Bommasandra To Hosur: ಬೆಂಗಳೂರಿನಿಂದ ತಮಿಳುನಾಡಿಗೆ ಮೆಟ್ರೋದಲ್ಲಿ ಪ್ರಯಾಣಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru Namma Metro: ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ಸೌಕರ್ಯ ಕಲ್ಪಿಸಿದರೆ ನೀವು ಅಕ್ಷರಶಃ ಕರ್ನಾಟಕದಿಂದ ತಮಿಳುನಾಡಿಗೆ ಮೆಟ್ರೋದಲ್ಲೇ ಓಡಾಡಿದಂತಾಗುತ್ತದೆ! ಈ ಕನಸು ಸಹ ಇನ್ನೇನು ನನಸಾಗಲಿದೆ. ಮುಂದೆ ಓದಿ..

 • Share this:

  ಬೆಂಗಳೂರಿನಿಂದ ತಮಿಳುನಾಡಿಗೆ ಮೆಟ್ರೋದಲ್ಲೇ ಪ್ರಯಾಣ ಮಾಡುವ ಕಾಲ ಇನ್ನು ದೂರವಿಲ್ಲ! ಹೌದು, ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಪಕ್ಕದ ತಮಿಳುನಾಡು ರಾಜ್ಯದ ಹೊಸೂರಿಗೂ ಲಗ್ಗೆ ಇಡಲಿದೆ. ಈ ಪ್ರಸ್ತಾಪಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ಸೂಚಿಸಿದ್ದಾರೆ. ಬೆಂಗಳೂರಿನಿಂದ ಮೆಟ್ರೋದಲ್ಲೇ ಹೊರಟು ತಮಿಳುನಾಡು ತಲುಪಿ ಮತ್ತೆ ಮೆಟ್ರೋದಲ್ಲೇ ಬೆಂಗಳೂರಿಗೆ ವಾಪಸ್ಸಾಗಲು (Karnataka To Tamil Nadu Metro) ದಿನಗಳು ಬರುವ ದಿನಗಳು ಇನ್ನೇನು ಶೀಘ್ರದಲ್ಲೆ ಬರುವುದಂತೂ ಪಕ್ಕಾ! ಅರೇ ಹೇಗಿದು? ಬೆಂಗಳೂರು ಮೆಟ್ರೋ ತಮಿಳುನಾಡನ್ನೂ ತಲುಪಲಿದೆಯಾ? ತಮಿಳುನಾಡಿನ ಯಾವ ಊರಿಗೆ ಬೆಂಗಳೂರು ಮೆಟ್ರೋ (Bengaluru Namma Metro) ಸೇವೆ ವಿಸ್ತರಿಸಲಿದೆ? ಎಲ್ಲ ವಿವರ ಇಲ್ಲಿದೆ


  ಬೆಂಗಳೂರು ಮೆಟ್ರೋ ಮಾರ್ಗವು ಸದ್ಯ ಬೊಮ್ಮಸಂದ್ರದವರೆಗೂ ವಿಸ್ತರಿಸಿದೆ. ತಮಿಳುನಾಡಿನ ಹೊಸೂರು ಬೆಂಗಳೂರಿನ ಬೊಮ್ಮಸಂದ್ರ ಮೆಟ್ರೋ ಟರ್ಮಿನಲ್‌ನಿಂದ 20.5 ಕಿಲೋಮೀಟರ್ ದೂರದಲ್ಲಿದೆ. ಇದರಲ್ಲಿ 11.7 ಕಿಲೋಮೀಟರ್ ಕರ್ನಾಟಕದಲ್ಲಿ ಮತ್ತು ಉಳಿದ 8.8 ಕಿಲೋಮೀಟರ್ ತಮಿಳುನಾಡಿನಲ್ಲಿದೆ. ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ಸೌಕರ್ಯ ಕಲ್ಪಿಸಿದರೆ ನೀವು ಅಕ್ಷರಶಃ ಕರ್ನಾಟಕದಿಂದ ತಮಿಳುನಾಡಿಗೆ ಮೆಟ್ರೋದಲ್ಲೇ ಓಡಾಡಿದಂತಾಗುತ್ತದೆ!


  ಹೇಗೆ ಪ್ರಯೋಜನ ಆಗಲಿದೆ?
  ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರುವರೆಗೆ ಸುಮಾರು 20 ಕಿಲೋಮೀಟರ್‌ಗಳ ವಿಸ್ತರಣೆಯಿಂದ ಉಭಯ ರಾಜ್ಯಗಳು ಹೇಗೆ ಪ್ರಯೋಜನ ಪಡೆಯುತ್ತವೆ ಎಂಬ ವಿವರ ಇಲ್ಲಿದೆ.


  ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರು ಪಡೆದರೆ ತಮಿಳುನಾಡಿನ ಹೊಸೂರು ಎಲೆಕ್ಟ್ರಿಕ್ ಮೊಬಿಲಿಟಿ ಹಬ್ ಎಂದೇ ಪ್ರಖ್ಯಾತಿ ಪಡೆದಿದೆ. ಈ ಎರಡೂ ಊರುಗಳ ನಡುವೆ ಅತ್ಯುತ್ತಮ ಸಂಪರ್ಕ ಸೌಲಭ್ಯ ಏರ್ಪಡುವುದು ಎರಡೂ ರಾಜ್ಯಗಳಲ್ಲಿನ ಕೈಗಾರಿಕೆಗಳಿಗೆ ಹೆಚ್ಚು ಅಗತ್ಯವಾದ ಉತ್ತೇಜನವನ್ನು ನೀಡುತ್ತದೆ.


  ಬೆಂಗಳೂರು ಟು ಹೊಸೂರು; ಪ್ರತಿದಿನ ಎಷ್ಟೊಂದು ಜನ ಓಡಾಡ್ತಾರೆ?
  ಒಂದು ಅಂದಾಜಿನ ಪ್ರಕಾರ ಬೆಂಗಳೂರು ಮತ್ತು ಹೊಸೂರು ನಡುವೆ ಪ್ರತಿದಿನ 10 ರಿಂದ 15 ಸಾವಿರ ಉದ್ಯೋಗಿಗಳು ಪ್ರಯಾಣಿಸುತ್ತಾರೆ. ಈ ಎಲ್ಲ ಪ್ರಯಾಣಿಕರಿಗೆ ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನವರೆಗೆ ಮೆಟ್ರೋ ವಿಸ್ತರಣೆಯು ಅತ್ಯಂತ ಸಲೀಸಿನ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ತದೆ.


  3 ತಿಂಗಳ ಹಿಂದೆಯೇ ಸಲ್ಲಿಕೆಯಾಗಿದ್ದ ಪ್ರಸ್ತಾವನೆ
  ತಮಿಳುನಾಡಿನ ಕೃಷ್ಣಗಿರಿ ಸಂಸದ ಎ. ಚೆಲ್ಲಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನವರೆಗೆ ಮೆಟ್ರೋ ವಿಸ್ತರಣೆಯ ಪ್ರಸ್ತಾವನೆಯನ್ನು ಮೂರು ತಿಂಗಳ ಹಿಂದೆ ಸಲ್ಲಿಸಿದ್ದರು. ಅಂತೂ ಈ ಯೋಜನೆಗೆ ಇದೀಗ ಹಸಿರು ನಿಶಾನೆ ದೊರೆತಂತಾಗಿದೆ.


  ಇದನ್ನೂ ಓದಿ: EV Charging Stations Bengaluru: ಬೆಂಗಳೂರಲ್ಲಿ ಎಲ್ಲೆಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್​ಗಳಿವೆ? ಹೀಗೆ ಹುಡುಕಿ


  ಹೊಸೂರು ಏಕಿಷ್ಟು ಮಹತ್ವ ಪಡೆದಿದೆ?
  ತಮಿಳುನಾಡು ರಾಜ್ಯದ ಹೊಸೂರು ಎಲೆಕ್ಟ್ರಿಕ್ ವೆಹಿಕಲ್ (ಇವಿ) ಎಂಜಿನಿಯರಿಂಗ್‌ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ. ಅಷ್ಟೇ ಅಲ್ಲದೇ ಹೊಸೂರು 4,000 ಕ್ಕೂ ಹೆಚ್ಚು ಎಂಎಸ್‌ಎಂಇಗಳನ್ನು ಹೊಂದಿದೆ. ಭಾರತದ ಸ್ವದೇಶಿ ಉದ್ಯಮದ ದೈತ್ಯರಾದ ಟಿವಿಎಸ್ ಮೋಟಾರ್ಸ್, ಅಶೋಕ್ ಲೇಲ್ಯಾಂಡ್, ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ತೈವಾನ್‌ನ ಡೆಲ್ಟಾ ಎಲೆಕ್ಟ್ರಾನಿಕ್ಸ್ ಕಂಪನಿಗಳು ತಮಿಳುನಾಡಿನ ಹೊಸೂರು ಮತ್ತು ಕೃಷ್ಣಗಿರಿಯಲ್ಲಿ ಬೃಹತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿವೆ. ಆದರೆ ಬೆಂಗಳೂರಿನಲ್ಲಿ ತಮ್ಮ ಕಾರ್ಯಾಚರಣೆ ಮತ್ತು ಸಂವಹನ ಕಚೇರಿಗಳನ್ನು ಹೊಂದಿವೆ.


  ಇದನ್ನೂ ಓದಿ: Free Heart Treatment: ಬಡ ಹೃದಯ ರೋಗಿಗಳಿಗೆ ಒಳ್ಳೆ ಸುದ್ದಿ; ಉಚಿತ ಸ್ಟಂಟ್ ಅಳವಡಿಕೆಗೆ ಅವಕಾಶ ಇಲ್ಲಿದೆ


  ಈಕಾರಣದಿಂದ ಪ್ರತಿದಿನ ಬೆಂಗಳೂರು- ಹೊಸೂರು ಓಡಾಡುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ. ಹೀಗಾಗಿ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ಸಂಪರ್ಕ ವ್ಯವಸ್ಥೆ ಎಷ್ಟು ಚೆನ್ನಾಗಿದ್ದರೂ ಕಡಿಮೆಯೇ ಎಂಬ ವಾತಾವರಣವಿದೆ. 

  Published by:guruganesh bhat
  First published: