ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗ್ತಿದೆ ಬಳ್ಳಾರಿ ಬಿಜೆಪಿ ಟಿಕೆಟ್; ದೇವೇಂದ್ರಪ್ಪ ಪರ ರಾಮುಲು ಬ್ಯಾಟಿಂಗ್?

ಬಿ. ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಬಿಜೆಪಿಗೆ ಬಂದಿರುವುದು ಹಾಗೂ ಅವರಿಗೆ ಟಿಕೆಟ್ ನೀಡುವುದು ಶ್ರೀರಾಮುಲು ಅವರಿಗೆ ಇಷ್ಟವಿದ್ದಂತಿಲ್ಲ.

Vijayasarthy SN | news18
Updated:March 28, 2019, 10:47 PM IST
ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗ್ತಿದೆ ಬಳ್ಳಾರಿ ಬಿಜೆಪಿ ಟಿಕೆಟ್; ದೇವೇಂದ್ರಪ್ಪ ಪರ ರಾಮುಲು ಬ್ಯಾಟಿಂಗ್?
ಶ್ರೀರಾಮುಲು
  • News18
  • Last Updated: March 28, 2019, 10:47 PM IST
  • Share this:
ಬಳ್ಳಾರಿ (ಮಾ. 21): ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ದೆಹಲಿಗೆ ಈಗಾಗಲೇ ಜಾರಕಿಹೊಳಿ ಸಹೋದರರ ಸಂಬಂಧಿ ದೇವೇಂದ್ರಪ್ಪ, ಇಲ್ಲವೇ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಹೆಸರು ಶಿಫಾರಸ್ಸಾಗಿದೆ. ಎರಡರಲ್ಲಿ ಒಂದು ಹೆಸರು ಘೋಷಿಸಲು ಹೈಕಮಾಂಡ್ ಹಿಂದುಮುಂದು ನೋಡುತ್ತಿದೆ. ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಚುನಾವಣಾ ಉಸ್ತುವಾರಿಯಲ್ಲದೇ ಹೋದರೂ ಅವರ ಹಾಗೂ ರಾಜ್ಯ ನಾಯಕರ ನಡುವಿನ ಹಗ್ಗಜಗ್ಗಾಟ ಇದಕ್ಕೆಲ್ಲ ಕಾರಣ ಎನ್ನುತ್ತವೆ ಬಿಜೆಪಿ ಮೂಲಗಳು.

ಕಾಂಗ್ರೆಸ್ ಭದ್ರಕೋಟೆಯಾಗುತ್ತಿರುವ ಬಳ್ಳಾರಿಯಲ್ಲಿ ಹೆಚ್​ಡಿಕೆ ನೇತೃತ್ವದಲ್ಲಿ ನಿರ್ಮಾಣವಾಗಿರುವ ಉಗ್ರಪ್ಪನವರ ಕೋಟೆ ಒಡೆಯಲು ಬಿಜೆಪಿ ಭರ್ಜರಿ ಪ್ಲಾನ್ ಏನೋ ಮಾಡಿದೆ. ಆದರೆ ಆ ಎರಡು ಪ್ಲಾನ್​ನಲ್ಲಿ ಯಾವ ಪ್ಲಾನ್ ಸಕ್ಸಸ್ ಆಗುತ್ತೆ ಅನ್ನೋದರ ಬಗ್ಗೆ ಇನ್ನೂ ನಿರ್ಧಾರವಾಗುತ್ತಿಲ್ಲ. ಬಿಜೆಪಿಯ ಕೆಲ ರಾಜ್ಯ ನಾಯಕರು ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಪರ ಬ್ಯಾಟಿಂಗ್ ಮಾಡಿದರೆ ಶ್ರೀರಾಮುಲು ಬ್ಯಾಟಿಂಗ್ ಮಾಡ್ತಿರೋದು ದೇವೇಂದ್ರಪ್ಪ ಪರ! ಇಂಥದೊಂದು ಸುದ್ದಿ ಬಳ್ಳಾರಿಯಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ. ಯಾಕೆಂದರೆ ನಾಗೇಂದ್ರ ಸಹೋದರ ಪ್ರಸಾದ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವಗೌಡ, ಮಾಜಿ ಎಂಎಲ್​ಸಿ ಮೃತ್ಯುಂಜಯ ಜಿನಗಾ ಬಿಟ್ಟರೆ ಹೇಳಿಕೊಳ್ಳುವಂತಹ ನಾಯಕರು ಕಾಣಸಿಗಲಿಲ್ಲ. ಶ್ರೀರಾಮುಲು, ಸೋಮಶೇಖರ ರೆಡ್ಡಿ ಗೈರುಹಾಜರಿ ಎದ್ದುಹೊಡೆಯುತ್ತಿತ್ತು. ಬಿಜೆಪಿ ಸೇರುವ ಮುನ್ನ ರಾಜ್ಯ ನಾಯಕರನ್ನೆಲ್ಲ ಭೇಟಿ ಮಾಡಿದ್ದೇನೆ ಎಂದಷ್ಟೇ ಸುದ್ದಿಗೋಷ್ಟಿಯಲ್ಲಿ ಹೇಳಿ ಗೈರಾದವರಿಗೆ ಚುರುಕು ಮುಟ್ಟಿಸಿದಂತಿತ್ತು.

ಇದನ್ನೂ ಓದಿ: ಲಾಲ್​ ಬಹಾದ್ದೂರ್​ ಶಾಸ್ತ್ರಿ ಪ್ರತಿಮೆಗೆ ಹಾರಹಾಕಿದ ಪ್ರಿಯಾಂಕಾ: ಶುಚಿಗೊಳಿಸಿದ ಬಿಜೆಪಿ; ಕಾಂಗ್ರೆಸ್ಸಿಗರ ಆಕ್ರೋಶ!

ಬಿಜೆಪಿ ಮೂಲಗಳ ಪ್ರಕಾರ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಬಿಜೆಪಿಗೆ ಬರಲು ಶ್ರೀರಾಮುಲು ಇಷ್ಟವಿಲ್ಲ. ಆಪ್ತ ಜನಾರ್ದನ ರೆಡ್ಡಿ ಅವರು ನಾಗೇಂದ್ರ ಜೊತೆ ಈಗಲೂ ಉತ್ತಮ ಸ್ನೇಹವಿರುವ ಹಿನ್ನೆಲೆಯಲ್ಲಿ ಶ್ರೀರಾಮುಲು ಮೂಲಕ ನಾಗೇಂದ್ರ ಪ್ರಸಾದ್ ಅವರಿಗೆ ಟಿಕೆಟ್ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರಂತೆ. ಆದರೆ ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಶ್ರೀರಾಮುಲು ಪ್ರಾಬಲ್ಯ ಕಡಿಮೆಯಾಗುತ್ತಿದೆ. ಕಳೆದ ಉಪ ಚುನಾವಣೆಯಲ್ಲಿ ತಂಗಿ ಜೆ. ಶಾಂತಾ ಭಾರೀ ಮತಗಳ ಅಂತರದಿಂದ ಸೋತಿರುವುದು ಹಾಗೂ ಜಿಲ್ಲೆಯ ಉಸ್ತುವಾರಿಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ನೀಡಿರುವುದು ಶ್ರೀರಾಮುಲು ಅವರಿಗೆ ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಕಾರಣಕ್ಕೆ ರಾಮುಲು ಹೈಕಮಾಂಡ್​ಗೆ ಚುನಾವಣೆಗೆ ದುಡ್ಡು ಖರ್ಚು ಮಾಡೋರಿಗೆ ಟಿಕೆಟ್ ನೀಡಿ ಎಂದು ಸೂಚ್ಯವಾಗಿ ಹೇಳುವ ಮೂಲಕ ಜಾರಕಿಹೊಳಿ ಸಹೋದರ ಸಂಬಂಧಿ, ಲಿಕ್ಕರ್ ದೊರೆ ವೈ. ದೇವೇಂದ್ರಪ್ಪ ಪರ ಬ್ಯಾಟ್ ಬೀಸಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ಬಳ್ಳಾರಿಯ ತಮ್ಮ ಮನೆಯಲ್ಲಿಯೇ ಇದ್ದರೂ ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿ ಅವರು ನಾಗೇಂದ್ರ ಸಹೋದರನ ಬಿಜೆಪಿ ಸೇರ್ಪಡೆಗೆ ಹಾಜರಾಗಿರಲಿಲ್ಲ. ಈ ಕಾರಣಕ್ಕೆ ನಾಗೇಂದ್ರ ಕುರಿತು ಬೇಕಂತಲೇ “ಅಣ್ಣ ಪಕ್ಷಕ್ಕೆ ಬಂದಿದ್ದಾರೆ, ತಮ್ಮನೂ ಬಿಜೆಪಿಗೆ ಬರುತ್ತಾರೆ” ಎಂದು ಡ್ಯಾಮ್ಯಾಜಿಂಗ್ ಸ್ಟೇಟ್ಮೆಂಟ್ ನೀಡಿದ್ರಾ ಎಂಬ ಅನುಮಾನವೂ ಕಾಡುತ್ತಿದೆ.

ಈಗಾಗಲೇ ದೆಹಲಿಗೆ ರವಾನೆಯಾಗಿರುವ ಪಟ್ಟಿಯಲ್ಲಿ ಬಳ್ಳಾರಿಯ ಎರಡು ಹೆಸರಿನಲ್ಲಿ ರಾಜ್ಯ ನಾಯಕರು ನಾಗೇಂದ್ರನ ಅಣ್ಣನ ಪರ ಬ್ಯಾಟಿಂಗ್ ಮಾಡಿದರೆ, ರಾಮುಲು ದೇವೇಂದ್ರಪ್ಪ ಪರ ಬ್ಯಾಟಿಂಗ್ ಮಾಡುತ್ತಿದ್ದಾರಂತೆ. ಇದರಿಂದ ಇಷ್ಟೊತ್ತಿಗೆ ಟಿಕೆಟ್ ಅನೌನ್ಸ್ ಆಗಬೇಕಾಗಿದ್ದ ಬಳ್ಳಾರಿ ಬಿಜೆಪಿ ಟಿಕೆಟ್ ಇನ್ನೂ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗಿದೆ.

(ವರದಿ: ಶರಣು ಹಂಪಿ)
First published: March 21, 2019, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading