ಬೆಂಗಳೂರು ಏರ್ ಶೋ ಸ್ಥಳಾಂತರ ಆಗಲು ಬಿಡಲ್ಲ ಎಂದ ಬಿಎಸ್​ವೈ; ಆದರೆ, ಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಿದ ಉತ್ತರಪ್ರದೇಶ

ಬೆಂಗಳೂರು ಏರ್ ಶೋ ಸ್ಥಳಾಂತರ ಆಗಲು ಬಿಡಲ್ಲ ಎಂದ ಬಿಎಸ್​ವೈ ಹೇಳುತ್ತಿದ್ದಾರೆ ಆದರೆ, ವಾಯು ಪ್ರದರ್ಶನಕ್ಕೆ ಉತ್ತರಪ್ರದೇಶ ಸರ್ಕಾರ ಸಕಲ ಸಿದ್ಧತೆ ಆರಂಭಿಸಿದೆ.

news18
Updated:August 13, 2018, 1:07 PM IST
ಬೆಂಗಳೂರು ಏರ್ ಶೋ ಸ್ಥಳಾಂತರ ಆಗಲು ಬಿಡಲ್ಲ ಎಂದ ಬಿಎಸ್​ವೈ; ಆದರೆ, ಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಿದ ಉತ್ತರಪ್ರದೇಶ
ಬೆಂಗಳೂರು ಏರ್ ಶೋ ಸ್ಥಳಾಂತರ ಆಗಲು ಬಿಡಲ್ಲ ಎಂದ ಬಿಎಸ್​ವೈ ಹೇಳುತ್ತಿದ್ದಾರೆ ಆದರೆ, ವಾಯು ಪ್ರದರ್ಶನಕ್ಕೆ ಉತ್ತರಪ್ರದೇಶ ಸರ್ಕಾರ ಸಕಲ ಸಿದ್ಧತೆ ಆರಂಭಿಸಿದೆ.
news18
Updated: August 13, 2018, 1:07 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ.13): ಕರ್ನಾಟಕ ರಾಜ್ಯದ ಬಹುಪ್ರತಿಷ್ಠಿತ ಏರ್ ಶೋ ಬೆಂಗಳೂರು ಬಿಟ್ಟು ಬೇರೆಡೆಗೆ ಸ್ಥಳಾಂತರ ಮಾಡದಂತೆ ರಾಜ್ಯ ಬಿಜೆಪಿಯ ಎಲ್ಲ ಕೇಂದ್ರ ಸಚಿವರು, ಸಂಸದರು ಪ್ರಯತ್ನ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ, ವಾಯು ಪ್ರದರ್ಶನಕ್ಕೆ ಉತ್ತರಪ್ರದೇಶ ಸರ್ಕಾರ ಈಗಾಗಲೇ ಸಕಲ ತಯಾರಿ ನಡೆಸಿದೆ.

ಈ ಮೂಲಕ 1996 ರಿಂದ ನಿರಂತರವಾಗಿ ಏರ್ ಶೋ ಆಯೋಜಿಸಿ, ಜಾಗತಿಕ ಮನ್ನಣೆ ಪಡೆದಿದ್ದ ಬೆಂಗಳೂರಿಗೆ ಕಡೆಗೂ ಕೊಕ್ ಸಿಗುವುದು ಬಹುತೇಕ ಖಚಿತ ಆಗಿದೆ.

ಗದಗದಲ್ಲಿ ಸೋಮವಾರ ಮಾತನಾಡಿರುವ ಬಿ.ಎಸ್. ಯಡಿಯೂರಪ್ಪ, ಏರ್ ಶೋ ಬೆಂಗಳೂರು ಬಿಟ್ಟು ಹೋಗದಂತೆ ರಾಜ್ಯ ಬಿಜೆಪಿಯ ನಾಯಕರು ಪ್ರಯತ್ನ ಮಾಡುತ್ತೇವೆ. ಈ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ. ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸ್ಥಳಾಂತರದ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಹೇಳಿದರು.

ಸಿದ್ಧತೆ ಆರಂಭಿಸಿದ ಉತ್ತರಪ್ರದೇಶ

ಬೆಂಗಳೂರಿನಿಂದ ಏರ್ ಇಂಡಿಯಾ ಶೋ ಉತ್ತರ ಪ್ರದೇಶದಲ್ಲಿ ನಡೆಸುವ ಸುಳಿವು ಕೇಂದ್ರ ಸರ್ಕಾರದಿಂದ ಸಿಕ್ಕಿರುವುದರಿಂದ ಲಖನೌದ ಭಕ್ಷಿ ತಲಾಬ್ ವಾಯುನೆಲೆಯಲ್ಲಿ ಪ್ರದರ್ಶನಕ್ಕೆ ಸಕಲ ತಯಾರಿ ಆರಂಭವಾಗಿದೆ. ಸ್ವತಂತ್ರ ದಿನಾಚರಣೆ ದಿನ ರಕ್ಷಣಾ ಇಲಾಖೆ ಸ್ಥಳವನ್ನು ಪ್ರಕಟಿಸಲಿದೆ.

ಲಖನೌ ಜಿಲ್ಲಾಡಳಿತದಿಂದ ಈಗಾಗಲೇ, ಜಮೀನು, ನೀರು, ವಿದ್ಯುತ್ ಮತ್ತು ಸಾರಿಗೆ ವ್ಯವಸ್ಥೆಗಳ ತಯಾರಿ ಆರಂಭವಾಗಿದ್ದು, ಏರ್ ಶೋಗೆ ಬರುವ ಗಣ್ಯರ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.
Loading...

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಏರ್ ಶೋ ಅನ್ನು ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಸ್ಥಳಾಂತರಿಸಿದೆ. ರಾಜಕೀಯ ಲೆಕ್ಕಾಚಾರದಿಂದ ಏರ್ ಶೋ ಶಿಫ್ಟ್ ಮಾಡುತ್ತಿರುವ ಕೇಂದ್ರ ಸರ್ಕಾರ ಉತ್ತರ ಪ್ರದೇಶವನ್ನು 'ಉದ್ಯಮಿ ಸ್ನೇಹಿ' ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಏರ್ ಶೋ ನಡೆಸಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂಬ ಸಂದೇಶ ರವಾನಿಸಿ ಮತ ಗಿಟ್ಟಿಸುವ ತಂತ್ರ ಇದರಲ್ಲಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಏರ್ ಶೋ ಸ್ಥಳಾಂತರ; ಬೆಂಗಳೂರಲ್ಲಿ ತೀವ್ರಗೊಳ್ಳುತ್ತಿರುವ ಆಕ್ರೋಶ

ಏಷಿಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ ಬೆಂಗಳೂರಿನಿಂದ ಸ್ಥಳಾಂತರ ಆಗುತ್ತಿರುವುದಕ್ಕೆ ಬೆಂಗಳೂರಿನಲ್ಲಿ ಆಕ್ರೋಶ ತೀವ್ರಗೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಏರ್ ಶೋ ಸ್ಥಳಾಂತರ ಆಗಬಾರದು ಎಂದು ವಿದ್ಯಾರ್ಥಿಗಳು ಸಹಿ ಸಂಗ್ರಹ ಚಳವಳಿ ಆರಂಭಿಸಿದ್ದಾರೆ.

ನಗರದ ಮೌಂಟ್ ಕಾರ್ಮೆಲ್ ಕಾಲೇಜು ಹಾಗೂ ಮಹಾರಾಣಿ ಕಾಲೇಜು , ಅಮ್ಮಣ್ಣಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಹಿ ಚಳವಳಿ ಆರಂಭಿಸಿದ್ದು, ಸಹಿವುಳ್ಳ ಬ್ಯಾನರ್​ಅನ್ನು ಪ್ರಧಾನಿ ಮೋದಿಗೆ ಕಳುಹಿಸಿಕೊಡಲಿದ್ದಾರೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ