Tejasvi Surya: ಬೆಂಗಳೂರು ಮಂದಿಗೆ ಮಳೆ ಟೆನ್ಶನ್​ ಆದ್ರೆ, ಈ ಸಂಸದರಿಗೆ ಬೆಣ್ಣೆ ಮಸಾಲೆ ದೋಸೆಯದ್ದೇ ಚಿಂತೆಯಂತೆ!

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾಗಿದೆ. ಆದರೆ ಸಂಸದ ತೇಜಸ್ವಿ ಸೂರ್ಯಗೆ ದೋಸೆಯದ್ದೇ ಚಿಂತೆ. ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಬರದೇ, ಸಂಸದ ತೇಜಸ್ವಿಗೆ ಹೋಟೆಲ್​ವೊಂದರ ದೋಸೆ ತುಂಬಾ ಟೆಂಪ್ಟ್ ಮಾಡ್ತಂತೆ. ಅಲ್ಲಿ ಹೋಗಿ ದೋಸೆ ತಿನ್ನುತ್ತಾ ವಿಡಿಯೋ ಮಾಡಿ ಅದನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಳೆ, ತೇಜಸ್ವಿ ಸೂರ್ಯ

ಮಳೆ, ತೇಜಸ್ವಿ ಸೂರ್ಯ

  • Share this:
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮಳೆ (Rain) ಯ ಅಬ್ಬರ ಹೆಚ್ಚಾಗಿದೆ. ಕೆರೆ,ನದಿ, ಹಳ್ಳ, ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿದೆ. ಅದೆಷ್ಟೋ ಹಳ್ಳಿಗಳು (Village) ಪ್ರವಾಹ (Flood) ದಿಂದ ಮುಳುಗಿವೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಕೂಡ ರಣ ಮಳೆಯಿಂದ ನಲುಗಿ ಹೋಗಿದೆ. ಎಲ್ಲಿ ನೋಡಿದರೂ ಮಳೆ ನೀರು ಕಾಣಿಸುತ್ತಿದೆ. ಬೆಳ್ಳಂದೂರು (Bellandur) , ಸರ್ಜಾಪುರ (Sarjapur) , ರೈನ್​ ಬೋ ಲೇಔಟ್ (Rain Bow Layout)​ ಸೇರಿ ಸಾಕಷ್ಟು ಏರಿಯಾಗಳು ಮುಳುಗಡೆಯಾಗಿದೆ. ಜನ ಸಾಮಾನ್ಯರು ರಣ ಮಳೆ ಅಬ್ಬರಕ್ಕೆ ಅಕ್ಷರಶಃ ನಲುಗಿಹೋಗಿದ್ದಾರೆ. ರಸ್ತೆಯಲ್ಲಿ ನಿಂತ ನೀರನ್ನು ಕಂಡು ತಮ್ಮ ಜನನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ, ನಮ್ಮ ಜನಪ್ರತಿನಿಧಿಗಳು ಈ ಬಗ್ಗೆ ಯಾಕೋ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಅಂತ ಅನ್ನಿಸುತ್ತಿದೆ. ಬೆಂಗಳೂರಿನ ಜನರು ಮಳೆ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇತ್ತ ನಮ್ಮ ಸಂಸದ (MP) ರೊಬ್ಬರಿಗೆ ದೋಸೆಯದ್ದೇ ಚಿಂತೆಯಂತೆ.

ದೋಸೆ ತಿನ್ನುತ್ತಾ ವಿಡಿಯೋ ಪೋಸ್ಟ್ ಮಾಡಿದ ತೇಜಸ್ವಿ!

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೂ ಒಂದು ಕಾರಣವಿದೆ.  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾಗಿದೆ. ಆದರೆ ಸಂಸದ ತೇಜಸ್ವಿ ಸೂರ್ಯಗೆ ದೋಸೆಯದ್ದೇ ಚಿಂತೆ. ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಬರದೇ, ಸಂಸದ ತೇಜಸ್ವಿಗೆ ಹೋಟೆಲ್​ವೊಂದರ ದೋಸೆ ತುಂಬಾ ಟೆಂಪ್ಟ್ ಮಾಡ್ತಂತೆ. ಅಲ್ಲಿ ಹೋಗಿ ದೋಸೆ ತಿನ್ನುತ್ತಾ ವಿಡಿಯೋ ಮಾಡಿ ಅದನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.


ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ ತೇಜಸ್ವಿ ವಿಡಿಯೋ!

ಪದ್ಮನಾಭನಗರದಲ್ಲಿ ಹೋಟೆಲ್​ವೊಂದಕ್ಕೆ ತೆರಳಿದ ತೇಜಸ್ವಿ ಬೆಣ್ಣೆ ಮಸಾಲೆ ದೋಸೆ ತಿನ್ನುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ಇಲ್ಲಿ ಬೆಣ್ಣೆ ದೋಸೆ ನೋಡಿ ನನಗೆ ಟೆಂಪ್ಟ್​ ಆಯ್ತು.  ದೋಸೆ ತುಂಬಾ ಚೆನ್ನಾಗಿದೆ. ನೀವೂ ಬನ್ನಿ, ತಿಂದಾಗಲೇ ಇದರ ಬಗ್ಗೆ ನಿಮಗೆ ತಿಳಿಯುತ್ತೆ. ಮನೆಯಲ್ಲಿ ದೋಸೆ ಮಾಡಿದಾಗ ಇಷ್ಟವಾಗುತ್ತಿರಲಿಲ್ಲ. ಇಲ್ಲಿ ಬಂದು ತಿನ್ನುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋನ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಜನ ನೀರಿನಲ್ಲಿ ಮುಳುಗಿ ಸಾಯುತ್ತಿದ್ದಾರೆ, ನಿಮಗೆ ದೋಸೆ ತಿನ್ನುವ ಚಿಂತೆ ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರೇ, ಮಳೆ ಸಮಸ್ಯೆ ಪರಿಹಾರಕ್ಕೆ ಈ ನಂಬರ್​ಗೆ ಕರೆ ಮಾಡಿ



ತೇಜಸ್ವಿ ಸೂರ್ಯನ ಈನಡೆಗೆ ಬೆಂಗಳೂರಿನ ಜನರ ಆಕ್ರೋಶ!

ಈ ವಿಡಿಯೋ ನೋಡಿ ಬೆಂಗಳೂರಿನ ಜನರು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಸದನಿಗೆ ಹಿಗ್ಗಾ - ಮುಗ್ಗಾ ಜಾಡಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಂಡೂ ಕೇಳರಿಯದ ಮಳೆ!

ಬೆಂಗಳೂರಿನಲ್ಲಿ ಕಂಡೂ ಕೇಳರಿಯದ ಮಳೆಗೆ ನಾಗರಿಕರು ಅಪಾರ ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆನೀರು ಹೊರಹೋಗಲು ಸರಿಯಾದ ವ್ಯವಸ್ಥೆ ಇಲ್ಲಿದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ.  ನಿಮ್ಮ ಮನೆ, ಬೀದಿ ಅಥವಾ ಏರಿಯಾದಲ್ಲಿ ಮಳೆಯಿಂದ ಯಾವುದೇ ಸಮಸ್ಯೆ ಉಂಟಾದಲ್ಲಿ ಬಿಬಿಎಂಪಿ ಸಹಾಯವಾಣಿಗೆ ಕರೆ ಮೂಲಕ ಮಾಹಿತಿ ನೀಡಬಹುದು. 1533 ಗೂ ಕರೆ ಮಾಡಿ ಮಳೆ ಅನಾಹುತ ಬಗ್ಗೆ ಮಾಹಿತಿ ನೀಡಬಹುದು. ಸಹಾಯಕ್ಕಾಗಿ ಮನವಿ ಮಾಡಬಹುದು.  ಅಥವಾ 2266 0000 ಸಂಖ್ಯೆಯನ್ನೂ ಸಂಪರ್ಕಿಸಬಹುದು.  WhatsApp ಮೂಲಕ  94806 85700 ಈ ಸಂಖ್ಯೆಗೆ ನಿಮ್ಮ ಸಮಸ್ಯೆ ತಿಳಿಸಬಹುದು.

ಇದನ್ನೂ ಓದಿ: ಬೆಂಗಳೂರು ಮಳೆ ಅವಾಂತರಕ್ಕೆ ಯುವತಿ ಬಲಿ; ವಿದ್ಯುತ್ ಸ್ಪರ್ಶಿಸಿ ಸಾವು


Published by:Vasudeva M
First published: