• Home
  • »
  • News
  • »
  • state
  • »
  • Bengaluru: ಬೆಂಗಳೂರಿನಲ್ಲಿ 10 ಎಕರೆ ಖರೀದಿಸಿದ ಬಿರ್ಲಾ, ಆದಾಯದ ಗುರಿ ಎಷ್ಟು ಗೊತ್ತಾ?

Bengaluru: ಬೆಂಗಳೂರಿನಲ್ಲಿ 10 ಎಕರೆ ಖರೀದಿಸಿದ ಬಿರ್ಲಾ, ಆದಾಯದ ಗುರಿ ಎಷ್ಟು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಯೋಜನೆಯು 1 ಮಿಲಿಯನ್ ಚದರ ಅಡಿ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ. ರೂ. 900 ಕೋಟಿ ರೂಪಾಯಿ ಆದಾಯದ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

  • Share this:

ಸೆಂಚುರಿ ಟೆಕ್ಸ್‌ಟೈಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (CTIL) ನ ರಿಯಲ್ ಎಸ್ಟೇಟ್ ಭಾಗವಾಗಿರುವ, 100% ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಬಿರ್ಲಾ ಎಸ್ಟೇಟ್ಸ್ ಪ್ರೈ. ಲಿಮಿಟೆಡ್ ದಕ್ಷಿಣ ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿ 10 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿದೆ. ಸಿಮೆಂಟ್, ರೇಯಾನ್ ನೂಲು, ಜವಳಿ, ಕಾಗದ, ಉಪ್ಪು ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಅಸ್ತಿತ್ವ ಹೊಂದಿರುವ ಬಿರ್ಲಾ ಎಸ್ಟೇಟ್ಸ್ 8000 ಕೋಟಿ ಆದಾಯದ ಕಂಪೆನಿ ಎಂದೆನಿಸಿದೆ. ಈ ಯೋಜನೆಯು 1 ಮಿಲಿಯನ್ ಚದರ ಅಡಿ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ. ರೂ. 900 ಕೋಟಿ ರೂಪಾಯಿ ಆದಾಯದ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.


ಉತ್ತಮ ಪರಿಸರದಲ್ಲಿರುವ ಜಮೀನು
ಈ ಜಮೀನು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿದ್ದು, ಔಟರ್ ರಿಂಗ್ ರೋಡ್ ಅಂತೆಯೇ 10-ಲೇನ್ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಸುಲಭವಾಗಿ ಪ್ರವೇಶಿಸಬಹುದು. ಈ ಪರಿಸರದಲ್ಲಿ ಪ್ಲಾಟ್‌ಗಳು ಹಾಗೂ ಪ್ರತ್ಯೇಕ ಮನೆಗಳಿರುವುದರಿಂದ ಹೆಚ್ಚು ಪ್ರಾಬಲ್ಯವಿರುವ ಪರಿಸರ ಎಂದೆನಿಸಿದೆ. ಬಿರ್ಲಾ ಎಸ್ಟೇಟ್‌ಗಳು ಪ್ರೀಮಿಯಂ ವಸತಿ ಯೋಜನೆಯನ್ನು ಆರಂಭಿಸುವ ಯೋಜನೆಯಲ್ಲಿದೆ.


ಶಕ್ತಿಶಾಲಿ ವಿಸ್ತರಣೆ ಯೋಜನೆ
ಈ ಸ್ಥಳದಲ್ಲೇ ಅತಿದೊಡ್ಡ ಭೂಪ್ರದೇಶಗಳಲ್ಲಿ ಒಂದೆನಿಸಿರುವುದರಿಂದ ದಕ್ಷಿಣ ಬೆಂಗಳೂರಿಗರಿಗೆ LIFEDESIGNED© ಅರ್ಬನ್ ಪ್ರೀಮಿಯಂ ಆಯ್ಕೆಗಳನ್ನು ನಿರ್ಮಿಸಲು ಇದು ಸೂಕ್ತವಾಗಿದೆ ಅಂತೆಯೇ ಈ ಭೂ ಸ್ವಾಧೀನದಿಂದ ಬೆಂಗಳೂರು, ಎಂಎಂಆರ್, ಪುಣೆ ಮತ್ತು ಎನ್‌ಸಿಆರ್ ಪ್ರದೇಶಗಳ ಪ್ರಮುಖ ಮಾರುಕಟ್ಟೆಗಳಾದ್ಯಂತ ಹೆಚ್ಚು ಶಕ್ತಿಶಾಲಿಯಾದ ವಿಸ್ತರಣೆ ಯೋಜನೆಗಳಿಗೆ ಅನುಗುಣವಾಗಿದೆ ಎಂಬುದು ಬಿರ್ಲಾ ಎಸ್ಟೇಟ್ಸ್‌ನ ಸಿಇಒ ಕೆಟಿ ಜಿತೇಂದ್ರನ್ ಅಭಿಪ್ರಾಯವಾಗಿದೆ.


ಬಿರ್ಲಾ ಸಂಸ್ಥೆಯಿಂದ ಎರಡು ಯೋಜನೆಗಳು
ಇದುವರೆಗೆ ಬಿರ್ಲಾ ಎಸ್ಟೇಟ್ಸ್ ಬೆಂಗಳೂರು ನಗರದಲ್ಲಿ ಎರಡು ಯೋಜನೆಗಳನ್ನು ಆರಂಭಿಸಿದೆ. ವೈಟ್‌ಫೀಲ್ಡ್‌ನಲ್ಲಿ ಬಿರ್ಲಾ ಅಲೋಕ್ಯ ಹಾಗೂ ರಾಜಾಜಿನಗರದಲ್ಲಿ ಬಿರ್ಲಾ ತಿಸ್ಯಾ ಎಂಬುದು ಈ ಯೋಜನೆಗಳ ಹೆಸರಾಗಿದೆ. 2022 ರ ಆರಂಭದಲ್ಲಿ ಘೋಷಿಸಲಾದ ಮೂರನೇ ಯೋಜನೆಯು ಉತ್ತರ ಬೆಂಗಳೂರಿನಲ್ಲಿ ಒಂದು ಸಂಯೋಜಿತ ಸಣ್ಣ-ಪಟ್ಟಣ ನಿವೇಶನ ಯೋಜನೆಯಾಗಿದೆ. ಈ ಎರಡೂ ಯೋಜನೆಗಳು ಮುಂದಿನ ಆರ್ಥಿಕ ವರ್ಷದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.


ಏಳು ನಗರಗಳಲ್ಲಿ ಐದು ವಸತಿ ಅಭಿವೃದ್ಧಿ ಯೋಜನೆಗಳು
ಪ್ರಸ್ತುತ ಬಿರ್ಲಾ ಎಸ್ಟೇಟ್‌ಗಳು ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (MMR), ಬೆಂಗಳೂರು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಗಳಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಐದು ವಸತಿ ಅಭಿವೃದ್ಧಿಗಳನ್ನು ಹೊಂದಿದೆ - ಈ ಪ್ರತಿಯೊಂದು ಮಾರುಕಟ್ಟೆಗಳಲ್ಲಿ ಹೊಸ ಯೋಜನೆಗಳನ್ನು ಯೋಜಿಸಲಾಗಿದೆ.


ಕೋವಿಡ್ ನಂತರ ಪ್ರಗತಿ ಕಾಣುತ್ತಿರುವ ರಿಯಲ್ ಎಸ್ಟೇಟ್ ಉದ್ಯಮ
ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ನಂತರ ವಸತಿ ಬೇಡಿಕೆಯಲ್ಲಿ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿದ್ದು ರಿಯಲ್ ಎಸ್ಟೇಟ್ ಅಭಿವೃದ್ಧಿಕಾರರು ಭೂಸ್ವಾಧಿನವನ್ನು ಮಾಡುತ್ತಿದ್ದಾರೆ. ಹಾಗೂ ತಮ್ಮ ವ್ಯವಹಾರವನ್ನು ವಿಸ್ತರಿಸಲು ಭೂಮಾಲೀಕರೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು (ಜೆಡಿಎ) ರೂಪಿಸುತ್ತಿದ್ದಾರೆ.


ಪ್ರಮುಖ ನಗರಗಳಲ್ಲಿ ಹೆಚ್ಚು ವಸತಿ ಮಾರಾಟದ ನಿರೀಕ್ಷೆ
ಪ್ರಾಪರ್ಟಿ ಸಲಹೆಗಾರರಾದ ಅನರಾಕ್ ಹೇಳುವಂತೆ ದೆಹಲಿ-ಎನ್‌ಸಿಆರ್, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್), ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಹೀಗೆ ಏಳು ಪ್ರಮುಖ ನಗರಗಳಲ್ಲಿ ಹೆಚ್ಚಿನ ವಸತಿ ಮಾರಾಟವನ್ನು ನಿರೀಕ್ಷಿಸಿರುವುದಾಗಿ ತಿಳಿಸಿದ್ದಾರೆ. 2019 ರಲ್ಲಿ 2,61,358 ಯುನಿಟ್‌ಗಳು ದಾಖಲಾಗಿದ್ದು ಇದು ಕೋವಿಡ್ ಪೂರ್ವ ಅಂಕಿ ಅಂಶಗಳಾಗಿದೆ. ಅದಾಗ್ಯೂ 2014 ರಲ್ಲಿ ದಾಖಲಾದ ಮಾರಾಟ ಅಂಕಿಅಂಶ 3.43 ಲಕ್ಷ ಯುನಿಟ್‌ಗಳಿಗಿಂತ ಕಡಿಮೆಯೇ ಆಗಿದೆ ಎಂಬುದು ಅನರಾಕ್ ಹೇಳಿಕೆಯಾಗಿದೆ.

First published: