ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಭಾರೀ ಮಳೆಗೆ (Heavy Rain) ಕಂಗೆಟ್ಟಿದೆ. ನಗರದ (City) ಅರ್ಧಕ್ಕರ್ಧ ಭಾಗ ಮುಳುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಾಜಕಾಲುವೆ, ಕೆರೆಗಳೆಲ್ಲ (Lake) ತುಂಬಿ, ರಸ್ತೆಗಳ (Road) ಮೇಲೆಲ್ಲ ನೀರು (Water) ಹರಿಯುತ್ತಿದೆ. ಪರಿಣಾಮ ಹೆದ್ದಾರಿಗಳೇ (Highway) ನದಿಗಳಂತೆ ಗೋಚರಿಸುತ್ತಿವೆ. ಬೆಂಗಳೂರಿನ ಪರಿಸ್ಥಿತಿ ಕೆಟ್ಟದಾಗಿದ್ದು, ಜನರು ಭಯದಲ್ಲೇ ಬದುಕುವಂತಾಗಿದೆ. ಇನ್ನು ಕಳೆದ ವಾರದಲ್ಲಿ ಭಾರೀ ಮಳೆ ಬಂದಾಗ ಟೆಕ್ಕಿಗಳೆಲ್ಲ (Techie) ಆಫೀಸ್‌ಗೆ (Office) ತಲುಪಲಾಗದೇ ರೋಡ್‌ನಲ್ಲೇ ಪರದಾಡಿದ್ದರು. ಆಗ ಐಟಿ ಕಂಪನಿಗಳಿಗೆ (IT Company) ಬರೋಬ್ಬರಿ 250 ಕೋಟಿ ರೂಪಾಯಿ ನಷ್ಟವಾಗಿತ್ತಂತೆ. ಇದೀಗ ಮತ್ತೊಮ್ಮೆ ಬೆಂಗಳೂರು ಮಳೆಯಲ್ಲಿ ಮುಳುಗಿದ್ದು, ಆಫೀಸ್‌ಗೆ ತೆರಳಲಾಗದೇ ಟೆಕ್ಕಿಗಳು ಸಂಕಷ್ಟಪಟ್ಟಿದ್ದಾರಂತೆ.
ಟ್ರ್ಯಾಕ್ಟರ್‌ನಲ್ಲಿ ಆಫೀಸ್ ತಲುಪಿದ ಟೆಕ್ಕಿಗಳು
ಬೆಂಗಳೂರು ನಗರದ ರೈನ್ ಬೋ ಲೇಔಟ್ ನಲ್ಲಿನ ನಿವಾಸಿಗಳು ಮತ್ತು ಇಲ್ಲಿ ವಾಸಿಸುವ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗಳನ್ನು ತಲುಪಲು ಟ್ರ್ಯಾಕ್ಟರ್‌ಗಳ ನೆರವು ಪಡೆದರು. ಇಷ್ಟು ದಿನ ತಮ್ಮ ಸ್ವಂತ ಕಾರು, ಬೈಕ್, ಆಫೀಸ್ ಕ್ಯಾಬ್ ಅತವಾ ಎಸಿ ಬಸ್‌ಗಳಲ್ಲಿ ತೆರಳುತ್ತಿದ್ದ ಟೆಕ್ಕಿಗಳು ಇಂದು ರಸ್ತೆಯಲ್ಲಿ ಮಳೆ ನೀರು ತುಂಬಿದ ಕಾರಣದಿಂದ ಟ್ರ್ಯಾಕ್ಟರ್ ಏರಿದ್ದರು. ಟೆಕ್ಕಿಗಳಿಗೆ ಟ್ರ್ಯಾಕ್ಟರ್ ಸವಾರಿ ಮಾಡುವುದು ಒಟ್ಟಿನಲ್ಲಿ ಹೊಸ ಅನುಭವವಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
50 ರೂಪಾಯಿಗೆ ಆಫೀಸ್ ತಲುಪಿದ ಟೆಕ್ಕಿಗಳು
ಇನ್ನು 50 ರೂಪಾಯಿಗೆ ಟೆಕ್ಕಿಗಳು ಟ್ರ್ಯಾಕ್ಟರ್‌ನಲ್ಲಿ ಆಫೀಸ್ ತಲುಪಿದ್ದಾರಂತೆ. ಮಳೆ ಕಾರಣ ನೀಡಿ ನಾವು ಕಚೇರಿಯಿಂದ ಹಲವಾರು ರಜೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಇದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. 50 ರೂಪಾಯಿಗೆ ಡ್ರಾಪ್ ಮಾಡಲು ನಾವು ಟ್ರಾಕ್ಟರ್‌ಗಳಿಗಾಗಿ ಕಾಯುತ್ತಿದ್ದೇವು. ಕೆಲ ಟ್ರಾಕ್ಟರ್ ಚಾಲಕರು ನಮಗೆ ನೆರವು ನೀಡಲು ಮುಂದೆ ಬಂದಿದ್ದಾರೆ. ಹೀಗಾಗಿ ನಾವು ಟ್ರ್ಯಾಕ್ಟರ್‌ನಲ್ಲೇ ಆಫೀಸ್ ತಲುಪಿದೆವು ಅಂತ ಮಹಿಳಾ ಟೆಕ್ಕಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Bengaluru Rains: ಮಳೆ ಎಫೆಕ್ಟ್; ಬೆಂಗಳೂರಲ್ಲಿ ವಿಮಾನ ಹಾರಾಟ ವ್ಯತ್ಯಯ
ಟ್ರ್ಯಾಕ್ಟರ್‌ನಲ್ಲಿ ನಾಯಿ ಜೊತೆ ಹೋದ ಸಿಇಒ
ಇಂದು ಮುಂಜಾನೆ, edtech unicorn upGrad ನ ಸಿಇಒ ಅರ್ಜುನ್ ಮೋಹನ್ ಅವರು ಬೆಂಗಳೂರಿನಲ್ಲಿ ಭಾರೀ ಮಳೆಯ ನಡುವೆ ಕೆಲಸ ಮಾಡಲು ಟ್ರ್ಯಾಕ್ಟರ್ ನಲ್ಲಿ ಹೋಗಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ಟ್ರ್ಯಾಕ್ಟರ್‌ನಲ್ಲಿ ಅವರ ನಾಯಿಯೊಂದಿಗೆ ಹೋಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಇಂದು ವಿದ್ಯುತ್ ಇಲ್ಲದ ಕಾರಣ ಕೆಲಸಕ್ಕೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
Unacademy CEO #GauravMunjal's family being evacuated along with dog from a submerged society due to waterlogging.#Karnataka #Bengaluru #BBMP #BengaluruRains #BengaluruFloods #SpiritOfBengaluru #Unacademy pic.twitter.com/0I39VwMftk
— Hate Detector 🔍 (@HateDetectors) September 6, 2022
ಶಾಲೆಗೆ ಟ್ರ್ಯಾಕ್ಟರ್‌ನಲ್ಲೇ ಹೋದ ಮಕ್ಕಳು
ಮಾತ್ರವಲ್ಲ ಇತ್ತ ಮಳೆ ನೀರಿನಿಂದಾಗಿ ಜಲಾವೃತ್ತವಾಗಿರುವ ಮಾರತ್ ಹಳ್ಳಿಯ ಹಲವು ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಟ್ರಾಕ್ಟರ್ ಗಳನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಇಂದೂ ಕೂಡ ಹತ್ತಾರು ಮಕ್ಕಳ ಏಕಕಾಲದಲ್ಲಿ ಟಾಕ್ಟರ್ ನಲ್ಲಿ ಕುಳಿತು ಶಾಲೆಗೆ ತೆರಳುತ್ತಿರುವ ದೃಶ್ಯಗಳು ವೈರಲ್ ಆಗಿತ್ತು.
ಇದನ್ನೂ ಓದಿ: Bengaluru Rains: ರಸ್ತೆಗಳು ಜಲಾವೃತ, ಟ್ರ್ಯಾಕ್ಟರ್ಗಳಲ್ಲಿ ಪ್ರಯಾಣ; ಗುಡ್ಡ ಕುಸಿತ, ಎಲ್ಲಿ ನೋಡಿದ್ರೂ ಟ್ರಾಫಿಕ್ ಜಾಮ್
ಮಳೆ ನಿರ್ವಹಣೆಗೆ ಸರ್ಕಾರದಿಂದ 300 ಕೋಟಿ
ಇನ್ನು ಬೆಂಗಳೂರು ನಗರದ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯಾದ್ಯಂತ ಮಳೆ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ 600 ಕೋಟಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ