High Court: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ: ಸೋಮನಾಥ ನಾಯಕ್​ಗೆ ಶಿಕ್ಷೆ ಖಾಯಂ

ಸಿವಿಲ್ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಧರ್ಮಸ್ಥಳದ ಬಗ್ಗೆ  ಅಪಪ್ರಚಾರ ಮಾಡುತ್ತಿದ್ದ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಜೈಲಿ ಶಿಕ್ಷೆ ಖಾಯಂಗೊಳಿಸಲಾಗಿದೆ.

ಧರ್ಮಸ್ಥಳ

ಧರ್ಮಸ್ಥಳ

  • Share this:
ಮಂಗಳೂರು, (ಮೇ 8):  ಕ್ಷೇತ್ರ ಧರ್ಮಸ್ಥಳ (Dharmasthala) ಹಾಗೂ ವೀರೇಂದ್ರ ಹೆಗ್ಗಡೆ (Veerendra Heggade) ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಕೆ. ಸೋಮನಾಥ ನಾಯಕ್‍ಗೆ (Somanath Nayak) ಹೈಕೋರ್ಟ್ ಜೈಲು ಶಿಕ್ಷೆ (Imprisonment) ಖಾಯಂಗೊಳಿಸಿದೆ. ಬೆಳ್ತಂಗಡಿ ಸಿವಿಲ್ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಧರ್ಮಸ್ಥಳದ ಬಗ್ಗೆ  ಅಪಪ್ರಚಾರ ಮಾಡುತ್ತಿದ್ದ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಅವರು, ತನಗೆ ಬೆಳ್ತಂಗಡಿ ನ್ಯಾಯಾಲಯ (Belthangadi Court) ವಿಧಿಸಿದ ಜೈಲು ಶಿಕ್ಷೆ, ಆಸ್ತಿ ಮುಟ್ಟುಗೋಲು ಹಾಗೂ ದಂಡನೆಯನ್ನು ರದ್ದುಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.

ಬೆಳ್ತಂಗಡಿ ಕೋರ್ಟ್​ ಆದೇಶವನ್ನು ಎತ್ತಿ ಹಿಡಿದ  ಸೋಮನಾಥ

ಎರಡೂ ಕಡೆಯ ವಾದ ಆಲಿಸಿದ ಉಚ್ಚ ನ್ಯಾಯಾಲಯವು ಮೇ 05 ರಂದು ತನ್ನ 148 ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿ ಬೆಳ್ತಂಗಡಿ ಸಿವಿಲ್ ನ್ಯಾಯಾಲಯಗಳ ಆದೇಶವನ್ನು ಎತ್ತಿ ಹಿಡಿದು ಸೋಮನಾಥ ನಾಯಕ್‍ರ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಸೋಮನಾಥ ನಾಯಕ್‍ರು ಹೆಗ್ಗಡೆಯವರ ವಿರುದ್ಧ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಸಹ ಉಲ್ಲಂಘಿಸಿ ಸುಳ್ಳು ಆರೋಪ ಮಾಡಿರುವುದು ಸಾಬೀತಾಗಿದೆ.

ಸೋಮನಾಥ್ ಆರೋಪಗಳೆಲ್ಲಾ ಸುಳ್ಳು

ಹೆಗ್ಗಡೆಯವರು ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿರುತ್ತಾರೆ ಎಂಬುವುದಾಗಿ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದ ದಾಖಲೆಗಳನ್ನು ಪರಾಮರ್ಶಿಸುವಾಗ ಹೆಗ್ಗಡೆಯವರು ಮತ್ತವರ ಕುಟುಂಬದವರು ತಮ್ಮ ಬಹಳಷ್ಟು ಆಸ್ತಿಗಳನ್ನು ಸಾಗುವಳಿದಾರರಿಗೆ ಬಿಟ್ಟುಕೊಟ್ಟಿರುವುದು ಕಂಡುಬಂದಿದೆ.

ದೇಶದ ಜನತೆ ಹೆಗ್ಗಡೆಯವರ ಬಗ್ಗೆ ಅಪಾರ ಗೌರವಿದೆ

ರಾಜ್ಯದೆಲ್ಲೆಡೆ ತುಳಿತಕ್ಕೊಳಗಾದವರ ಏಳಿಗೆಗಾಗಿ, ಮಹಿಳಾ ಸಬಲೀಕರಣಕ್ಕಾಗಿ, ಇನ್ನೂ ಹಲವಾರು ಸಮಾಜಮುಖಿ ಕೈಂಕರ್ಯಗಳನ್ನು ಹೆಗ್ಗಡೆಯವರು ಮಾಡುತ್ತಾ ಬಂದಿದ್ದಾರೆ. ಹೆಗ್ಗಡೆಯವರಿಗೆ ಅವರ ಸಮಾಜಮುಖಿ ಸೇವೆಗಳನ್ನು ಪರಿಗಣಿಸಿ ನಮ್ಮ ದೇಶದ ಸರಕಾರಗಳು ಪದ್ಮವಿಭೂಷಣ ಸಹಿತ ಹಲವಾರು ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ದೇಶದ ಜನತೆ ಹೆಗ್ಗಡೆಯವರನ್ನು ಧರ್ಮಾಧಿಕಾರಿಯೆಂದು ಗೌರವ ಭಾವನೆಯಿಂದ ಕಾಣುತ್ತಿದ್ದಾರೆ.

ಇದನ್ನೂ ಓದಿ: Sukri Gowda: ಮತ್ತೆ ಅಸ್ವಸ್ಥರಾದ ಪದ್ಮಶ್ರೀ ಸುಕ್ರಿಗೌಡ, ಮಂಗಳೂರು ಆಸ್ಪತ್ರೆಗೆ ದಾಖಲಾದ 'ಹಾಡುಹಕ್ಕಿ'

ನ್ಯಾಯಾಲಯದ ಆದೇಶ ಉಲ್ಲಂಘಿಸಿ ಆರೋಪ

ಹೆಗ್ಗಡೆಯವರ ಸಚ್ಚಾರಿತ್ರ್ಯಕ್ಕೆ ಹಾಗೂ ಕ್ಷೇತ್ರದ ಘನತೆಗೆ ದಕ್ಕೆ ತರುವ ದುರುದ್ದೇಶದಿಂದ ಸೋಮನಾಥ ನಾಯಕ್‍ರವರು ಎಗ್ಗಿಲ್ಲದೆ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನೂ ಸಹ ಉಲ್ಲಂಘಿಸಿ ಸುಳ್ಳು ಆರೋಪಗಳನ್ನು ಸಾರ್ವಜನಿಕ ಮಾಧ್ಯಮ ಹಾಗು ಜಾಲತಾಣಗಳಲ್ಲಿ ಮಾಡುತ್ತಿರುವುದು ಕ್ಷಮಾರ್ಹವಲ್ಲ. ಹೆಗ್ಗಡೆಯವರು ಹಾಗು ಅವರ ಕುಟುಂಬದವರ ವಿರುದ್ಧ ಆರೋಪ ಮಾಡುವುದರ ಹೊರತು ಸಮಾಜಕ್ಕೆ ತನ್ನ ಕೊಡುಗೆ ಏನು ಎಂಬುವುದನ್ನು ನ್ಯಾಯಾಲಯಕ್ಕೆ ತಿಳಿಸುವಲ್ಲಿ ಸಹ ಸೋಮನಾಥ ನಾಯಕ್ ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಇವ್ರ ಆರೋಪಗಳು ಕ್ಷಮೆಗೆ ಅರ್ಹವಾಗಿಲ್ಲ

ಹೆಗ್ಗಡೆಯವರ ಸಚ್ಚಾರಿತ್ರ್ಯಕ್ಕೆ ಹಾಗೂ ಕ್ಷೇತ್ರದ ಘನತೆಗೆ ದಕ್ಕೆ ತರುವ ದುರುದ್ದೇಶದಿಂದ ಸೋಮನಾಥ ನಾಯಕ್‍ರವರು ಎಗ್ಗಿಲ್ಲದೆ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನೂ ಸಹ ಉಲ್ಲಂಘಿಸಿ ಸುಳ್ಳು ಆರೋಪಗಳನ್ನು ಸಾರ್ವಜನಿಕ ಮಾಧ್ಯಮ ಹಾಗು ಜಾಲತಾಣಗಳಲ್ಲಿ ಮಾಡುತ್ತಿರುವುದು ಕ್ಷಮಾರ್ಹವಲ್ಲ. ಹೆಗ್ಗಡೆಯವರು ಹಾಗು ಅವರ ಕುಟುಂಬದವರ ವಿರುದ್ಧ ಆರೋಪ ಮಾಡುವುದರ ಹೊರತು ಸಮಾಜಕ್ಕೆ ತನ್ನ ಕೊಡುಗೆ ಏನು ಎಂಬುವುದನ್ನು ನ್ಯಾಯಾಲಯಕ್ಕೆ ತಿಳಿಸುವಲ್ಲಿ ಸಹ ಸೋಮನಾಥ ನಾಯಕ್ ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಸೋಮನಾಥ ನಾಯಕ್​ಗೆ ಜೈಲು ಶಿಕ್ಷೆ

ಈ ಪ್ರಕರಣದಲ್ಲಿ ನ್ಯಾಯಾಲಯದ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಕ್ಕಾಗಿ ಮತ್ತು ನ್ಯಾಯಾಲಯದ ಘನತೆಯನ್ನು ರಕ್ಷಿಸುವ ಸಲುವಾಗಿ ಹಾಗೂ ಸೋಮನಾಥ ನಾಯಕ್‍ರನ್ನು ಶಿಕ್ಷಿಸದಿದ್ದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಕಾನೂನಿನ ಉದ್ದೇಶ ಹಾಗು ಸಾಮಥ್ರ್ಯವನ್ನು ಸಾರುತ್ತಾ ಆದೇಶವನ್ನು ನೀಡಿದೆ.

ಇದನ್ನೂ ಓದಿ: Karwar: ಕಾರ್ಮಿಕ ಇಲಾಖೆ ಯೋಜನೆ ಪ್ರಚಾರಕ್ಕಾಗಿ ಹೊಸ ತಂತ್ರ, ಕಾರವಾರದಿಂದ ಬೆಂಗಳೂರಿನವರೆಗೂ ಸ್ಕೆಟಿಂಗ್!

ಪ್ರಕರಣದ ಎಲ್ಲ ಸಾಕ್ಷ್ಯಗಳನ್ನು ಹಾಗೂ ವಾಸ್ತವಾಂಶಗಳನ್ನು ತನಿಖಾ ಹಾಗೂ ಅಪರ ನ್ಯಾಯಾಲಯ ಕೂಲಂಕುಷವಾಗಿ ವಿರ್ಮಶಿಸಿದ ನಂತರ ಸದ್ರಿ ನ್ಯಾಯಾಲಯಗಳು ಸೋಮನಾಥ್ ನಾಯಕ್ ಎಸಗಿರುವ ಅಪರಾಧದ ತೀವ್ರತೆಯನ್ನು ಮನಗಂಡು ನೀಡಿರುವ ಶಿಕ್ಷೆ ನ್ಯಾಯಾಲಯದ ಘನತೆ ಹಾಗೂ ಹೆಗ್ಗಡೆಯವರ ಸಚ್ಚಾರಿತ್ರ್ಯಗಳ ರಕ್ಷಣೆ ನಿಟ್ಟಿನಲ್ಲಿ ಮಾಡಿರುವ ಕಾನೂನುರಿತ್ಯಾ ಪ್ರಬುದ್ಧವಾಗಿರುವ ಆದೇಶಗಳಾಗಿರುವುದಾಗಿ ಉದ್ಘೋಷಿಸಿದೆ.
Published by:Pavana HS
First published: