ಮೂತ್ರ ವಿಸರ್ಜನೆ ಮಾಡುವವರ ಕಡಿವಾಣಕ್ಕೆ ಮುಂದಾದ ಬಿಬಿಎಂಪಿ: ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡಿ ಅಳವಡಿಕೆ

ಇನ್ನೊಂದೆಡೆ ಕೇವಲ ಕನ್ನಡಿಗಳನ್ನು ಅಳವಡಿಸಿದರೆ ಬಯಲು ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಹೆಚ್ಚೆಚ್ಚು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಜನ ಬಳಕೆಗೆ ಯೋಗ್ಯವಾಗಿರುವಂತೆ ಶುಚಿಯಾಗಿಟ್ಟುಕೊಳ್ಳಬೇಕು. ಆಗ ಮಾತ್ರ ಈ ಯೋಜನೆ ಯಶಸ್ವಿಯಾಗಲು ಸಾಧ್ಯ ಎನ್ನುತ್ತಾರೆ ಸಾರ್ವಜನಿಕರು.

news18-kannada
Updated:January 14, 2020, 11:18 AM IST
ಮೂತ್ರ ವಿಸರ್ಜನೆ ಮಾಡುವವರ ಕಡಿವಾಣಕ್ಕೆ ಮುಂದಾದ ಬಿಬಿಎಂಪಿ: ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡಿ ಅಳವಡಿಕೆ
ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡಿ ಅಳವಡಿಕೆ
  • Share this:
ಬೆಂಗಳೂರು(ಜ.14): ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿ ಸ್ವಚ್ಛತೆ ಹಾಳು ಮಾಡುವವರಿಗೆ ಹೇಗಾದರೂ ಸರಿಯೇ ಕಡಿವಾಣ ಹಾಕಲೇಬೇಕೆಂದು ನಿರ್ಧರಿಸುವ ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹೊಸ ತಂತ್ರದ ಮೊರೆ ಹೋಗಿದೆ. ಹಾಗಾಗಿಯೇ ನಗರದ ಪಾದಚಾರಿ ಮಾರ್ಗಗಳ ಪಕ್ಕದ ಗೋಡೆಗಳ ಮೇಲಿನ ಬಯಲು ಮೂತ್ರ ವಿಸರ್ಜನೆಗೆ ಬ್ರೇಕ್​​ ಹಾಕಲೆಂದು ಕನ್ನಡಿ ಅಳವಡಿಸುತ್ತಿದೆ. ಸದ್ಯ ಬಿಬಿಎಂಪಿ ಅಳವಡಿಸಲೊರಟ ಹೊಸ ತಂತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ವಚ್ಛ ಸರ್ವೇಕ್ಷಣ ಕ್ಯಾಂಪೇನ್ ಭಾಗವಾಗಿ ಬಿಬಿಎಂಪಿ ಈ ಯೋಜನೆ ಕೈಗೆತ್ತಿಕೊಂಡಿದೆ. ಸಾರ್ವಜನಿಕರು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವ ಪ್ರದೇಶಗಳಲ್ಲೇ ಕನ್ನಡಿಗಳನ್ನು ಅಳವಡಿಸಾಲಗುತ್ತಿದೆ. ಪ್ರಮುಖವಾಗಿ ನಗರದ ಕೆ.ಆರ್.ಮಾರ್ಕೆಟ್, ಇಂಡಿಯನ್ ಎಕ್ಸ್ ಪ್ರೆಸ್‍ ಸರ್ಕಲ್​​, ಇಎಸ್‍ಐ ಆಸ್ಪತ್ರೆ ಇಂದಿರಾನಗರ, ಕೊಕೊನೆಟ್ ಗ್ರೋವ್ ಚರ್ಚ್ ಸ್ಟ್ರೀಟ್, ಜ್ಯೋತಿ ನಿವಾಸ ಕಾಲೇಜು ಕೋರಮಂಗಲದಲ್ಲಿ ಬೃಹತ್ ಗಾತ್ರದ ಕನ್ನಡಿಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಕನ್ನಡಿ ಮೂತ್ರ ವಿಸರ್ಜನೆ ತಡೆಯುವುದು ಮಾತ್ರವಲ್ಲದೇ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ನಮ್ಮ ಸುತ್ತಮುತ್ತ ಇರುವ ಶೌಚಾಲಯಗಳನ್ನು ತೋರಿಸುತ್ತದೆ. ಇದಕ್ಕಾಗಿ ಬಿಬಿಎಂಪಿ ಸಿಬ್ಬಂದಿ ಕನ್ನಡಿಗಳಿಗೆ ಪಾಲಿಕೆಯ ಲೋಗೋ ಜತೆ ಕ್ಯೂಆರ್ ಅಳವಡಿಸಿದ್ದಾರೆ. ಸಾರ್ವಜನಿಕರು "ಬಿಬಿಎಂಪಿ ಸಹಾಯ" ಎಂಬ ಆ್ಯಪ್​​ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ, ಸನಿಹದಲ್ಲಿರುವ ಶೌಚಾಲಯಗಳ ವಿಳಾಸ ತಿಳಿದುಕೊಳ್ಳಬಹುದು.

ಇದನ್ನೂ ಓದಿ: ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ: ಜಮ್ಮು-ಕಾಶ್ಮೀರದ ಡಿವೈಎಸ್​​​ಪಿ ದೇವೇಂದರ್​​ ಸಿಂಗ್ ಅಮಾನತು

''ಇದೊಂದು ಉತ್ತಮ ಉಪಾಯ. ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿರ್ಸಜನೆ ಮಾಡುವವರ ಮಾನ-ಮರ್ಯಾದೆ ತೆಗೆಯಲು ಕನ್ನಡಿಗಳನ್ನು ಅಳವಡಿಸಿದ್ದೇವೆ. ಇದರಿಂದ ಬಯಲು ಮೂತ್ರ ವಿಸರ್ಜನೆ ಮಾಡುವವರಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ,'' ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌ ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಕಡಿವಾಣ ಹಾಕಲು ದಂಡ ವಿಧಿಸಿದ್ದೇವೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ದೇವರ ಭಾವಚಿತ್ರಗಳನ್ನೂ ಹಂಟಿಸಿದ್ದೇವೆ. ಇದ್ಯಾವುದು ಫಲ ನೀಡಿರಲಿಲ್ಲ. ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಎಷ್ಟೇ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಇದೀಗ ಕನ್ನಡಿ ಅಳವಡಿಸಿರುವುದರಿಂದ ಜನ ಮರ್ಯಾದೆಯಿಂದ ಮೂತ್ರ ವಿಸರ್ಜನೆ ಮಾಡುವುದು ನಿಲ್ಲಿಸುತ್ತಾರೆ ಎಂದರು ಆಯುಕ್ತರು.

ಇನ್ನೊಂದೆಡೆ ಕೇವಲ ಕನ್ನಡಿಗಳನ್ನು ಅಳವಡಿಸಿದರೆ ಬಯಲು ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಹೆಚ್ಚೆಚ್ಚು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಜನ ಬಳಕೆಗೆ ಯೋಗ್ಯವಾಗಿರುವಂತೆ ಶುಚಿಯಾಗಿಟ್ಟುಕೊಳ್ಳಬೇಕು. ಆಗ ಮಾತ್ರ ಈ ಯೋಜನೆ ಯಶಸ್ವಿಯಾಗಲು ಸಾಧ್ಯ ಎನ್ನುತ್ತಾರೆ ಸಾರ್ವಜನಿಕರು.

 
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ