Bellary VIMS Case: ಸಾವನ್ನಪ್ಪಿದ್ದು ಇಬ್ಬರು, ಮತ್ತೊಬ್ಬರು ವೆಂಟಿಲೇಟರ್​ನಲ್ಲಿ ಇರಲಿಲ್ಲ-ಸುಧಾಕರ್​

ತನಿಖಾ ಸಮಿತಿ ನೀಡುವ ವರದಿ ನಂತರ ಕ್ರಮಕೈಗೊಳ್ಳಲಾಗುವುದು. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮಕೈಗೊಳ್ಳಲಾಗುವುದು. ಎಂದು ಆರೋಗ್ಯ ಸಚಿವ ಸುಧಾಕರ್​ ಹೇಳಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

  • Share this:
ಬಳ್ಳಾರಿ ವಿಮ್ಸ್​ನಲ್ಲಿ(Bellary VIMS Case) ಸಂಭವಿಸಿದ ದುರ್ಘಟನೆ ಬಗ್ಗೆ ಬಿಜೆಪಿ ಸರ್ಕಾರದ (BJP Government) ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ವು. ಇಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ (Sudhakar) ವಿಮ್ಸ್ ಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದಿದ್ದಾರೆ.  ಸುಧಾಕರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು (Sri Ramulu) ಸಾಥ್ ನೀಡಿದ್ರು. ಸಭೆ ವೇಳೆ ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ, ಡಿಸಿ ಪವನಕುಮಾರ್ ಮಾಲಪಾಟಿ ಸೇರಿದಂತೆ ಹಲವರನ್ನು ಸಚಿವ ಸುಧಾಕರ್ ತರಾಟೆಗೆ ತೆಗೆದುಕೊಂಡಿದ್ದಾರೆ. 

ವೆಂಟಿಲೇಟರ್​ ನಲ್ಲಿ ಸತ್ತಿದ್ದು ಇಬ್ಬರು !

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಚಿವ ಸುಧಾಕರ್​, ಸಾವಾಗಿರೋದು ಇಬ್ಬರು ಮಾತ್ರ ಮತ್ತೊಬ್ಬರು ವೆಂಟಿಲೇಟರ್​ನಲ್ಲೇ ಇರಲಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಘಟನೆ ಆಗಿದ್ದರೆ ಉಳಿದವರಿಗೂ ಸಮಸ್ಯೆಯಾಗಬೇಕಿತ್ತು. ವೆಂಟಿಲೇಟರ್​ನಲ್ಲಿದ್ದ ಉಳಿದ ರೋಗಿಗಳಿಗೂ ಸಮಸ್ಯೆಯಾಗುತ್ತಿತ್ತು. ಅಂದು ಬೆಳಗ್ಗೆ 8.30ಕ್ಕೆ ಪವರ್ ಹೋಗಿ ಬೆಳಗ್ಗೆ 9.30ಕ್ಕೆ ಬಂದಿದೆ. ಈ ಬಗ್ಗೆ ವೈದ್ಯಾಧಿಕಾರಿಗಳು ದಾಖಲೆ ನೀಡಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಇತ್ತು. ಮೆದುಳಿನಲ್ಲಿ ರಕ್ತಸ್ರಾವ ಆಗಿದೆ. ಬಿಪಿ ಕೂಡ ಹೆಚ್ಚಾಗಿದೆ. ರೋಗಿಯ ಸ್ಥಿತಿಯ ಸಂಬಂಧಿಕರೊಂದಿಗೆ ವೈದ್ಯಾಧಿಕಾರಿಗಳು ಮಾತನಾಡಿದ್ದಾರೆ ಎಂದರು.‌ಸೆ 14 ರಂದು 9. 45 ಕ್ಕೆ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣದ ಬಗ್ಗೆ ನಾನು ಈಗಲೇ ಹೇಳುವುದಿಲ್ಲ. ಈಗಾಗಲೇ ಈ ಬಗ್ಗೆ ಉನ್ನತ ಮಟ್ಟದ ಸಮಿತಿ ತನಿಖೆ ನಡೆಯುತ್ತಿದೆ. 30 ವರ್ಷದ ಮಹಿಳೆ ಹಾವು ಕಚ್ಚಿದ್ದರಿಂದ ಸೆ 13 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ.

ತಪ್ಪಿತಸ್ಥರು ಯಾರಾದ್ರೂ ಬಿಡೋದಿಲ್ಲ

ನಿರ್ದೇಶಕರು ಹೇಳಿದ ಷಡ್ಯಂತ್ರದ ಬಗ್ಗೆಯೂ ತನಿಖೆ ನಡೆಯಲಿದೆ. ದುರಂತದ ಬಗ್ಗೆ ಸರ್ಕಾರ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ತನಿಖಾ ಸಮಿತಿ ನೀಡುವ ವರದಿ ನಂತರ ಕ್ರಮಕೈಗೊಳ್ಳಲಾಗುವುದು. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮಕೈಗೊಳ್ಳಲಾಗುವುದು. ಎಂದು ಆರೋಗ್ಯ ಸಚಿವ ಸುಧಾಕರ್​ ಹೇಳಿದರು.

ಸಾವಿನ ಹಿಂದೆ ಷಡ್ಯಂತ್ರವಿದೆ ಎಂದು ಹೇಳಿರುವುದು ತಪ್ಪು

ವಿಮ್ಸ್ ನಿರ್ದೇಶಕರನ್ನು ನಾನು ನೇಮಿಸಿಲ್ಲ, ಅದಕ್ಕಾಗಿ ಸಮಿತಿಯಿದೆ. ಆ ಸಮಿತಿಯೇ ವಿಮ್ಸ್ ಆಸ್ಪತ್ರೆಗೆ ನಿರ್ದೇಶಕರನ್ನು ಆಯ್ಕೆ ಮಾಡಿದೆ. ರೋಗಿಗಳ ಸಾವಿನ ಹಿಂದೆ ಷಡ್ಯಂತ್ರವಿದೆ ಎಂದು ಹೇಳಿರುವುದು ತಪ್ಪು. ಜಿಲ್ಲಾಡಳಿತ, ಸಚಿವರು, ತನಿಖಾ ಸಂಸ್ಥೆ ಮುಂದೆ ಅವರು ಹೇಳಬೇಕಿತ್ತು. ವಿಮ್ಸ್ ದುರಂತದ ಬಗ್ಗೆ ತನಿಖಾ ಸಂಸ್ಥೆಯಿಂದ ವರದಿ ಬರಬೇಕಾಗಿದೆ. ತನಿಖಾ ಸಂಸ್ಥೆಯವರು ಜೆಸ್ಕಾಂ ಸಹಾಯ ಕೇಳಿದ್ದಾರೆ. ಅವರಿಗೆ ಜೆಸ್ಕಾಂ ಇಂಜಿನಿಯರ್​ ಒಬ್ಬರನ್ನು ನೇಮಕ ಮಾಡಲಾಗಿದೆ ಎಂದು ಸುಧಾಕರ್​  ಹೇಳಿದ್ದಾರೆ.ಶ್ರೀರಾಮುಲು ಸದನದಲ್ಲಿ ಉತ್ತರ ಕೊಟ್ಟಿದ್ದಾರೆ

ಆರೋಗ್ಯ ಸಮಸ್ಯೆಯಿಂದ ನಾನು ಸದನಕ್ಕೆ ಹೋಗಿರಲಿಲ್ಲ. ನನ್ನ ಪರವಾಗಿ ಸಚಿವ ಶ್ರೀರಾಮುಲು ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ಸತ್ಯವನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ರಾಜ್ಯದ ಜನರಿಗೆ ಸತ್ಯ ಗೊತ್ತಾಗಬೇಕು ಅನ್ನೋದು ನಮ್ಮ ಉದ್ದೇಶವಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖೆ ಸಮಿತಿ ಮಾಡಿದ್ದೇವೆ. ತನಿಖಾ ಸಮಿತಿ ಕೂಡ ವಿಮ್ಸ್​ಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದ್ರು. ಇನ್ನು ಸಭೆ ಬಳಿಕ ಡಾ. ಕೆ ಸುಧಾಕರ್ ಕೇಬಲ್ ಬ್ಲಾಸ್ಟ್ ಆಗಿದ್ದ ಸ್ಥಳ ನೋಡಿದ್ರು. ಹಾಗೆಯೇ ಸಮಸ್ಯೆ ಉಂಟಾಗಿದ್ದ ಐಸಿಯುಗೂ ತೆರಳಿ ಸ್ಥಳ ಪರಿಶೀಲನೆ ಜೊತೆ ವಾಸ್ತವ ಪರಿಸ್ಥಿತಿಯ ಪರಿಶೀಲನೆ ಮಾಡಿದ್ರು.

Published by:ಪಾವನ ಎಚ್ ಎಸ್
First published: