ಬೆಂಗಳೂರು: ಬಿಎಂಟಿಸಿ ಬಸ್ಗೆ (BMTC Bus) ಬೆಂಕಿ ತಗುಲಿ ಕಂಡಕ್ಟರ್ (Conductor) ಸಜೀವ ದಹನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಡರಹಳ್ಳಿ ಪೊಲೀಸರು (Byadarahalli Police) ಈ ಬಗ್ಗೆ ತನಿಖೆ ಕೈಗೊಂಡಿದ್ದು, ಬಸ್ ಹಾಲ್ಟ್ ಆದ ನಂತರ ಕಂಡಕ್ಟರ್ ಮುತ್ತಯ್ಯ ಡ್ರೈವರ್ ಪ್ರಕಾಶ್ಗೆ ಮಲಗುವಂತೆ ಹೇಳಿ ಕಳುಹಿಸಿದ್ದಾರೆ. ಆ ಬಳಿಕ ರಾತ್ರಿ (Night) ಮುತ್ತಯ್ಯ ಯುಪಿಐ ಐಡಿಯಿಂದ (UPI) ಸುಮಾರು 700 ರೂಪಾಯಿ ಹಣ ವರ್ಗಾವಣೆಯಾಗಿದೆ.
ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್ ಖಾತೆಗೆ ಹಣ ವರ್ಗಾವಣೆಯಾಗಿದ್ದು, ಪೊಲೀಸರು ಯುಪಿಐ ಐಡಿ ಹಾಗೂ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ಪೆಟ್ರೋಲ್ ಬಂಕ್ಗೆ ಹಣ ಪಾವತಿಸಿ ಪೆಟ್ರೋಲ್ ಅಥವಾ ಡಿಸೇಲ್ ಖರೀದಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. FSL ರಿಪೋರ್ಟ್ನಲ್ಲಿ ಬೆಂಕಿ ತಗುಲಿದ್ದು ಹೇಗೆ ಅನ್ನೋದಕ್ಕೆ ವೈಜ್ಞಾನಿಕ ಕಾರಣ ಹೊರ ಬಿದ್ದ ಬಳಿಕ ಮುತ್ತಯ್ಯ ಸಾವಿನ ಸೀಕ್ರೆಟ್ ಹೊರಬರಲಿದೆ.
ಇದನ್ನೂ ಓದಿ: Koppala: ಆರ್ಡರ್ ಮಾಡಿದ್ದು ಆ್ಯಪಲ್ ಫೋನ್, ಬಂದಿದ್ದು ನಿರ್ಮಾ ಸೋಪ್! ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಬಂಪರ್
ಏನಿದು ಪ್ರಕರಣ?
ನಿಂತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡು ಕಂಡಕ್ಟರ್ ಮೃತಪಟ್ಟಿರುವ ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಇದೇ ಬಸ್ ನಿಲ್ದಾಣದಲ್ಲಿ ರಾತ್ರಿ ಹಾಲ್ಟ್ ಆಗಿದ್ದ, ಬಿಎಂಟಿಸಿ ಬಸ್ ಬೆಂಕಿಗೆ ತುತ್ತಾಗಿದ್ದು, ಅದರಲ್ಲಿ ಮಲಗಿದ್ದ ಕಂಡಕ್ಟರ್ ಸಜೀವ ದಹನ ಆಗಿದ್ದರು. ಬೆಳಗಿನ ಜಾವ 4 ರಿಂದ 5 ಘಂಟೆಯ ಸಮಯದಲ್ಲಿ ಈ ಘಟನೆ ನಡೆದಿತ್ತು.
ಬಳ್ಳಾರಿ ಮೂಲದ ಕಂಡಕ್ಟರ್ ಮುತ್ತಯ್ಯ ಸ್ವಾಮಿ, ಟ್ರಿಪ್ ಮುಗಿಸಿ ಲಿಂಗಧೀರನಹಳ್ಳಿಯಲ್ಲಿ ಬಸ್ ನಿಲ್ಲಿಸಿ ಅದರಲ್ಲೇ ಮಲಗಿದ್ದರು. ಆದರೆ ನಸುಕಿನ ಜಾವದ ವೇಳೆ ಬಸ್ನಲ್ಲಿ ಬೆಂಕಿ ಆವರಿಸಿದ್ದರಿಂದ ಮುತ್ತಯ್ಯ ಸಜೀವವಾಗಿ ಸುಟ್ಟು ಹೋಗಿದ್ದರು. ಅಂದು ಕೆಎ 57 ಎಫ್ 2069 ನಂಬರಿನ ಸುಮ್ಮನಹಳ್ಳಿ ಡಿಪೋವಿನ ಬಿಎಂಟಿಸಿ ಬಸ್ ಬ್ಯಾಡರಹಳ್ಳಿ ಬಳಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣಕ್ಕೆ ಆಗಮಿಸಿತ್ತು. ಬಸ್ ಚಾಲಕ ಪ್ರಕಾಶ್ ಎಂದಿನಂತೆ ಬಿಎಂಟಿಸಿ ಕೊಟ್ಟಿರೋ ಕೊಠಡಿಯಲ್ಲಿ ಮಲಗಿದ್ದರು. ಆದರೆ ಬಳ್ಳಾರಿ ಮೂಲದ ಮುತ್ತಯ್ಯ ಮಾತ್ರ ಬಸ್ನಲ್ಲೇ ಎಲ್ಲಾ ಕಿಟಕಿಗಳನ್ನ ಮುಚ್ಚಿ ಮಲಗಿದ್ದರು.
ಆರ್ಬಿಐ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ!
ಆರ್ಬಿಐ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ನೀಡುವುದಾಗಿ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ 8 ಮಂದಿ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಶೋಕ್ ಕುಮಾರ್, ರಮೇಶ್ ಕುಮಾರ್, ಮಂಜುನಾಥ್, ರಾಜ್ ಕುಮಾರ್, ಗಂಗರಾಜು, ಕುಮಾರೇಶ್, ಮೂರ್ತಿ ನಾಯಕ್, ಸಿದ್ದರಾಜು ನಾಯಕ್ ಬಂಧಿತ ಆರೋಪಿಗಳು.
ಇದನ್ನೂ ಓದಿ: Kodagu: ಮಕ್ಕಳಿಗೆ ಉಂಗುರ ಕೊಡುವ ಮುನ್ನ ಹುಷಾರ್; ರಿಂಗ್ ನುಂಗಿ 8 ತಿಂಗಳ ಕಂದಮ್ಮ ಸಾವು
ಆರೋಪಿಗಳ ಬ್ಯಾಂಕಿನಲ್ಲಿದ್ದ 16 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರ್ಬಿಐ ಲಾಂಛನದ ಕಾಗದ ಹಾಗೂ ಸೀಲ್ ಮತ್ತು ಸಿಗ್ನೇಚರ್ ನಕಲಿ ಮಾಡಿದ್ದಾರೆ. 20 ಲಕ್ಷ ಹಣ ಕಟ್ಟಿದರೆ ಏಳೂವರೆ ಕೋಟಿ ಪಾವತಿಸುವುದಾಗಿ ಆಮಿಷವೊಡ್ಡಿದ್ದರು. ದೂರುದಾರರನ್ನು ನಂಬಿಸಲು ದೆಹಲಿ ಹಾಗೂ ಮುಂಬೈನಲ್ಲಿರುವ ಆರ್ಬಿಐ ಬ್ಯಾಂಕ್ ಬಳಿ ಕರೆದುಕೊಂಡು ಹೋಗಿ ಪೋಟೊ ತೆಗೆಸಿಕೊಂಡಿದ್ದರು. ಅಲ್ಲದೆ ನಕಲಿ ಆರ್ಬಿಐ ಅಧಿಕಾರಿಯನ್ನು ಸೃಷ್ಟಿಸಿ ಯಾಮಾರಿಸಿದ್ದರು.
ಹಣದ ಆಸೆಗೆ ಜೋತು ಬಿದ್ದು ವ್ಯಕ್ತಿಯೊಬ್ಬರು 40 ಲಕ್ಷ ಪಾವತಿಸಿದ್ದರು. ಹಣ ಜಮೆಯಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರ್.ಆರ್.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಸಿಸಿಬಿ ವಿಶೇಷ ದಳಕ್ಕೆ ಪ್ರಕರಣ ಹಸ್ತಾಂತರವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ