ಶಿವಮೊಗ್ಗ: 58 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ರಾಜ್ಯ ಸರ್ಕಾರದ (Karnataka Government) ಕಾಂತಾರ ಸಿನಿಮಾ (Kantara) ಬಿಡುಗಡೆಯಾದ ಮೇಲೆ ತಿಂಗಳಿಗೆ 2000 ಸಾವಿರ ರೂಪಾಯಿ ಮಾಸಾಶನ (Pension) ಘೋಷಣೆ ಮಾಡಿತ್ತು. ಸರ್ಕಾರದ ಕ್ರಮಕ್ಕೆ ಹಲವು ಕಲಾವಿದರು ಮೆಚ್ಚುಗೆ ಸೂಚಿಸಿ, ಈ ಸೌಲಭ್ಯ ಎಲ್ಲಾ ಜಾನಪದ ಕಲಾವಿದರಿಗೆ ನೀಡುವಂತೆ ಮನವಿ ಮಾಡಿದ್ದರು. ಸದ್ಯ ಈ ಕುರಿತಂತೆ ಕೆಪಿಸಿಸಿ (KPCC) ವಕ್ತಾರ ಬೇಳೂರು ಗೋಪಾಲಕೃಷ್ಣ (Belur Gopalakrishna) ಅವರು ಮಾತನಾಡಿದ್ದು, ಭೂತಕೋಲ ಮಾಡುವವರಿಗೆ ಮಾತ್ರ ಪಿಂಚಣಿ ನೀಡಿಲು ಸರ್ಕಾರ ಮುಂದಾಗಿದೆ. ನಮ್ಮಲ್ಲಿ ದೇವರು ಮೈಮೇಲೆ ಬರೋರಿಗೆ ಪಿಂಚಣಿ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದು, ಭಾರೀ ಮಳೆಯಿಂದ ಮನೆ ಕಳೆದುಕೊಂಡಿದ್ದ ಜನರಿಗೆ ಸರ್ಕಾರ ಇಂದಿಗೂ ಹಣ ಬಿಡುಗಡೆ ಮಾಡಿಲ್ಲ. ಇಷ್ಟು ಕೆಟ್ಟ ಸ್ಥಿತಿಯಲ್ಲಿ ಸರ್ಕಾರ ಇದೇ. ಆದರೆ ಈಗ ಚುನಾವಣೆ ಬರುತ್ತಿದೆ, ಆಗ ಬಿಜೆಪಿಯವರು ವಿರಾಟ್ ಸಮಾವೇಶ (BJP Virat Convention) ಅಂತ ಶುರು ಮಾಡುತ್ತಾರೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಕೈಮುಗಿದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ದಯಾಮಾಡಿ ರೈತರಿಗೆ ಸೇರಬೇಕಿರುವ ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜನರ ಮೇಲೆ ಇಷ್ಟೇಕೆ ಪ್ರೀತಿ?
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದ ಬೇಳೂರು ಗೋಪಾಲಕೃಷ್ಣ ಅವರು, ದಕ್ಷಿಣ ಕನ್ನಡದಲ್ಲಿ ಮಾತ್ರ ಭತ್ತಕ್ಕೆ ಹೆಚ್ಚುವರಿ ಬೆಂಬಲ ಬೆಲೆ ಯಾಕೆ? ಬೇರೆ ಕಡೆ ರೈತರು ಭತ್ತ ಬೆಳೆಯುವುದಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೇ, ಕಾಂತಾರ ಚಿತ್ರ ಬಂದ ಮೇಲೆ ಭೂತಕೋಲ ಮಾಡುವವರಿಗೂ ಪಿಂಚಣಿ ನೀಡಲು ಮುಂದಾಗಿದ್ದರೆ. ಆದರೆ ನಮ್ಮಲ್ಲಿ ದೇವರು ಮೈಮೇಲೆ ಬರೋರಿಗೆ ಪಿಂಚಣಿ ಏಕಿಲ್ಲ?
ಶಾದಿ ಭಾಗ್ಯ ಕೊಟ್ಟಾಗ ಬಿಜೆಪಿಯವರು ವಿರೋಧಿಸಿದರು. ಒಂದು ಜಾತಿಗೆ ಒಂದು ಭಾಗ್ಯ ನೀಡುವುದು ತಪ್ಪೇ? ದಕ್ಷಿಣ ಕನ್ನಡ ಜನರ ಮೇಲೆ ಇಷ್ಟೇಕೆ ಪ್ರೀತಿ? ಅವರು ಮಾತ್ರ ನಿಮಗೆ ವೋಟ್ ಹಾಕುವವರೇ? ಬೇರೆ ಜಿಲ್ಲೆಯವರು ಮತ ಹಾಕುವುದಿಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Nikhil Kumaraswamy: ಮಂಡ್ಯದಂತೆ ರಾಮನಗರದಲ್ಲೂ ನಿಖಿಲ್ ವಿರುದ್ಧ ರೆಡಿ ಆಗುತ್ತಾ ಚಕ್ರವ್ಯೂಹ? ಇವರೇನಾ BJP ಅಭ್ಯರ್ಥಿ?
ಡಿಕೆ ಶಿವಕುಮಾರ್ರನ್ನು ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ
ಬಿಜೆಪಿಯಿಂದ ಕೆಪಿಸಿಸಿ ಅಧ್ಯಕ್ಷರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಅಧಿಕಾರಿಗಳಿಂದ ದಾಳಿ ಮಾಡಿಸಿದ್ದಾರೆ. ಆದರೆ ಎಲ್ಲಾ ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಈಶ್ವರಪ್ಪ ಅವರಿಗೆ ಸಂಸ್ಥೆಗಳು ಇಲ್ಲವೇ? ಇಂತಹ ದ್ವೇಷ ರಾಜಕಾರಣ ಖಂಡನೀಯ.
ಶಾಸಕ ಹಾಲಪ್ಪ ಅವರು ಮೊನ್ನೆ ಶರಾವತಿ ಸಂತ್ರಸ್ತರಿಗೆ ನ್ಯಾಯ ಕೇಳಲು ಧರ್ಮಸ್ಥಳಕ್ಕೆ ಹೋಗಿದ್ದರು. ಇದು ಕಾಂತಾರ ಸಿನಿಮಾದ ಮಹಿಮೆ ಇರ್ಬೇಕು. ಸರ್ಕಾರದಿಂದ ಕೆಲಸ ಆಗದೆಂದು ದೇವರ ಮೊರೆ ಹೋಗಿದ್ದರು. ಇಂತಹ ಸರ್ಕಾರ ಇರಬೇಕಾ? ದೇವರ ಬಳಿ ಹೋಗಿದ್ದಾರೆ ಎಂದರೇ ಸರ್ಕಾರ ಇಲ್ಲ ಎಂದರ್ಥ ಅಲ್ಲವೇ. ಇನ್ನೆರಡು ತಿಂಗಳು ಬಿಟ್ಟರೆ ಮತ್ತೆ ಚುನಾವಣೆ ಬರುತ್ತೆ, ಸಂತ್ರಸ್ತರಿಗೆ ಇನ್ನೇನು ನ್ಯಾಯ ಕೊಡ್ತಾರೆ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿ ಭಿನ್ನಮತ ಈಗ ಶುರುವಾಗುತ್ತಿದೆ
ಮಾಜಿ ಸಿಎಂ ಯಡಿಯೂರಪ್ಪ ಮಗನನ್ನು ರಾಜ್ಯ ರಾಜಕಾರಣಕ್ಕೆ ಕರೆತರಲು ಕೆಎಸ್ ಈಶ್ವರಪ್ಪ, ಸಂತೋಷ್, ಸಿ.ಟಿ ರವಿ ಬಿಡುತ್ತಿಲ್ಲ. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಜೊತೆ ಮಾತನಾಡುತ್ತಿದ್ದಾರೆ ಎಂದರೇ ಭಿನ್ನಮತ ಸ್ಫೋಟ ಆಗುತ್ತೆ. ವಯಸ್ಸಿನ ಆಧಾರದಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬುವುದು ಈಶ್ವರಪ್ಪ ಅವರಿಗೂ ಗೊತ್ತು.
ಎಂ.ಪಿ ರೇಣುಕಾಚಾರ್ಯ ಸಹೋದರನ ಮಗನ ಸಾವಿನಲ್ಲೂ ರಾಜಕಾರಣ ಮಾಡಿದರು. ಅಪಘಾತದ ಸಹಜ ಸಾವು ಅಂತ ಪೊಲೀಸರೇ ಹೇಳಿದ್ದಾರೆ. ಸಾವಿನ ರಾಜಕೀಯ ಒಳ್ಳೆಯದಲ್ಲ. ರಾಜ್ಯ ಸರ್ಕಾರ ನಿದ್ರೆಯಲ್ಲಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: KS Eshwarappa: ಜಾರ್ಜ್ ಕೇಸ್ ಉದಾಹರಣೆ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದ ಈಶ್ವರಪ್ಪ
ಈವರೆಗೂ 22 ಮಂದಿ ಮಂಗನಕಾಯಿಲೆಗೆ ಸತ್ತಿದ್ದಾರೆ. ಆದರೆ ಯಾರೂ ಭಯಪಡಬೇಡಿ ಅಂತ ಶಾಸಕ ಹಾಲಪ್ಪ ಹೇಳುತ್ತಿದ್ದಾರೆ. ಮಂಗನಕಾಯಿಲೆಗೆ ಈವರೆಗೂ ಔಷಧಿ ಇಲ್ಲ. ಎಲೆ ಚುಕ್ಕಿ ರೋಗದಿಂದ ರೈತ ಹೈರಾಣಾಗಿದ್ದಾನೆ. ಎಲೆ ಚುಕ್ಕಿ ರೋಗದ ಬಗ್ಗೆ ಸಂಸದರು ಸಂಸತ್ತಿನಲ್ಲಿ ಮಾತಾಡಿದ್ದಾರೆ. ಈಗಲಾದರೂ ಮಾತನಾಡಿದರೂ ಅಂತ ಖುಷಿ ಆಯ್ತು.
ಆದರೆ ಅಡಿಕೆ ಆಮದು ಬಗ್ಗೆ ಏಕೆ ಮಾತಾಡಿಲ್ಲ? ಅಮಿತ್ ಶಾ ಅವರ ಗುಟ್ಕಾ ಕಂಪನಿ ಆಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಅವರ ವಿರುದ್ಧ ಮಾತನಾಡುವ ಧಮ್ ಇವರಿಗೆ ಇಲ್ಲ. ರಾಜ್ಯದ ರೈತರ ಮೇಲೆ ಅಮಿತ್ ಶಾ, ಕತ್ತಿ ಇಟ್ಟಿದ್ದಾರೆ ಎಂದರು.
ಕೆ.ಎಸ್ ಈಶ್ವರಪ್ಪ ಮತ್ತೊಮ್ಮೆ ಬಿಜೆಪಿಗೆ ಸೇರ್ಪಡೆಯಾಗಲಿ
ರಾಜ್ಯದಲ್ಲಿ ಎನ್ಇಪಿ ತರಾತುರಿಯಲ್ಲಿ ಜಾರಿ ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಬರುತ್ತೆ, ಆದರೆ ಪಠ್ಯ ಪುಸ್ತಕ ಇನ್ನೂ ಬಂದಿಲ್ಲ. ರಾಜ್ಯ ಸರ್ಕಾರಕ್ಕೆ ಧಮ್, ತಾಕತ್ತು ಇಲ್ಲ, ಇದು ದಿವಾಳಿ ಸರ್ಕಾರ ಎಂದರು.
ಡಾ.ಸರ್ಜಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿಯವರನ್ನೇ ಬಿಜೆಪಿಗೆ ಸೇರಿಸೋದಾ? ಈಶ್ವರಪ್ಪ ಅವರನ್ನೂ ಮತ್ತೊಮ್ಮೆ ಸೇರ್ಪಡೆ ಮಾಡಲಿ. ಅವರು ಭಿನ್ನಮತ ಶುರು ಮಾಡಿದ್ದಾರೆ, ಅವರಿಗೆ ಹಾರ ಹಾಕಿ ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ