• Home
  • »
  • News
  • »
  • state
  • »
  • CID ತನಿಖೆಗೆ ಹರೀಶ್ ಪೂಂಜಾ ಜೀವ ಬೆದರಿಕೆ ಪ್ರಕರಣ; ಸರ್ಕಾರದಿಂದ ಅಧಿಕೃತ ಆದೇಶ

CID ತನಿಖೆಗೆ ಹರೀಶ್ ಪೂಂಜಾ ಜೀವ ಬೆದರಿಕೆ ಪ್ರಕರಣ; ಸರ್ಕಾರದಿಂದ ಅಧಿಕೃತ ಆದೇಶ

ಹರೀಶ್ ಪೂಂಜಾ

ಹರೀಶ್ ಪೂಂಜಾ

ಇದು ಕೊಲೆಯತ್ನ ಪ್ರಕರಣವಲ್ಲ, ಕಾರ್ ಓವರ್ ಟೇಕ್ ಮಾಡುವ ಭರದಲ್ಲಿ ನಡೆದ ಘಟನೆ ಎಂದು ದಕ್ಷಿಣ ಕನ್ನಡ ಎಸ್​ಪಿ ಸ್ಪಷ್ಟನೆ ನೀಡಿದ್ದರು.

  • News18 Kannada
  • Last Updated :
  • Bangalore [Bangalore], India
  • Share this:

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ (MLA Harish Poonja) ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆಯನ್ನು ಸಿಐಡಿಗೆ (MLA Harish Poonja Life Threat Case) ವಹಿಸಲಾಗಿದೆ. ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ ಪ್ರಕಟಿಸಿದೆ. ಫರಂಗಿಪೇಟೆ ಬಳಿ ಸ್ಕಾರ್ಪಿಯೊ ಕಾರಿನ ಚಾಲಕ ಅಡ್ಡಗಟ್ಟಿ ಬೆದರಿಕೆಯೊಡ್ಡಿದ್ದ ಬಗ್ಗೆ ದೂರು ನೀಡಲಾಗಿತ್ತು. ಶಾಸಕರ ಕಾರ್ ಡ್ರೈವರ್ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಆರೋಪಿ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇದು ಕೊಲೆಯತ್ನ ಪ್ರಕರಣವಲ್ಲ, ಕಾರ್ ಓವರ್ ಟೇಕ್ ಮಾಡುವ ಭರದಲ್ಲಿ ನಡೆದ ಘಟನೆ ಎಂದು ದಕ್ಷಿಣ ಕನ್ನಡ ಎಸ್​ಪಿ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಪ್ರಕರಣವನ್ನು ಸಿಐಡಿ ತನಿಖೆಗೆ (CID Investigation) ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.


ಏನಿದು ಪ್ರಕರಣ? 
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ಘಟನೆ ನಡೆದಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿತ್ತು. ರಾತ್ರಿ 11.30ರ ವೇಳೆಗೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಬೆಳ್ತಂಗಡಿಗೆ ಶಾಸಕ ಹರೀಶ್ ಪೂಂಜಾ (Belthangady MLA Harish Poonja) ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಶಾಸಕರ ಕಾರಿಗೆ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಆರೋಪಿಸಿದ್ದರು.


ತಮ್ಮ ಕಾರನ್ನು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತೆರಳುತ್ತಿದ್ದರು. ಹರೀಶ್ ಪೂಂಜಾ ತಮ್ಮ ಗೆಳೆಯರ ಕಾರಿನಲ್ಲಿ ಮುಂದೆ ಹೋಗುತ್ತಿದ್ದರೆ, ಶಾಸಕರ ಅಧಿಕೃತ ಕಾರು ಆ ಕಾರನ್ನು ಹಿಂಬಾಲಿಸುತ್ತಿತ್ತು. ಹರೀಶ್ ಪೂಂಜಾ ಅವರ ಅಧಿಕೃತ ವಾಹನ ಚಾಲಕ ಶಾಸಕರ ಕಾರನ್ನು ಚಲಾಯಿಸುತ್ತಿದ್ದರು. ಈ ಕಾರನ್ನು ತಡೆಗಟ್ಟಿದ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.


ಇದನ್ನೂ ಓದಿ: Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!


ಪಡೀಲ್​ನಿಂದ ಫರಂಗಿಪೇಟೆಯವರೆಗೆ ಕಾರು ಬೆನ್ನೆತ್ತಿದ ದುಷ್ಕರ್ಮಿಗಳು
ಈ ವೇಳೆ ಪಡೀಲ್​ನಿಂದ ಫರಂಗಿಪೇಟೆಯವರೆಗೆ ದುಷ್ಕರ್ಮಿಗಳ ತಂಡ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಬೆನ್ನಟ್ಟಿದೆ. ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯವಾಗಿ ಬೈದು ತಲವಾರು ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.


ಇದನ್ನೂ ಓದಿ: Rose Business: ಗುಲಾಬಿ ಬೆಳೆದು ಭರ್ಜರಿ ಆದಾಯ, ಖರ್ಚು ತೀರಾ ಕಡಿಮೆ!


ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶಾಸಕ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.


“ನನಗೆ ಜಿಹಾದಿಗಳಿಂದ ಬೆದರಿಕೆ ಇದೆ”
ನನಗೆ ಈ ಹಿಂದೆ ಯಾವುದೇ ರೀತಿಯ ಬೆದರಿಕೆ ಇರಲಿಲ್ಲ. ನಾನೊಬ್ಬ ಹಿಂದೂ ಕಾರ್ಯಕರ್ತನಾಗಿ ಈಗ ಶಾಸಕನಾಗಿದ್ದೇನೆ ಅಂತ ಹರೀಶ್ ಪೂಂಜಾ ಹೇಳಿದ್ದಾರೆ. ಘಟನೆ ಬಗ್ಗೆ ಮಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಜಿಹಾದಿ ಮಾನಸಿಕತೆಯ ಜನರನ್ನು ನಾನು ಯಾವತ್ತೂ ವಿರೋಧಿಸುತ್ತೇನೆ. ಈ ಘಟನೆಯಿಂದ ನನಗೆ ಇನ್ನಷ್ಟು ಕೆಲಸ‌ ಮಾಡಲು ಶಕ್ತಿ ಕೊಟ್ಟಿದೆ, ಇನ್ನು ನಾನು ಹಿಂದುತ್ವದ ಪರವಾಗಿ ಕೆಲಸ ಮಾಡುವ ಶಾಸಕ. ಇದಕ್ಕಾಗಿ ಜಿಹಾದಿ ಶಕ್ತಿಗಳು ನನ್ನ ಮೇಲೆ ಹಗೆ ಸಾಧಿಸುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಹಿಂದುತ್ವದ ವಿಚಾರದಲ್ಲಿ ರಾಜಿಯಿಲ್ಲ ಅಂತ ಅವರು ಸ್ಪಷ್ಟಪಡಿಸಿದ್ದಾರೆ.


ಘಟನೆ ಬಗ್ಗೆ ಶಾಸಕರು ಹೇಳಿದ್ದೇನು?
ಇನ್ನು ಘಟನೆಯನ್ನು ಶಾಸಕರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನಿಂದ ಬಂದು ಬೆಳ್ತಂಗಡಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ರಾತ್ರಿ ಸುಮಾರು 11 ಗಂಟೆ ವೇಳೆಗೆ ದಾಳಿ ಸಂದರ್ಭದಲ್ಲಿ ನಾನು ನನ್ನ ಸ್ನೇಹಿತನ ಕಾರಿನಲ್ಲಿದ್ದೆ. ದಾಳಿ ನಡೆಸಲು ಬಂದಿದ್ದ ಆರೋಪಿಗಳು ಮೊದಲು ನನ್ನ ಇನ್ನೋವಾ ಕಾರಿನ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಆ ಕಾರಿನಲ್ಲಿ ನಾನು ಇಲ್ಲದ ಕಾರಣ ಮತ್ತೆ ನಾನಿದ್ದ ಹುಂಡೈ ಐ-20 ಕಾರಿನ ಮೇಲೆ ದಾಳಿ ನಡೆಸಲಾಗಿದೆ ಎಂದಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: