• Home
  • »
  • News
  • »
  • state
  • »
  • Harish Poonja: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರ್ ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ದುಷ್ಕರ್ಮಿಗಳು!

Harish Poonja: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರ್ ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ದುಷ್ಕರ್ಮಿಗಳು!

ಹರೀಶ್ ಪೂಂಜಾ

ಹರೀಶ್ ಪೂಂಜಾ

ಪಡೀಲ್​ನಿಂದ ಫರಂಗಿಪೇಟೆಯವರೆಗೆ ದುಷ್ಕರ್ಮಿಗಳ ತಂಡ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಬೆನ್ನಟ್ಟಿದೆ. ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯವಾಗಿ ಬೈದು ತಲವಾರು ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

  • News18 Kannada
  • Last Updated :
  • Mangalore, India
  • Share this:

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Poonja) ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ಘಟನೆ ನಡೆದಿದೆ. ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಿನ್ನೆ ರಾತ್ರಿ 11.30ರ ವೇಳೆಗೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ (Bengaluru To Mangaluru) ಆಗಮಿಸಿ ಬೆಳ್ತಂಗಡಿಗೆ ಶಾಸಕ ಹರೀಶ್ ಪೂಂಜಾ (Belthangady MLA Harish Poonja) ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಶಾಸಕರ ಕಾರಿಗೆ ಬೆದರಿಕೆ ಹಾಕಿದ್ದಾರೆ.


ದಾಖಲಾದ ದೂರಿನ ಎಫ್​ಐಆರ್ ಕಾಪಿ


ತಮ್ಮ ಕಾರನ್ನು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತೆರಳುತ್ತಿದ್ದರು. ಹರೀಶ್ ಪೂಂಜಾ ತಮ್ಮ ಗೆಳೆಯರ ಕಾರಿನಲ್ಲಿ ಮುಂದೆ ಹೋಗುತ್ತಿದ್ದರೆ, ಶಾಸಕರ ಅಧಿಕೃತ ಕಾರು ಆ ಕಾರನ್ನು ಹಿಂಬಾಲಿಸುತ್ತಿತ್ತು. ಹರೀಶ್ ಪೂಂಜಾ ಅವರ ಅಧಿಕೃತ ವಾಹನ ಚಾಲಕ ಶಾಸಕರ ಕಾರನ್ನು ಚಲಾಯಿಸುತ್ತಿದ್ದರು. ಈ ಕಾರನ್ನು ತಡೆಗಟ್ಟಿದ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ


ಪಡೀಲ್​ನಿಂದ ಫರಂಗಿಪೇಟೆಯವರೆಗೆ ಕಾರು ಬೆನ್ನೆತ್ತಿದ ದುಷ್ಕರ್ಮಿಗಳು
ಈ ವೇಳೆ ಪಡೀಲ್​ನಿಂದ ಫರಂಗಿಪೇಟೆಯವರೆಗೆ ದುಷ್ಕರ್ಮಿಗಳ ತಂಡ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಬೆನ್ನಟ್ಟಿದೆ. ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯವಾಗಿ ಬೈದು ತಲವಾರು ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.


ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶಾಸಕ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಿಜೆಪಿ ಮತ, ಅಧಿಕಾರಕ್ಕಾಗಿ ಎಂದೂ ಪಾದಯಾತ್ರೆ ಮಾಡಿಲ್ಲ; ಬಿ ಸಿ ನಾಗೇಶ್ ಹೇಳಿಕೆ


ಬಿಜೆಪಿಯ ಯಾತ್ರೆಗಳನ್ನು ಕಾಪಿ ಮಾಡಿ ಕಾಂಗ್ರೆಸ್ ಪಕ್ಷ  ಈಗ ಪಾದಯಾತ್ರೆ ನಾಟಕ ಆಡುತ್ತಿದೆ. ಕಾಂಗ್ರೆಸ್​​ಗೆ ದೇಶದ ಜನತೆ ತಕ್ಕ ಉತ್ತರ ನೀಡಿ ಭಾರತ್ ಚೋಡೊ ಎನ್ನುವ ಸ್ಥಿತಿ ಮಾಡಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ವ್ಯಂಗ್ಯವಾಡಿದರು. ಮಡಿಕೇರಿಯ ಹೊರವಲಯದಲ್ಲಿ ಸರ್ಕಾರಿ ಗೋಶಾಲೆ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್​​ನವರಿಗೆ ಜನರು ಹೇಗಿದ್ದಾರೆ, ಅವರ ಸ್ಥಿತಿ ಎನ್ನುವುದು ಗೊತ್ತಿಲ್ಲ ಎಂದು ಟೀಕಿಸಿದರು.


ಇದ್ನನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


ಟೀ ಅಂಗಡಿ ಹೇಗಿರುತ್ತೆ, ಅವರ ಪರಿಸ್ಥಿತಿ ಎಂತಹದ್ದು ಅಂತ ಗೊತ್ತಿರಲಿಲ್ಲ. ಮಕ್ಕಳು ಹೇಗೆ ಬೆಳೆಯುತ್ತವೆ ಎನ್ನುವುದು ಗೊತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ನವರು ಈಗ ಎಲ್ಲವನ್ನು ನೋಡುತ್ತಿದ್ದಾರೆ. ಆದರೆ ಬಿಜೆಪಿಯವರಿಗೆ ಪಾದಯಾತ್ರೆಗಳು ಹೊಸದಲ್ಲ. ಮುರಳಿ ಮನೋಹರ ಜೋಷಿ ಅವರಾಗಲಿ, ಎಲ್ ಕೆ ಅಡ್ವಾಣಿ ಅವರಾಗಲಿ ಇಂತಹ ಹತ್ತಾರು ಯಾತ್ರೆಗಳನ್ನು ಮಾಡಿದ್ದರು. ಆದರೆ ಬಿಜೆಪಿ ಎಂದು ವೋಟಿಗಾಗಿ ಆಗಲಿ ಅಧಿಕಾರಕ್ಕಾಗಿ ಆಗಲಿ ಯಾತ್ರೆಗಳನ್ನು ಮಾಡಲಿಲ್ಲ. ನಮ್ಮ ಹಲವು ಯಾತ್ರೆಗಳನ್ನು ಅವರು ಕಾಪಿ ಮಾಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.


ವಾಲ್ಮೀಕಿ ಅವರಿಗೆ ಅಪಮಾನ
ಕೊನೆ ಪಕ್ಷ ರಾಜ್ಯದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಅಥವಾ ಡಿಕೆಶಿ ಇಲ್ಲವೇ ತುಮಕೂರು ಜಿಲ್ಲೆಯವರೇ ಆದ ಜಿ. ಪರಮೇಶ್ವರ್ ಅವರಾದರೂ ತಿರುಗಿ ನೋಡಲಿಲ್ಲ. ಆ ಮೂಲಕ ವಾಲ್ಮೀಕಿ ಅವರಿಗೆ ಮತ್ತು ಜನರಿಗೆ ಅಪಮಾನ ಮಾಡಿದ್ದಾರೆ ಎಂದರು.


ಇದನ್ನೂ ಓದಿ: Karnataka Politics: ಸಿಎಂಗೆ 'ಬ್ರ್ಯಾಂಡೆಡ್ ಟೀ' ಮಾತ್ರ ಕೊಡಿ, ದಲಿತ ಕುಟುಂಬಕ್ಕೆ ಅಧಿಕಾರಿಗಳ ಸೂಚನೆ: ವಿಡಿಯೋ ವೈರಲ್!


ಇಷ್ಟು ವರ್ಷ ರಾಜ್ಯದಲ್ಲಿ ಎಸ್​​ಸಿ, ಎಸ್​ಟಿ ಮೀಸಲಾತಿಯನ್ನು ಕಾಂಗ್ರೆಸ್ ಅವರಿಗೆ ಹೆಚ್ಚಿಸಲು ಆಗಿರಲಿಲ್ಲ. ನಮ್ಮ ಸರ್ಕಾರ ಅದನ್ನು ಮಾಡಿದೆ ಎಂದರು.

ಮುಸ್ಲಿಮರು ಕಾಂಗ್ರೆಸ್ ಬಿಡ್ತಿದ್ದಾರೆ
ಕಾಂಗ್ರೆಸ್ ಅನ್ನು ಮುಸಲ್ಮಾನರು ಬಿಡುವುದಿಲ್ಲ ಎಂದುಕೊಂಡಿದ್ದರು. ಆದರೆ ಮುಸ್ಲಿಮರು ಕಾಂಗ್ರೆಸ್ ಬಿಡಲು ಶುರು ಮಾಡಿದರು. ಜೊತೆಗೆ ಸಾಕಷ್ಟು ಕಾಂಗ್ರೆಸ್ ಮುಖಂಡರು ಪಕ್ಷ ಬಿಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಜೋಡಿಸಲು ಮುಂದಾಗಿದೆ. ಅದಕ್ಕಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಆರ್ ಎಸ್ಎಸ್ ಮತ್ತು ಸಾವರ್ಕರ್ ಅವರನ್ನು ಬೈಯಲು ಶುರು ಮಾಡಿದ್ದಾರೆ ಎಂದರು.

Published by:ಗುರುಗಣೇಶ ಡಬ್ಗುಳಿ
First published: