Arrested Cows: ಗಿಡ ತಿಂದ ತಪ್ಪಿಗೆ ಪೊಲೀಸರಿಂದ ಹಸುಗಳ ಅರೆಸ್ಟ್; ನಮ್ಮ ದನಗಳನ್ನು ಬಿಟ್ಟುಬಿಡುವಂತೆ ವೃದ್ಧೆಯರ ಕಣ್ಣೀರು

ಗಿಡ ತಿಂದ ತಪ್ಪಿಗೆ ಹಸುಗಳನ್ನು ಕಟ್ಟಿ ಹಾಕುವಂತೆ ಪಿಐ ಯೋಗೇಶ್​ ಸೂಚನೆ ನೀಡಿದ್ದಾರೆ. ಈ ಜರ್ಸಿ ಹಸುಗಳು ಸ್ಥಳೀಯ ವೃದ್ದೆಯೊಬ್ಬರಿಗೆ ಸೇರಿದೆ. ಜೀವನಕ್ಕೆ ಆಧಾರವಾಗಿದ್ದ ಹಸುಗಳನ್ನು ಬಿಡಿಸಿಕೊಡುವಂತೆ ವೃದ್ಧೆ ಕಣ್ಣೀರಿಟ್ಟಿದ್ದಾರೆ.

ಹಸುಗಳ ಬಂಧನ

ಹಸುಗಳ ಬಂಧನ

  • Share this:
ಹಾಸನ (ಜೂ 11): ಪೊಲೀಸ್ ಠಾಣೆ (Police )​ ಆವರಣದಲ್ಲಿ ಗಿಡಗಳನ್ನು ತಿಂದಿದ್ದಕ್ಕೆ ಪೊಲೀಸರು ಹಸುಗಳನ್ನೇ ಅರೆಸ್ಟ್​ (Arrested) ಮಾಡಿರೋ ಘಟನೆ ಹಾಸನದಲ್ಲಿ ನಡೆದಿದೆ. ಬೇಲೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ಹಸುಗಳನ್ನು (Cows) ವಶಕ್ಕೆ ಪಡೆದ ಪೊಲೀಸರು ಕಾಂಪೌಂಡ್​ ಒಳಗೆ ಕಟ್ಟಿ ಹಾಕಿದ್ದಾರೆ. ಗಿಡ ತಿಂದ ತಪ್ಪಿಗೆ ಹಸುಗಳನ್ನು ಕಟ್ಟಿ ಹಾಕುವಂತೆ ಸಿಪಿಐ ಯೋಗೇಶ್​ (Yogesh) ಸೂಚನೆ ನೀಡಿದ್ದಾರೆ. ಈ ಜರ್ಸಿ ಹಸುಗಳು ಸ್ಥಳೀಯ ವೃದ್ದೆಯೊಬ್ಬರಿಗೆ ಸೇರಿದೆ. ಜೀವನಕ್ಕೆ ಆಧಾರವಾಗಿದ್ದ ಹಸುಗಳನ್ನು ಬಿಡಿಸಿಕೊಡುವಂತೆ ವೃದ್ಧೆಯರು ಕಣ್ಣೀರಿಟ್ಟಿದ್ದಾರೆ.



ನನ್ನ ಹಸುಗಳನ್ನು ಬಿಡಿಸಿಕೊಡಿ ಎಂದು ವೃದ್ದೆ ಕಣ್ಣೀರು

ಜರ್ಸಿ ಹಸುಗಳು ಒಂದು ಹೊತ್ತಿಗೆ 10 ಲೀಟರ್​ ಹಾಲು ಕೊಡುತ್ತವೆ. ಇದನ್ನೇ ನಂಬಿ ನಾವು ಜೀವನ ಮಾಡ್ತಿದ್ದೇವೆ. ನಮ್ಮ ಕಣ್ತಪ್ಪಿ ಹಸು ಗಿಡ ತಿಂದಿರಬಹುದು, ಹಸುಗಳನ್ನ ಬಿಡಿ ಎಂದು ವೃದ್ದೆಯರು ಅಂಗಲಾಚುತ್ತಿದ್ದಾರೆ. ಬೇಕಂತಾ ಈ ರೀತಿ ಮಾಡುವುದಿಲ್ಲ ದಯವಿಟ್ಟು ನಮ್ಮ ಹಸುಗಳನ್ನು ಬಿಡಿ ಎಂದು ವೃದ್ಧೆ ಮನವಿ ಮಾಡಿಕೊಂಡಿದ್ದಾರೆ.

ವರದಿ ಪ್ರಸಾರವಾಗುತ್ತಿದ್ದಂತೆ ಹಸುಗಳನ್ನು ಬಿಟ್ಟ ಪೊಲೀಸರು

ನ್ಯೂಸ್ 18 ವರದಿ ಬಿತ್ತರಿಸುತ್ತಿದ್ದಂತೆ ಹಸುಗಳನ್ನು ಪೊಲೀಸರು ಠಾಣೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ಬಿಟ್ಟು ಕಳುಹಿಸಿದ್ದಾರೆ. ಇದೇ ವೇಳೆ ವೃದ್ಧೆಗೆ ಎಚ್ಚರಿಕೆಯನ್ನು ನೀಡಿದ್ದಾರೆ  ಪೊಲೀಸರು,  ಇನ್ನೊಮ್ಮೆ ಹಸುಗಳನ್ನು ಪೊಲೀಸ್ ಠಾಣೆ ಒಳಗೆ ಮೇಯಲು ಬಿಡದಂತೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Covid19: ದೇಶದಲ್ಲಿ ಕರೋನಾ ಮಹಾಸ್ಫೋಟ; 24 ಗಂಟೆಗಳಲ್ಲಿ 8,329 ಜನಕ್ಕೆ ತಗುಲಿದ ಸೋಂಕು

ನ್ಯೂಸ್ 18 ಗೆ ಧನ್ಯವಾದ ಸಲ್ಲಿಸಿದ ವೃದ್ದೆಯರು

ಪೊಲೀಸ್ ಠಾಣೆ ಆವರಣದಲ್ಲಿದ್ದ ಗಿಡಗಳನ್ನು ತಿಂದು ಹಾಕಿದ್ದ ಹಸುಗಳು, ಗಿಡಗಳನ್ನು ತಿಂದಿದ್ದಕ್ಕೆ ಹಸುಗಳನ್ನು ಕಟ್ಟಿ ಹಾಕಿದ್ದ ಪೊಲೀಸರು, ಸಿಪಿಐ ಆದೇಶಿಸಿದಂತೆ ಹಸುಗಳನ್ನು ಕಟ್ಟಿಹಾಕಲಾಗಿತ್ತು. ಹಸುಗಳನ್ನು ಬಿಡುವಂತೆ ಕಣ್ಣೀರ ಮನವಿ ಮಾಡಿದ್ದ ವೃದ್ದೆಯರು, ವರದಿ ಪ್ರಸಾರ ಮಾಡಿದ ನ್ಯೂಸ್ 18ಗೆ ಧನ್ಯವಾದ ಹೇಳಿದ್ದಾರೆ.

ನಿನ್ನೆ ಹಣದಾಸೆಗೆ ಗರ್ಭಿಣಿ ಹಸುವಿನ ಹತ್ಯೆ 

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಣದಾಸೆಗೆ ಗರ್ಭಿಣಿ ಹಸುವಿನ ಹತ್ಯೆ ಮಾಡಿರುವ ಅಮಾನವೀಯ ಕೃತ್ಯ ನಡೆದಿದೆ. ಹಸು ಕದ್ದು ಹತ್ಯೆ  ಮಾಡಿದ ಇಬ್ಬರು ಆರೋಪಿಗಳನ್ನು ಹೆಣ್ಣುರು ಪೋಲಿಸರು ಬಂಧಿಸಿದ್ದಾರೆ. ಬರ್ಕತ್, ಮೊಹಮದ್ ಇಮ್ರಾನ್ ಪಾಷಾ - ಇಬ್ಬರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸುಹೈಲ್ ಪರಾರಿಯಗಿದ್ದಾನೆ.

ಜೂನ್ 6ರಂದು ಹೆಚ್‌ಬಿಆರ್ ಲೇಔಟಿನಲ್ಲಿ ಬೆಳಗಿನ ಜಾವ ಪೊಲೀಸರು ಗಸ್ತಿನಲ್ಲಿದ್ದರು. ಈ ವೇಳೆ ಆಟೋದಲ್ಲಿ ಅನುಮಾನಸ್ಪದವಾಗಿ ಮೂವರು ವ್ಯಕ್ತಿಗಳು ಹೋಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಆಟೋ ನಿಲ್ಲಿಸುವಂತೆ ಸೂಚಿಸಿದಾಗ, ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ಬಳಿಕ ಚೇಸ್ ಮಾಡಿ ಬೀಟ್ ಪೊಲೀಸರು ಆಟೋ ನಿಲ್ಲಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಹಸು ಕಳ್ಳತನ ಬೆಳಕಿಗೆ ಬಂದಿದೆ.

ಹೆಣ್ಣೂರು ಗುಂಡು ತೋಪಿನ ಬಳಿ ಆರೋಪಿಗಳು ಮನೆ ಬಳಿ ಕಟ್ಟಿ ಹಾಕಿದ್ದ ಹಸು ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಬಳಿ ಹತ್ಯೆ ಮಾಡಿದ್ದ ಗರ್ಭಿಣಿ ಹಸು, ಚರ್ಮ ಹಾಗೂ ಅದರ ಕರುವಿನ ಮೃತದೇಹ ವಶಕ್ಕೆ ಪಡೆಯಾಲಾಗಿದೆ. ಹಸು ಹತ್ಯೆ ಮಾಡಿ ಆರೋಪಿಗಳು ಮಾಂಸದ ಅಂಗಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೀಟ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: CM Ibrahim: ಬಿಜೆಪಿಗೆ ಮತ ಹಾಕಿಸಿದ್ದೇ ಡಿಕೆಶಿ, ಸಿದ್ದು; ಯಡಿಯೂರಪ್ಪ ಜೊತೆ ನಡೆದಿದೆ ಡೀಲ್​- ಇಬ್ರಾಹಿಂ ಆರೋಪ

ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ, ಆಟೋ ಜಪ್ತಿ ಮಾಡಿದ್ದಾರೆ. ಪೊಲೀಸ್‌ ತನಿಖೆ ಮುಂದುವರೆದಿದ್ದು ಮತ್ತೊಬ್ಬ ಆರೋಪಿ ಸುಹೈಲ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Published by:Pavana HS
First published: