ಓಎಲ್ಎಕ್ಸ್ ನಲ್ಲಿ ಆರ್ಮಿ ಆಧಿಕಾರಿಗಳ ಹೆಸರಲ್ಲಿ ವಂಚನೆ; ನಾಲ್ವರನ್ನು ವಶಕ್ಕೆ ಪಡೆದ ಸಿಸಿಬಿ

ಸದ್ಯ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಹೈದರಾಬಾದ್ ಜೈಲಿನಿಂದ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅನ್ ಲೈನ್ ಮೂಲಕ ಬಣ್ಣ ಬಣ್ಣದ ಜಾಹೀರಾತು ನೀಡಿ ನೂರಾರು ಮಂದಿಗೆ ವಂಚಿಸುತ್ತಿದ್ದ ಈ ಖದೀಮರಿಗೆ ಸಿಸಿಬಿ ಪೊಲೀಸರು ಲೆಫ್ಟ್ ರೈಟ್ ಶುರು ಮಾಡಿದ್ದಾರೆ.

ಸಾಂದದರ್ಭಿಕ ಚಿತ್ರ

ಸಾಂದದರ್ಭಿಕ ಚಿತ್ರ

  • Share this:
ಬೆಂಗಳೂರು; ಆರ್ಮಿ ಆಧಿಕಾರಿಗಳ ಹೆಸರಿನಲ್ಲಿ ಆನ್ ಲೈನ್ ಮೂಲಕ ವಂಚಿಸುತ್ತಿದ್ದ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಾಜೀಬ್ ಖಾನ್, ಸಾಹೀಲ್, ಉಮೇರ್ ಖಾನ್ ಮತ್ತು ಸಾಹೀದ್ ಸೈಬರ್ ಬಂಧಿತ ಆರೋಪಿಗಳು. ಆರೋಪಿಗಳು ಓಎಸ್ಎಕ್ಸ್ ನಲ್ಲಿ ಆರ್ಮಿ ಆಧಿಕಾರಿಗಳ ಹೆಸರಲ್ಲಿ ನಕಲಿ ಜಾಹೀರಾತು ನೀಡುತ್ತಿದ್ದರು. ಜಾಹೀರಾತಿನಲ್ಲಿ ನಾನು ಆರ್ಮಿ ಆಧಿಕಾರಿಯಾಗಿದ್ದು ನನಗೆ ಬೇರೆಡೆಗೆ ವರ್ಗಾವಣೆಯಾಗಿದೆ. ಅದ್ದರಿಂದ ನನ್ನ ಕಾರನ್ನು ಮಾರಾಟ ಮಾಡಬೇಕಿದೆ ಎಂದು ಓಎಲ್ಎಕ್ಸ್ ನಲ್ಲಿ ಜಾಹೀರಾತು ಹಾಕುತ್ತಿದ್ದರಂತೆ.

ಆರ್ಮಿ ಆಧಿಕಾರಿಗಳ ಹೆಸರಲ್ಲಿ ನಕಲಿ ಪೋಟೊ, ಐಡಿ ಕಾರ್ಡ್ ಮತ್ತು ಕಾರಿನ ಪೋಟೊ ಅಪ್ಲೋಡ್ ಮಾಡುತ್ತಿದ್ದರು. ಕಾರು ಮಾರಾಟ ಮತ್ತು ವ್ಯಕ್ತಿ ವಿವರಗಳನ್ನು ನೋಡ್ತಿದ್ದ ಗ್ರಾಹಕರು ಕಾರು ಕೊಂಡುಕೊಳ್ಳಲು ಪೋನ್ ಮಾಡಿದಾಗ ಸೈಬರ್ ಕ್ರಿಮಿಗಳು ಅವರನ್ನ ವಂಚಿಸುತ್ತಿದ್ದರಂತೆ. ಆರೋಪಿಗಳು ಅಪ್ಲೋಡ್ ಮಾಡುವ ಪೋನ್ ನಂಬರ್ ಗೆ ಕರೆ ಬಂದ ಕೂಡಲೇ ಕ್ಯೂ ಆರ್ ಕೋಡ್ ಕಳಿಸಿ ಅದನ್ನ ಸ್ಕ್ಯಾನ್ ಮಾಡುವಂತೆ ಸೂಚಿಸುತ್ತಿದ್ರಂತೆ. ಹೀಗೆ ಹಲವಾರು ಮಂದಿಗೆ ಕ್ಯೂ ಆರ್ ಕೋಡ್ ಕಳಿಸಿ ಲಕ್ಷಾಂತರ ರೂಪಾಯಿ ಹಣ ಗುಳುಂ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ನಗರದಲ್ಲಿ ಸುಮಾರು 20 ಜನರಿಗೆ ವಂಚಿಸಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಸೈಬರ್ ಪೊಲೀಸರು ಆರೋಪಿಗಳ ಶೋಧ ನಡೆಸಿದಾಗ ನಾಲ್ವರು ಅಸಾಮಿಗಳು ಹೈದರಾಬಾದ್ ಪೊಲೀಸರ ಬಲೆಗೆ ಬಿದ್ದಿದ್ದು ಜೈಲಿನಲ್ಲಿದ್ದರು.

ಸದ್ಯ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಹೈದರಾಬಾದ್ ಜೈಲಿನಿಂದ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅನ್ ಲೈನ್ ಮೂಲಕ ಬಣ್ಣ ಬಣ್ಣದ ಜಾಹೀರಾತು ನೀಡಿ ನೂರಾರು ಮಂದಿಗೆ ವಂಚಿಸುತ್ತಿದ್ದ ಈ ಖದೀಮರಿಗೆ ಸಿಸಿಬಿ ಪೊಲೀಸರು ಲೆಫ್ಟ್ ರೈಟ್ ಶುರು ಮಾಡಿದ್ದಾರೆ.
Published by:HR Ramesh
First published: