ಮಹಿಳಾ ಪ್ರಯಾಣಿಕರ ಗಮನಕ್ಕೆ; ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿದ್ದವಾಗಿದೆ ಮಹಿಳಾ ಕ್ಯಾಬ್ ಚಾಲಕರ ಪಡೆ..!

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಹಯೋಗದಲ್ಲಿ ಈ ದಿಟ್ಟ ಹೆಜ್ಜೆ ಇಟ್ಟಿದ್ದು, ಮಹಿಳೆಯರ ರಕ್ಷಣೆಗೆ ಮುಂದಾಗಿದ್ದಾರೆ.

Latha CG | news18india
Updated:January 10, 2019, 1:19 PM IST
ಮಹಿಳಾ ಪ್ರಯಾಣಿಕರ ಗಮನಕ್ಕೆ; ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿದ್ದವಾಗಿದೆ ಮಹಿಳಾ ಕ್ಯಾಬ್ ಚಾಲಕರ ಪಡೆ..!
ಮಹಿಳಾ ಕ್ಯಾಬ್​ ಚಾಲಕರು
Latha CG | news18india
Updated: January 10, 2019, 1:19 PM IST
ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಾಮುಕರ ಹಾವಳಿ ಹೆಚ್ಚುತ್ತಿದೆ. ಕೆಲ ಕ್ಯಾಬ್ ಚಾಲಕರು, ಆಟೋ ಚಾಲಕರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತನೆ ತೋರುತ್ತಿದ್ದು, ಹಗಲಿನಲ್ಲೇ ಮಹಿಳೆಯರೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಸುರಕ್ಷತೆ ನೀಡುವ ಮಹತ್ತರವಾದ ಧ್ಯೇಯವನ್ನಿಟ್ಟುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗೆ ಮಹಿಳಾ ಕ್ಯಾಬ್​ ಚಾಲಕರ ಹೊಸ ಸೇವೆಯನ್ನು ಆರಂಭಿಸಲಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಹಯೋಗದಲ್ಲಿ ಈ ದಿಟ್ಟ ಹೆಜ್ಜೆ ಇಟ್ಟಿದ್ದು, ಮಹಿಳೆಯರ ರಕ್ಷಣೆಗೆ ಮುಂದಾಗಿದ್ದಾರೆ. ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಮಹಿಳಾ ಪ್ರಯಾಣಿಕರು ಈ ಮಹಿಳಾ ಕ್ಯಾಬ್ ಚಾಲಕರ ರಕ್ಷಣೆಯಲ್ಲಿ ಪ್ರಯಾಣಿಸಬಹುದಾಗಿದೆ.

ಪ್ರಮುಖ ನಗರಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮಹಿಳೆಯರಿಗೆ ಈ ಸೇವೆ ಸಹಕಾರಿಯಾಗಲಿದೆ.

ಇದನ್ನೂ ಓದಿ: ಮಗಳನ್ನು ಅಂಗನವಾಡಿಗೆ ಸೇರಿಸಿ ಮಾದರಿಯಾದ ತಮಿಳುನಾಡು ಜಿಲ್ಲಾಧಿಕಾರಿ..!


  • 10 ಪಿಂಕ್​ ಕ್ಯಾಬ್​ಗಳ ಸೌಲಭ್ಯ ನೀಡಲು ಚಿಂತನೆ ನಡೆಸಿದೆ.  

  • ಈ ಸೇವೆಯ ದರ ಪ್ರತಿ ಕಿ.ಮೀ.ಗೆ 21.50 ರೂ. ಇರುತ್ತದೆ.

  • Loading...

  • ಬೆಳಗ್ಗೆ 6 ಗಂಟೆಯಿಂದ ರಾತ್ರಿ 11.59 ರವರೆಗೆ ಕ್ಯಾಬ್​ ಸೌಲಭ್ಯ ಲಭ್ಯವಿರುತ್ತದೆ.

  • ರಾತ್ರಿ ಪ್ರಯಾಣಕ್ಕೆ ಅಂದರೆ, 12 ಗಂಟೆಯ ನಂತರದ ಪ್ರಯಾಣ ದರ ಪ್ರತಿ ಕಿ.ಮೀ ಗೆ 23.50 ರೂ. ಇರುತ್ತದೆ.

  • ಮಹಿಳಾ ಚಾಲಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ತಂತ್ರಗಳು ಹಾಗೂ ವಿವಿಧ ಭಾಷೆಗಳನ್ನು ಕಲಿತಿರುತ್ತಾರೆ.

  • ಈ ಕ್ಯಾಬ್​ಗಳು ಸುರಕ್ಷಿತ ಫೀಚರ್ಸ್​​ಗಳನ್ನು ಒಳಗೊಂಡಿದೆ.

  • ಜಿಪಿಆರ್​ಎಸ್​ ಟ್ಯ್ರಾಕಿಂಗ್ ಮತ್ತು ಎಸ್​ಒಎಸ್​ ಸ್ವಿಚ್​ಗಳನ್ನು ಹೊಂದಿದೆ.

  • ಮಹಿಳಾ ಪ್ರಯಾಣಿಕರು ಒಬ್ಬರಿರಲಿ, ಹೆಚ್ಚು ಜನ ಇರಲಿ ಈ ಸೇವೆ ಲಭ್ಯವಿರುತ್ತದೆ.


ಈ ಯೋಜನೆ ಜಾರಿಗೆ ತಂದಿರುವುದು ಗ್ರಾಮೀಣ ಭಾಗದ ಮಹಿಳಾ ಡ್ರೈವರ್​ಗಳಿಗೆ ಆರ್ಥಿಕವಾಗಿ ಸದೃಢರಾಗಲು ಉತ್ತಮ ಅವಕಾಶ ಸಿಕ್ಕಂತಾಗಿದೆ. ಅಷ್ಟೇ ಅಲ್ಲದೇ ಸ್ವಸುರಕ್ಷತೆಗೂ ಸಹಕಾರಿಯಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್​ ಪುಷ್ಕರ್​ ಈ ಪಿಂಕ್​ ಕ್ಯಾಬ್​ ಸೇವೆಯ ರೂವಾರಿಯಾಗಿದ್ದಾರೆ. ಇವರು ಹೇಳುವ ಪ್ರಕಾರ, ಪಿಂಕ್​ ಕ್ಯಾಬ್​ ಸೇವೆ ಎರಡು ಉದ್ದೇಶಗಳನ್ನು ಇಟ್ಟುಕೊಂಡಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ಮೊದಲ ಆದ್ಯತೆಯಾಗಿದೆ. ಎರಡನೆಯದು, ಮಹಿಳಾ ಚಾಲಕರು ಸ್ವಂತ ಉದ್ಯೋಗ ಪಡೆದು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

2018 ರ ಜುಲೈನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದಾಗ, ಮಹಿಳೆಯರ ಸುರಕ್ಷತೆಗೆ ಕರ್ನಾಟಕ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹೇಳಿದ್ದರು.

ಒಟ್ಟಾರೆ, ಈ ಸೇವೆ ಮಹಿಳೆಯರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಹೊಸ  ಯೋಜನೆಯಾಗಿದೆ. ಕ್ಯಾಬ್ ಚಾಲಕರ ಯಾವುದೇ ಕಿರಿಕಿರಿ ಇಲ್ಲದೇ ನೆಮ್ಮದಿಯಾಗಿ ಪ್ರಯಾಣಿಸಬಹುದಾಗಿದೆ. ಇನ್ನೊಂದೆಡೆ ಮಹಿಳೆಯರು ಆರ್ಥಿಕವಾಗಿ ಬಲಶಾಲಿಯಾಗಲು ಸಹಕಾರಿಯಾಗಿದೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ