ಪ್ರಯಾಣಿಕರೊಬ್ಬರು (Passenger) ಮರೆತು ಹೋಗಿದ್ದ ಆಪಲ್ ಬ್ರ್ಯಾಂಡ್ನ ಏರ್ಪಾಡ್ (Apple Airpod) ಅನ್ನು ಆಟೋ ಚಾಲಕ ಮತ್ತೆ ಹಿಂದಿರುಗಿಸುವ ಮೂಲಕ ಮಾನವೀಯತೆ (Humanity) ಮೆರೆದಿದ್ದಾರೆ. ಮನುಷ್ಯರೆಂಬುದನ್ನೇ ಮರೆತು ಕ್ರೂರವಾಗಿ ವರ್ತಿಸುತ್ತಿರುವ ಹಲವಾರು ಜನರ ನಡುವೆ ಒಳ್ಳೆ ಮನಸ್ಸು, ಸಹಾಯ ಮಾಡುವ ಗುಣ, ನೋವಿಗೆ ಸ್ಪಂದಿಸುವ ಮನೋಭಾವ, ಪ್ರಾಮಾಣಿಕತೆ ಹೀಗೆ ಹತ್ತಾರು ಒಳ್ಳೆಯ ಗುಣವಿರುವ ಜನ ನಮ್ಮ ಮಧ್ಯೆ ಇದ್ದಾರೆ. ಇದೇ ರೀತಿ ಒಳ್ಳೆತನಕ್ಕೆ ಉತ್ತಮ ನಿದರ್ಶನ ಎಂಬಂತೆ ಇಲ್ಲೊಬ್ಬ ಆಟೋ ಚಾಲಕ (Auto Driver) ತನ್ನ ಪ್ರಾಮಾಣಿಕತೆ ಮೆರೆದಿದ್ದಾನೆ.
ದಿನಕ್ಕೆ ಹತ್ತಾರು ಜನ ಪ್ರಯಾಣಿಸುತ್ತಾರೆ, ನಮಗ್ಯಾಕೆ ಅಂತ ಪ್ರಯಾಣಿಕರು ಬಿಟ್ಟು ಹೋದ ವಸ್ತುವನ್ನು ತಮ್ಮಲ್ಲಿಯೇ ಇರಿಸಿಕೊಳ್ಳದೇ ಅದನ್ನು ಹಿಂದಿರುಗಿಸಿ ಪ್ರಶಂಸೆಗೊಳಗಾದ ಬಸ್, ಆಟೋ ಚಾಲಕರು ಸಾಕಷ್ಟಿದ್ದಾರೆ. ಇವರ ಪಟ್ಟಿಗೆ ಬೆಂಗಳೂರಿನ ಆಟೋ ಚಾಲಕ ಒಬ್ಬ ಸೇರ್ಪಡೆಗೊಂಡಿದ್ದಾರೆ ನೋಡಿ.
ಮಹಿಳೆ ಆಟೋದಲ್ಲಿ ಬಿಟ್ಟು ಹೋದ ಏರ್ಪಾಡ್ ಹಿಂದಿರುಗಿಸಿದ ಚಾಲಕ
ಬೆಂಗಳೂರಿನಲ್ಲಿ ನಡೆದ ಒಂದು ಘಟನೆಯಲ್ಲಿ, ಮಹಿಳೆ ಆಟೋದಲ್ಲಿ ಆಫೀಸಿಗೆ ತೆರಳುವಾಗ ಆಟೋದಲ್ಲಿಯೇ ತನ್ನ ಆಪಲ್ ಏರ್ಪಾಡ್ ಅನ್ನು ಬಿಟ್ಟು ನಡೆದಿದ್ದಾರೆ. ಮಹಿಳೆ ತೆರಳಿದ ನಂತರ ಆಟೋ ಚಾಲಕ ಅದನ್ನು ಗಮನಿಸಿದ್ದಾರೆ. ಅದನ್ನು ಹೇಗಾದರೂ ಅವರಿಗೆ ಮರಳಿ ಕೊಡಬೇಕೆಂದು ಯೋಚಿಸಿ ಮಹಿಳೆಯ ವಿಳಾಸವನ್ನು ಟ್ರ್ಯಾಕ್ ಮಾಡಿದ್ದಾರೆ.
ಈಗಿನ ತಂತ್ರಜ್ಞಾನದ ಬಗ್ಗೆ ಹೆಚ್ಚು ಹೇಳೋದೆ ಬೇಡ. ಪ್ರತಿಯೊಂದನ್ನು ಟ್ರ್ಯಾಕ್ ಮಾಡುವ ಮೂಲಕ ಪತ್ತೆ ಹಚ್ಚಬಹುದು. ಇದೇ ರೀತಿ ಈ ಆಟೋ ಚಾಲಕ ಕೂಡ ಮಹಿಳೆಯನ್ನು ಟ್ರ್ಯಾಕ್ ಮಾಡಿ ಆಕೆಯ ವಸ್ತುವನ್ನು ಹಿಂದಿರುಗಿಸಿದ್ದಾರೆ.
ಮಹಿಳೆಯ ಡ್ರಾಫ್ ಲೋಕೆಶನ್ ಗೊತ್ತಿದ್ದರೂ ಇದೇ ವ್ಯಕ್ತಿ ಎಂದು ಅದನ್ನು ಹಿಂದಿರುಗಿಸುವುದು ಕಷ್ಟವಾಗಿತ್ತು. ಇದಕ್ಕೆ ಆತ ತಂತ್ರಜ್ಞಾನದ ಮೊರೆ ಹೋಗಿದ್ದ. ಆತ ಹೇಗೆ ಮಹಿಳೆಯನ್ನು ಪತ್ತೆ ಹಚ್ಚಿ ವಸ್ತುವನ್ನು ಹಿಂದಿರುಗಿಸಿದ್ದಾರೆ ಎಂಬುದನ್ನು ಆ ಮಹಿಳೆ ತಮ್ನ ಟ್ವಿಟರ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಟ್ವಿಟರ್ನಲ್ಲಿ ಘಟನೆ ಬಗ್ಗೆ ಹಂಚಿಕೊಂಡ ಮಹಿಳೆ
ಶಿಡಿಕಾ ಉಬ್ರಾ ಎಂಬ ಮಹಿಳೆ ಈ ವಿಷಯವನ್ನು ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಕಳೆದು ಹೋದ ನನ್ನ ಆಪಲ್ ಏರ್ಪಾಡ ಅನ್ನು ಆಟೋ ಡ್ರೈವರ್ ಒಬ್ಬರು ಕೇವಲ ಅರ್ಧಗಂಟೆಯಲ್ಲಿ ಹಿಂದಿರುಗಿಸಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
Lost my AirPods while traveling in an auto. Half an hour later this auto driver who dropped me at WeWork showed up at the entrance & gave it back to security. Apparently, he connected the AirPods to find the owner's name & used his PhonePe transactions to reach me. @peakbengaluru
— Shidika Ubr (@shidika_ubr) November 15, 2022
ಇದನ್ನೂ ಓದಿ: CT Ravi Statement: ಹಿಂದೂಗಳ ರಕ್ಷಣೆ ಬಿಜೆಪಿಯಿಂದ ಅಸಾಧ್ಯ; ಸಿ ಟಿ ರವಿ ಹೇಳಿಕೆಗೆ ಸಿದ್ದು ಪುತ್ರ ತಿರುಗೇಟು
ಹೀಗೆ ಕಳೆದು ಹೋದ ಕೆಲವೇ ಹೊತ್ತಲ್ಲಿ ವಾಪಸ್ ಕಂಪನಿ ಬಳಿ ಬಂದು ಆ ಡ್ರೈವರ್ ನಮ್ಮ ಸೆಕ್ಯೂರಿಟಿ ಹತ್ತಿರ ಏರ್ಪಾಡ್ ಕೊಟ್ಟು ಹೋಗಿದ್ದಾರೆ. ನನ್ನನ್ನು ಗುರುತು ಹಚ್ಚಲು ಅವರು ಫೋನ್ ಪೇಯ ವಹಿವಾಟನ್ನು ಬಳಸಿದ್ದಾರೆ ಎಂಬುದಾಗಿ ಮಹಿಳೆ ತಿಳಿಸಿದ್ದಾರೆ.
ನೆಟ್ಟಿಗರಿಂದ ಪ್ರಶಂಸೆ
ಇನ್ನೂ ಆಟೋ ಡ್ರೈವರ್ ಒಳ್ಳೆತನಕ್ಕೆ ನೆಟ್ಟಿಗರು ಪ್ರಶಂಸೆಯ ಮಳೆ ಸುರಿಸಿದ್ದಾರೆ. ಟ್ವಿಟರ್ ಬಳಕೆದಾರರು ಆಟೋಚಾಲಕನನ್ನು 'ತಂತ್ರಜ್ಞಾನಿʼ ಎಂದು ಬಣ್ಣಿಸಿದ್ದಾರೆ.
ಈ ಟ್ವಿಟರ್ ಪೋಸ್ಟ್ ಸುಮಾರು 9,000 ಲೈಕ್ಗಳನ್ನು ಪಡೆದುಕೊಂಡಿದ್ದು, 500 ಕ್ಕೂ ಹೆಚ್ಚು ಜನ ಇದನ್ನು ರೀಟ್ವೀಟ್ ಮಾಡಿದ್ದಾರೆ. ಆಟೋಚಾಲಕನ ತಂತ್ರಜ್ಞಾನಕ್ಕೆ ಮತ್ತು ಬುದ್ಧಿವಂತಿಕೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: School Bag: ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಿಕ್ಷಕರಿಗೆ ಶಾಕ್; ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ!
ಚಾಲಕನ ಒಳ್ಳೆತನಕ್ಕೆ ನೆಟ್ಟಿಗರು ಫಿದಾ
ಒಬ್ಬ ಬಳಕೆದಾರರು ವಿಶೇಷವಾಗಿ ಬೆಂಗಳೂರಿನ ಆಟೋ ಚಾಲಕರು ಟೆಕ್ ಪರಿಣಿತರು ಎಂದು ಬರೆದಿದ್ದಾರೆ. ಈ ರೀತಿಯ ಕೆಲಸ ಮಾಡಿದ್ದನ್ನು ಬಣ್ಣಿಸಿದ ಬಳಕೆದಾರರು ಅವರ ಒಳ್ಳೆತನಕ್ಕೆ ಮತ್ತು ಯೋಚನಾ ಶಕ್ತಿಯನ್ನು ಪ್ರಶಂಸಿದ್ದಾರೆ.
ಇನ್ನೊಬ್ಬರು ಇದೇ ರೀತಿ ನಾನು ಕೂಡ ಕ್ಯಾಬ್ನಲ್ಲಿ ಏರ್ಪಾಡ್ ಬಿಟ್ಟು ಬಂದಿದ್ದೆ ಆದರೆ ನನಗೆ ಆ ವ್ಯಕ್ತಿ ಇನ್ನೂ ಹಿಂದಿರುಗಿಸಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ