Bengaluru Airport: ದಾಳಿಂಬೆ ಹಣ್ಣಿನ ರಫ್ತಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಂಬರ್ ಒನ್ ಸ್ಥಾನ

Bangalore Airport: ಏಪ್ರಿಲ್‍ನಿಂದ ಆಗಸ್ಟ್ 2020ರ ನಡುವೆ 1,80,745 ಕೆ.ಜಿ.ಗಳಷ್ಟು ದಾಳಿಂಬೆ ಹಣ್ಣನ್ನು ರಫ್ತು ಮಾಡುವ ಮೂಲಕ ಭಾರತದಲ್ಲಿ ದಾಳಿಂಬೆ ರಫ್ತಿಗೆ ಮುಂಚೂಣಿಯಲ್ಲಿರುವ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ.

news18-kannada
Updated:September 28, 2020, 9:41 AM IST
Bengaluru Airport: ದಾಳಿಂಬೆ ಹಣ್ಣಿನ ರಫ್ತಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಂಬರ್ ಒನ್ ಸ್ಥಾನ
ಬೆಂಗಳೂರು ಏರ್​ಪೋರ್ಟ್​
  • Share this:
ಬೆಂಗಳೂರು (ಸೆ. 28): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಏಪ್ರಿಲ್‍ನಿಂದ ಆಗಸ್ಟ್ 2020ರ ನಡುವೆ 1,80,745 ಕೆ.ಜಿ.ಗಳಷ್ಟು ದಾಳಿಂಬೆ ಹಣ್ಣನ್ನು ರಫ್ತು ಮಾಡುವ ಮೂಲಕ ಭಾರತದಲ್ಲಿ ದಾಳಿಂಬೆ ರಫ್ತಿಗೆ ಮುಂಚೂಣಿಯಲ್ಲಿರುವ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಿಂದ ದಾಳಿಂಬೆ ರಫ್ತಿನಲ್ಲಿ ಶೇ.99ರಷ್ಟು ಪಾಲು ಬೆಂಗಳೂರು ವಿಮಾನ ನಿಲ್ದಾಣದಿಂದ ನಡೆದಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಪ್ರಾಧಿಕಾರ(ಎಪಿಇಡಿಎ) ಮತ್ತು ವಾಣಿಜ್ಯ ಬೇಹುಗಾರಿಕೆ ಹಾಗೂ ಅಂಕಿ ಅಂಶಗಳ ಪ್ರಧಾನ ನಿರ್ದೇಶನಾಲಯ (ಡಿಜಿಸಿಐಎಸ್)ಗಳಿಂದ ನ್ಯೂಸ್18 ಗೆ ವಿವರಗಳು ತಿಳಿಸಿವೆ.

ಒಂಭತ್ತು ಜಾಗತಿಕ ಸರಕು ಸಾಗಣೆ ವಿಮಾನ ಸಂಸ್ಥೆಗಳಾದ ಏರ್ ಫ್ರಾನ್ಸ್, ಬ್ರಿಟಿಷ್ ಏರ್​ವೇಸ್, ಕ್ಯಾಥೆ ಪೆಸಿಫಿಕ್, ಎಮಿರೇಟ್ಸ್ ಏರ್​ಲೈನ್ಸ್​, ಎತಿಹಾದ್ ಏರ್​ವೇಸ್, ಕೆಎಲ್‍ಎಂ ರಾಯಲ್ ಡಚ್ ಏರ್​ಲೈನ್ಸ್​, ಕಟಾರ್ ಏರ್​ವೇಸ್, ಸಿಂಗಾಪುರ್ ಏರ್​ಲೈನ್ಸ್​ ಮತ್ತು ಟರ್ಕಿಷ್ ಏರ್​ಲೈನ್ಸ್​​ಗಳ ಮೂಲಕ 12 ಅಂತಾರಾಷ್ಟ್ರೀಯ ಸ್ಥಳಗಳಿಗೆ ಈ ಹಣ್ಣುಗಳನ್ನು ರಫ್ತು ಮಾಡಲಾಗಿದೆ. ಹೆಚ್ಚು ಉತ್ತಮವಾದ ಸರಕು ಸಾಗಣೆಯಿಂದ ಚಾಲಿತ ಮತ್ತು ಎರಡು ಖ್ಯಾತ ಸರಕು ಸಾಗಣೆ ಟರ್ಮಿನಲ್ ಕಾರ್ಯಾಚರಣೆ ನಡೆಸುವ ಸಂಸ್ಥೆಗಳಾದ ಏರ್ ಇಂಡಿಯಾ ಸ್ಯಾಟ್ಸ್ ಮತ್ತು ಮೆಂಜೀಸ್ ಏವಿಯೇಷನ್ ಬಬ್ಬಾ ಬೆಂಬಲ ಹೊಂದಿರುವ, ಬೆಂಗಳೂರು ವಿಮಾನ ನಿಲ್ದಾಣ ಉತ್ಪನ್ನಗಳು ತಮ್ಮ ಗುರಿಗಳನ್ನು ಉತ್ತಮ ಸ್ಥಿತಿಯಲ್ಲಿ ತಲುಪುವ ಖಾತ್ರಿ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಟರ್ಮಿನಲ್‍ಗಳಲ್ಲಿ ಈ ಹಣ್ಣುಗಳನ್ನು ಇಡುವ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಅವುಗಳನ್ನು ಅಗತ್ಯ ತಾಪಮಾನ ನಿಯಂತ್ರಿತ ವಾತಾವರಣದಲ್ಲಿ ಇಡುವುದರೊಂದಿಗೆ ಆದ್ಯತೆಯ ಮೇರೆಗೆ ವಿಮಾನಗಳಿಗೆ ಸಾಗಿಸಲಾಗುತ್ತದೆ. ಈ ಮೂಲಕ ಹಣ್ಣುಗಳಲ್ಲಿನ ತಾಜಾತನವನ್ನು ಉಳಿಸಲಾಗುತ್ತಿದೆ. ಬೇಗನೆ ಹಾಳಾಗುವ ಸರಕುಗಳನ್ನು ಕ್ಷಿಪ್ರಗತಿಯಲ್ಲಿ ವಿತರಿಸುವುದನ್ನು ಖಾತ್ರಿ ಮಾಡಿಕೊಳ್ಳುವಂತೆ ಸರಕು ಸಾಗಣೆ ಮೂಲಸೌಕರ್ಯವನ್ನು ನಿರ್ಮಿಸಲಾಗಿದೆ. ಇದರೊಂದಿಗೆ ದಕ್ಷಿಣ ಭಾರತದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಂತ ನೆಚ್ಚಿನ ಆಯ್ಕೆಯ ಸರಕು ಸಾಗಣೆ ವಿಮಾನ ನಿಲ್ದಾಣವಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಸಮರ್ಪಿತ ಕೋಲ್ಡ್ ಝೋನ್-ಎಐಎಸ್‍ಎಟಿಎಸ್ ಕೂಲ್‍ಪೋರ್ಟ್ ಎಂಬ ತಂಪುಗೊಳಿಸುವ ಪ್ರದೇಶವಿದ್ದು, ವಾರ್ಷಿಕ 40,000 ಮೆಟ್ರಿಕ್ ಟನ್‍ಗಳಷ್ಟು ವಸ್ತುಗಳನ್ನು ಇದು ನಿಭಾಯಿಸಬಲ್ಲದು. 25ರಿಂದ 25 ಡಿಗ್ರಿ ಸೆಂಟಿಗ್ರೇಡ್‍ಗಳ ತಾಪಮಾನದಲ್ಲಿ ಸರಕುಗಳನ್ನು ಒಂದೇ ಸೂರಿನಡಿ ಬೆಂಗಳೂರಿಗೆ ತಕ್ಕ ಹವಾಮಾನದೊಂದಿಗೆ ಇದು ನಿಭಾಯಿಸುತ್ತದೆ.
Published by: Sushma Chakre
First published: September 28, 2020, 9:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading