HOME » NEWS » State » BENGALURU CITY TRAFFIC SOARES UP AS IT SEES 8 PROTESTS TODAY SNVS

ಬೆಂಗಳೂರಿನಲ್ಲಿ ಇವತ್ತು ಎಂಟು ಕಡೆ ವಿವಿಧ ಪ್ರತಿಭಟನೆ; ಎಲ್ಲೆಲ್ಲಿ ಟ್ರಾಫಿಕ್ ಕಿರಿಕಿರಿ?

ರೈತರ ಧರಣಿ ಸೇರಿ ಇವತ್ತು ಬೆಂಗಳೂರಿನ ಕೆಲವೆಡೆ 8 ಪ್ರತಿಭಟನೆಗಳು ನಡೆಯುತ್ತಿವೆ. ಮೆಜೆಸ್ಟಿಕ್, ಮಾರ್ಕೆಟ್ ಸೇರಿದಂತೆ ನಗರದ ಹೃದಯ ಭಾಗದಲ್ಲಿ ಟ್ರಾಫಿಕ್ ಕಿರಿಕಿರಿಯಾಗಲಿದೆ.

news18
Updated:September 24, 2020, 10:53 AM IST
ಬೆಂಗಳೂರಿನಲ್ಲಿ ಇವತ್ತು ಎಂಟು ಕಡೆ ವಿವಿಧ ಪ್ರತಿಭಟನೆ; ಎಲ್ಲೆಲ್ಲಿ ಟ್ರಾಫಿಕ್ ಕಿರಿಕಿರಿ?
ಸಾಂದರ್ಭಿಕ ಚಿತ್ರ
  • News18
  • Last Updated: September 24, 2020, 10:53 AM IST
  • Share this:
ಬೆಂಗಳೂರು(ಸೆ. 24): ಉದ್ಯಾನನಗರಿ ಕಳೆದ ನಾಲ್ಕು ದಿನಗಳಿಂದ ರೈತರ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಆದರೆ, ಇವತ್ತು ಪ್ರತಿಭಟನೆಗಳ ಸುರಿಮಳೆಯೇ ನಗರದಲ್ಲಿ ಆಗುತ್ತಿದೆ. ಬರೋಬ್ಬರಿ ಎಂಟು ಪ್ರತಿಭಟನೆಗಳು ನಗರದ ವಿವಿಧೆಡೆ ನಡೆಯುತ್ತಿವೆ. ಆಶಾ ಕಾರ್ಯಕರ್ತೆಯರ ಪ್ರತಿಭಟನೆ ನಿನ್ನೆ ನಿಲ್ಲದೇ ಹೋಗಿದ್ದರೆ ಇವತ್ತು ಅದೂ ಈ ಪಟ್ಟಿಗೆ ಸೇರ್ಪಡೆಯಾಗಬೇಕಿತ್ತು. ರೈತರ ಸಂಘಟನೆಗಳು, ಭೀಮ್ ಆರ್ಮಿ, ಕರ್ನಾಟಕ ಪ್ರೆಸ್ ಕ್ಲಬ್, ಎಐಟಿಯುಸಿ, ವಕೀಲರ ಕ್ಷೇಮಾಭಿವೃದ್ಧಿ ಸಂಘಟನೆ, ಕಟ್ಟಡ ನಿರ್ಮಾಣ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದ್ದಾರೆ. ತತ್​ಪರಿಣಾಮವಾಗಿ ನಗರದ ಕೆಲ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಬಹುದು. ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಕಾರ್ಪೊರೇಷನ್ ಸರ್ಕಲ್, ಟೌನ್ ಹಾಲ್, ಕೆಆರ್ ಮಾರ್ಕೆಟ್, ಮೌರ್ಯ ಸರ್ಕಲ್, ಕೆ.ಆರ್. ಸರ್ಕಲ್, ಫ್ರೀಡಂ ಪಾರ್ಕ್ ರಸ್ತೆಯಲ್ಲಿ ವಾಹನ ಸಂಚಾರ ಬಹಳ ವಿಳಂಬವಾಗಬಹುದು. ಈ ಭಾಗಗಳಿಂದ ವಾಹನ ಸವಾರರು ಆದಷ್ಟೂ ದೂರ ಉಳಿದರೆ ಅನುಕೂಲ ಆಗುತ್ತದೆ.

ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿಯಿಂದ ಕೂಗಳತೆ ದೂರದ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆ

1) ಭೀಮ್ ಆರ್ಮಿ‌ ಕರ್ನಾಟಕ ವತಿಯಿಂದ ಪ್ರತಿಭಟನೆ
ಸ್ಥಳ: ಮೈಸೂರು ಬ್ಯಾಂಕ್ ಸರ್ಕಲ್
ಖಾಸಗಿಕರಣ ವಿರೋಧಿಸಿ ಪ್ರತಿಭಟನೆ

2) ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರತಿಭಟನೆ
ಸ್ಥಳ: ಮೈಸೂರು ಬ್ಯಾಂಕ್ ‌ಸರ್ಕಲ್ಭ್ರಷ್ಟಾಚಾರ ವಿರೋಧಿಸಿ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ವಿರೋಧಿಸಿ ಪ್ರತಿಭಟನೆ

3) AITUC ವತಿಯಿಂದ ಪ್ರತಿಭಟನೆ
ಸ್ಥಳ: ಮೈಸೂರು ಬ್ಯಾಂಕ್ ‌ಸರ್ಕಲ್
ಬಿಸಿಯೂಟ ನೌಕರರ ವಜಾ ಮಾಡುವುದನ್ನ ಖಂಡಿಸಿ ಪ್ರತಿಭಟನೆ

4) ಕೋಆರ್ಡಿನೇಟಿಂಗ್ ಕಮೀಟಿ ಫಾರ್ ಅಡ್ವಕೇಟ್ಸ್ ವೆಲ್​ಫೇರ್ ಕೋವಿಡ್-19
ಸ್ಥಳ: ಸಿಟಿ ಸಿವಿಲ್‌ ಕೋರ್ಟ್ ನ್ಯಾಯಾಲಯದ ಮುಖ್ಯದ್ವಾರದ ಮುಂದೆ

5) AITUC ವತಿಯಿಂದ ಪ್ರತಿಭಟನೆ
ಸ್ಥಳ: ಬಿಬಿಎಂಪಿ ಕಚೇರಿ ಮುಂದೆ
ಪಾರ್ಕಿಂಗ್ ಶುಲ್ಕ ವಿರೋಧಿಸಿ ನಡೆಸುತ್ತಿರುವ ಈ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಿದ್ದಾರೆ.

6) ರೈತ, ಕಾರ್ಮಿಕ ವಿರೋಧಿ ನಡೆ ವಿರೋಧಿಸಿ ಪ್ರತಿಭಟನೆ
ಸ್ಥಳ: ಮೌರ್ಯ ಸರ್ಕಲ್​ನ ಗಾಂಧಿ ಪ್ರತಿಮೆ ಮುಂಭಾಗ

7) ರೈತರು, ದಲಿತರು ಮತ್ತು ಕಾರ್ಮಿಕರ ಐಕ್ಯ ಹೋರಾಟ:
ಸ್ಥಳ: ಫ್ರೀಡಂ ಪಾರ್ಕ್
ಸರ್ಕಾರದ ರೈತ ವಿರೋಧಿ ನೀತಿಗಳನ್ನ ವಿರೋಧಿಸಿ ಪ್ರತಿಭಟನೆ. ಇಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಕಳೆದ 4 ದಿನಗಳಿಂದಲೂ ಇಲ್ಲಿ ಹೋರಾಟ ನಡೆಯುತ್ತಿದೆ.

8) ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಪ್ರತಿಭಟನೆ
ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ, ಫ್ರೀಡಂ ಪಾರ್ಕ್​ನಲ್ಲಿ ಧರಣಿ
ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳ ವಿಲೀನ, ಕೇಂದ್ರ ಸರ್ಕಾರದ ಅನ್ಯಾಯ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ.
Published by: Vijayasarthy SN
First published: September 24, 2020, 10:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading