ಬಳ್ಳಾರಿಯ ಗಣಿದಣಿಗಳ ಚಿತ್ತ ಜೆಡಿಎಸ್​ನತ್ತ; ಬಿಜೆಪಿ, ಕಾಂಗ್ರೆಸ್ಸಿಗೆ ಜೆಡಿಎಸ್ ಶಾಕ್..?

ಬಳ್ಳಾರಿಯ ಪ್ರಬಲ ಗಣಿ ಉದ್ಯಮಿಗಳು ಜೆಡಿಎಸ್ ಪಕ್ಷದತ್ತ ವಾಲುವ ಸೂಚನೆ ಸಿಕ್ಕಿದೆ. ನ್ಯೂಸ್18 ಕನ್ನಡಕ್ಕೆ ದೊರಕಿರುವ ಮಾಹಿತಿ ಪ್ರಕಾರ, ಶಾಸಕ ಆನಂದ್ ಸಿಂಗ್ ಮತ್ತು ಅನಿಲ್ ಲಾಡ್ ಅವರು ಜಾತ್ಯತೀತ ಜನತಾ ದಳದತ್ತ ಚಿತ್ತ ಹರಿಸಿದ್ದಾರೆನ್ನಲಾಗಿದೆ. ಇದೇನಾದರೂ ನೆರವೇರಿದರೆ ಬಳ್ಳಾರಿಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಪಕ್ಕಾ ತ್ರಿಕೋನ ಫೈಟ್ ನಡೆಯುವ ನಿರೀಕ್ಷೆ ಇದೆ.


Updated:January 14, 2018, 7:22 PM IST
ಬಳ್ಳಾರಿಯ ಗಣಿದಣಿಗಳ ಚಿತ್ತ ಜೆಡಿಎಸ್​ನತ್ತ; ಬಿಜೆಪಿ, ಕಾಂಗ್ರೆಸ್ಸಿಗೆ ಜೆಡಿಎಸ್ ಶಾಕ್..?
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಎಚ್​ಡಿ ಕುಮಾರಸ್ವಾಮಿ

Updated: January 14, 2018, 7:22 PM IST
ಬೆಂಗಳೂರು(ಜ. 14): ಬಳ್ಳಾರಿಯ ಪ್ರಬಲ ಗಣಿ ಉದ್ಯಮಿಗಳು ಜೆಡಿಎಸ್ ಪಕ್ಷದತ್ತ ವಾಲುವ ಸೂಚನೆ ಸಿಕ್ಕಿದೆ. ನ್ಯೂಸ್18 ಕನ್ನಡಕ್ಕೆ ದೊರಕಿರುವ ಮಾಹಿತಿ ಪ್ರಕಾರ, ಶಾಸಕ ಆನಂದ್ ಸಿಂಗ್ ಮತ್ತು ಅನಿಲ್ ಲಾಡ್ ಅವರು ಜಾತ್ಯತೀತ ಜನತಾ ದಳದತ್ತ ಚಿತ್ತ ಹರಿಸಿದ್ದಾರೆನ್ನಲಾಗಿದೆ. ಇದೇನಾದರೂ ನೆರವೇರಿದರೆ ಬಳ್ಳಾರಿಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಪಕ್ಕಾ ತ್ರಿಕೋನ ಫೈಟ್ ನಡೆಯುವ ನಿರೀಕ್ಷೆ ಇದೆ.

ಬಳ್ಳಾರಿಯ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರು ಟಿಪ್ಪು ಜಯಂತಿ ವಿಚಾರದಲ್ಲಿ ಪಕ್ಷದ ವಿರುದ್ಧ ರೆಬೆಲ್ ಆದವರು. ಚುನಾವಣೆ ಆಫಿಡವಿಟ್​ನಲ್ಲಿ ಗುರುತಿಸಿಕೊಂಡಿರುವ ಪ್ರಕಾರ, ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲೊಬ್ಬರೆನಿಸಿರುವ ಆನಂದ್ ಸಿಂಗ್ ಅವರು ಪಕ್ಷದ ಸೂಚನೆ ಮೀರಿ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ತೊರೆಯಬಹುದೆಂಬ ಲೆಕ್ಕಾಚಾರವೂ ಆಗಿನಿಂದಲೇ ಶುರುವಾಗಿತ್ತು.

ಇನ್ನು, ಕಾಂಗ್ರೆಸ್ ಪಕ್ಷದ ಅನಿಲ್ ಲಾಡ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮೊದಲಿಂದಲೇ ಒಳ್ಳೆಯ ಸಂಬಂಧವೇ ಇದೆ. ಅವರಿಬ್ಬರು ಒಂದು ಕಾಲದ ಗಳಸ್ಯ-ಕಂಠಸ್ಯ ಗೆಳೆಯರು. ಸದ್ಯ, ಕಾಂಗ್ರೆಸ್ ಪಕ್ಷದಿಂದ ತಾನು ರೋಸಿಹೋಗಿರುವುದಾಗಿ ಅನಿಲ್ ಲಾಡ್ ಅವರು ಇತ್ತೀಚಿನ ದಿನಗಳಿಂದ ಹೇಳಿಕೊಂಡು ಬರುತ್ತಿರುವುದು ಕುತೂಹಲ ಮೂಡಿಸಿದೆ. ಇದೀಗ ಅನಿಲ್ ಲಾಡ್ ಅವರು ಜೆಡಿಎಸ್ ಸೇರ್ಪಡೆಯಾಗುವ ಸುದ್ದಿಗೆ ಈ ಹಿನ್ನೆಲೆಯು ಪುಷ್ಟಿಕೊಡುತ್ತದೆ.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ