ಮನರಂಜನೆಗೆಂದು ಒಂಟೆಗಳನ್ನು ಕರೆಸಿಕೊಂಡು, ಅಲೆಮಾರಿ ಜನರ ಬದುಕನ್ನು ಒಂಟಿ ಮಾಡಿದ ಬಳ್ಳಾರಿ ಜಿಲ್ಲಾಡಳಿತ!

ಸಂಸದೆ ಮನೇಕಾ ಗಾಂಧಿಯವರ ನಿರ್ದೇಶನದ ಮೇರೆಗೆ ಪೊಲೀಸರು ಒಂಟೆಗಳನ್ನು ವಶಕ್ಕೆ ಪಡೆದು ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇಟ್ಟಿದ್ದಾರೆ. ಒಂಟೆಗಳ ಮೂಲಕ ಜೀವನ ಸಾಗಿಸುತ್ತಿದ್ದ ಇವರ ಬದುಕು ಈಗ ಬೀದಿಗೆ ಬಿದ್ದಿದೆ.

G Hareeshkumar | news18
Updated:July 22, 2019, 11:27 PM IST
ಮನರಂಜನೆಗೆಂದು ಒಂಟೆಗಳನ್ನು ಕರೆಸಿಕೊಂಡು, ಅಲೆಮಾರಿ ಜನರ ಬದುಕನ್ನು ಒಂಟಿ ಮಾಡಿದ ಬಳ್ಳಾರಿ ಜಿಲ್ಲಾಡಳಿತ!
ಟೆಂಟ್​​ ನಲ್ಲಿ ಜೀವನ ಸಾಗಿಸುತ್ತಿರುವ ಅಲೆಮಾರಿಗಳು
  • News18
  • Last Updated: July 22, 2019, 11:27 PM IST
  • Share this:
ಬಳ್ಳಾರಿ (ಜು.22) : ಅವರೆಲ್ಲಾ ಅಲೆಮಾರಿ ಸಮುದಾಯದ ಜನರು. ಒಂಟೆಗಳನ್ನು  ನಂಬಿಕೊಂಡೇ ಜೀವನ ಸಾಗಿಸುತ್ತಿದ್ದವರು. ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಹಂಪಿ ಉತ್ಸವಕ್ಕೆ ಮನರಂಜನೆಗಾಗಿ ಮಹಾರಾಷ್ಟ್ರದಿಂದ ಬಳ್ಳಾರಿ ಜಿಲ್ಲಾಡಳಿತ ಇವರ ಒಂಟೆಗಳನ್ನು ತರಿಸಿಕೊಂಡಿತ್ತು. ಆದರೆ ಹಂಪಿ ಉತ್ಸವದ ಬಳಿಕ ಪ್ರಾಣಿ ಹಿಂಸೆ ಆರೋಪದ ಮೇಲೆ ಒಂಟೆಗಳನ್ನು ಪೊಲೀಸ್​ ಇಲಾಖೆ ವಶಕ್ಕೆ ಪಡೆದಿದ್ದು, ಇದೀಗ ಒಂಟೆಗಳನ್ನು ಕೊಡುವಂತೆ ಆದಿವಾಸಿ ಜನಗಳು ಕಣ್ಣೀರಿಡುತ್ತಿದ್ದಾರೆ.

ಬಳ್ಳಾರಿ ಜಿಲ್ಲಾಡಳಿತ ಕಳೆದ ಮಾರ್ಚ್ ತಿಂಗಳಲ್ಲಿ ಆಯೋಜಿಸಿದ್ದ ಹಂಪಿ ಉತ್ಸವದಲ್ಲಿ ಪ್ರದರ್ಶನಕ್ಕಾಗಿ ಮಹಾರಾಷ್ಟ್ರದ ಪುಣೆ, ಅಹ್ಮದ್ ನಗರ, ಸೊಲ್ಲಾಪುರ ಜಿಲ್ಲೆಯ ಅಲೆಮಾರಿ ಜನರನ್ನು ಸಂಪರ್ಕಿಸಿ ಉತ್ಸವಕ್ಕೆ ಒಂಟೆಗಳನ್ನು ಕರೆದುಕೊಂಡು ಬರುವಂತೆ ಸೂಚಿಸಿತ್ತು. ಅದಕ್ಕಾಗಿ ಹಂಪಿ ಉತ್ಸವ ಸಮಿತಿ ಮುಂಗಡವಾಗಿ ಒಂಟೆ ಮಾಲೀಕರ ಖಾತೆಗೆ 40 ಸಾವಿರ ಹಣವನ್ನು ನೀಡಿತ್ತು. ಸಾಗಣೆಗಾಗಿ ಬೇಕಾದ ಪರವಾನಗಿಯನ್ನು ನೀಡಿತ್ತು. ಮಾರ್ಚ್ 2 ರಂದು ಹಂಪಿ ಉತ್ಸವಕ್ಕೆ 9 ಒಂಟೆಗಳನ್ನು ತರಲಾಗಿತ್ತು. ಆದರೆ, ಮಾರ್ಚ್​ 1ರಂದು ಬರಬೇಕಿದ್ದ ಒಂಟೆಗಳು ಒಂದು ತಡವಾಗಿ ಬಂದಿದ್ದರಿಂದ ಉತ್ಸವ ಸಮಿತಿಯವರು ಉಳಿದ ಹಣವನ್ನು ನೀಡದೆ ಸತಾಯಿಸಿದ್ದಾರೆ. ಇದರಿಂದ ವಾಪಸ್​ ತಮ್ಮ ಊರುಗಳಿಗೆ ತೆರಳಲು ದುಡ್ಡಿಲ್ಲದೇ ಆ ಆದಿವಾಸಿಗಳು ಜನಗಳು ತಮ್ಮ ಒಂಟೆಗಳೊಂದಿಗೆ ಅಲ್ಲಿಯೇ ಬೀಡುಬಿಟ್ಟಿದ್ದಾರೆ. ಈ ವೇಳೆ ಮಕ್ಕಳನ್ನು ಒಂಟೆ ಮೇಲೆ ಕೂರಿಸಿ, ಸುತ್ತು ಹಾಕಿಸುತ್ತಾ ಜೀವನ ಸಾಗಿಸಲು ಆರಂಭಿಸಿದ್ದಾರೆ. ಪ್ರಾಣಿಗಳನ್ನು ಮೇಲೆ ಜನರನ್ನು ಕೂರಿಸಿಕೊಂಡು ಹೋಗುವುದನ್ನು ಕೆಲವರು ಫೋಟೋ ತೆಗೆದು, ಪ್ರಾಣಿಗಳನ್ನು ಹಿಂಸೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಸದೆ ಮನೇಕಾ ಗಾಂಧಿ ಅವರಿಗೆ ಫೋಟೋವನ್ನು ಟ್ವಿಟರ್​ನಲ್ಲಿ ಕಳುಹಿಸಿದ್ದಾರೆ.

 ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ!

ಸಂಸದೆ ಮನೇಕಾ ಗಾಂಧಿಯವರ ನಿರ್ದೇಶನದ ಮೇರೆಗೆ ಪೊಲೀಸರು ಒಂಟೆಗಳನ್ನು ವಶಕ್ಕೆ ಪಡೆದು ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇಟ್ಟಿದ್ದಾರೆ. ಒಂಟೆಗಳ ಮೂಲಕ ಜೀವನ ಸಾಗಿಸುತ್ತಿದ್ದ ಇವರ ಬದುಕು ಈಗ ಬೀದಿಗೆ ಬಿದ್ದಿದೆ.

ಪತ್ರ


ಈ ಸಂಬಂಧ ಅಲೆಮಾರಿ ಸಮುದಾಯದವರು ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ, ಒಂಟೆಗಳನ್ನು ಕೊಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದಿಕ್ಕೆ ತೋಚದೆ ಆದಿವಾಸಿ ಜನಗಳು ಹೊಸಪೇಟೆ ತಾಲೂಕಿನ ಕೊಂಡನಾಯಕನಹಳ್ಳಿ ಬಳಿ ಟೆಂಟ್​​​ ಗಳನ್ನ ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ.

ಕೆಲವರು ಒಂಟೆಗಳನ್ನು ಮಾರಾಟ ಮಾಡಲು ತಂದಿದ್ದಾರೆ ಅನ್ನೋ ಸುಳ್ಳು ಮಾಹಿತಿ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕೇಳಿರುವ ಎಲ್ಲಾ ದಾಖಲೆಗಳನ್ನು ಅಲೆಮಾರಿ ಸಮುದಾಯವರು ನೀಡಿದ್ದಾರೆ. ಆದರೂ ಜಿಲ್ಲಾಡಳಿತ ಒಂಟೆಗಳನ್ನ ಬಿಡುತ್ತಿಲ್ಲ. ಹೀಗಾಗಿ ಟೆಂಟ್​​ಗಳಲ್ಲಿ ವಾಸ ಮಾಡುತ್ತಿರುವ ಇವರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಒಂಟೆಗಳನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಬೇಕು ಎಂದು ಕನ್ನಡ ವಿವಿ ಪ್ರಾಧ್ಯಾಪಕ ಡಾ ಕೆ ಎಂ ಮೇತ್ರಿ ಒತ್ತಾಯಿಸುತ್ತಿದ್ದಾರೆ.ಇದನ್ನೂ ಓದಿ : ಅಧಿಕಾರ ಭಯದಿಂದ ಹಂಪಿ ಉತ್ಸವಕ್ಕೆ ಗೈರಾದ್ರಾ ಸಿಎಂ ಕುಮಾರಸ್ವಾಮಿ?

ಹಂಪಿ ಉತ್ಸವಕ್ಕೆ ಒಂಟೆಗಳನ್ನು ಕರೆಯಿಸಿ, ಈಗ ಒಂಟೆಗಳನ್ನ ವಶಕ್ಕೆ ಪಡೆದು ಅಲೆಮಾರಿ ಜನರನ್ನು ಬೀದಿಗೆ ತಳ್ಳಿರುವ ಜಿಲ್ಲಾಡಳಿತದ ವಿರುದ್ದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರವನ್ನು ಮತ್ತೊಮ್ಮೆ ಪುನರ್ ಪರಿಶೀಲನೆ ನಡೆಸಬೇಕಾಗಿದೆ. ಇಲ್ಲದಿದ್ರೆ ಅಲೆಮಾರಿಗಳ ಬದುಕು ಮತ್ತಷ್ಟು ದುಸ್ಥರವಾಗಲಿದೆ.

ವರದಿ : ಶರಣು ಹಂಪಿ

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ