HOME » NEWS » State » BENGALURU BBMP BUDGET 2020 BBMP RESOURCE IMPROVEMENT SCHEME HIGHLIGHTS IN BUDGET SCT

BBMP Budget 2020: ಪಾಲಿಕೆ ಸಂಪನ್ಮೂಲ ಸುಧಾರಿಸಲು ಬಜೆಟ್‌ನಲ್ಲಿ ಕ್ರಮ; 300 ಕೋಟಿ ರೂ. ಬಾಕಿ ವಸೂಲಿಗೆ ಮುಂದಾದ ಬಿಬಿಎಂಪಿ

Bruhat Bengaluru Mahanagara Palike Budget 2020: ಬಾಕಿ ಇರುವ ಸುಧಾರಣಾ ಶುಲ್ಕ ಅಂದಾಜು 300 ಕೋಟಿ ರೂ. ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುವುದು. ಬೆಂಗಳೂರಿನಲ್ಲಿರುವ ಹೋಟೆಲ್‌ಗಳನ್ನು ಎ.ಬಿ.ಸಿ.ಡಿ ಮಾದರಿಯಲ್ಲಿ ವರ್ಗೀಕರಣಗೊಳಿಸಲಾಗುವುದು.

news18-kannada
Updated:April 20, 2020, 2:15 PM IST
BBMP Budget 2020: ಪಾಲಿಕೆ ಸಂಪನ್ಮೂಲ ಸುಧಾರಿಸಲು ಬಜೆಟ್‌ನಲ್ಲಿ ಕ್ರಮ; 300 ಕೋಟಿ ರೂ. ಬಾಕಿ ವಸೂಲಿಗೆ ಮುಂದಾದ ಬಿಬಿಎಂಪಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏ. 20): ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ  ಲಾಕ್​ಡೌನ್​ ಘೋಷಿಸಲಾಗಿದೆ. ಇದರ ನಡುವೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಜೆಟ್ ಮಂಡನೆಯಾಗಿದೆ. ಈ ಬಾರಿಯ ಬಜೆಟ್​ 10,899 ಕೋಟಿ ರೂ. ಗಾತ್ರದ್ದಾಗಿದೆ.

ಈ ಬಾರಿ ಸಂಪನ್ಮೂಲ ಸುಧಾರಣೆ ಕ್ರಮಕ್ಕೆ ಸಂಬಂಧಿಸಿದಂತೆ ಬಿ ಖಾತಾ ಆಸ್ತಿಗಳನ್ನು ಎ ಖಾತಾಗಳಾಗಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಲಾಗಿದೆ. ಹೊಸ ವಲಯಗಳಲ್ಲಿನ ಆಸ್ತಿಗಳ ಖಾತಾಗಳ ನಕಲು ಮತ್ತು ಖಾತಾ ದೃಢೀಕರಣ ಪತ್ರಗಳನ್ನು ಗಣಕೀಕರಣ ಮಾಡಲಾಗುವುದು. ಖಾತಾ ನಕಲು ಮತ್ತು ದೃಢೀಕರಣ ಪತ್ರದ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ.

ಒಂದುವೇಳೆ 3 ವರ್ಷಕ್ಕೂ ಅಧಿಕ ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಕಚೇರಿಯ ಋಣಭಾರ ಪತ್ರದಲ್ಲಿ ನಮೂದಿಸಬೇಕು. ಬಾಕಿ ಇರುವ ಸುಧಾರಣಾ ಶುಲ್ಕ ಅಂದಾಜು 300 ಕೋಟಿ ರೂ. ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುವುದು. ಉದ್ದಿಮೆ ಪರವಾನಗಿ ಸರಳೀಕರಣಗೊಳಿಸಲಾಗುವುದು. ನಗರದಲ್ಲಿರುವ ಹೋಟೆಲ್‌ಗಳನ್ನು ಎ.ಬಿ.ಸಿ.ಡಿ ಮಾದರಿಯಲ್ಲಿ ವರ್ಗೀಕರಣಗೊಳಿಸಲಾಗುವುದು. ಈ ಬಾರಿಯ ಸಂಪನ್ಮೂಲ ಸುಧಾರಣೆಗೆ ಕೇಂದ್ರ ಸರ್ಕಾರ 558 ಕೋಟಿ ರೂ. ಅನುದಾನ ನೀಡಿದೆ. ರಾಜ್ಯ ಸರ್ಕಾರ 3,780 ಕೋಟಿ ರೂ. ಅನುದಾನ ನೀಡಿದೆ.

ಇದನ್ನೂ ಓದಿ: BBMP Budget 2020: ಶಿಕ್ಷಣ ಅಭಿವೃದ್ಧಿಗೆ ಬಿಬಿಎಂಪಿ ಬಜೆಟ್​​ನಲ್ಲಿ ಮೀಸಲಿಟ್ಟ ಹಣ ಎಷ್ಟು ಗೊತ್ತೇ?

ಈ ಬಾರಿ ಶೇ. 24.30 ಅನುದಾನದ ಕಾರ್ಯಕ್ರಮಗಳಿಗೆ 361 ಕೋಟಿ ರೂ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ 108 ಕೋಟಿ ರೂ, ವಿಶೇಷ ಚೇತನ ಕಲ್ಯಾಣ ಕಾರ್ಯಕ್ರಮಗಳಿಗೆ 74 ಕೋಟಿ ರೂ, ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ 9 ಕೋಟಿ ರೂ, 10 ಸಾವಿರ ಲೀಟರ್​ವರೆಗೆ ಉಚಿತ ಕಾವೇರಿ ನೀರು ಕಾರ್ಯಕ್ರಮಕ್ಕೆ 43 ಕೋಟಿ ರೂ, ಸಾಮಾನ್ಯ ವರ್ಗದವರ ಮನೆಗೆ 15 ಕೋಟಿ ರೂ, ಅರ್ಹ ಬಡ ಮಕ್ಕಳಿಗೆ ಲ್ಯಾಪ್​ಟಾಪ್ ವಿತರಣೆಗೆ 15 ಕೋಟಿ ರೂ ಮೀಸಲಿರಿಸಲಾಗಿದೆ ಎಂದು ಸಹ ಬಜೆಟ್‌ನಲ್ಲಿ ತಿಳಿಸಲಾಗಿದೆ.
First published: April 20, 2020, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories