ಕರ್ನಾಟಕ-ಆಂಧ್ರ ಗಡಿ ವಿವಾದದ ಬಗ್ಗೆ ತುಟಿ ಬಿಚ್ಚದ ಬಿಎಸ್​ವೈ: ಬೆಳಗಾವಿಗೊಂದು, ನಮಗೊಂದು ನ್ಯಾಯವೇ? ಎಂದು ಬಳ್ಳಾರಿಗರ ಪ್ರಶ್ನೆ

ಆಂಧ್ರಪ್ರದೇಶದ ಟಿಡಿಪಿಯ ಸತ್ಯ ಶೋಧನಾ ಸಮಿತಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಗ್ರಪ್ಪ ನೇತೃತ್ವದ ಸಮಿತಿ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ, ವರದಿ ಸಿದ್ದಪಡಿಸುವ ಮೂಲಕ ಗಡಿ ವಿವಾದವು ರಾಜಕೀಯ ಬಣ್ಣ ಪಡೆದುಕೊಳ್ಳಲು ಕಾರಣವಾಗಿತ್ತು. ನಂತರದಲ್ಲಿ ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಂದರೂ ಎರಡು ರಾಜ್ಯದ ಗಡಿ ಪರಿಹಾರಕ್ಕೆ ಮುಂದಾಗಿರಲಿಲ್ಲ.

news18-kannada
Updated:January 1, 2020, 7:23 PM IST
ಕರ್ನಾಟಕ-ಆಂಧ್ರ ಗಡಿ ವಿವಾದದ ಬಗ್ಗೆ ತುಟಿ ಬಿಚ್ಚದ ಬಿಎಸ್​ವೈ: ಬೆಳಗಾವಿಗೊಂದು, ನಮಗೊಂದು ನ್ಯಾಯವೇ? ಎಂದು ಬಳ್ಳಾರಿಗರ ಪ್ರಶ್ನೆ
ಸಚಿವ ಶ್ರೀರಾಮುಲು ಹಾಗೂ ಸಿಎಂ ಯಡಿಯೂರಪ್ಪ
  • Share this:
ಬಳ್ಳಾರಿ(ಜ.01): ಬೆಳಗಾವಿ ಗಡಿ ವಿವಾದದ ಬೆನ್ನಲ್ಲೇ ದಶಕದ ಹಿಂದಿನ ಆಂಧ್ರ-ಕರ್ನಾಟಕ ಗಡಿ ಒತ್ತುವರಿ ಪ್ರಕರಣ ಮುನ್ನಲೆಗೆ ಬಂದಿದೆ. ​ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಒತ್ತುವರಿ ಪ್ರಕರಣ ಬಗೆಹರಿಸುವಂತೆ ಸುಪ್ರೀಂಕೋರ್ಟ್​ ತೀರ್ಪು ನೀಡಿ ವರ್ಷಗಲೇ ಕಳೆದಿವೆ. ಆದರೆ, ಇಲ್ಲಿಯವರೆಗೂ ಈ ಪ್ರಕರಣ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡಿಲ್ಲ ಎಂಬುದು ವಾಸ್ತವ. 

ಹೌದು, ಬೆಳಗಾವಿ ಗಡಿ ವಿವಾದ ಕುರಿತು ರಾಜ್ಯ ಸರ್ಕಾರ ಕೈಗೊಂಡ ಕ್ರಮ ಸ್ವಾಗತಾರ್ಹ. ಆದರೀಗ ದಶಕದ ಹಿಂದಿನ ಕರ್ನಾಟಕ-ಆಂಧ್ರಪ್ರದೇಶ ಗಡಿ ಒತ್ತುವರಿ ಪ್ರಕರಣ ಬಗ್ಗೆ ಇದೇ ಸಿಎಂ ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಹೀಗಾಗಿ ಜನರಲ್ಲಿ ರಾಜ್ಯ ಸರ್ಕಾರದ ನಡೆ ಬಗ್ಗೆ ಬೇಸರವಾಗಿದೆ. ಅಲ್ಲದೇ ಬೆಳಗಾವಿಗೊಂದು, ಬಳ್ಳಾರಿಗೊಂದು ನ್ಯಾಯವೇ? ಎಂಬ ಪ್ರಶ್ನೆಯೂ ಕಾಡುತ್ತಿದೆ. ಜತೆಗೆ ಸರ್ಕಾರ ಎರಡು ವಿವಾದಗಳಲ್ಲೂ ದ್ವಂದ್ವ ನೀತಿ ಅನಿಸುತ್ತಿದ್ದಾರೆ ಎಂಬ ಅನುಮಾನ ಮೂಡಿದೆ.

ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿದ್ದವರು ಇದೇ ಯಡಿಯೂರಪ್ಪ. ಅಂದು 2009ರಲ್ಲಿ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಗಡಿ ವಿವಾದ ಕುರಿತು ಮಾಹಿತಿ ನೀಡುತ್ತೇವೆ. ಈ ಬಗ್ಗೆ ಸರ್ವೇ ಮಾಡಲು ರಾಜ್ಯ ಸರ್ಕಾರ ಸಹಕರಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದರು.

ಇದಾಗಿ ಬಳಿಕ ಹತ್ತು ವರುಷಗಳೇ ಕಳೆದಿವೆ. ರಾಜ್ಯದ ಬಳ್ಳಾರಿ ಹಾಗೂ ಆಂಧ್ರದ ಅನಂತಪುರ ಗಡಿಭಾಗ ಗುರುತಿಸುವ ಪ್ರಯತ್ನಗಳಾದರೂ ಬಗೆಹರಿಯಲಿಲ್ಲ. 2008ರಲ್ಲಿ ಅರಣ್ಯ ನಾಶ, ಅಕ್ರಮ ಗಣಿಗಾರಿಕೆ, ಗಡಿರೇಖೆಗಳನ್ನೇ ನಾಶ ಮಾಡಿದ ಆರೋಪ ಮಾಜಿ ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಮೇಲಿದೆ. ಅಲ್ಲಿನ ಗಣಿ ಕಂಪನಿಗಳು ಕೋರ್ಟ್ ಮೊರೆ ಹೋಗಿದ್ದವು. 2013ರಲ್ಲಿ ಸುಪ್ರಿಂಕೋರ್ಟ್ ಸೂಚನೆ ಹಿನ್ನೆಲೆ ರಾಜ್ಯ ಹಾಗೂ ಆಂಧ್ರಪ್ರದೇಶದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ಆಫ್ ಇಂಡಿಯಾ ಹಲವು ಬಾರಿ ಸರ್ವೆ ನಡೆಸಿದೆ. ಸದ್ಯ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಈ ಹಿಂದೆ ಪತ್ರ ಬರೆದು ಮನವಿ ಮಾಡಿದ್ದ ಯಡಿಯೂರಪ್ಪ ರಾಜ್ಯ ಆಂಧ್ರ ಗಡಿ ವಿವಾದವನ್ನು ಯಾಕೆ ಬಗೆಹರಿಸಲು ಮುಂದಾಗುತ್ತಿಲ್ಲ? ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಗಡಿಭಾಗದಲ್ಲಿ ಗಣಿ ಕಂಪನಿಗಳು, ಮಾಲಿಕರು ಯಾರು?

ಮಾಜಿ ಸಚಿವ ಜನಾರ್ದನ ರೆಡ್ಡಿ ಪಾಲುದಾರತ್ವದ ಓಎಂಸಿ - 1,ಓಎಂಸಿ - 2, ಓಎಂಸಿ - 3 ಮತ್ತು ಅನಂತಪುರ ಮೈನಿಂಗ್ ಕಾರ್ಪೋರೇಷನ್ ಕಂಪನಿ ಗಣಿಗಾರಿಕೆ ಕಳೆದ ಏಳೆಂಟು ವರ್ಷದಿಂದ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಕೆಲವೊಂದು ಗಣಿ ಕಂಪನಿಗಳು,ಅಕ್ರಮ ಗಣಿಗಾರಿಕೆ ವಿರೋ ಹೋರಾಟಗಾರರು ಗಡಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಸುಪ್ರೀಂಕೋರ್ಟ್ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದವು.

ಎರಡು ರಾಜ್ಯಗಳಿಗೆ ಹೊಂದಿಕೊಂಡಿರುವ ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಸಿಬ್ಬಂದಿಗಳು ಗುರುತಿಸಿರುವ ಪಾಯಿಂಟ್ಗಳನ್ನು ಮೂಲವಾಗಿಟ್ಟು ಡಿಜಿಪಿಎಸ್ ಸರ್ವೇಯನ್ನು ಬುಧವಾರದಿಂದ ಆರಂಭಿಸಲಿದ್ದಾರೆ. ಮಂಗಳವಾರ ನಡೆದ ಸಭೆಯಲ್ಲಿ ಸರ್ವೇ ಆಫ್ ಇಂಡಿಯಾದ ಅಕಾರಿಗಳೊಂದಿಗೆ ರಾಜ್ಯದ ಸರ್ವೇ ಸೆಟ್ಲ್ಮೆಂಟ್ ಕಮಿಷನರ್ ಮನೀಷ್ ಮೌದ್ಗೀಲ್, ಅರಣ್ಯ ಇಲಾಖೆಯ ಸಿಸಿಎಫ್ ಬಿಸ್ವಜಿತ್ ಮಿಶ್ರಾ, ಬಳ್ಳಾರಿ ಜಿಲ್ಲಾಕಾರಿ ಡಾ.ರಾಮ್ ಪ್ರಸಾತ್ ಮನೋಹರ್, ಆಂಧ್ರಪ್ರದೇಶದ ಲ್ಯಾಂಡ್ ರೆಕಾಡ್ರ್ಸ್ನ ಜಂಟಿ ನಿರ್ದೇಶಕರು, ಬಳ್ಳಾರಿ ಡಿಎಫ್ಓ ರಮೇಶ್, ಅನಂತಪುರ ಡಿಎಫ್ಓ ಚಂದ್ರಶೇಖರ್ ಸೇರಿದಂತೆ ಎರಡು ರಾಜ್ಯಗಳ ಮೂರು ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಇದನ್ನೂ ಓದಿ: ವಿಶ್ವಕರ್ಮ‌ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ., ಸರ್ಕಾರದಿಂದ ಜಕಣಾಚಾರಿ ಸಂಸ್ಮರಣಾ ದಿನಾಚರಣೆ; ಬಿಎಸ್​ವೈ ಘೋಷಣೆ

ಏನಿದು ಪ್ರಕರಣ?:  ಎರಡು ರಾಜ್ಯಗಳ ಮಧ್ಯೆ ವಿವಾದದ ಪ್ರದೇಶವನ್ನು ಸರ್ವೇ ಮಾಡಿ ಗಡಿ ಗುರುತು ಮಾಡಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದ್ದರೂ, ಅಕ್ರಮ ಗಣಿಗಾರಿಕೆ ವಿರುದ್ಧ ರಣಕಹಳೆ ಹೂದಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಐದು ವರ್ಷವಾದರೂ ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿ ಸರ್ವೇ ಮಾಡುವುದಕ್ಕೆ ಆಸಕ್ತಿ ತೋರಿಲ್ಲ ಎನ್ನುವ ಆರೋಪವಿತ್ತು. ಕಳೆದ ಏಳೆಂಟು ವರ್ಷಗಳಿಂದೆ ಆಂಧ್ರಪ್ರದೇಶದಲ್ಲಿರುವ ಜನಾರ್ದನ ರೆಡ್ಡಿ ಅವರ ಪಾಲುದಾರತ್ವ ಓಎಂಸಿ ಗಣಿ ಕಂಪನಿಯು ಕರ್ನಾಟಕ ರಾಜ್ಯದ ಗಡಿ ಗುರುತು ನಾಶಪಡಿಸಿ ಗಣಿಗಾರಿಕೆ ಮಾಡಿರುವ ಆರೋಪ ಕೇಳಿ ಬಂದಿತ್ತು.

ಆಂಧ್ರಪ್ರದೇಶದ ಟಿಡಿಪಿಯ ಸತ್ಯ ಶೋಧನಾ ಸಮಿತಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಗ್ರಪ್ಪ ನೇತೃತ್ವದ ಸಮಿತಿ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ, ವರದಿ ಸಿದ್ದಪಡಿಸುವ ಮೂಲಕ ಗಡಿ ವಿವಾದವು ರಾಜಕೀಯ ಬಣ್ಣ ಪಡೆದುಕೊಳ್ಳಲು ಕಾರಣವಾಗಿತ್ತು. ನಂತರದಲ್ಲಿ ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಂದರೂ ಎರಡು ರಾಜ್ಯದ ಗಡಿ ಪರಿಹಾರಕ್ಕೆ ಮುಂದಾಗಿರಲಿಲ್ಲ.
First published:January 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ