ಬೆಂಗಳೂರು: ಪಿಜ್ಜಾ ಡೆಲಿವರಿ (Pizza Delivery) ಕೊಡಲು ಹೋಗ್ತಿದ್ದವನು ಗ್ರಾಹಕರಿಗೆ (Customer) ಡೆಲಿವರಿ ನೀಡುವ ಮೊದಲೇ ಹೆಣವಾಗಿ ಹೋಗಿದ್ದಾನೆ. 31 ವರ್ಷದ ನಾಗಪ್ಪ ಮೃತ ದುರ್ದೈವಿ. ನಿಂತಿದ್ದ ಕ್ಯಾಂಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದರು. ಸ್ವಿಗ್ಗಿಯಲ್ಲಿ (Swiggy) ಕೆಲಸ ಮಾಡುತ್ತಿದ್ದ ಮೃತ ನಾಗಪ್ಪ, ನಿನ್ನೆ ರಾತ್ರಿ 12.30ರ ಸಮಯ ಪಿಜ್ಜಾ ಡೆಲಿವರಿ ಕೊಡಲು ಸುಮನಹಳ್ಳಿ ಜಂಕ್ಷನ್ನಿಂದ (Sumanahalli Junction) ನಾಗರಭಾವಿ ರಿಂಗ್ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ. ಈ ವೇಳೆ ಮಾಳಗಾಳ ಬಳಿ ಕ್ಯಾಂಟರ್ ಕೆಟ್ಟು ನಿಂತಿದ್ದು, ರಿಪೇರಿ ಮಾಡಲಾಗುತ್ತಿತ್ತು. ಅದು ಗೊತ್ತಾಗದೇ ಸೀದ ಲಾರಿಗೆ (Lorry) ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ.
ಮೃತರಿಗೆ ಒಂದೂವರೆ ತಿಂಗಳ ಮಗುವಿದೆ
ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಟರ್‌ಗೆ ಸಿಲುಕಿದ್ದ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ ಮೃತ ನಾಗಪ್ಪ, ಸಂಬಂಧಿಕರ ಮನೆಯಲ್ಲಿ ಉಳಿದಿದ್ದ. ಒಂದೂವರೆ ತಿಂಗಳ ಮಗುವಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Karnataka Rains: ಧಾರಾಕಾರ ಮಳೆಗೆ ಹೆದ್ದಾರಿ ಜಲಾವೃತ; ಹತ್ತಾರು ಕಿ.ಮೀ. ಟ್ರಾಫಿಕ್ ಜಾಮ್, ಸವಾರರಿಗೆ ಸಂಕಷ್ಟ
ಕೆಎಸ್ಆರ್ಟಿಸಿ ಬಸ್ ಹಾಗೂ ಕಾರು ನಡುವೆ ಬೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಬಳಿಯ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ನಲ್ಲಿದ್ದ ಐದಾರು ಜನರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಘಟನೆ ನಂತರ ಬಸ್ ಚಾಲಕ ಬಿಟ್ಟು ಓಡಿ ಹೋಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ