ಬಳ್ಳಾರಿಯಲ್ಲಿ ಕೈ ಅಭ್ಯರ್ಥಿ ಉಗ್ರಪ್ಪ ಅವರಿಗೆ ರಾಮುಲು ‘ಬಸ್ತಿ ಮೇ ಸವಾಲ್’

ಬಳ್ಳಾರಿಯಲ್ಲಿ ಈ ಬಾರಿ ಹೆಚ್ಚೇನು ಓದು ಕಲಿಯದ ಅಭ್ಯರ್ಥಿ ಬಿಜೆಪಿಯವರಿಗೆ ಸಿಕ್ಕಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ಇದಕ್ಕೆ ಶ್ರೀರಾಮುಲು ಬಿಜೆಪಿ ಸಮಾವೇಶದಲ್ಲಿ ಉಗ್ರಪ್ಪಗೆ ಬಸ್ತಿ ಮೆ ಸವಾಲ್ ಹಾಕಿದ್ದಾರೆ.

news18
Updated:April 5, 2019, 3:44 PM IST
ಬಳ್ಳಾರಿಯಲ್ಲಿ ಕೈ ಅಭ್ಯರ್ಥಿ ಉಗ್ರಪ್ಪ ಅವರಿಗೆ ರಾಮುಲು ‘ಬಸ್ತಿ ಮೇ ಸವಾಲ್’
ಶ್ರೀರಾಮುಲು
  • News18
  • Last Updated: April 5, 2019, 3:44 PM IST
  • Share this:
ಬಳ್ಳಾರಿ: ಈ ಬಾರಿ ಮಂಡ್ಯ ಲೋಕಸಭೆ ಚುನಾವಣೆಯ ವಾಗ್ಸಮರ ಬಲು ಜೋರಾಗಿದೆ. ಇದಕ್ಕೇನು ಕಡಿಮೆ ಇಲ್ಲವೆಂಬಂತೆ ಬಳ್ಳಾರಿಯಲ್ಲಿಯೂ ಕೈ, ಕಮಲ ಸಮಾವೇಶಗಳಲ್ಲಿ ಸವಾಲುಗಳ ಮೇಲೆ ಸವಾಲುಗಳು ಬಿಸಿ ಹೆಚ್ಚಿಸುತ್ತಿವೆ. ಬಿಜೆಪಿ ಈ ಬಾರಿ ಅಳೆದು ತೂಗಿ ಕೊನೆಗೆ ಜಾರಕಿಹೊಳಿ ಸಹೋದರರ ಸಂಬಂಧಿ ವೈ. ದೇವೇಂದ್ರಪ್ಪ ಅವರನ್ನ ಕಾಂಗ್ರೆಸ್​ನಿಂದ ಕರೆತಂದು ತನ್ನ ಅಭ್ಯರ್ಥಿಯನ್ನಾಗಿ ಮಾಡಿತು.

ಇದನ್ನೂ ಓದಿ: ಐಟಿ ದಾಳಿ ವೇಳೆ ಸಿಎಂ ಕುಮಾರಸ್ವಾಮಿ ಆಪ್ತನ ಬಳಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ ರೂ!

ಇವರು ನಮ್ಮಿಂದ ಕರೆತಂದವರು ಎಂದು ಕಾಂಗ್ರೆಸ್ ಪಾಳಯದ ನಾಯಕರು ಮೊದಮೊದಲು ಹೀಗಳೆಯುತ್ತಿದ್ದರು. ನಮ್ಮ ಅಭ್ಯರ್ಥಿ ವಿಎಸ್ ಉಗ್ರಪ್ಪ ಸಂಸದೀಯ ಪಟು, ಉತ್ತಮ ಭಾಷಣಕಾರ, ಅನುಭವಿ ರಾಜಕಾರಣಿ ಎಂದು ಹೋದಲ್ಲೆಲ್ಲ ಕೈ ನಾಯಕರು ಹೇಳಿಕೊಂಡು ಓಡಾಡುತ್ತಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಮುಂದುವರೆದು ಈಗಿನ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ವಿದ್ಯಾವಂತರೇ? ಓದಿದ್ದಾರೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಕುಟುಂಬದ ವಿರುದ್ದ ನನ್ನ ಹೋರಾಟ; ಕಾಂಗ್ರೆಸ್​ ಮುಖಂಡ, ಮಾಜಿ ಸಚಿವ ಎಚ್​.ಎಂ. ವಿಶ್ವನಾಥ್

ಇದಕ್ಕೆ ಕಮಲ ಪಾಳಯದ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ನಮ್ಮ ಅಭ್ಯರ್ಥಿ ಹೆಚ್ಚು ಓದಿಲ್ಲದೇ ಇರಬಹುದು. ಆದರೆ ದೇವೇಂದ್ರಪ್ಪ ಹೇಳಿದಷ್ಟು ವಚನಗಳನ್ನು ಉಗ್ರಪ್ಪ ಹೇಳಲಿ ಎಂದು ಬಿಜೆಪಿ ಸಮಾವೇಶದಲ್ಲಿ ಬಹಿರಂಗವಾಗಿಯೇ ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ: 2014 ಚುನಾವಣೆಗಿಂತ ಈ ಬಾರಿ ಶೇ.15 ಹೆಚ್ಚು ಮತ ಪಡೆಯುತ್ತೇವೆ; ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಈಗಾಗಲೇ ನಾಮಪತ್ರ ಸಲ್ಲಿಸಿ ಬಳ್ಳಾರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಮತದಾರ ಪ್ರಭುಗಳ ಮುಂದೆ ಮತಯಾಚನೆ ಮಾಡುತ್ತಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಇದರ ಅಂಗವಾಗಿ ಕೈಕಮಲ ನಾಯಕರು ವಾಕ್ಸಮರ ಮುಂದುವರೆಸಿದ್ದಾರೆ. ಕಳೆದ ಬಳ್ಳಾರಿ ಉಪ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಮೂದಲಿಸಿದ್ದ ಸಿದ್ರಾಮಯ್ಯ, ರಾಮುಲುಗೆ ಸರಿಯಾಗಿ ಕನ್ನಡ ಮಾತಾಡಲು ಬರಲ್ಲ, ಒತ್ತಕ್ಷರಗಳನ್ನು ಹೇಳಲು ಬರಲ್ಲ ಎಂದಿದ್ದರು. ನಮ್ಮ ಭಾಷೆನೇ ಹಿಂಗೆ ಇರೋದು ಎಂದು ಒತ್ತಕ್ಷರಗಳನ್ನು ಸಮರ್ಪಕವಾಗಿ ಉಚ್ಚರಿಸಿ ರಾಮುಲು ತಿರುಗೇಟು ನೀಡಿದ್ದರು. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಹೊರಗಡೆಯವರು ಎಂದೇಳಿ ಬಿಜೆಪಿಯವರು ಪ್ರಚಾರ ಮಾಡಿದ್ದರು. ಇದೀಗ ಏಳನೇ ತರಗತಿ ಓದಿರುವ ಕಮಲ ಅಭ್ಯರ್ಥಿ ದೇವೇಂದ್ರಪ್ಪ ವಿರುದ್ಧ ಅವಿದ್ಯಾವಂತ ಅಸ್ತ್ರವನ್ನು ಕೈ ಪಾಳಯ ಪ್ರಯೋಗಿಸುತ್ತಿದೆ. ಇದಕ್ಕೆ ಪ್ರತಿಯಾಗಿ ದೇವೇಂದ್ರಪ್ಪ ಅವರಿಗಿರುವ ವಚನ ಜ್ಞಾನ, ಸರಾಗವಾಗಿ ವಚನಗಳನ್ನು ಹೇಳುವುದನ್ನು ನೋಡಿ ಶ್ರೀರಾಮುಲು ಉಗ್ರಪ್ಪನಿಗೆ 'ಬಸ್ತಿ ಮೆ ಸವಾಲ್' ಎಂಬಂತೆ ದೇವೇಂದ್ರಪ್ಪ ಹೇಳಿದಷ್ಟು ವಚನಗಳನ್ನು ಹೇಳಿಬಿಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಈ ಬಗ್ಗೆ ಬಳ್ಳಾರಿ ಚುನಾವಣಾ ಉಸ್ತುವಾರಿ ಹೊತ್ತಿರುವ ಡಿ ಕೆ ಶಿವಕುಮಾರ್ ಅವರನ್ನು ಕೇಳಿದರೆ, “ಇದರ ಬಗ್ಗೆ ಆಮೇಲೆ ಮಾತಾಡ್ತೇನೆ, ಈ ಹಿಂದೆ ಶಾಂತಾ ದೆಹಲಿಗೆ, ಡಿಕೆಶಿ ಜೈಲಿಗೆ ಎಂದಿದ್ದು ಏನಾಯಿತು?” ಎಂದು ಕುಟುಕಿ ನೆನಪಿಸಿದ್ದಾರೆ.ಇದನ್ನೂ ಓದಿ: ಸಚಿವ ಜಿಟಿಡಿ ನೇತೃತ್ವದ ಜೆಡಿಎಸ್​ ಸಭೆಯಲ್ಲಿ ಗದ್ದಲ; ಪ್ರಧಾನಿ ಮೋದಿಗೆ ಜೈಕಾರ ಕೂಗಿದ ದಳ ಕಾರ್ಯಕರ್ತರು

ಒಂದೆಡೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೇವೇಂದ್ರಪ್ಪ ಸಾಕಷ್ಟು ರಾಜಕೀಯ ಅನುಭವ ಹೊಂದಿದ ಜವಾರಿ ಮನುಷ್ಯ. ಇನ್ನೊಂದೆಡೆ, ವೇದಿಕೆ ದೊರೆತರೆ ಸಾಕು ಗಂಟೆಗಟ್ಟಲೆ ಮಾತನಾಡಬಲ್ಲ ವಕೀಲ ಉಗ್ರಪ್ಪ. ಇವರಿಬ್ಬರ ಮಧ್ಯೆ ರಾಮುಲು ವಚನಗಳ ಸವಾಲು ಹಾಕಿದ್ದಾರೆ. ಚುನಾವಣೆ ಮುಗಿಯುವುದರೊಳಗೆ ಅದೆಷ್ಟು ಸವಾಲುಗಳು, ವಾಕ್ಸಮರಗಳನ್ನು ನೋಡಬೇಕೋ? ಮತದಾರಪ್ರಭುವಿಗೂ ಗೊತ್ತಿಲ್ಲ ಅನಿಸುತ್ತೆ.

(ವರದಿ: ಶರಣು ಹಂಪಿ)
First published:April 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ