ಬೆಂಗಳೂರು: ರಾಜ್ಯದ ಪಾಲಿಗಿಂದು ಕರಾಳ ಸಾವಿನ ಸಂಡೇ (Death Sunday) ಆಗಿದೆ. ಅಪಘಾತ (Accident), ಕೊಲೆ (Murder), ವಿದ್ಯುತ್ ಶಾಕ್ (Power Shock), ಆತ್ಮಹತ್ಯೆ (Suicide) ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಇಂದು ಐದಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ (Dead). ಬೆಂಗಳೂರಲ್ಲಿ (Bengaluru) ಫ್ಲೈ ಓವರ್‌ನಿಂದ (Fly Over) ಬಿದ್ದು ವಾಹನ ಸವಾರ ಸತ್ತಿದ್ದರೆ, ಗೋವಾ (Goa) ಬಳಿ ಅಪಘಾತಕ್ಕೆ ಬೆಳಗಾವಿಯ (Belagavi) ಮೂವರು ಸಾವನ್ನಪ್ಪಿದ್ದಾರೆ. ಇನ್ನು ಚಾಮರಾಜನಗರದಲ್ಲಿ (Chamarajanagar) ವಿದ್ಯುತ್ ಸ್ಪರ್ಶಕ್ಕೆ 11 ತಿಂಗಳ ಮಗು ಬಲಿಯಾಗಿದೆ. ಇನ್ನು ಉಡುಪಿ (Udupi) ಬಳಿ ಯುವಕ, ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಎಲ್ಲಾ ಘಟನೆಗಳ ವಿವರ ಇಲ್ಲಿದೆ ಓದಿ…
ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಅಪಘಾತ.
ಬೆಂಗಳೂರಲ್ಲಿ ಇಂದು ಬೆಳ್ಳಂಬೆಳಗ್ಗೆ ಏರ್ಪೋರ್ಟ್ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ವಾಹನ ಸವಾರ ಸಾವನ್ನಪ್ಪಿದ್ದಾನೆ. ಜಕ್ಕೂರು ಏರ್ ಡ್ರಮ್ ಬಳಿ ಘಟನೆ ನಡೆದಿದೆ. ಏರ್ಪೋರ್ಟ್ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ 45 ವರ್ಷದ ಗೋವಿಂದಪ್ಪ ಎಂಬುವರು ಮೃತಪಟ್ಟಿದ್ದಾರೆ. ಅವರ ಜೊತೆ ಬೈಕ್‌ನಲ್ಲಿದ್ದ 12 ವರ್ಷದ ಬಾಲಕ ಸಂಜಯ್ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಬಾಲಕನಿಗೆ ಏರೋಡ್ರಮ್ ತೋರಿಸುವಾಗ ಅನಾಹುತ
ಮೃತ ಗೋವಿಂದಪ್ಪ ಅವರು ತಮ್ಮ ತಂಗಿ ಮಗನಾದ ಬಾಲಕ ಸಂಜಯ್‌ಗೆ ಜಕ್ಕೂರು ಏರೋಡ್ರಮ್ ತೋರಿಸಲು ಬಂದಿದ್ದರು. ಏರ್ಪೋರ್ಟ್ ಫ್ಲೈಓವರ್ ಮೇಲೆ ಮೊಪೆಡ್ ಬೈಕ್ ನಿಲ್ಲಿಸಿ, ಏರೋಡ್ರಮ್ ತೋರಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಮೊಪೆಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗೋವಿಂದಪ್ಪ ಫ್ಲೈ ಓವರ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Couple Suicide: ಕಾರ್ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಯುವಜೋಡಿ
ಪೊಲೀಸರಿಂದ ತಪ್ಪಿಸಿಕೊಳ್ಳಲು ಚಾಲಕ ಯತ್ನ
ಅಪಘಾತ ಬಳಿಕ ಕಾರು ಚಾಲಕ ಸುಮಾರು 150 ಮೀಟರ್ ಬೈಕ್ ಎಳೆದುಕೊಂಡು ಹೋಗಿದ್ದಾನೆ. ನಂತರ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ 5-6 ಕಿಮೀ ಚಲಿಸಿದ್ದಾನೆ. ಆದರೆ ಸಾರ್ವಜನಿಕರ ನೆರವಿನಿಂದ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.
ಗೋವಾದಲ್ಲಿ ಅಪಘಾತಕ್ಕೆ ಬೆಳಗಾವಿ ನಿವಾಸಿಗಳು ಬಲಿ
ಗೋವಾದಲ್ಲಿ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದರಲ್ಲಿ ಬೆಳಗಾವಿಯ ಮೂವರು ಪ್ರವಾಸಿಗರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಗೋವಾದ ಮಾಪಸಾ ಕುಚೇಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದು ಅಫಘಾತ ಸಂಭವಿಸಿದೆ. ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ನಾಯರ್ ಅನಗೋಳ್ಕರ್ (28), ರೋಹಣ ಗದಗ (26), ಸನ್ನಿ ಅನ್ವೇಕರ್ (31) ಎಂಬುವರು ಮೃತಪಟ್ಟಿದ್ದಾರೆ. ಇನ್ನು ವಿಶಾಲ್ (27) ಎಂಬಾತನಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!
ವಿದ್ಯುತ್ ಸ್ಪರ್ಶಿಸಿ 11 ತಿಂಗಳ ಗಂಡು ಮಗು ಸಾವು
ನೆಲದ ಮೇಲೆ ಇಟ್ಟಿದ್ದ ಸ್ವಿಚ್ ಬೋರ್ಡ್ ಗೆ ಆಟವಾಡುತ್ತಾ ಕೈ ಹಾಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೋಕು ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿ ಹಾಗೂ ರಂಗಸ್ವಾಮಿ ಎಂಬ ದಂಪತಿಯ ಮಗು ಸಾವನ್ನಪ್ಪಿದೆ. ಘಟನೆಯಲ್ಲಿ ಮಗು ರಕ್ಷಿಸಲು ಹೋದ ತಾಯಿಗು ವಿದ್ಯುತ್ ಸ್ಪರ್ಶಿಸಿ ಅಸ್ವಸ್ಥಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಾಯಿ ತನ್ನ ಸಹೋದರಿ ಮಗುವಿನ ಹುಟ್ಟು ಹಬ್ಬಕ್ಕೆ ಅಂತ ತನ್ನ ಮಗುವಿನೊಂದಿಗೆ ತವರಿಗೆ ಬಂದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ