ಬೆಂಗಳೂರಿನಲ್ಲಿ ಆ್ಯಕ್ಟಿವ್ ಆಗಿರುವ ಚಡ್ಡಿ ಗ್ಯಾಂಗ್​ಗೂ ರಾಯಚೂರಿಗೂ ಇದೆ ಸಂಬಂಧ?

ಕಳೆದ ವರ್ಷ ರಾಯಚೂರು ಜಿಲ್ಲೆಯಲ್ಲಿಯೂ ಇದೇ ರೀತಿಯ ಗುಂಪು ಆ್ಯಕ್ಟಿವ್​ ಆಗಿತ್ತು. ಇವರು ಹಾಡುಹಗಲೇ ಗುಂಪಾಗಿ ಹೋಗಿ ಕಳ್ಳತನ ಮಾಡುತ್ತಿದ್ದರು.

Rajesh Duggumane | news18-kannada
Updated:November 11, 2019, 10:19 AM IST
ಬೆಂಗಳೂರಿನಲ್ಲಿ ಆ್ಯಕ್ಟಿವ್ ಆಗಿರುವ ಚಡ್ಡಿ ಗ್ಯಾಂಗ್​ಗೂ ರಾಯಚೂರಿಗೂ ಇದೆ ಸಂಬಂಧ?
ಚಡ್ಡಿ ಗ್ಯಾಂಗ್​
  • Share this:
ಬೆಂಗಳೂರು (ನ.11): ನಗರದಲ್ಲಿ ವಿಚಿತ್ರ ಗ್ಯಾಂಗ್​ ಪ್ರತ್ಯಕ್ಷವಾಗಿದೆ. ಈ ಖದೀಮರು ಕಳ್ಳತನ ಮಾಡುವಾಗ ಬಟ್ಟೆ ಬಿಚ್ಚಿಟ್ಟು, ಕೇವಲ ಚಡ್ಡಿಯಲ್ಲಿ ಹೋಗುತ್ತಾರೆ ಎನ್ನುವ ವಿಚಾರವನ್ನು ನ್ಯೂಸ್​18 ಕನ್ನಡ ದೃಶ್ಯಾವಳಿಗಳ ಸಹಿತ ತೆರೆದಿಟ್ಟಿತ್ತು. ಅಚ್ಚರಿ ಎಂದರೆ, ಈ ಗ್ಯಾಂಗ್​ಗೂ ರಾಯಚೂರಿಗೆ ಕನೆಕ್ಷನ್​ ಇದೆ ಎನ್ನಲಾಗಿದೆ.

ಕಳೆದ ವರ್ಷ ರಾಯಚೂರು ಜಿಲ್ಲೆಯಲ್ಲಿಯೂ ಇದೇ ರೀತಿಯ ಗುಂಪು ಆ್ಯಕ್ಟಿವ್​ ಆಗಿತ್ತು. ಇವರು ಹಾಡುಹಗಲೇ ಗುಂಪಾಗಿ ಹೋಗಿ ಕಳ್ಳತನ ಮಾಡುತ್ತಿದ್ದರು.  ಇವರು ಚಡ್ಡಿ ಹಾಕಿಕೊಂಡು, ಮೈಗೆ ಎಣ್ಣೆ ಹಚ್ಚಿಕೊಂಡಿರುತ್ತಿದ್ದರು. ಹೀಗಾಗಿ, ಇವರಿಗೆ ಚಡ್ಡಿ ಗ್ಯಾಂಗ್​ ಎನ್ನುವ ಪಟ್ಟ ನೀಡಲಾಗಿತ್ತು.

ಈ ತಂಡದಲ್ಲಿ ೧೦ಕ್ಕೂ ಹೆಚ್ಚು ಜನ ಇದ್ದರು. ರಾಯಚೂರಿನಲ್ಲಿ ಸಾಕಷ್ಟು ಮನೆಗಳನ್ನು ಇವರು ಕಳ್ಳತನ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ತಂಡದ 5 ಜನರನ್ನು ಪೊಲೀಸರು ಬಂಧಿಸಿದ್ದರು. ಕೆಲವರು ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದರು ಎನ್ನಲಾಗಿದೆ. ಹೀಗೆ ತಪ್ಪಿಸಿಕೊಂಡು ಬಂದವರೇ ಈಗ ಬೆಂಗಳೂರಿನಲ್ಲಿ ಆ್ಯಕ್ಟಿವ್​ ಆಗಿದ್ದಾರಾ ಎನ್ನುವ ಶಂಕೆ ಕೂಡ ಮೂಡಿದೆ.

ಇದನ್ನೂ ಓದಿ:  ಕಳ್ಳತನ ಮಾಡಲು ಬೆತ್ತಲಾಗ್ತಾರೆ ಈ ಖದೀಮರು; ಬೆಂಗಳೂರಿನಲ್ಲೊಂದು ವಿಚಿತ್ರ ಗ್ಯಾಂಗ್

ರಾಯಚೂರಿನ ಗ್ಯಾಂಗ್​ಗೂ ಬೆಂಗಳೂರಿನಲ್ಲಿ ಈಗ ಪತ್ತೆಯಾಗಿರುವ ಗುಂಪಿಗೂ ಸಾಮ್ಯತೆ ಇದೆ. ಬೆಂಗಳೂರಿನ ಚಡ್ಡಿ ಗ್ಯಾಂಗ್​ನವರ ಕೈಯಲ್ಲಿ ಕಲ್ಲಿರುತ್ತದೆ. ಯಾರಾದರೂ ಹಿಡಿಯಲು ಮುಂದಾದರೆ ಕಲ್ಲಿನಿಂದ ದಾಳಿ ಮಾಡುತ್ತಾರೆ. ಹತ್ತಿರ ಬಂದರೆ ಚಾಕುವಿನಿಂದ ಇರಿಯುತ್ತಾರೆ. ಯಾರ ಹಿಡಿತಕ್ಕೂ ಸಿಗಬಾರದು ಎನ್ನುವ ಕಾರಣಕ್ಕೆ ಮೈಗೆ ಎಣ್ಣೆ ಹಚ್ಚಿಕೊಳ್ಳುತ್ತಾರೆ. ರಾಯಚೂರಿನ ಚಡ್ಡಿ ಗ್ಯಾಂಗ್​ ಕೂಡ ಇದೇ ತಂತ್ರಗಾರಿಕೆ ಉಪಯೋಗಿಸುತ್ತಿತ್ತು.

First published: November 11, 2019, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading