DCC Bank: ಬ್ಯಾಂಕ್ ನಲ್ಲಿದ್ದ ಕೋಟ್ಯಾಂತರ ರೂಪಾಯಿ ಹಣ ಕದ್ದ ಕ್ಯಾಶಿಯರ್, ಕದ್ದ ವಸ್ತುಗಳನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ ಆರೋಪಿ

ಮುರಗೋಡ ಡಿಸಿಸಿ ಬ್ಯಾಂಕ್​​​ನ ಶಾಖೆಯಲ್ಲಿ ಮಾರ್ಚ್ 6ರಂದು ಕಳ್ಳತನ ನಡೆದಿತ್ತು. ಈ ಪ್ರಕರಣದ ತನಿಖೆ ಆರಂಬಿಸಿದ ಬೆಳಗಾವಿ ಪೊಲೀಸರು ಒಂದೇ ವಾರದಲ್ಲಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು

ಆರೋಪಿಗಳನ್ನು ಬಂಧಿಸಿರುವ ಪೊಲೀಸರು

  • Share this:
ಬೆಳಗಾವಿ (ಮಾರ್ಚ್ 14): ಬೆಳಗಾವಿ (Belagavi) ಜಿಲ್ಲೆಯ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಡಿಸಿಸಿ ಬ್ಯಾಂಕ್​​​ನ ಶಾಖೆಯಲ್ಲಿ ಮಾರ್ಚ್ 6ರಂದು ಕಳ್ಳತನ ನಡೆದಿತ್ತು. ಬ್ಯಾಂಕ್ (Bank) ಲಾಕರ್ ಒಡೆಯದೇ ನಕಲಿ ಕೀ ಬಳಸಿ ಕಳ್ಳತನ ಮಾಡಲಾಗಿತ್ತು. ಹೀಗಾಗಿ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ದರೋಡೆಯಲ್ಲಿ 6 ಕೋಟಿ ಮೌಲ್ಯದ ವಸ್ತು ಹಾಗೂ ಹಣ (Money) ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಕೃಷ್ಣಪ್ಪ ಯಲಿಗಾರ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ ಬೆಳಗಾವಿ ಪೊಲೀಸರು (Police) ನಾಲ್ಕು ವಿಶೇಷ ತಂಡ ರಚನೆ ಮಾಡಿ ತನಿಖೆ ಆರಂಭಿಸಿದ್ದರು.  ತನಿಖೆ ನಡೆಸಿದ ಪೊಲೀಸರು ಒಂದೇ ವಾರದಲ್ಲಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂವರು ಖದೀಮರ ಬಂಧನ:

ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಬಸವರಾಜ ಹುಣಶಿಕಟ್ಟಿ (30), ಯರಗಟ್ಟಿ ಗ್ರಾಮದ ಸಂತೋಷ ಕಂಬಾರ (31) ಹಾಗೂ ಸವದತ್ತಿ ತಾಲೂಕಿನ ಜೀವಾಪೂರ ಗ್ರಾಮದ ಗಿರೀಶ ಬೆಳವಲ (26) ಬಂಧಿತ ಆರೋಪಿಗಳು. ಬಂಧಿತರಿಂದ 4.37 ಕೋಟಿ ನಗದು, 1.63 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 6 ಕೋಟಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿದ್ದೇವೆ ಎಂದು ಬೆಳಗಾವಿ ಜಿಲ್ಲೆಯ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ಇದೇ ವೇಳೆ ಕಳ್ಳತನವಾಗಿ ಒಂದು ವಾರದೊಳಗಾಗಿ ಆರೋಪಿಗಳನ್ನು ಬಂಧಿಸಿರುವ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಬ್ಬಿನ ಗದ್ದೆಯಲ್ಲಿ ಕದ್ದ ಹಣ, ಒಡವೆ ಹೂತಿಟ್ಟಿದ್ದರು:

ಬಂಧಿತ ಆರೋಪಿ ಬಸವರಾಜ ಹುಣಶಿಕಟ್ಟಿ ಡಿಸಿಸಿ ಬ್ಯಾಂಕ್​ನಲ್ಲಿ ಕ್ಲರ್ಕ್ ಕಮ್​​ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು. ಈತ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿಕೊಂಡು ನಕಲಿ ಕೀ ಬಳಸ ಡಿಸಿಸಿ ಬ್ಯಾಂಕ್​ ಕಳ್ಳತನ ಮಾಡಿದ್ದಾನೆ. ಒಟ್ಟು 4.37ಕೋಟಿ ಹಣ ಹಾಗೂ 1.63ಕೋಟಿ ಮೌಲ್ಯದ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದರು. ಕದ್ದ ಹಣ, ಒಡವೆಗಳನ್ನು ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ತನ್ನ ಕಬ್ಬಿನ ಗದ್ದೆಯಲ್ಲಿ ಆರೋಪಿಗಳು ಹೊಂಡ ತೆಗೆದು ಹೂತಿಟ್ಟಿದ್ದರು.

ಇದನ್ನೂ ಓದಿ: ಬಿಜೆಪಿ ವರಿಷ್ಠರ ಪ್ಲ್ಯಾನ್ ಸಕ್ಸಸ್; ಬೆಳಗಾವಿ ಡಿಸಿಸಿ ಬ್ಯಾಂಕ್ ಒಮ್ಮತದ ಆಯ್ಕೆ ಮಾಡಿದ ನಾಯಕರು..!

ತನಿಖೆ ನಂತರ ಸತ್ಯ ಬಯಲು:

ಪ್ರಕರಣ ಬೆಳಕಿಗೆ ಬಂದ ಬಳಿಕ ಬ್ಯಾಂಕ್ ಸಿಬ್ಬಂದಿಗಳನ್ನು ಬೆಳಗಾವಿ ಪೊಲೀಸರು ತೀವ್ರ ವಿಚಾರಣೆ ಒಳಪಡಿಸಿದ್ದರು. ಈ ವೇಳೆ ಬಸವರಾಜ ಹುಣಶಿಕಟ್ಟಿ ಗೆಳೆಯರೊಂದಿಗೆ ಸೇರಿಕೊಂಡು ಈ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಜೊತೆಗೆ ಕದ್ದು ಹೂತಿಟ್ಟಿದ್ದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ಸಹ ನೀಡಿದ್ದನು. ಮಾಹಿತಿ ಮೇರೆಗೆ ಪೊಲೀಸರು ‌ಸ್ಥಳಕ್ಕೆ ತೆರಳಿ ಹಣ ಮತ್ತು ಒಡವೆಯನ್ನು ಜಪ್ತಿ ಮಾಡಿಕೊಂಡಿದ್ದು, ಸಧ್ಯ ತನಿಖೆ ಮುಂದುವರೆಸಿದ್ದಾರೆ.

ದೊಡ್ಡ ಸಂಚಲನಕ್ಕೆ ಕಾರಣವಾದ ಕಳ್ಳತನ:

ಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಯಲ್ಲಿ ಕಳ್ಳತನ ಪ್ರಕರಣ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಚಿಕ್ಕ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಇಟ್ಟುಕೊಂಡ ಬಗ್ಗೆ ಅನುಮಾನ ಸಹ ವ್ಯಕ್ತವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಸಿಬ್ಬಂದಿ ಮೇಲೆ ಅನುಮಾನ ಬಂದಿತ್ತು. ಈ ಹಿನ್ನೆಲೆ ತನಿಖೆ ಮಾಡಿದ ಪೊಲೀಸರಿಗೆ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಮುರಗೋಡ ಶಾಖೆಯಲ್ಲಿ ಇದ್ದ ಸಿಸಿಟಿವಿ ಡಿವಿಆರ್ ಅನ್ನು ಆರೋಪಿಗಳು ನದಿಗೆ ಎಸೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ತನಿಖೆಯನ್ನು ಸಹ‌ ಆರಂಭಿಸಿದ್ದಾರೆ. ಮರಗೋಡ ಬ್ಯಾಂಕ್ ಹಣ, ಒಡವೆ ಒತ್ತೆ ಇಟ್ಟು ಸಾಲ ಪಡೆದಿದ್ದ ಗ್ರಾಹಕರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ‌ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕಾಗಿ ಘಟಾನುಘಟಿಗಳ ಪೈಪೋಟಿ; ರಮೇಶ್ ಕತ್ತಿ ತೀವ್ರ ಲಾಭಿ

ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ:

ಕಳ್ಳತನವಾಗಿ ಕೇವಲ ಒಂದು ವಾರದಲ್ಲಿಯೇ ಪ್ರಕರಣವನ್ನು ಬೇಧಿಸಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಬೆಳಗಾವಿ ಜಿಲ್ಲೆಯ ಎಸ್ಪಿ ಲಕ್ಷ್ಮಣ ನಿಂಬರಗಿ ಸಹ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Published by:shrikrishna bhat
First published: