• Home
  • »
  • News
  • »
  • state
  • »
  • Amit Shah: 'ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ, ಯಾರೊಂದಿಗೂ ಹೊಂದಾಣಿಕೆ ಇಲ್ಲ'; ಅಮಿತ್​ ಶಾ ಸ್ಪಷ್ಟನೆ

Amit Shah: 'ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ, ಯಾರೊಂದಿಗೂ ಹೊಂದಾಣಿಕೆ ಇಲ್ಲ'; ಅಮಿತ್​ ಶಾ ಸ್ಪಷ್ಟನೆ

ಅಮಿತ್ ಶಾ, ಕೇಂದ್ರ ಗೃಹ ಸಚಿವರು

ಅಮಿತ್ ಶಾ, ಕೇಂದ್ರ ಗೃಹ ಸಚಿವರು

-ಯಾರಿಗೂ ಬಹುಮತ ಬರಲಿಲ್ಲ ಎಂದರೇ ಕುಮಾರಸ್ವಾಮಿ ಬಂದು ಕೂರುತ್ತಾರೆ -ಚುನಾವಣೆ ಬರುತ್ತಿದ್ದಂತೆ ಜೆಡಿಎಸ್, ಕಾಂಗ್ರೆಸ್ ಹತ್ತಿರ ಬರುತ್ತಾರೆ

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು (Karnataka Vidhan Sabha) ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷ ಮೈಸೂರು ಕರ್ನಾಟಕ ಭಾಗವನ್ನು ಗುರಿಯಾಗಿಸಿಕೊಂಡು ಮಂಡ್ಯ (Mandya) ಹಾಗೂ ಬೆಂಗಳೂರಿನ ದೇವನಹಳ್ಳಿ ಬಳಿ ಬೃಹತ್ ಸಮಾವೇಶಗಳನ್ನು ಆಯೋಜಿಸಿತ್ತು. ಇಂದು ದೇವನಹಳ್ಳಿ ಬಳಿ ನಡೆದ ಬಿಜೆಪಿ ಬೂತ್ ವಿಜಯ ಸಂಕಲ್ಪ ಸಮಾವೇಶ ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ (Amit Shah) ಅವರು, ಬೆಂಗಳೂರಿನಲ್ಲಿ (Bengaluru) 20ಕ್ಕೂ ಹೆಚ್ಚು ಸ್ಥಾನಗಳಮನ್ನು ಗೆಲ್ಲಬೇಕು. ಆ ಮೂಲಕ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.


ದಕ್ಷಿಣ ಭಾರತದ ಬಿಜೆಪಿ ಎಂಟ್ರಿ ಗೇಟ್​ ಕರ್ನಾಟಕ


ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ ಅವರು, ಕರ್ನಾಟಕದಲ್ಲಿ ಚುನಾವಣೆ ಬರುತ್ತಿದ್ದಂತೆ ಜೆಡಿಎಸ್, ಕಾಂಗ್ರೆಸ್ ಹತ್ತಿರ ಬರುತ್ತಾರೆ, ಒಟ್ಟಿಗೆ ಕೂರುತ್ತಾರೆ. ಅವರ ಆಡಳಿತ ನೋಡಿದ್ದೀರಿ. ಆ ಬಳಿಕ ಯಡಿಯೂರಪ್ಪ ಮತ್ತು ಬೊಮ್ಮಾಯಿ‌ ಯಶಸ್ವಿ ಆಗಿ ಸರ್ಕಾರ ನಡೆಸಿದ್ದಾರೆ.


ದಕ್ಷಿಣದಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಬೇಕಿದೆ. ದಕ್ಷಿಣದ ಬಿಜೆಪಿ ಎಂಟ್ರಿ ಗೇಟ್ ಕರ್ನಾಟಕ ಆಗಿದೆ. ಮಂಡ್ಯದಲ್ಲಿ ಇದಕ್ಕೂ ಮೊದಲು ಈ ರೀತಿ ರ್ಯಾಲಿ ನಾನು ನೋಡಿರಲಿಲ್ಲ. ದಕ್ಷಿಣದಲ್ಲಿ , ಮಂಡ್ಯ ಮೈಸೂರು ಭಾಗದಲ್ಲಿ ನಿನ್ನೆ ನಡೆದ ರ್ಯಾಲಿ ಅದ್ಭುತವಾಗಿತ್ತು. ಇದಕ್ಕಾಗಿ ನಾನು ಕಟೀಲ್ ರನ್ನು ಅಭಿನಂದಿಸುತ್ತೇನೆ.


ಇದನ್ನೂ ಓದಿ: Amit Shah: ಸಕ್ಕರೆ ನಾಡಲ್ಲಿ ಬಿಜೆಪಿ ಚಾಣಕ್ಯ; ಮಂಡ್ಯದಲ್ಲಿ ಮೆಗಾ ಡೈರಿಗೆ ಅಮಿತ್ ಶಾ ಚಾಲನೆ


ಐದು ರಾಜ್ಯಗಳಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದಿದೆ. ಗುಜರಾತ್ ನಲ್ಲಿ ಮೋದಿ ಎಲ್ಲಾ ದಾಖಲೆ ಪುಡಿ ಮಾಡಿದ್ದಾರೆ. ಕಾಂಗ್ರೆಸ್ ಗೆ ವಿಪಕ್ಷ ಸ್ಥಾನ ಕೂಡ ಸಿಗಲಿಲ್ಲ‌. ಗುಜರಾತ್ , ಉತ್ತರ ಖಾಂಡ್, ಮಣಿಪುರ್, ಗೋವಾ ಬಿಜೆಪಿ ಅಭೂತಪೂರ್ವ ಗೆಲುವು ಪಡೆದಿದೆ. ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದ ಅಮಿತ್​ ಶಾ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿ ಏರುಧ್ವನಿಯಲ್ಲಿ ವಾಗ್ದಾಳಿ ನಡೆಸಿದರು.


ಯಾರ ಜೊತೆಗೂ ಹೊಂದಾಣಿಕೆ ಇಲ್ಲ


ಬಿಜೆಪಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಜೆಡಿಎಸ್ ಚುನಾವಣೆ ಬಂದಾಗ ಬಿಜೆಪಿ ಜೊತೆ ಒಪ್ಪಂದದ ಬಗ್ಗೆ ಮಾತಾನಾಡುತ್ತೆ. ಆದರೆ ಬಿಜೆಪಿ ಏಕಾಂಗಿಯೇ ಅಧಿಕಾರಕ್ಕೆ ಬರಲಿದೆ. ಯಾರ ಜೊತೆಯೂ ಯಾವ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ನಾವು ಯಾವ ಪಾರ್ಟಿ ಜೊತೆ ಕೈ ಜೋಡಿಸಲ್ಲ. ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್ ಜೊತೆ ಸರ್ಕಾರ ಮಾಡ್ತಾರೆ ಎನ್ನುವ ಮಾತುಗಳು ಕೆಲವರು ಹೇಳ್ತಾರೆ, ತ್ರಿಕೋನ ಸ್ಪರ್ಧೆ ಇದೇ ಎಂದು ಪ್ರತಕರ್ತರು ಹೇಳ್ತಿದ್ದಾರೆ. ಆದರೆ ನಾವು ಹೇಳುತ್ತಿದ್ದೇವೆ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರ್ತೆವೆ.


ಮೋದಿ ಅಯೋದ್ಯಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿ ಟಿಪ್ಪು ಸುಲ್ತಾನ್ ಹೀರೋ ಮಾಡ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರೇ ನೀವು ಪ್ರಧಾನಿ ಆಗಿದ್ದೀರಿ, ಮುಖ್ಯಮಂತ್ರಿ ಆಗಿದ್ದೀರಿ.. ಆದ್ರೂ ಏನು ಮಾಡಿಲ್ಲ. ನಾವು ಏನು ಮಾಡಿದ್ದೇವೆ ಎಂದು ನಮ್ಮ ಯುವ ಮೋರ್ಚಾ ಕಾರ್ಯಕರ್ತರು ನಿಮಗೆ ಹೇಳ್ತಾರೆ ಎಂದರು.


ಬಿಜೆಪಿಗೆ ವೋಟ್ ಬ್ಯಾಂಕ್ ಭಯ ಇಲ್ಲ.


ಅಲ್ಲದೇ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಹೆಚ್​ಡಿ ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ಇವರುಗಳಿಂದ ಪಿಎಫ್ ಐನಿಂದ ದೇಶ ರಕ್ಷಣೆ ಸಾಧ್ಯವೇ!? ಇವರು ದೇಶವನ್ನು ಸುರಕ್ಷಿತವಾಗಿ ಇಡ್ತಾರೆ ಅಂತ ನಿರೀಕ್ಷೆ ಮಾಡಲು ಸಾಧ್ಯವೇ‌!? ಇವರು ವೋಟ್ ಬ್ಯಾಂಕ್​ಗೆ ಹೆದರುತ್ತಿದ್ದಾರೆ. ಆದರೆ ಬಿಜೆಪಿಗೆ ಆ ವೋಟ್ ಬ್ಯಾಂಕ್ ಭಯ ಇಲ್ಲ.ದೇಶದ ಸುರಕ್ಷತೆಯೇ ನಮ್ಮ ಗುರಿ. ಒಂದು ದೇಶದಲ್ಲಿ ಎರಡು ಸಂವಿಧಾನ, ವಿಧಾನ ನಡೆಯೋಕೆ ಸಾಧ್ಯವಿಲ್ಲ. ಮೋದಿ ಸರ್ಕಾರ 2019ರ ಆಗಸ್ಟ್ 15ರಂದು 370 ವಿಶೇಷ ಸ್ಥಾನಮಾನ ರದ್ದು ಮಾಡಿತು. ಬಿಜೆಪಿ ಯಾವತ್ತು ವೋಟ್ ಬ್ಯಾಂಕ್ ರಾಜಕೀಯ ಮಾಡಲ್ಲ. ಬಿಜೆಪಿಗೆ ದೇಶದ ರಕ್ಷಣೆ ಮುಖ್ಯ. ದೇಶದ ರಕ್ಷಣೆ ಮೋದಿ ಮತ್ತು ಬಿಜೆಪಿ ಇಂದ ಮಾತ್ರ ಸಾಧ್ಯ. ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದು ಮಾಡಿದರೆ ರಕ್ತ ಹೊಳೆ ಹರಿಯುತ್ತದೆ ಎಂದು ಮಮತಾ, ಸಮಾತಾ ಎಲ್ಲಾ ಕಾವ್ ಕಾವ್ ಎನ್ನುತ್ತಿದ್ದರು. ಆದರೆ ಈಗ ಕಾಶ್ಮೀರ ಬಂದು ನೋಡಿ ಎಂದು ಸವಾಲು ಹಾಕಿದರು.


ಇದನ್ನೂ ಓದಿ: Cabinet Expansion: ಸಂಪುಟ ವಿಸ್ತರಣೆಗೆ ಅಮಿತ್ ಶಾ ಗ್ರೀನ್ ಸಿಗ್ನಲ್; ಹೊಸ ಮುಖಗಳಿಗೆ ಸಿಗುತ್ತಾ ಅವಕಾಶ?


ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ. ಜೆಡಿಎಸ್‌ಗೆ ಮತ ಹಾಕುವುದು ಕಾಂಗ್ರೆಸ್‌ಗೆ ಮತ ಹಾಕಿದಂತೆ. ಯಾರಿಗೂ ಬಹುಮತ ಬರದಿದ್ದಲ್ಲಿ ಕುಮಾರಸ್ವಾಮಿ ಬಂದು ಕೂರುತ್ತಾರೆ. ಆದ್ದರಿಂದ ಒಂದು ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತದ ಅಧಿಕಾರ ನೀಡಿ, ಕರ್ನಾಟಕವನ್ನು ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಜಾತಿವಾದದಿಂದ ಮುಕ್ತ ಮಾಡಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಶ್ವಾಸನೆ ನೀಡಿದರು.

Published by:Sumanth SN
First published: