ಬಳ್ಳಾರಿ ಮುನಾವರ್ ಬಿರಿಯಾನಿಗೆ ಬಾಲಿವುಡ್ ದಿಗ್ಗಜರು ಫಿದಾ!

news18
Updated:June 15, 2018, 6:26 PM IST
ಬಳ್ಳಾರಿ ಮುನಾವರ್ ಬಿರಿಯಾನಿಗೆ ಬಾಲಿವುಡ್ ದಿಗ್ಗಜರು ಫಿದಾ!
news18
Updated: June 15, 2018, 6:26 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಜೂ 15) :  ಇಸ್ಲಾಂ ಬಾಂಧವರ ಪವಿತ್ರ ರಂಜಾನ್ ಹಬ್ಬ ಬಂತಂದ್ರೆ ಸಾಕು ಮಾಂಸಹಾರಿಗಳಿಗೆ ಖುಷಿಯೋ ಖುಷಿ. ರಂಜಾನ್ ಹಬ್ಬಕ್ಕಾಗಿಯೇ ಹೈದ್ರಾಬಾದ್ ನಲ್ಲಿ ಸಿಗುವ ಬಿರಿಯಾನಿ, ಹಲೀಮ್ ಸ್ಪೆಷಲ್, ಮಟನ್ ಹಲೀಮ್ ರುಚಿಕರ ತಿನಿಸು ಎಲ್ಲೆಡೆ ಸಿಗೋದಿಲ್ಲ ಎಂಬ ಕೊರಗಿದೆ. ಆದರೆ ಗಣಿನಾಡು ಬಳ್ಳಾರಿಯ ಮೊಹಮ್ಮದ್ ಮುನಾವರ್ ತಯಾರಿಸುವ ಬಿರಿಯಾನಿಗೆ ತಲೆದೂಗಿದವರಿಲ್ಲ. ಇವರು ಮಾಡುವ ಟೇಸ್ಟಿ ಬಿರಿಯಾನಿಗೆ ಬಾಲಿವುಡ್ ನಟರು ಫಿದಾ ಆಗಿದ್ದಾರೆ.

ಬಳ್ಳಾರಿಯಲ್ಲಿ ಪುಟ್ಟದಾದ ಹೋಟೆಲ್ ಮೂಲಕ ದೇಶದಾದ್ಯಂತ ಇವರ ನಾನ್ ವೆಜ್ ಡಿಶಷ್ ಉಣಬಡಿಸಿ ಹೆಸರುವಾಸಿಯಾಗಿದ್ದಾರೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಬ್ಬ ಬಂತಂದ್ರೆ ಸಾಕು ನೆನ್ ವೆಜ್ ಪ್ರಿಯರಿಗೆ ಎಲ್ಲಿಲ್ಲದ ಖುಷಿ. ಪ್ರತಿಯೊಬ್ಬರೂ ಹೈದ್ರಾಬಾದ್ ಬಿರಿಯಾನಿ ಬಗ್ಗೆ ಮಾತನಾಡುತ್ತಾರೆ. ಆದರೆ ಹೈದ್ರಾಬಾದ್ ನಲ್ಲಿ ಸಿಗುವ ಬಿರಿಯಾನಿ ಟೇಸ್ಟ್ ಬಳ್ಳಾರಿಯಲ್ಲಿಯೂ ಸಿಗುತ್ತೆ.

ಬಾಯಲ್ಲಿಟ್ಟುಕೊಂಡರೆ ಹಾಗೇ ಕರಗಿಹೋಗಿಬಿಡುತ್ತೇನೋ ಎಂಬಷ್ಟು ರುಚಿಯಾಗಿರುವ ಬಳ್ಳಾರಿಯ ಹೈದ್ರಾಬಾದ್ ಬಿರಿಯಾನಿ ಫಾಸ್ಟ್ ಪುಡ್ ಟೇಸ್ಟ್ ಮಾಡದವರೇ ಇಲ್ಲವೇನೋ? ಅಷ್ಟು ಹೆಸರುವಾಸಿ. ಬೆಂಗಳೂರು ರಸ್ತೆಯ ಪುಟ್ಟದಾದ ಜಾಗದಲ್ಲಿ ನಾನ್ ವೆಜ್ ಪ್ರಿಯರ ಹಾಟ್ ಸ್ಪಾಟ್ ಆಗಿದೆ. ಹೋಟೆಲ್ ಮಾಲಿಕ ಮೊಹಮ್ಮದ್ ಮುನವರ್ ಹುಸೇನ್ ನಳಪಾಕದಲ್ಲಿ ತಯಾರಾದ ಬಿರಿಯಾನಿಯನ್ನು ಬಾಲಿವುಡ್ ದಿಗ್ಗಜರೂ ಸವಿದು ಭೇಷ್ ಬೇಷ್ ಎಂದು ಹೊಗಳಿದ್ದಾರೆ.

ದುಬೈ ನಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುವಾಗ ವೇಳೆ ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಖಾನ್, ಸಲ್ಮಾನ್ ಖಾನ್ ಇವರ ಬಿರಿಯಾನಿ ಸವಿದಿದ್ದಾರೆ. ದಿಗ್ಗಜರಾದ ದಿಲೀಪ್ ಕುಮಾರ್, ಮೊಹಮ್ಮದ್ ರಫಿ, ಸಾಹಿರಾಬಾನು ಸೇರಿದಂತೆ ಅನೇಕ ನಟರು ಇವರ ಬಿರಿಯಾನಿ, ಹಲೀಮ್ ಸೇರಿದಂತೆ ಹಲವು ತಿನಿಸುಗಳ ರುಚಿ ನೋಡಿದ್ದಾರೆ.

ಕಳೆದ 14 ವರುಷಗಳಿಂದ ಬಳ್ಳಾರಿಯಲ್ಲಿ ಪುಟ್ಟದಾದ ಹೋಟೆಲ್ ಇಟ್ಟುಕೊಂಡಿರುವ ಹುಸೇನ್ ಕಟ್ಟಿಗೆಯಲ್ಲಿಯೇ ಮಾಂಸಹಾರ ವಿವಿಧ ತಿನಿಸುಗಳನ್ನು ಮಾಡಿ ಜನರಿಗೆ ಉಣಬಡಿಸುತ್ತಿದ್ದಾರೆ. ಹೈದ್ರಾಬಾದ್ ನ ಚಾದರಾಘಾಟ್ ನಲ್ಲಿ ಪ್ರಸಿದ್ಧ ಹೋಟೆಲ್ ನಲ್ಲಿ ಅಡುಗೆ ದಿನಿಸು ಕಲಿತು, ಉಮನ್ ದೇಶದ ಅಲುಬಾಸ್ತಾನ್ ಹೋಟೆಲ್ ನಲ್ಲಿ ಹತ್ತು ವರುಷಗಳ ಹುಸೇನ್ ಕೆಲಸ ಮಾಡಿದ ಅನುಭವವಿರುವ ಮುನಾವರ್ ದುಬೈನಲ್ಲಿ ಕೆಲಸ ಮಾಡಿ ಬಳ್ಳಾರಿಯಲ್ಲಿ ಹೈದ್ರಾಬಾದ್ ಬಿರಿಯಾನಿ ಫಾಸ್ಟ್ ಫುಡ್ ನಡೆಸುವ ಮೂಲಕ ಸೆಟಲ್ ಆಗಿದ್ದಾರೆ.

ರಂಜಾನ್ ಹಬ್ಬದ ಸಂದರ್ಭದಲ್ಲಿಯಂತೂ ಹಲೀಮ್, ಸ್ಟಿಕ್ ಚಿಕನ್, ಖೈಮಾ ಬಾಲ್ಸ್, ಹೈದ್ರಾಬಾದ್ ನ ಫೇಮಸ್ ಚಿಕನ್ ಚಾರಾ ಸೇರಿದಂತೆ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ತಾವೇ ಖುದ್ದು ಮಸಾಲೆಗಳನ್ನು ತಯಾರಿಸಿ ಬಿರಿಯಾನಿ ಮಾಡುವುದು ಇವರ ಅಡುಗೆ ತಯಾರಿಯ ಮತ್ತೊಂದು ವಿಶೇಷ.

ಪುಟ್ಟ ಹೋಟೆಲ್ ಆದರೂ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದಲೂ ಗಣ್ಯರು ಕಾರಿನಲ್ಲಿ ಆಗಮಿಸಿ ತಮಗೆ ಇಷ್ಟವಾದ ನಾನ್ ವೆಜ್ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ಮೈಸೂರು, ಹಾಸನ ಸೇರಿದಂತೆ ಹಲವೆಡೆ ಪಾರ್ಸೆಲ್ ತರಿಸಿಕೊಂಡು ತಿನ್ನುವ ಅಭಿಮಾನಿಗಳು ಇದ್ದಾರೆ. ಮಾಜಿ ಸಚಿವ ರೋಷನ್ ಬೇಗ್ ಸೇರಿದಂತೆ ಶಾಸಕರು, ಮಾಜಿ ಸಚಿವರು ಗಣ್ಯಮಾನ್ಯರು ಇವರ ಬಿರಿಯಾನಿಗೆ ಫಿದಾ ಆಗಿದ್ದಾರೆ.

ಮೂಲತಃ ಮೊಹಮ್ಮದ್ ಹುಸೇನ್ ರಾಯಚೂರಿನವರಾದ್ರೂ ಬಳ್ಳಾರಿಯಲ್ಲಿ ಪುಟ್ಟದೊಂದು ಹೋಟೆಲ್ ಮೂಲಕ ರಾಜ್ಯದ ವಿವಿದಡೆ ಸ್ಪೆಷೆಲ್ ಬಿರಿಯಾನಿ, ಡಿಶಷ್ ಮೂಲಕ ತಮ್ಮ ಸವಿಯೂಟವನ್ನು ಪಸರಿಸಿದ್ದಾರೆ. ಬಾಲಿವುಡ್ ಗಾಯಕ ಮೊಹಮ್ಮದ್ ರಫಿಯ ದೊಡ್ಡ ಅಭಿಮಾನಿಯಾಗಿರುವ ಮುನಾವರ್ ಪ್ರತಿವರುಷ ಚಾಚೂ ತಪ್ಪದೇ ಪುಣ್ಯತಿಥಿ ಕಾರ್ಯಕ್ರಮ ಮಾಡಿ ಪ್ರೀತಿಯಿಂದ ಅಭಿಮಾನಿಗಳಿಗೆ ಬಿರಿಯಾನಿ ಉಣಬಡಿಸುತ್ತಾರೆ.

ಇವರ ಕೈಅಡುಗೆಯನ್ನು ಬಾಲಿವುಡ್ ನ ಬಹುತೇಕ ಗಣ್ಯರು ಇವರ ರುಚಿ ಸವಿದಿದ್ದಾರೆ. ಇದೀಗ ಬಳ್ಳಾರಿಯಲ್ಲಿ ನಾನ್ ವೆಜ್ ಟೇಸ್ಟ್ ಉಣಬಿಡಿಸುತ್ತಿದ್ದಾರೆ.
First published:June 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ