Target Bengaluru: 'ಉಗ್ರರ ರಾಜಧಾನಿ' ಆಗಲಿದೆಯಾ ಬೆಂಗಳೂರು? NIA ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ
ನಾಲ್ಕು ವರ್ಷಗಳ ಕಾಲ ಹೇಗೆಲ್ಲಾ ನಗರದಲ್ಲಿ ಕಾರ್ಯ ಚಟುವಟಿಕೆ ಮಾಡಿದ್ರು, ಅವರ ಫ್ಲಾನಿಂಗ್ ಹೇಗಿತ್ತು ಅನ್ನೋ ಕಂಪ್ಲೀಟ್ ಮಾಹಿತಿಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಎನ್ಐಎ ಚಾರ್ಜ್ ಶೀಟ್ ನ್ಯೂಸ್ 18 ಕನ್ನಡಕ್ಕೆ ಎಕ್ಸ್ಕ್ಲೂಸಿವ್ ಆಗಿ ಸಿಕ್ಕಿದ್ದು ಕೆಲವೊಂದು ಭಯಾನಕ ವಿಚಾರಗಳು ಹೊರಬಿದ್ದಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Silicone City) ಉಗ್ರರ (Terrorist) ಹಾಟ್ ಸ್ಪಾಟ್ (Hotspot) ಆಗಿತ್ತು ಎಂಬ ಸ್ಫೋಟಕ ವಿಚಾರ ಎನ್ಐಎ (NAI) ತನಿಖೆಯಿಂದ (Investigation) ಬಯಲಾಗಿದೆ. ನಾಲ್ಕು ವರ್ಷಗಳ ಕಾಲ ಹೇಗೆಲ್ಲಾ ನಗರದಲ್ಲಿ (City) ಕಾರ್ಯ ಚಟುವಟಿಕೆ ಮಾಡಿದ್ರು, ಅವರ ಫ್ಲಾನಿಂಗ್ (Planning) ಹೇಗಿತ್ತು ಅನ್ನೋ ಕಂಪ್ಲೀಟ್ ಮಾಹಿತಿಯನ್ನು ಚಾರ್ಜ್ ಶೀಟ್ ನಲ್ಲಿ (Charge sheet) ಉಲ್ಲೇಖ ಮಾಡಿದ್ದಾರೆ. ಎನ್ಐಎ ಚಾರ್ಜ್ ಶೀಟ್ ನ್ಯೂಸ್ 18 ಕನ್ನಡಕ್ಕೆ (News18 Kannada) ಎಕ್ಸ್ಕ್ಲೂಸಿವ್ (Exclusive) ಆಗಿ ಸಿಕ್ಕಿದ್ದು ಕೆಲವೊಂದು ಭಯಾನಕ ವಿಚಾರಗಳು ಹೊರಬಿದ್ದಿದೆ.
ಉಗ್ರರ ಹಾಟ್ ಸ್ಪಾಟ್ ಆಗಿದ್ಯಾ ಸಿಲಿಕಾನ್ ಸಿಟಿ ಬೆಂಗಳೂರು!?
ಹೌದು 2020ರಲ್ಲಿ ಎನ್ ಐಎ ಅಧಿಕಾರಿಗಳು ಬಸವನಗುಡಿಯಲ್ಲಿ ವೈದ್ಯ ಅಬ್ದುರ್ ರೆಹಮಾನ್ ಎಂಬ ಶಂಕಿತ ಉಗ್ರನೊಬ್ಬನನ್ನ ಅರೆಸ್ಟ್ ಮಾಡಿದ್ರು. ನಂತ್ರ ಆತನನ್ನು ವಿಚಾರಣೆ ಮಾಡಿದ ಬಳಿಕ ಆತನ ಸಂಪರ್ಕದಲ್ಲಿದ್ದ ಮತ್ತಿಬ್ಬರು ಶಂಕಿತ ಉಗ್ರರಾದ ಜೋಹೈಬ್ ಮುನ್ನಾ ಹಾಗೂ ಅಬ್ದುಲ್ ಖಾದೀರ್ ಹೆಸ್ರು ಹೇಳಿದ್ದ. ನಂತ್ರ ತನಿಖೆ ಚುರುಕುಗೊಳಿಸಿದ್ದ ಎನ್ ಐಎ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಶಾಕಿಂಗ್ ವಿಚಾರಗಳು ಗೊತ್ತಾಗಿದೆ.
ವೀಸಾ ಪಾಸ್ ಪೋರ್ಟ್ ಪ್ರಕ್ರಿಯೆ ನಡೀತಾ ಇದ್ದಿದ್ದು ಬೆಂಗಳೂರಲ್ಲೇ!
ಹೌದು.. ಎನ್ ಐಎ ತನಿಖೆ ವೇಳೆ ಸಾಕಷ್ಟು ಸ್ಪೋಟಕ ಮಾಹಿತಿಗಳು ಹೊರ ಬಿದ್ದಿವೆ. ಅದ್ರಲ್ಲೂ ಜೊಹೇಬ್ ಮನ್ನಾ ಹಾಗೂ ಅಬ್ದುಲ್ ಖಾದರ್ ಕೊಟ್ಟ ಹೇಳಿಕೆ ಶಾಕಿಂಗ್ ಅನಿಸಿದೆ. ಇಬ್ಬರು ಶಂಕಿತರು ಬೆಂಗಳೂರಿನ ಚರ್ಚ್ ಸ್ಟ್ರೀಟ್ ಅನ್ನೇ ಅಡ್ಡೆ ಮಾಡಿಕೊಂಡು ಕುರಾನ್ ಸರ್ಕಲ್ ಅನ್ನೋ ಗ್ರೂಪ್ ಮೂಲಕ ಯುವಕರನ್ನು ಸೆಳೆಯುತ್ತಿದ್ದರು ಎಂಬ ವಿಚಾರ ಗೊತ್ತಾಗಿದೆ. ನಂತ್ರ ಐಸಿಸ್ ಮುಖಂಡರನ್ನ ಕರೆಸಿ ಉಗ್ರ ಚಟುವಟಿಕೆಗಳ ಬಗ್ಗೆ ಮೋಟಿವೇಷನ್ ಮಾಡಿಸ್ತಿದ್ರು. ನಂತ್ರ ಅವರ ಪಾಸ್ ಪೋರ್ಟ್ ಹಾಗೂ ವೀಸಾ ಪ್ರಕ್ರಿಯೇ ಸಹ ಇದೇ ಕಮರ್ಷಿಯಲ್ ಸ್ಟ್ರೀಲ್ ನಲ್ಲೇ ಆಗ್ತಾ ಇತ್ತು.
ಬೇರೆ ಬೇರೆ ದೇಶಗಳಿಂದ ಬರೋ ಫಂಡ್ ಅನ್ನ ಇಲ್ಲಿಯೇ ಡಾಲರ್ ನಿಂದ ರೂಪೀಸ್ ಮಾಡಿ ಆರೋಪಿಗಳು ಯುವಕರನ್ನ ಕಳಿಸೋ ಪ್ಲಾನ್ ಮಾಡ್ತಿದ್ರು ಅನ್ನೋ ಸ್ಪೋಟಕ ಮಾಹಿತಿ ಎನ್ ಐಎ ತನಿಖೆ ವೇಳೆ ಗೊತ್ತಾಗಿದೆ. ನಂತರ ಸ್ಯೂರೆಸ್ಪಾಟ್ ಆ್ಯಡಂರ್ ಥ್ರೀಮಾ ಅನ್ನೋ ಆ್ಯಪ್ಗಳ ಮೂಲಕ ಆರೋಪಿಗಳು ಕಮ್ಯುನಿಕೇಟ್ ಮಾಡ್ತಿರೋದು ಎನ್ ಐ ಎ ತನಿಖೆ ವೇಳೆ ಬಯಲಾಗಿದೆ ಅನ್ನೋ ಸ್ಪೋಟಕ ವಿಚಾರಗಳು ಎನ್ ಐಎ ಚಾರ್ಜ್ ಶೀಟ್ ನಲ್ಲಿ ಲಭ್ಯವಾಗಿವೆ.
ಬೆಂಗಳೂರಿನಲ್ಲೇ ನಡೀತಿತ್ತು ಉಗ್ರರ ನೇಮಕಾತಿ
ಇದಷ್ಟೆ ಅಲ್ದೆ ಹಲವು ವಿಚಾರಣಗಳನ್ನ ಎನ್ ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಬೆಂಗಳೂರಿನಿಂದಲೇ ಐಸಿಸ್ ಉಗ್ರರ ನೇಮಕಾತಿ, ಚಟುವಟಿಕೆಗಳು ನಡೀತಿವೆ ಅನ್ನೋದ್ರ ಬಗ್ಗೆ ಒತ್ತಿ ಒತ್ತಿ ಹೇಳಿದಂತಿದೆ. ಈಗಾಗಲೇ ಇವರ ಕಾಂಟ್ಯಾಕ್ಟ್ ನಲ್ಲಿರೋರ ಮೇಲೆಯೂ ಎನ್ ಐಎ ಕಣ್ಣಿಟ್ಟಿದೆಇಷ್ಟೆಲ್ಲಾ ನೋಡ್ತಿದ್ರೆ ಉಗ್ರರಿಗೆ ಬೆಂಗಳೂರು ಸೇಫ್ ಸಿಟಿ ನಾ ಅನ್ನೋ ಅನುಮಾನ ಮೂಡ್ತಿರೋದಂತು ಸತ್ಯ.
ಸಿಲಿಕಾನ್ ಸಿಟಿ ಬೆಂಗಳೂರು ಉಗ್ರರ ಹಾಟ್ ಸ್ಪಾಟ್ ಆಗಿತ್ತು ಎಂಬ ಸ್ಫೋಟಕ ವಿಚಾರ ಎನ್ಐಎ ತನಿಖೆಯಿಂದ ಬಯಲಾಗಿದೆ. ನಾಲ್ಕು ವರ್ಷಗಳ ಕಾಲ ಹೇಗೆಲ್ಲಾ ನಗರದಲ್ಲಿ ಕಾರ್ಯ ಚಟುವಟಿಕೆ ಮಾಡಿದ್ರು, ಅವರ ಫ್ಲಾನಿಂಗ್ ಹೇಗಿತ್ತು ಅನ್ನೋ ಕಂಪ್ಲೀಟ್ ಮಾಹಿತಿಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಎನ್ಐಎ ಚಾರ್ಜ್ ಶೀಟ್ ನ್ಯೂಸ್ 18 ಕನ್ನಡಕ್ಕೆ ಎಕ್ಸ್ಕ್ಲೂಸಿವ್ ಆಗಿ ಸಿಕ್ಕಿದ್ದು ಕೆಲವೊಂದು ಭಯಾನಕ ವಿಚಾರಗಳು ಹೊರಬಿದ್ದಿದೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ