Bus Break fail: ನೋಡನೋಡ್ತಿದ್ದಂತೆ ಬಸ್ ಬ್ರೇಕ್​​ಫೇಲ್, 30 ಪ್ರಯಾಣಿಕರು ಗ್ರೇಟ್​ ಎಸ್ಕೇಪ್!

ರಕ್ಷಾಬಂಧನದ ದಿನವೇ ಬೆಂಗಳೂರಿನ ಅಣತಿ ದೂರದಲ್ಲೇ ದೊಡ್ಡ ಅನಾಹುತ ತಪ್ಪಿದೆ. ನೋಡನೋಡ್ತಿದ್ದಂತೆ ಬಸ್ ಬ್ರೇಕ್ ಫೇಲ್ ಆಗಿದ್ದು 30 ಮಂದಿ ಪ್ರಯಾಣಿಕರು ಗ್ರೇಟ್ ಎಸ್ಕೇಪ್ ಆಗಿದ್ದಾರೆ. ನೆಲಮಂಗಲ ತಾಲ್ಲೂಕಿನ ಡಾಬಸ್ಪೇಟೆ ಬಳಿ ಅವಘಡ ಸಂಭವಿಸಿದೆ.

ಬಸ್​ ಬ್ರೇಕ್​ಫೇಲ್

ಬಸ್​ ಬ್ರೇಕ್​ಫೇಲ್

  • Share this:
ನೆಲಮಂಗಲ (ಆಗಸ್ಟ್​ 11): ರಕ್ಷಾಬಂಧನದ ದಿನವೇ ಬೆಂಗಳೂರಿನ (Bengaluru) ಅಣತಿ ದೂರದಲ್ಲೇ ದೊಡ್ಡ ಅನಾಹುತ ತಪ್ಪಿದೆ. ಹೌದು ನೋಡನೋಡ್ತಿದ್ದಂತೆ ಬಸ್​​ (Bus) ಬ್ರೇಕ್ ಫೇಲ್ (Break fail) ಆಗಿದ್ದು 30 ಮಂದಿ ಪ್ರಯಾಣಿಕರು (Passengers) ಗ್ರೇಟ್ ಎಸ್ಕೇಪ್ (Great Escape) ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ಯ ನೆಲಮಂಗಲ ತಾಲ್ಲೂಕಿನ ಡಾಬಸ್‌ಪೇಟೆ ಬಳಿ ಅವಘಡ ಸಂಭವಿಸಿದೆ. ಬಸ್ ಬ್ರೇಕ್​ಫೇಲ್ ಆಗ್ತಿದ್ದಂತೆ ಎಚ್ಚೆತ್ತ ಡ್ರೈವರ್ (Driver) ಬಸ್​ನ್ನು ರಸ್ತೆಯಿಂದ ಕೆಳಗಿಳಿಸಿದ್ದು 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಇದ್ದ ನಾಲ್ಕು ಮಂದಿ  ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಅವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿತ್ತು.

ನೆಲಮಂಗಲದ ಡಾಬಸ್‌ಪೇಟೆ ಬಳಿ ಸರ್ಕಾರಿ ಬಸ್​​ನ ಬ್ರೇಕ್ ಡೌನ್ ಆಗಿತ್ತು. ತಕ್ಷಣ ಅಪಾಯ ಅರಿತ ಚಾಲಕ ಬಸ್​ನ್ನು ರಸ್ತೆಯಿಂದ ಪಕ್ಕದ ಸ್ಥಳಕ್ಕೆ ತಿರುಗಿಸಿ ಅಪಾಯ ತಪ್ಪಿಸಿದ್ದಾರೆ. ಅದೃಷ್ಟವಶಾತ್ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಾಲಕನ ಸಮಯ ಪ್ರಜ್ಞೆ

ರಾಷ್ಟ್ರೀಯ ಹೆದ್ದಾರಿ 4ರ ಡಾಬಸ್‌ಪೇಟೆ‌ಯಲ್ಲಿ ಘಟನೆ ಸಂಭವಿಸಿದೆ. ಸರ್ಕಾರಿ ಬಸ್​ ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿತ್ತು. ಈ ವೇಳೆ ರಸ್ತೆಯಲ್ಲಿ ಬಸ್‌ನ ಬ್ರೇಕ್‌ಡೌನ್ ಆಗಿದೆ. ಬಸ್ ಬ್ರೇಕ್‌ಡೌನ್ ಆಗಿದ್ದನ್ನ ಗಮನಿಸಿದ ಚಾಲಕ ಬಸ್​​ನ್ನು ಕಂಟ್ರೋಲ್ ಮಾಡಿದ್ದಾರೆ. ಬಸ್​ನ್ನು ರಸ್ತೆಯಿಂದ ಪಕ್ಕಕ್ಕೆ ಇಳಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

Bengaluru bus break fail driver timings 30 passenger great escape |
ನೆಲಮಂಗಲದಲ್ಲಿ ಬಸ್​ ಬ್ರೇಕ್​ಫೇಲ್


ಇದನ್ನೂ ಓದಿ: ಎಸಿಬಿ ರಚನೆ ರದ್ದುಗೊಳಿಸಿದ ಹೈಕೋರ್ಟ್; ಎಲ್ಲ ಭ್ರಷ್ಟಾಚಾರ ಪ್ರಕರಣಗಳೂ ಲೋಕಾಯುಕ್ತಕ್ಕೆ ಶಿಫ್ಟ್

30 ಮಂದಿ ಪ್ರಯಾಣಿಕರು ಬಚಾವ್!

ಸರ್ಕಾರಿ ಬಸ್​ನಲ್ಲಿ 30 ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಘಟನೆಯಿಂದ ಬಸ್‌ನಲ್ಲಿದ್ದ ನಾಲ್ಕು ಮಂದಿ  ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಡ್ರೈವರ್​ನ ಸಮಯಪ್ರಜ್ಞೆಯಿಂದ ಬಚಾವ್ ಆದ್ವಿ ಅಂತಾ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Bengaluru bus break fail driver timings 30 passenger great escape |
ಪ್ರಯಾಣಿಕರಿಗೆ ಗಾಯ


ಕಲಬುರಗಿಯಲ್ಲಿ 3 ಮಕ್ಕಳೊಂದಿಗೆ ತಾಯಿ ಸೂಸೈಡ್​!

ಕಲಬುರಗಿಯಲ್ಲಿ ತಾಯಿ ತನ್ನ ಮೂರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನಲೆ ತಾಯಿ ತನ್ನ ಮಕ್ಕಳೊಂದಿಗೆ ಸೂಸೈಡ್ ಮಾಡಿಕೊಂಡಿದ್ದಾರೆ. ಕಲಬುರಗಿಯ ಆಳಂದ ತಾಲೂಕಿನ ಮಾದನಹಿಪ್ಪರಗ ಗ್ರಾಮದಲ್ಲಿ ಘಟನೆ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಗಲಾಟೆ, ಕಲ್ಲುತೂರಾಟ; ಇಬ್ಬರು ಸಾವು- ನಿಷೇಧಾಜ್ಞೆ ಜಾರಿ

ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ!

ತಾಯಿ ಅಂಬಿಕಾ (32) ತನ್ನ 3 ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾದನಹಿಪ್ಪರಗ ಗ್ರಾಮದಲ್ಲಿ ಮೂವರು ಮಕ್ಕಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಅಂಬಿಕಾ ಮತ್ತು ಒಂದು ಮಗುವಿನ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರಿಂದ ಶೋಧಕಾರ್ಯ ನಡೆಸಿದ್ರು. ಘಟನೆಗೆ ಕೌಟುಂಬಿಕ ಕಲಹ ಎನ್ನಲಾಗ್ತಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.

ಕಬ್ಬಿಣದ ಗಟ್ಟಿಗೆ ಚಿನ್ನದ ಪ್ಲೇಟ್!

ಬೆಂಗಳೂರಿನಲ್ಲಿ ಚಿನ್ನ ವಿಚಾರದಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ. ಕಬ್ಬಿಣದ ಗಟ್ಟಿಗೆ ಚಿನ್ನದ ಪ್ಲೇಟ್​ ಹಾಕಿ ಅಡವಿಟ್ಟು ವಂಚನೆ ಎಸಗಲಾಗಿದೆ. ಮಣಪ್ಪುರಂ ಗೋಲ್ಡ್ ಫೈನಾನ್ಸ್ ಕಂಪನಿಗೆ ವಂಚನೆ ಮಾಡಲಾಗಿದ್ದು ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ. ರಾಜಸ್ಥಾನ ಮೂಲದ ಸುರೇಶ್ ಎಂಬಾತನೇ ವಂಚನೆ ಎಸಗಿರೋ ಆರೋಪಿ.

Bengaluru bus break fail driver timings 30 passenger great escape |
ಕಬ್ಬಿಣಕ್ಕೆ ಚಿನ್ನದ ಪ್ಲೇಟ್​​


ಮಾರ್ಚ್‌ನಲ್ಲಿ ಬೇರೊಬ್ಬರ ಮೂಲಕ 187 ಗ್ರಾಂನ 8 ಗೋಲ್ಡ್ ಬಿಸ್ಕೆಟ್​​ನ್ನು ಸುರೇಶ್​ ಅಡವಿಟ್ಟಿದ್ದ. ಈತ ರಾಮಗೊಂಡನಹಳ್ಳಿಯ ಮಣಪ್ಪುರಂ ಬ್ರ್ಯಾಂಚ್​ನಲ್ಲಿ ಅಡವಿಟ್ಟಿದ್ದ. ಆಡಿಟಿಂಗ್ ಸಂದರ್ಭದಲ್ಲಿ ಆರೋಪಿಯ ಕೃತ್ಯ ಬಯಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ವೈಟ್ ಫೀಲ್ಡ್ ಪೊಲೀಸರು ಆರೋಪಿಗಾಗಿ‌ ಹುಡುಕಾಟ ನಡೆಸ್ತಿದ್ದಾರೆ.
Published by:Thara Kemmara
First published: