• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • MLA Roopa Kala Shashidhar: ಪೊಲೀಸರು ಕೊಟ್ಟ ಕಿರುಕುಳ ನೆನೆದು ಡಿಕೆಶಿ ಎದುರು ಭಾವುಕರಾಗಿ ಕಣ್ಣೀರಿಟ್ಟ ಕಾಂಗ್ರೆಸ್​ ಶಾಸಕಿ

MLA Roopa Kala Shashidhar: ಪೊಲೀಸರು ಕೊಟ್ಟ ಕಿರುಕುಳ ನೆನೆದು ಡಿಕೆಶಿ ಎದುರು ಭಾವುಕರಾಗಿ ಕಣ್ಣೀರಿಟ್ಟ ಕಾಂಗ್ರೆಸ್​ ಶಾಸಕಿ

ಕೈ ಮುಗಿದು ಮನವಿ ಮಾಡಿದ ಶಾಸಕಿ ರೂಪಾ ಶಶಿಧರ್

ಕೈ ಮುಗಿದು ಮನವಿ ಮಾಡಿದ ಶಾಸಕಿ ರೂಪಾ ಶಶಿಧರ್

ಚುನಾವಣೆಯ ಸಮಯದಲ್ಲಿ ಪೊಲೀಸರು ನನಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ಕೆಜಿಎಫ್​ ಶಾಸಕಿ ರೂಪಾ ಅವರು ಆರೋಪಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕೋಲಾರ (Kolar) ಜಿಲ್ಲೆಯ ಕೆಜಿಎಫ್ (KGF) ವಿಧಾಸಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ, ಕಾಂಗ್ರೆಸ್ ಹಿರಿಯ ನಾಯಕಿ ಕೆಎಚ್​ ಮುನಿಯಪ್ಪ (KH Muniyappa) ಅವರ ಪುತ್ರಿ ರೂಪ ಶಶಿಧರ್ (Roopa Shashidhar), ಡಿಸಿಎಂ ಡಿಕೆ ಶಿವಕುಮಾರ್​​ ಎದುರು ಕಣ್ಣೀರಿಟ್ಟ ಘಟನೆ ಇಂದು ನಡೆದಿದೆ. ಚುನಾವಣೆಗೂ (Election) ಮುನ್ನ ಕ್ಷೇತ್ರದಲ್ಲಿ ಪೊಲೀಸರು ತಮಗೆ ಕೊಟ್ಟ ಕಿರುಕುಳ ನೆನೆದು ರೂಪ ಅವರು ಭಾವುಕರಾಗಿದ್ದರು. ಈ ವೇಳೆ ತಮ್ಮ ವಿರುದ್ಧ ಕೇಸ್ ದಾಖಲಿಸಿ ಪೊಲೀಸರು ಏನೆಲ್ಲಾ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿ, ಡಿಕೆ ಶಿವಕುಮಾರ್ ಅವರ ಎದುರೇ ಕಣ್ಣೀರಿಟ್ಟರು.


ಚುನಾವಣೆಯ ಸಮಯದಲ್ಲಿ ಪೊಲೀಸರು ನನಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಸುಳ್ಳು ಕೇಸ್ ದಾಖಲು ಮಾಡಿ ಕಿರುಕುಳ ನೀಡಿದ್ದಾರೆ. ಕಿರುಕುಳ ನೀಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಎಂದು ರೂಪಾ ಶಶಿಧರ್​ ಆಗ್ರಹಿಸಿದ್ದಾರೆ.


ಇದನ್ನೂ ಓದಿ: Free Bus Ride for Women: ಉಚಿತ ಬಸ್​ ಪ್ರಯಾಣಕ್ಕೆ ದಿನಗಣೆ ಶುರು; ಮಾರ್ಗಸೂಚಿಯಲ್ಲಿ ಏನೆಲ್ಲಾ ಷರತ್ತುಗಳು ಇರಲಿದೆ ಗೊತ್ತಾ?




ಚುನಾವಣಾ ಪ್ರಚಾರದ ಸಮಯದಲ್ಲಿ ಅಧಿಕಾರಿಗಳು ಹಾಗೂ ಪೊಲೀಸರು ನರಕ ತೋರಿಸಿದ್ದಾರೆ. ಒಂದು ರೀತಿ ಏಜೆಂಟ್​ ತರ ವರ್ತಿಸುತ್ತಿದ್ದರು. ಹೈಕೋರ್ಟ್​​ಗೆ ಹೋಗಿ ಸ್ಟೇ ತಂದು ಪ್ರಚಾರ ಮಾಡಿದ್ದೀನಿ. ಫುಡ್​ ಕೀಟ್​​ಗಾಗಿ ನನ್ನ ಮೇಲೆ ಕೇಸ್ ಹಾಕಿದ್ದರು. 12 ಗಂಟೆ ರಾತ್ರಿಯಲ್ಲಿ ರೇಡ್ ಮಾಡಿದ್ದರು ಎಂದು ರೂಪಾ ಶಶಿಧರ್​ ಆರೋಪಿಸಿದ್ದಾರೆ.




ಮಾಧ್ಯಮಗಳೊಂದಿಗೆ ಮಾತನಾಡಿದ ರೂಪಾ ಶಶಿಧರ್ ಅವರು, ಚುನಾವಣೆಯ ನೀತಿ ಸಂಹಿತೆಯೇ ಇನ್ನು ಜಾರಿ ಆಗಿರಲಿಲ್ಲ. ಆದ್ದರಿಂದ ನಾವು ರಂಜಾನ್ ಹಾಗೂ ಯುಗಾದಿ ಹಬ್ಬದ ಕಾರಣ ನಾವು ಫುಡ್​ ಕಿಟ್ ವಿತರಣೆ ಮಾಡಲು ಮುಂದಾಗಿದ್ದೇವು. ನಮ್ಮ ಕ್ಷೇತ್ರದಲ್ಲಿ ಹೆಚ್ಚು ಕಾರ್ಮಿಕರು ವಾಸ ಮಾಡುತ್ತಿದ್ದಾರೆ.


ಅವರಿಗೆ ಕೋವಿಡ್ ಸಂದರ್ಭದಲ್ಲೂ ನಾವು ಫುಡ್​​ಕಿಟ್ ವಿತರಣೆ ಮಾಡಿದ್ದೇವು, ಆಗ ಯಾವುದೇ ಸಮಸ್ಯೆ ಮಾಡಿರಲಿಲ್ಲ. ಆದರೆ ಪುಡ್​ಕಿಟ್ ಪ್ಯಾಕ್ ಮಾಡುವ ಸಂದರ್ಭದಲ್ಲಿ ದಾಳಿ ಮಾಡಿದ್ದರು. ಹಬ್ಬದ ಕಾರಣ ಕೋರ್ಟ್​ಗೆ ಐದು ದಿನ ರಜೆ ಕೂಡ ಇತ್ತು. ಇಂತಹ ಸಂದರ್ಭದಲ್ಲಿ ಕೇಸ್ ಹಾಕಿ, ಕಿರುಕುಳ ನೀಡುವ ಪ್ರಯತ್ನ ಮಾಡಿದ್ದರು. ನಮಗೆ ಭಯದ ವಾತಾವರಣ ನಿರ್ಮಾಣ ಮಾಡಿದ್ದರು ಎಂದು ರೂಪಾ ಅವರು ಆರೋಪಿಸಿದ್ದಾರೆ.

First published: