ಪ್ರಾಣಿ ಪ್ರಿಯರ ಗಮನಕ್ಕೆ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬರಲಿದ್ದಾನೆ ವಿಶೇಷ ಅತಿಥಿ

ಬಿಳಿ ಹುಲಿ ಭಾರತೀಯರ ಪಾಲಿಗೆ ಅಪರೂಪ. ದಕ್ಷಿಣ ಆಫ್ರಿಕಾದಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. ವಿಶ್ವಾದ್ಯಂತ 500 ಬಿಳಿ ಹುಲಿಗಳು ಮಾತ್ರ ಇವೆ. ಮೈಸೂರು ಝೂನಲ್ಲಿ ಬಿಳಿ ಹುಲಿಯನ್ನು ಸಾಕಲಾಗಿದೆ.

Rajesh Duggumane | news18
Updated:June 6, 2019, 12:36 PM IST
ಪ್ರಾಣಿ ಪ್ರಿಯರ ಗಮನಕ್ಕೆ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬರಲಿದ್ದಾನೆ ವಿಶೇಷ ಅತಿಥಿ
ಬಿಳಿ ಹುಲಿ
Rajesh Duggumane | news18
Updated: June 6, 2019, 12:36 PM IST
ಬೆಂಗಳೂರು (ಜೂ. 6): ಬೆಂಗಳೂರಿನಲ್ಲಿರುವ ಪ್ರವಾಸಿ ಸ್ಥಳಗಳಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕೂಡ ಒಂದು. ಹುಲಿ, ಸಿಂಹ ಸೇರಿದಂತೆ ಬೇರೆ ಬೇರೆ ಪ್ರಾಣಿಗಳು ಇಲ್ಲಿವೆ. ಪ್ರಾಣಿ ಪ್ರಿಯರ ಸ್ವರ್ಗ ಎಂದೇ ಕರೆಯಲ್ಪಡುವ ಈ ಪ್ರದೇಶದಲ್ಲಿ ಸಫಾರಿ ಕೂಡ ಹೋಗಬಹುದು. ಈಗ ಬನ್ನೇರುಘಟ್ಟಕ್ಕೆ ಹೊಸ ಅತಿಥಿಯೊಂದು ಬರುತ್ತಿದೆ.

ಯಾರು ಈ ಅತಿಥಿ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೂ ಉತ್ತರವಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಲ್ಲೆ ಶೀಘ್ರದಲ್ಲೇ ಬಿಳಿ ಹುಲಿ ಸೇರ್ಪಡೆಯಾಗಲಿದೆ. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ.

ಬಿಳಿ ಹುಲಿ ಭಾರತೀಯರ ಪಾಲಿಗೆ ಅಪರೂಪ. ದಕ್ಷಿಣ ಆಫ್ರಿಕಾದಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. ವಿಶ್ವಾದ್ಯಂತ 500 ಬಿಳಿ ಹುಲಿಗಳು ಮಾತ್ರ ಇವೆ. ಮೈಸೂರು ಝೂನಲ್ಲಿ ಬಿಳಿ ಹುಲಿಯನ್ನು ಸಾಕಲಾಗಿದೆ.

ಇನ್ನು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಎಲಾಂಡ್ ಪ್ರಾಣಿಗಳನ್ನು ಸಾಕುವ ಆಲೋಚನೆಯಲ್ಲಿದೆ. ಇದಕ್ಕೆ ಈಗಾಗಲೇ ಮನವಿ ಸಲ್ಲಿಕೆ ಆಗಿದ್ದು, ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಲ್ಲದೆ, ದಕ್ಷಿಣ ಆಫ್ರಿಕಾದಿಂದ ಎರಡು ಜಿರಾಫೆಗಳನ್ನು ತರಿಸಲು ಉದ್ಯಾನವನದ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ನಿಗದಿಯಾಗಿದ್ದ ಸಂಪುಟ ವಿಸ್ತರಣೆಗೆ ತಡೆಹಾಕಿದವರು ಯಾರು? ಅದಕ್ಕೆ ಕಾರಣವೇನು?

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...