Cab Drivers Protest: ಸಚಿವ ರಾಮುಲು ಮನೆಗೆ ಕ್ಯಾಬ್ ಚಾಲಕರ ಮುತ್ತಿಗೆ

ರಾಮುಲು ಮನೆ ಮುಂದೆ ನೂರಾರು ಕ್ಯಾಬ್ ನಿಲ್ಲಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಮನೆ ಬಾಗಿಲಿನಲ್ಲಿ ನೂರಾರು ಕ್ಯಾಬ್ ನಿಲ್ಲಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆವೆನ್‌ ಮಿನಿಸ್ಟರ್ ಕ್ವಾಟ್ರಸ್ ಮನೆಗೆ ಮುತ್ತಿಗೆ ಹಾಕಿರುವ ಚಾಲಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.

ಕ್ಯಾಬ್ ಚಾಲಕರು

ಕ್ಯಾಬ್ ಚಾಲಕರು

  • Share this:
ಕ್ಯಾಬ್ ಚಾಲಕರು (Cab Drivers) ರಾಜ್ಯ ಸಾರಿಗೆ ಸಚಿವ ಶ್ರೀ ರಾಮುಲು (B Sriramulu) ಮನೆಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (Bharat Transport Association) ಸಿಬ್ಬಂದಿ ಸಚಿವರ ಮನೆಗೆ ಮುತ್ತಿಗೆ ಹಾಕಿದ್ದು, ರಾಮುಲು ಮನೆ ಮುಂದೆ ನೂರಾರು ಕ್ಯಾಬ್ ನಿಲ್ಲಿಸಿ ಪ್ರತಿಭಟನೆ (Protest) ಮಾಡಲಾಗುತ್ತಿದೆ. ಮನೆ ಬಾಗಿಲಿನಲ್ಲಿ ನೂರಾರು ಕ್ಯಾಬ್ ನಿಲ್ಲಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆವೆನ್‌ ಮಿನಿಸ್ಟರ್ ಕ್ವಾಟ್ರಸ್ ಮನೆಗೆ ಮುತ್ತಿಗೆ ಹಾಕಿರುವ ಚಾಲಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ತಮ್ಮ ಕ್ಯಾಬ್​ಗಳನ್ನು (Cabs) ತಂದು ಸಚಿವರ ಮನೆ ಬಾಗಿಲಿನಲ್ಲಿ ನಿಲ್ಲಿಸಿದ್ದು ಎಲ್ಲರೂ ಸ್ಥಳದಲ್ಲಿಯೇ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ಬೈಕ್ ಟ್ಯಾಕ್ಸಿಗಳು (Taxi) ಬಂದ ಕಾರಣ ಕ್ಯಾಬ್​ಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಮುಖ್ಯವಾಗಿ ಆಫೀಸ್ ಹಾಗೂ ಇತರ ಕಾರಣಗಳಿಗೆ ಹೊರಗೆ ಓಡಾಡುವವರು ಆರಾಮಾವಗಿ ಟೂ ವೀಲ್ಹರ್ ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ. ಬೈಕ್ (Bike) ಆಗಿರುವ ಕಾರಣ ಟ್ರಾಫಿಕ್​ನ (Traffic) ಸಮಸ್ಯೆಯೂ ಅಷ್ಟಾಗಿ ಕಾಡದೆ, ಕಡಿಮೆ ಬೆಲೆಯಲ್ಲಿ ಪ್ರಯಾಣಿಸಬಹುದಾದ ಆಯ್ಕೆ ಜನರಿಗೆ ಲಭ್ಯವಾಗಿದೆ. ಹಾಗಾಗಿ ಕ್ಯಾಬ್​ಗಳನ್ನು ಅವಲಂಬಿಸುವವರ ಸಂಖ್ಯೆ ಇಳಿಮುಖವಾಗುತ್ತಿದೆ.

ಚಾಲಕರ ಬೇಡಿಕೆಗಳು:

1- ರ್ಯಾಪಿಡೋ ಬೈಕ್ ಟ್ಯಾಕ್ಸಿ ಕೂಡಲೇ ಬಂದ್ ನಿಲ್ಲಿಸಬೇಕು

2- ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಕೂಡಲೇ ಹಿಂಪಡೆಯುವುದು

ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು

ಸಿಬ್ಬಂದಿ ಪ್ರತಿಭಟನೆ ಮಾಡುವುದನ್ನು ತಿಳಿದು ಸ್ಥಳಕ್ಕೆ ಬಂದ ಪೊಲೀಸರು (Police) ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಲು ಪ್ರಯತ್ನಪಟ್ಟಿದ್ದಾರೆ. ಕ್ಯಾಬ್ ಗಳನ್ನು ಸಚಿವರ ಮನೆಯ ಮುಂದಿನಿಂದ ತೆರವು ಮಾಡುವಂತೆ ಪೊಲೀಸರು ಸಿಬ್ಬಂದಿಗಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಶ್ರೀ ರಾಮುಲು ಬಂದು ನಮ್ಮ ಬೇಡಿಕೆಗಳನ್ನು ಈಡೆರಿಸುವವರೆಗೂ ಇಲ್ಲಿಂದ ಕ್ಯಾಬ್ ತೆಗೆಯುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಜನತಾ ಕರ್ಫ್ಯೂನಿಂದ ಆಟೋ, ಕ್ಯಾಬ್ ಚಾಲಕರು ಸಂಕಷ್ಟಕ್ಕೆ; ಬೆಳಿಗ್ಗಿನ ಸಮಯದಲ್ಲಾದರೂ ಅನುಮತಿಗೆ ಆಗ್ರಹ

ಕೊರೋನಾ ಹೊಡೆತಕ್ಕೆ ತತ್ತರಿಸಿದ್ದ ಕ್ಯಾಬ್ ಉದ್ಯಮ

ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಕ್ಯಾಬ್ ಉದ್ಯಮ (Cab Business) ಬಹಳಷ್ಟು ಬೆಳೆದಿದೆ. ಓಲಾ, ಉಬರ್ ಸೇರಿ ಇನ್ನೂ ಬಹಳಷ್ಟು ಕ್ಯಾಬ್ ವ್ಯವಸ್ಥೆ ಬೆಂಗಳೂರಿನಲ್ಲಿ (Bengaluru) ಲಭ್ಯವಿದೆ. ಹಾಗೆಯೇ ಬಹಳಷ್ಟು ಜನರು ಈ ಉದ್ಯೋಗವನ್ನು ಅವಲಂಬಿಸಿಕೊಂಡಿದ್ದಾರೆ. ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ಕ್ಯಾಬ್ ಓಡಿಸಿ ಬದುಕಿ ಕಟ್ಟಿಕೊಂಡವರಿದ್ದಾರೆ. ಆದರೆ ಕೊರೋನಾದಿಂದಾಗಿ (Covid19) ಕ್ಯಾಬ್, ಟ್ಯಾಕ್ಸಿ ಫೀಲ್ಡ್​ಗೆ ದೊಡ್ಡ ಹೊಡೆತ ಬಿದ್ದಿತ್ತು.

ಅರ್ಧಕ್ಕರ್ಧ ಬೆಂಗಳೂರು ಖಾಲಿಯಾಗಿದ್ದು ಮಾತ್ರವಲ್ಲ ಕ್ಯಾಬ್ ಬೇಡಿಕೆ ಭಾರೀ ಇಳಿಮುಖವಾಗಿತ್ತು. ಅನಿವಾರ್ಯವಾಗಿ ಬಹಳಷ್ಟು ಜನರು ಉದ್ಯೋಗವನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ ಈಗ ಎಲ್ಲವೂ ಯಥಾಸ್ಥಿತಿಗೆ ಮರಳುತ್ತಿದ್ದು ಸ್ವಲ್ಪ ಮಟ್ಟಿಗೆ ಉದ್ಯಮ ಚೇತರಿಕೆ ಕಾಣುತ್ತಿದೆ. ಆದರೆ ಈ ಸಂದರ್ಭದಲ್ಲಿ ಕ್ಯಾಬ್ ಚಾಲಕರಿಗೆ ಇನ್ನೊಂದು ಸಮಸ್ಯೆ ಶುರುವಾಗಿದೆ.

ಇದನ್ನೂ ಓದಿ: Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

ಟೂವೀಲ್ಹರ್ ಕ್ಯಾಬ್ ಹಾವಳಿ

ಬೆಂಗಳೂರಿನಲ್ಲಿ ಎಲ್ಲವೂ ಕ್ವಿಕ್ ಆಗಿ ಆಗಬೇಕು. ಶಾರ್ಟ್ ಕಟ್ ಮೊರೆ ಹೋಗುವವರೇ ಹೆಚ್ಚು. ಬಹಳಷ್ಟು ಜನರು ಟೂವೀಲ್ಹರ್ ಟ್ಯಾಕ್ಸಿ ಅವಲಂಬಿಸಿದ್ದಾರೆ. ಕ್ಯಾಬ್​ಗಳಿಗೆ ದುಬಾರಿ ಹಣ ಕೊಟ್ಟು ಟ್ರಾಫಿಕ್​ನಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡುವ ಬದಲು ಗಲ್ಲಿ ಗಲ್ಲಿಯಲ್ಲಿ ದಾರಿ ಹುಡುಕಿಕೊಂಡು ಬೇಗನೆ ತಲುಪುವ ಹಾಗೆಯೇ ಬಜೆಟ್ ಫ್ರೆಂಡ್ಲೀ (Budget Friendly) ಆಗಿರುವ ಬೈಕ್ ಟ್ಯಾಕ್ಸಿಗಳು ಜನರ ಮಧ್ಯೆ ಜನಪ್ರಿಯವಾಗುತ್ತಿವೆ.

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಏನಿದು ?

ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕ (Karnataka) ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ (Electric Bike taxi) ಯೋಜನೆ-2021 ಅನ್ನು ಅನಾವರಣಗೊಳಿಸಿದ್ದರು. ಇದು ಸಾರ್ವಜನಿಕ ಸಾರಿಗೆ ಮತ್ತು ದೈನಂದಿನ ಪ್ರಯಾಣಿಕರ ನಡುವೆ ಬ್ರಿಡ್ಜ್​ನಂತೆ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯು ಪ್ರಯಾಣದ ಸಮಯ ಮತ್ತು ಬಸ್, ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳನ್ನು ತಲುಪುವಲ್ಲಿ ಬಹಳಷ್ಟು ಅನುಕೂಲವಾಗಲಿದೆ.

ಸಂಬಂಧಪಟ್ಟ ಪ್ರಾಧಿಕಾರವು ಈ ಯೋಜನೆಯಡಿ ಪರವಾನಗಿಗಳನ್ನು ನೀಡುತ್ತದೆ. ಈ ಯೋಜನೆಯಡಿ ನೋಂದಾಯಿಸಲಾದ ವಾಹನಗಳು ಸಾರಿಗೆ ವಿಭಾಗದಲ್ಲಿರುತ್ತವೆ, ಇದಕ್ಕಾಗಿ ಸರ್ಕಾರವು ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಲೈಸೆನ್ಸ್, ತೆರಿಗೆ ಮತ್ತು ಆರ್ಥಿಕ ಪ್ರಯೋಜನಗಳಂತಹ ಹಲವಾರು ವಿನಾಯಿತಿಗಳನ್ನು ನೀಡಿದೆ.
Published by:Divya D
First published: