ಬೆಂಗಳುರು(ಡಿ.01): ಸಣ್ಣ ಅಜಾಗ್ರತೆ ಪ್ರಾಣಕ್ಕೇ ಕುತ್ತಾಗುವ ಹಲವು ಘಟನೆಗಳನ್ನು ಕೇಳುತ್ತಿರುತ್ತೇವೆ ಸದ್ಯ ಬೆಂಗಳೂರಿನಲ್ಲೂ (Bengaluru) ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಪಾರಿವಾಳ (Pigeon) ಹಿಡಿಯಲು ಹೋದ ಮಕ್ಕಳಿಗೆ ಹೈಟೆಕ್ಷನ್ ವೈಯರ್ ತಗುಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ವಿದ್ಯುತ್ ಶಾಕ್ (Electric Shock) ತಗುಲಿದ ಪರಿಣಾಮ 11 ವರ್ಷದ ಸುಪ್ರೀತ್ ಹಾಗೂ 10 ವರ್ಷದ ಚಂದನ್ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರಿನ ನಂದಿನಿ ಲೇಔಟ್ ವಿಜಯಾನಂದ ನಗರದಲ್ಲಿ ಘಟನೆ ನಡೆದಿದೆ.
ಸದ್ಯ ಗಾಯಗೊಂಡ ಮಕ್ಕಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಪುಟಾಣಿಗಳು ಜೀವನ್ಮರಣ ಹೋರಾಟ ‘ನಡೆಸುತ್ತಿದ್ದಾರೆ. ಹೈಟೆನ್ಷನ್ ತಂತಿ ತಗುಲಿ ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಘಟನೆಯ ಬಗ್ಗೆ ನೋಡುವುದಾದರೆ ಶುಕ್ರವಾರ ಸಂಜೆ 6:30 ರ ಸುಮಾರಿನಲ್ಲಿ ಈ ಘಟನೆ ಸಂಭವಿಸಿದ್ದು. ಮಕ್ಕಳಿಬ್ಬರೂ ಪಾರಿವಾಳ ಹಿಡಿಯಲು ಹೋಗಿದ್ದರೆನ್ನಲಾಗಿದೆ. ಇನ್ನು ಘಟನೆಯ ಬೆನ್ನಲ್ಲೇ ಇಬ್ಬರನ್ನೂ ವಿಕ್ಟೋರಿಯಾ ಅಸ್ಪತ್ರೆಗೆ ಕರೆದೊಯ್ಯಲಾಗಿದೆ, ಬಳಿಕ ಸಚಿವ ಗೋಪಾಲಯ್ಯ ಕೂಡಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ: Uttar Pradesh: ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ 6 ಜನರು ಸಜೀವ ದಹನ!
ಗಾಯಾಳು ಮಕ್ಕಳ ಆರೋಗ್ಯ ವಿಚಾರಿಸಿದ ಗೋಪಾಲಯ್ಯ, ಭೇಟಿ ನೀಡಿದ ಬಳಿಕ ಮಾತನಾಡಿ ವಿದ್ಯುತ್ ತಂತಿ ತಗುಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.. ವಿದ್ಯುತ್ ತಂತಿ ಮೇಲೆ ಪರಿವಾಳ ಕುಳಿತಿದೆ. ಅದನ್ನ ಓಡಿಸಲು ಈ ಬಾಲಕರು ಹೋಗಿದ್ದಾರೆ. ಈ ವೇಳೆ ವಿದ್ಯುತ್ ತಂತಿಯಿಂದ ಬಾಲಕರಿಗೆ ವಿದ್ಯುತ್ ಹರಿದು ಗಾಯಗೊಂಡಿದ್ದಾರೆ. ಇಬ್ಬರು ಬಾಲಕರ ಸ್ಥಿತಿ ಗಂಭೀರವಾಗಿದೆ. ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದಕ್ಕೆ ಬೇಕಾದ ನೆರವು ನೀಡಲಾಗುತ್ತದೆ. ಮಕ್ಕಳು ಗುಣಮುಖರಾಗಿ ಬರಬೇಕಷ್ಟೇ ಎಂದಿದ್ದಾರೆ. ಇನ್ನು ಬಾಲಕ ಚಂದ್ರುಗೆ 80 ರಷ್ಟು ಸುಟ್ಟ ಗಾಯಗಳಾಗಿದ್ದರೆ. ಸುಪ್ರೀತ್ಗೆ 50 ರಷ್ಟು ಸುಟ್ಟ ಗಾಯಗಳಾಗಿವೆ.
ಪಕ್ಕದ ಮನೆ ಮೇಲೆ ಹತ್ತಿ ಓಡಿಸಲು ಯತ್ನ
ಸುಪ್ರೀತ್ ತಂದೆ ಮಂಜುನಾಥ್ ನ್ಯೂಸ್ 18 ಗೆ ಜೊತೆ ಮಾತನಾಡುತ್ತಾ ಬೆಳಗ್ಗೆ ಮಗನನ್ನ ಶಾಲೆಗೆ ಕಳಿಸಿ ಕೆಲಸಕ್ಕೆ ಹೋಗಿದ್ವಿ, ಸಂಜೆ ಮನೆಗೆ ಬಂದಾಗ ಅಕ್ಕಪಕ್ಕದ ಮನೆಯವರು ಮಗ ಎಲ್ಲಿದ್ದಾನೆ ನೋಡು ಅಂದ್ರು. ಎಲ್ಲೋ ಆಟ ಆಡ್ತಿರಬೇಕು ಅನ್ಕೊಂಡಿದ್ದೆ, ನನ್ನ ಮಗ ಅಂತ ಗೊತ್ತಿರಲಿಲ್ಲ. ಅಮೇಲೆ ಪರಿವಾಳ ಲೈನ್ ಮೇಲೆ ಕುಳಿತಿದೆ ಅಂತ ಪಕ್ಕದ ಮನೆ ಮೇಲೆ ಹತ್ತಿ ಓಡಿಸಲು ಹೋಗಿದ್ದಾರೆ. ಇಬ್ಬರು ಹುಡುಗರು ಸ್ನೇಹಿತರು, ಜೊತೆಗೆ ಹೋಗಿದ್ದಾರೆ. ಕಡ್ಡಿಯಿಂದ ಓಡಿಸುವಾಗ ವಿದ್ಯುತ್ ತಗುಲಿ ಇಬ್ಬರು ಗಾಯಗೊಂಡಿದ್ದಾರೆ. ನಾವು ಬೆಳಗ್ಗೆ ಕೆಲಸಕ್ಕೆ ಹೋದ್ರೆ ಸಂಜೆ ಬರುತ್ತೇವೆ. ಈ ನಡುವೆ ಮಗ ಸ್ಕೂಲ್ ನಿಂದ ಬಂದು ಹೀಗೆ ಮಾಡ್ಕೊಂಡಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:Indian Army: ದಾಳಿ ನಡೆಸಿದ ಉಗ್ರನಿಗೇ ರಕ್ತದಾನ ಮಾಡಿದ ಭಾರತೀಯ ಸೈನಿಕರು!
ಇತ್ತ ಬಾಲಕ ಸುಪ್ರೀತ್ ತಾಯಿ ಮಾತನಾಡುತ್ತಾ ಇಬ್ಬರು ಮಕ್ಕಳಲ್ಲಿ ಇವನೇ ದೊಡ್ಡವನು. ಶಾಲೆಗೆ ಹೋಗಿ ಬಂದು ಪರಿವಾಳ ಓಡಿಸಲು ಹೋಗಿ ಹೀಗೆ ಮಾಡ್ಕೊಂಡಿದ್ದಾನೆ. ಮೈಯಲ್ಲಾ ಸುಟ್ಟಿದೆ, ಆದ್ರೂ ಅಮ್ಮ ಏನು ಆಗಿಲ್ಲ ಅಂತ ಮಾತಾಡ್ತಿದ್ದಾನೆ. ಅವನು ಬೇಗ ಗುಣಮುಖವಾಗಿ ಬರಬೇಕು. ಕೂಲಿ ಕೆಲಸ ಮಾಡಿ ಜೀವನ ನಡೆಸೋರು ಎಂದೂ ಈ ತಾಯಿ ಕರುಳೂ ನೋವು ವ್ಯಕ್ತಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ