಡಿದ್ದ. ಕೇಳಿದ ಹಣವೂ ಸಿಗಲಿಲ್ಲ. ಹೀಗಾಗಿ, ಕೊಟ್ಟ 5 ಲಕ್ಷ ರೂ. ವಾಪಾಸ್ ಕೊಡುವಂತೆ ಅರ್ಶಾದ್ ಕೇಳಿದ್ದ. ಆಗ ಕಾಡುಗೋಡಿ ಅಪಾರ್ಟ್ಮೆಂಟ್ ಬಳಿ ಕರೆಸಿಕೊಂಡು ಮೂರು ತಿಂಗಳು ಅಕ್ರಮವಾಗಿ ಬಂಧಿಸಿದ್ದ.
ಇದನ್ನೂ ಓದಿ: Covid Vaccine: ನಾಳೆ ಕೊರೋನಾ ಲಸಿಕಾ ಅಭಿಯಾನ; ಬೆಂಗಳೂರು, ಬೆಳಗಾವಿಗೆ 7.94 ಲಕ್ಷ ಕೊವಿಶೀಲ್ಡ್ ರವಾನೆ
ಅಕ್ರಮ ಬಂಧನದಲ್ಲಿ ಅರ್ಶಾದ್ಗೆ ತೀವ್ರ ಹಿಂಸೆ ನೀಡಿದ್ದ. ಅಕ್ರಮ ಬಂಧನದಲ್ಲಿಟ್ಟಿದ್ದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಸಿದ್ದ ಆರೋಪಿ ಸ್ವರೂಪ್ ಶೆಟ್ಟಿಯಿಂದ ಅರ್ಶಾದ್ ತಪ್ಪಿಸಿಕೊಂಡು ಬಂದು ದೂರು ನೀಡಿದ್ದ. ಮಂಗಳೂರಿನಲ್ಲೂ ಆರೋಪಿ ಸ್ವರೂಪ್ ಮೇಲೆ 7 ಪ್ರಕರಣಗಳು ದಾಖಲಾಗಿದ್ದು ಪತ್ತೆಯಾಗಿತ್ತು. ಇವನ ದೂರನ್ನು ಆಧರಿಸಿ ಈಗಾಗಲೇ ಕಾಡುಗೋಡಿ ಪೊಲೀಸರು ಸ್ವರೂಪ್ ಶೆಟ್ಟಿಯನ್ನು ಬಂಧಿಸಿದ್ದಾರೆ. ಆದರೆ, ಇದೀಗ ಸ್ವರೂಪ್ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ತನ್ನನ್ನು ಎಂಎನ್ಸಿ ಕಂಪನಿಯೊಂದರ ಸಿಇಓ ಎಂದು ಸ್ವರೂಪ್ ಶೆಟ್ಟಿ ಹೋಟೆಲ್ ನ ಮ್ಯಾನೇಜರ್ ಕಿರಣ್ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದ. ಆ ಬಳಿಕ ನಿಮ್ಮ ತಮ್ಮನಿಗೆ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 2.30 ಲಕ್ಷ ರೂ. ಹಣವನ್ನು ಅಕೌಂಟಿಗೆ ಹಾಕಿಸಿಕೊಂಡಿದ್ದಾನೆ. ಆ ನಂತರ ಬೇರೆ ಬೇರೆ ಕಾರಣ ನೀಡಿ ಬ್ಲ್ಯಾಕ್ ಮೇಲ್ ಮಾಡುತ್ತಾ ಹಂತ ಹಂತವಾಗಿ 28 ಲಕ್ಷವನ್ನು ಕಿರಣ್ ಗೆ ಸ್ವರೂಪ್ ವಸೂಲಿ ಮಾಡಿದ್ದಾನೆ.
ತನ್ನ ತಮ್ಮನಿಗೆ ಉತ್ತಮ ಕೆಲಸ ಸಿಗುತ್ತೆ ಅನ್ನೋ ಕಾರಣಕ್ಕೆ ಸ್ವರೂಪ್ ಗೆ ಹಣ ಕೊಟ್ಟ ಕಿರಣ್ ಗೆ ಅಸಲಿ ಸತ್ಯ ಆಮೇಲೆ ಗೊತ್ತಾಗಿದೆ. ಈ ಸಂಬಂಧ ಕಾಡುಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಈಗಾಗಲೇ ಪ್ರಕರಣವೊಂದರ ಸಂಬಂಧ ಪುಣೆ ಪೊಲೀಸರು ಬಾಡವಾರೆಂಟ್ ಮೇಲೆ ಸ್ವರೂಪ್ ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೀಗ ಮತ್ತೆ ಕಾಡುಗೋಡಿ ಪೊಲೀಸರು ಸ್ವರೂಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ.
Published by:
Sushma Chakre
First published:
January 15, 2021, 9:03 AM IST