• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ChatGPT ಯಿಂದ ಉತ್ಪಾದಕತೆ ಹೆಚ್ಚಳ, ಚಂದಾದಾರಿಕೆ ಹಣ ಮರುಪಾವತಿ,ಕ್ಯಾಪಿಟಲ್ ಮೈಂಡ್ ​ ಸಂಸ್ಥೆಯ ದಿಟ್ಟ ನಿರ್ಧಾರ!

ChatGPT ಯಿಂದ ಉತ್ಪಾದಕತೆ ಹೆಚ್ಚಳ, ಚಂದಾದಾರಿಕೆ ಹಣ ಮರುಪಾವತಿ,ಕ್ಯಾಪಿಟಲ್ ಮೈಂಡ್ ​ ಸಂಸ್ಥೆಯ ದಿಟ್ಟ ನಿರ್ಧಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಸಂಸ್ಥೆ ನಿಮಗೆ ಆ ಹಣವನ್ನು ಮರುಪಾವತಿ ಮಾಡುವ ಮೂಲಕ ನಿಮ್ಮ ಕೆಲಸ ಪ್ರಶಂಸಿಸಬಹುದು. ಹೌದು ಬೆಂಗಳೂರು ಮೂಲದ ಕ್ಯಾಪಿಟಲ್ ಮೈಂಡ್​ ಸಂಸ್ಥೆ ಈಗಾಗಲೇ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.

  • Trending Desk
  • 3-MIN READ
  • Last Updated :
  • Bangalore, India
  • Share this:
  • published by :

ಎಐ ಚಾಲಿತ ChatGPT ಬಗ್ಗೆ ನಿಮಗೆ ಗೊತ್ತಿಲ್ಲ ಅಂದ್ರೆ ಕೂಡಲೇ ತಿಳಿದುಕೊಳ್ಳಿ. ಏಕೆಂದರೆ ನಾಳೆ ನೀವು ಕೆಲಸ ಮಾಡುವ ಸಂಸ್ಥೆಗಳಲ್ಲಿ ಇದರ ಅಗತ್ಯ ಬೀಳಬಹುದು. ಅದರ ಚಂದಾದಾರಿಕೆ ಪಡೆದುಕೊಳ್ಳುವಷ್ಟು ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಸಂಸ್ಥೆ (Organisation) ನಿಮಗೆ ಆ ಹಣವನ್ನು ಮರುಪಾವತಿ (Reimburse)ಮಾಡುವ ಮೂಲಕ ನಿಮ್ಮ ಕೆಲಸ ಪ್ರಶಂಸಿಸಬಹುದು. ಹೌದು ಬೆಂಗಳೂರು ಮೂಲದ ಕ್ಯಾಪಿಟಲ್ ಮೈಂಡ್​ ಸಂಸ್ಥೆ ಈಗಾಗಲೇ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.


ಹೊಸಬರು ತಪ್ಪದೇ ChatGPT ಕಲಿಯಲೇಬೇಕು


ChatGPT ಈ ಕಾಲಘಟ್ಟದ ಪ್ರಮುಖ ಕೌಶಲ್ಯಗಳಲ್ಲಿ ಅಗ್ರಸ್ಥಾನಕ್ಕೇರಲಿದೆ. ಮೊನ್ನೆ ನಟ ರಮೇಶ್ ಅವರು ತಮ್ಮ ಮೋಟಿವೇಷನಲ್ ವೀಡಿಯೋದಲ್ಲಿ ChatGPT ಕಲಿತುಕೊಳ್ಳಿ ನಿಮಗೆ ಅಗತ್ಯವಾಗಿ ಬೇಕು ಎಂದಿದ್ದಾರೆ.


ಟೆಕ್ಕಿಗಳು ಮಾತ್ರವಲ್ಲದೇ ಇನ್ನಿತರ ಕ್ಷೇತ್ರದ ಉದ್ಯೋಗಿಗಳಿಗೆ ChatGPT ಹೇಗೆ ನೆರವಾಗಲಿದೆ? ChatGPT ಕಲಿಯುವುದು ಹೇಗೆ? ಎನ್ನುವುದರ ಬಗ್ಗೆ ಈಗಾಗಲೇ ಆನ್​ಲೈನ್​ನಲ್ಲಿ ಮಾಸ್ಟರ್​ಕ್ಲಾಸ್​ಗಳು ಶುರುವಾಗಿವೆ.


ಇದರ ನಡುವೆಯೇ ಬೆಂಗಳೂರು ಮೂಲದ ಹೂಡಿಕೆ ಸಂಸ್ಥೆ ಕ್ಯಾಪಿಟಲ್ ಮೈಂಡ್​​ನ ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಿಷ್ಠ ಐಯ್ಯರ್​​ ಅವರು 'ಹೊಸಬರು ತಪ್ಪದೇ ChatGPT ಕಲಿಯಲೇಬೇಕು. ಸಾಧಾರಣ ಕೌಶಲ್ಯಗಳಷ್ಟೇ ಸಾಕಾಗುವುದಿಲ್ಲ' ಎಂದು ಎಚ್ಚರಿಸಿದ್ದಾರೆ.


5 ಪಟ್ಟು ಹೆಚ್ಚು ಉತ್ಪಾದಕತೆ


ಅಷ್ಟೇ ಅಲ್ಲದೇ ತಮ್ಮ ಸಂಸ್ಥೆಯ ಉದ್ಯೋಗಿಗಳ ಉತ್ಪಾದಕತೆಯನ್ನು ChatGPT 5 ಪಟ್ಟು ಹೆಚ್ಚು ಮಾಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಕಾರಣದಿಂದ ಉದ್ಯೋಗಿಗಳ ಬೆಳವಣಿಗೆಗೆ ನೆರವಾಗಲು ಕಂಪನಿಯು ChatGPT PLUS ಚಂದಾದಾರಿಕೆಯನ್ನು ಮರುಪಾವತಿಸಲು ನಿರ್ಧರಿಸಿದೆ. ಅಂದರೆ ತಿಂಗಳಿಗೆ 2000 ರೂಪಾಯಿ ಹಣ ಉದ್ಯೋಗಿಗೆ ಮರುಪಾವತಿಯಾಗುತ್ತದೆ.


ಜ್ಯೂನಿಯರ್​ಗಳೇ ಎಚ್ಚರ


ಕೆಲಸಗಾರರಲ್ಲಿ ಚುರುಕುತನ, ವೇಗ, ವಿಷಯಗಳ ಬಗ್ಗೆ ವಿಸ್ತಾರವಾದ ಮಾಹಿತಿ ಇದೆಲ್ಲವೂ ಕಂಪನಿಯನ್ನು ಯಶಸ್ಸಿನತ್ತ ತೆಗೆದುಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಜೂನಿಯರ್​ಗಳು ಮಾಡುವ ಕೆಲಸವನ್ನು ಇವುಗಳೇ ಮಾಡುವ ಸಾಧ್ಯತೆಗಳಿವೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ.


ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನ


ಶರವೇಗದ ಸರದಾರ ChatGPT4


2022 ರ ಕೊನೆಯಲ್ಲಿ AIಚಾಟ್​ಬಾಟ್​ GPT 3- ಚಾಲಿತ ChatGPT ಯನ್ನು ಮುಖ್ಯವಾಹಿನಿಗೆ ತರಲಾಯ್ತು. ಎಲ್ಲಾ ಸಂಕೀರ್ಣ ಪ್ರಶ್ನೆಗೂ ಥಟ್ಟನೇ ಉತ್ತರಿಸುವ ChatGPT4 , ಇನ್ನಿತರ ವರ್ಚುವಲ್ ಅಸಿಸ್ಟಂಟ್​ ಆದ ಗೂಗಲ್ ಅಸಿಸ್ಟೆಂಟ್, ಆ್ಯಪಲ್ ಸಿರಿ, ಅಲೆಕ್ಸಾಕ್ಕಿಂತಲೂ ವೇಗದಲ್ಲಿ ವಿಭಿನ್ನವಾಗಿ ಉತ್ತರಿಸುತ್ತದೆ.


ChatGPT PLUS ಮ್ಯಾಜಿಕ್


OpenAI ನ ChatGPT ಸುಧಾರಿತ GPT 4 ಮಾಡ್ಯೂಲ್ ಇತ್ತೀಚೆಗೆ ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ ಇದು ಶ್ವಾನದ ಪ್ರಾಣವನ್ನು ಉಳಿಸಿತ್ತು. GPT 4 ಹೆಚ್ಚು ಸ್ಪಷ್ಟ, ನಿಖರವಾಗಿದ್ದು ChatGPT PLUS ನ ಶಕ್ತಿ ವರ್ಧಿಸುತ್ತದೆ.




ಇದರ ವೈಶಿಷ್ಟ್ಯಗಳನ್ನು ಇನ್ನೂ ಪರಿಶೀಲಿಸಲಾಗುತ್ತಿದೆ. ಆದರೆ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಹಣವನ್ನು ಪಾವತಿಸಿ ಈ ಸೇವೆಯನ್ನು ಪಡೆಬೇಕು.


AI ಪ್ರಾಂಪ್ಟ್​ ಇಂಜಿನಿಯರ್​ಗೆ 2.7 ಕೋಟಿ ವೇತನ


ಮೈಕ್ರೋಸಾಫ್ಟ್​​ ಸಹ ಸಂಸ್ಥಾಪಕರಾದ ಬಿಲ್​ಗೇಟ್ಸ್​ 'ಆಧುನಿಕ ಪಿಸಿಯ ವಿಂಡೋಸ್​ ಓಎಸ್​​ ಐ ನಲ್ಲಿ ಕೆಲಸ ಮಾಡಿದ ಬಳಿಕ ಇದು ತಮ್ಮ ಜೀವಿತಾವಧಿಯಲ್ಲೇ ಕ್ರಾಂತಿಕಾರಿ ಅಭಿವೃದ್ಧಿ ಎಂದಿದ್ದಾರೆ.


ಇದನ್ನೂ ಓದಿ: ಹೆಚ್ಚಾಗ್ತಿದೆ ಟಿಕೆಟ್ ಆಕಾಂಕ್ಷಿಗಳ ಎದೆ ಬಡಿತ; ಅಭ್ಯರ್ಥಿಗಳ ಆಯ್ಕೆಯ ಕಸರತ್ತು!


ಅಲ್ಲದೇ ಸ್ಯಾನ್​ ಫ್ರ್ಯಾನ್ಸಿಸ್ಕೋ ಮೂಲದ AIಸ್ಟಾರ್ಟ್ ಅಪ್ ಆಂಥ್ರೋಪಿಕ್ ಪ್ರಾಂಪ್ಟ್​ ಇಂಜಿನಿಯರ್ ಮತ್ತು ಲೈಬ್ರರಿಯನ್ ಗಳಿಗೆ 335,000 ಡಾಲರ್​ ಅಂದರೆ 2.7 ಕೋಟಿ ವೇತನ ನಿಗದಿ ಮಾಡಿದೆ.


AI ಗಳಿಗೆ ಸರಿಯಾದ ಕಮ್ಯಾಂಡ್​ ನೀಡುವುದು ಪ್ರಾಂಪ್ಟ್​ ಇಂಜಿನಿಯರ್ ಕೆಲಸವಾಗಿದೆ. ಆ ಪ್ರಾಂಪ್ಟ್​ಗಳ ನಿರ್ವಹಣೆ, ಸಂಶೋಧನೆ, ಅಭಿವೃದ್ಧಿಪಡಿಸುವುದು ಲೈಬ್ರರಿಯನ್ ಕೆಲಸವಾಗಿದೆ. ಈ ದುಬಾರಿ ವೇತನವು AI ನ ಕೌಶಲ್ಯಕ್ಕಿರುವ ಬೇಡಿಕೆಯನ್ನು ಸರ್ಮಥವಾಗಿ ತೋರಿಸುತ್ತಿದೆ.


GPT-4 ಮೀರಿಸೋ ಪ್ರಯೋಗದಲ್ಲಿ ಎಲಾನ್​ ಮಸ್ಕ್​


ಇನ್ನೂ ಎಲಾನ್​ ಮಸ್ಕ್​, ಆ್ಯಪಲ್​​ನ ಸಹ ಸಂಸ್ಥಾಪಕರಾದ ಸ್ಟೀವ್ ವೋಜ್ನಿಯಾಕ್​ GPT-4ಕ್ಕಿಂತಲೂ ಪ್ರಬಲವಾದ ಸಿಸ್ಟಮ್ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.




ಅಲ್ಲದೇ ಈ ಇಬ್ಬರು ಮುಂದುವರಿದ AI ಅಭಿವೃದ್ಧಿಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ. ಇದರಿಂದ ಯಾವ ರೀತಿಯೂ ಭೂಮಿ ಮೇಲಿನ ಜೀವ ವ್ಯವಸ್ಥೆಗೆ ತೊಂದರೆಯಾಗದಂತೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವ ಷರತ್ತಿಗೆ ಸಹಿ ಕೂಡ ಮಾಡಿದ್ದರಂತೆ. ಆದರೆ ಆ ಮಟ್ಟದ ಯೋಜನೆ ನಡೆಯುತ್ತಿದೆಯೇ? ಎನ್ನುವ ಸ್ಪಷ್ಟತೆ ಇಲ್ಲ.

First published: