• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Rohini Sindhuri: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್​ ರಿಲೀಫ್​​; ಡಿ ರೂಪಾ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್​ ಜಾರಿ

Rohini Sindhuri: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್​ ರಿಲೀಫ್​​; ಡಿ ರೂಪಾ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್​ ಜಾರಿ

ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾ

ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾ

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಪರ ವಕೀಲರ ವಾದ ಆಲಿಸಿದ್ದ ಕೋರ್ಟ್​, ತಡೆಯಾಜ್ಞೆ ನೀಡುವ ಮುನ್ನ ಡಿ ರೂಪಾ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಅರ್ಜಿಯ ವಿಚಾರಣೆಯನ್ನು ಮಾರ್ಚ್​ 7ಕ್ಕೆ ಮುಂದೂಡಿದೆ. ಎರಡು ಕಡೆ ವಾದ ಆಲಿಸಿದ ಬಳಿಕ ಕೋರ್ಟ್​ ಅಂತಿಮ ಆದೇಶವನ್ನು ನೀಡಲಿದೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ (IPS Officer D Roopa) ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (IAS officer Rohini Sindhuri) ಅವರ ನಡುವಿನ ಜಟಾಪಟಿಗೆ ಕೋರ್ಟ್‌ (Court) ಬ್ರೇಕ್​ ಹಾಕಿದೆ. ರೋಹಿಣಿ ಸಿಂಧೂರಿ ಅವರ ಪರ ವಕೀಲ ವಾದ ಅಲಿಸಿದಸಿಟಿ ಸಿವಿಲ್ ಕೋರ್ಟ್ ಡಿ. ರೂಪಾ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೂ ಸಮನ್ಸ್ ಜಾರಿ (Summons Issued) ಮಾಡಿದೆ. ಸರ್ಕಾರದ ಆದೇಶಕ್ಕೂ ಕ್ಯಾರೇ‌ ಅನ್ನೋದೆ ಆರೋಪ ಮುಂದುವರೆಸಿದ್ದ ಡಿ.ರೂಪ ಅವರಿಗೆ ಸೇರಿದಂತೆ ಮೀಡಿಯಾ (Media) ಹಾಗೂ ಸಾಮಾಜಿಕ ಜಾಲತಾಣದಲ್ಲಿ (Social Media) ಮಾನಹಾನಿಕರ‌ ಹೇಳಿಕೆ ಅಥವಾ ಬರಹಕ್ಕೆ ನಿರ್ಬಂಧ ವಿಧಿಸಿದೆ. ಮಾನಹಾನಿಕರ, ಆಧಾರ ರಹಿತ ಆರೋಪ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆಯನ್ನು (Injunction Order) ಕೋರ್ಟ್​ ನೀಡಿದೆ. ಇದರೊಂದಿಗೆ ರೋಹಿಣಿ ಸಿಂಧೂರಿ ಅವರಿಗೆ ಬಿಗ್​ ರಿಲೀಫ್​ ಸಿಕ್ಕಿದೆ.


ಕೋರ್ಟ್​ ಮೆಟ್ಟಿಲೇರಿದ್ದ ರೋಹಿಣಿ ಸಿಂಧೂರಿ


ತಮ್ಮ ವಿರುದ್ಧ ಬರೋಬ್ಬರಿ 20ಕ್ಕೂ ಹೆಚ್ಚು ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ರೋಹಿಣಿ ಸಿಂಧೂರಿ ದೂರು ನೀಡಿದ್ದರು. ಈ ವೇಳೆ ಮುಖ್ಯ ಕಾರ್ಯದರ್ಶಿಗಳು ಇಬ್ಬರಿಗೂ ಯಾವುದೇ ಹೇಳಿಕೆಯನ್ನು ನೀಡಿದಂತೆ ಸೂಚನೆ ನೀಡಿದ್ದರು. ಆದರೆ ಇದರ ಹೊರತಾಗಿಯೂ ಡಿ ರೂಪಾ ಅವರ ಆಡಿಯೋ ವೈರಲ್ ಆಗಿತ್ತು.
ಇದರ ನಡುವೆ ರೋಹಿಣಿ ಸಿಂಧೂರಿ ಅವರು ಕೋರ್ಟ್​ ಮೆಟ್ಟಿಲೇರಿ ತಮ್ಮ ವಿರುದ್ಧ ಮಾನಹಾನಿಯಾಗುವ, ಆಧಾರ ರಹಿತ ಆರೋಪಗಳನ್ನು ನೀಡದಂತೆ ತಡೆ ನೀಡಲು ಮನವಿ ಮಾಡಿದ್ದರು. ಅಲ್ಲದೆ ಇನ್ನು ಮುಂದೆ ಡಿ ರೂಪಾ ಸೇರಿದಂತೆ ಎಲ್ಲಾ ಮಾಧ್ಯಮಗಳು ತಮ್ಮ ವಿಚಾರವನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಹೊರಡಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಅರ್ಜಿ ಸಲ್ಲಿಸಿದ್ದ ವಕೀಲರ ವಾದ ಆಲಿಸಿದ್ದ ಕೋರ್ಟ್​, ಇಂದಿಗೆ ತೀರ್ಪು ಕಾಯ್ದಿರಿಸಿತ್ತು.


ಇದನ್ನೂ ಓದಿ: CT Ravi: ಮಾಂಸ ತಿಂದಿದ್ದು ನನಗೆ ನೆನಪು ಇರಲಿಲ್ಲ; ವಿವಾದ ಭುಗಿಲೆದ್ದ ಬೆನ್ನಲ್ಲೇ ಸಿ ಟಿ ರವಿ ಸ್ಪಷ್ಟನೆ


ರೋಹಿಣಿ ಸಿಂಧೂರಿ ಪರ ವಕೀಲರ ವಾದ ಆಲಿಸಿದ್ದ ಕೋರ್ಟ್


ಇಂದು ಅರ್ಜಿಯ ವಿಚಾರಣೆ ಕೈಗೆತ್ತಕೊಂಡ ಕೋರ್ಟ್​, ಡಿ ರೂಪಾ ಸೇರಿದಂತೆ ಎಲ್ಲಾ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಅರ್ಜಿದಾರರ ವಿಚಾರವನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಿದೆ.


ರೋಹಿಣಿ ಸಿಂಧೂರಿ


ಅಲ್ಲದೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಪರ ವಕೀಲರ ವಾದ ಆಲಿಸಿದ್ದ ಕೋರ್ಟ್​, ತಡೆಯಾಜ್ಞೆ ನೀಡುವ ಮುನ್ನ ಡಿ ರೂಪಾ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಅರ್ಜಿಯ ವಿಚಾರಣೆಯನ್ನು ಮಾರ್ಚ್​ 7ಕ್ಕೆ ಮುಂದೂಡಿದೆ. ಎರಡು ಕಡೆ ವಾದ ಆಲಿಸಿದ ಬಳಿಕ ಕೋರ್ಟ್​ ಅಂತಿಮ ಆದೇಶವನ್ನು ನೀಡಲಿದೆ.


ಇದನ್ನೂ ಓದಿ: CT Ravi: 'ಸಿ ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋದರೂ ಮಠಾಧೀಶರ ಮೌನ' -ಮಾಜಿ ಸಿಎಂ ಸಿದ್ದರಾಮಯ್ಯ ಅಚ್ಚರಿ


ಉಳಿದಂತೆ ಡಿ ರೂಪಾ ಸೇರಿದಂತೆ ಮಾಧ್ಯಮಗಳು ಹಂಚಿಕೊಂಡಿದ್ದ ಪೋಸ್ಟ್​​ಗಳ ವಿರುದ್ಧ ಒಟ್ಟು 66 ಪ್ರತಿವಾದಿಗಳನ್ನಾಗಿ ಮಾಡಿ ರೋಹಿಣಿ ಸಿಂಧೂರಿ ಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್​ ಡಿ ರೂಪಾ ಅವರು ಸೇರಿದಂತೆ ಒಟ್ಟು 66 ಪ್ರತಿವಾದಿಗಳಿಗೆ ನೋಟಿಸ್​ ಜಾರಿ ಮಾಡಿದೆ.

Published by:Sumanth SN
First published: