• Home
  • »
  • News
  • »
  • state
  • »
  • Bengaluru Pothole: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ; ಬೈಕ್ ಸವಾರ ಸಾವು

Bengaluru Pothole: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ; ಬೈಕ್ ಸವಾರ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದೊಂದು ವಾರದಿಂದ ಮಳೆ (Bengaluru Rains) ಕಡಿಮೆಯಾಗಿದ್ರೂ ಗುಂಡಿ ಮುಚ್ಚಲು ಬಿಬಿಎಂಪಿ ಮೀನಮೇಷ ಮಾಡುತ್ತಿರೋದಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಉಮಾ ಎಂಬವರು ರಸ್ತೆಗುಂಡಿಗೆ ಬಲಿಯಾಗಿದ್ದರು.

  • Share this:

ಬೆಂಗಳೂರಲ್ಲಿ ರಸ್ತೆಗುಂಡಿ (Bengaluru Potholes) ಮತ್ತೊಂದು ಬಲಿ ಪಡೆದುಕೊಂಡಿದೆ. ಯಲಹಂಕದ (Yelahanka) ಅಟ್ಟೂರು ಲೇಔಟ್​ನಲ್ಲಿ ಘಟನೆ ನಡೆದಿದೆ. ಗುಂಡಿ (Potholes) ಕಾರಣದಿಂದಾಗಿ ಜಂಪ್ ಹೊಡೆದು ಬೈಕ್​ಗೆ ಕಾರ್ ಡಿಕ್ಕಿ ಹೊಡೆದಿದೆ. ಕಾರ್ (Car) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ (Bike Rider) ಅರ್ಷದ್ ಎಂಬವರು ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಷ್ಟು ದಿನ ಮಳೆ ಬರುತ್ತಿದೆ ಎಂದು ಬಿಬಿಎಂಪಿ (BBMP) ಕಾರಣ ಹೇಳಿತ್ತು. ಆದ್ರೆ ಕಳೆದೊಂದು ವಾರದಿಂದ ಮಳೆ (Bengaluru Rains) ಕಡಿಮೆಯಾಗಿದ್ರೂ ಗುಂಡಿ ಮುಚ್ಚಲು ಬಿಬಿಎಂಪಿ ಮೀನಮೇಷ ಮಾಡುತ್ತಿರೋದಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಉಮಾ ಎಂಬವರು ರಸ್ತೆಗುಂಡಿಗೆ ಬಲಿಯಾಗಿದ್ದರು.


ಗುಂಡಿಗೆ ಬಲಿಯಾದವರ ವಿವರ ಹೀಗಿದೆ


ಕೇಸ್​ 1: 2021, ಅ 08 : ಚಿಕ್ಕಗೊಲ್ಲರಹಟ್ಟಿಯಲ್ಲಿ ಅಪಘಾತ


17 ವರ್ಷದ ನುಬಿಯಾ ದುರ್ಮರಣ


ಮಾಗಡಿ ರೋಡ್​ನ ಚಿಕ್ಕಗೊಲ್ಲರಹಟ್ಟಿ


ಕೇಸ್ 2: 2021, ಸೆ 17


47 ವರ್ಷದ ಆನಂದಪ್ಪ ಸಾವು


ಹೆಸರಘಟ್ಟ ಮೇನ್​ ರೋಡ್​ನಲ್ಲಿ ಘಟನೆ


ಕೇಸ್ 3: 2022, ಜ 30; ಬ್ಯಾಡರಹಳ್ಳಿಯಲ್ಲಿ ಅಪಘಾತ


ಶಿಕ್ಷಕಿ ಶರ್ಮಿಳಾ ಸಾವು


ಗುಂಡಿಯಿಂದ ಬಿದ್ದಾಗ ವಾಹನ ಮೇಲೆ ಹರಿದಿತ್ತು


ಕೇಸ್ 4: 2022, ಮಾ 14 : ಎಂಎಸ್​ ಪಾಳ್ಯ


27 ವರ್ಷದ ಅಶ್ಚಿನ್ ಸಾವು


ಬೈಕ್ ಸ್ಕಿಡ್ ಆಗಿ ಬಿದ್ದು ಸಾವು


ಕೇಸ್ 5: 2022, ಆ 12: ಕೆಆರ್ ಪುರಂನಲ್ಲಿ ಅಪಘಾತ


10 ವರ್ಷದ ಬಾಲಕ ಜೀವನ್ ಸಾವು


ಅಪ್ಪನ ಜೊತೆ ಬೈಕ್​ನಲ್ಲಿ ಕೂತಿದ್ದ ಬಾಲಕ


ಕೇಸ್ 6: 2022, ಆ 22, ಹೇರೋಹಳ್ಳಿಯಲ್ಲಿ ಅಪಘಾತ


ಸುಪ್ರೀತ್ ಎಂಬಾತ ಸಾವು


ರಸ್ತೆ ಗುಂಡಿಗೆ ಸುಪ್ರೀತ್ ಬಲಿ


ಕೇಸ್ 7: 2021, ನವೆಂಬರ್ 27


21 ವರ್ಷದ ಅಜೀಮ್ ಅಹಮದ್ ಬಲಿ


ಹೆಲ್ಮೆಟ್ ಧರಿಸಿದ್ರೂ ಗುಂಡಿಗೆ ಬಿದ್ದು ಸಾವು


ಕೇಸ್ 8: 2022, ಅಕ್ಟೋಬರ್ 17


ರಸ್ತೆಗುಂಡಿಗೆ ಸ್ಕಿಡ್ ಆಗಿದ್ದ ಸ್ಕೂಟಿ


ಸ್ಕೂಟಿಯಲ್ಲಿದ್ದ ಉಮಾ ಎಂಬವರು ಸಾವು, ಉಮಾ ಅವರ ಮೇಲೆ ಬಸ್ ಹರಿದಿತ್ತು


ಇದನ್ನೂ ಓದಿ:  Karnataka - Bharath Gaurav Kashi Darshan: 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌; ಟಿಕೆಟ್​ ಬುಕ್ಕಿಂಗ್ ಆರಂಭ


ಬೆಂಗಳೂರಿನಲ್ಲಿ ಒಂದು ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ


ಬೆಂಗಳೂರಿನಲ್ಲಿ ಬರೋಬ್ಬರಿ ಒಂದು ಕೆಜಿ ಎಂಡಿಎಂಎ (MDMA Drugs) ಕ್ರಿಸ್ಟಲ್‌ ಡ್ರಗ್ಸ್ ಪತ್ತೆಯಾಗಿದ್ದು, 5 ವಿದೇಶಿ ಪ್ರಜೆಗಳು ಸೇರಿ ಒಟ್ಟು 11 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಂದು 1.9 ಕೋಟಿ ಮೌಲ್ಯದ ಒಂದು ಕೆಜಿ ಎಂಡಿಎಂಎ ಕ್ರಿಸ್ಟಲ್‌, ಒಂದು ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪೊಲೀಸರ ವಾಹನ ತಪಾಸಣೆ ವೇಳೆ ಡ್ರಗ್ಸ್ ಸೇವಿಸಿ ಬಂದಾಗ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.


ಈ ವೇಳೆ ಆರೋಪಿ ಡ್ರಗ್ಸ್ ಸೇವನೆ ಮಾಡಿರುವ ರಿಪೋರ್ಟ್​ ಬಂದಿದೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿದೇಶಿ ಜಾಲ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ವಿದೇಶಿ ಪ್ರಜೆಗಳು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರು.


ಡ್ರಗ್ಸ್​ ಪ್ರಕರಣದ ಬಂಧಿತ ಆರೋಪಿಗಳು


ಬಂಧಿತರ ವಿವರ ಹೀಗಿದೆ


ಕೇರಳದ ಮೊಹಮ್ಮದ್ ಹಾರೂನ್, ಮೊಹಮ್ಮದ್ ಒರುವಿಲ್, ಮೊಹಮ್ಮದ್ ಇಲಿಯಾಸ್, ಮ್ಯಾನ್ಷ್ನಷಿದ್, ಯೆಮೆನ್ ದೇಶದ ಅಬ್ದುರಬು, ಸೂಡಾನ್ ದೇಶದ ಅಹ್ಮದ್ ಮೊಹಮದ್ ಮೂಸ, ನೈಜೀರಿಯಾದ ಜಾನ್ ಪೌಲ್, ಜೋಸೆಫ್ ಬೆನ್ಜಮೀನ್, ಇಸ್ಮಾಯಿಲ್ ಹಾಗೂ ತೆಲಂಗಾಣದ ಮೊಹಮ್ಮದ್ ಬಿಲಾಲ್ ಬಂಧಿತ ಆರೋಪಿಗಳು.


ಇದನ್ನೂ ಓದಿ:  Siddaramaiah: ಕೋಲಾರದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ? ಮೊದಲ ಸಮೀಕ್ಷೆಯ ವರದಿಯಲ್ಲೇನಿದೆ? 


ನಕಲಿ ದಾಖಲೆ ತೋರಿಸಿ ಬೆಂಗಳೂರಿನಲ್ಲಿ ವಾಸ


ವೀಸಾ ಅವಧಿ ಮುಗಿದ ಬಳಿಕವೂ ನಕಲಿ ದಾಖಲಾತಿಗಳನ್ನ ಬಳಸಿ ಬೆಂಗಳೂರಿನಲ್ಲಿ ವಾಸವಾಗಿರುವ ಮಾಹಿತಿ ಲಭ್ಯವಾಗಿದೆ. ಬಂಧಿತರಿಂದ ಗಾಂಜಾ, ಎಂಡಿಎಂಎ, 2 ಕಾರುಗಳು, ಮೊಬೈಲ್ ಫೋನ್, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

Published by:Mahmadrafik K
First published: