• Home
  • »
  • News
  • »
  • state
  • »
  • Belagavi: ಇಬ್ಬರು ಪತ್ನಿಯರು ದೂರವಾಗಿದ್ದಕ್ಕೆ, 3ನೇ ಮದ್ವೆಯಾದ; ಕೊನೆಗೆ ಆಕೆಯಿಂದಲೇ ಕೊಲೆಯಾದ!

Belagavi: ಇಬ್ಬರು ಪತ್ನಿಯರು ದೂರವಾಗಿದ್ದಕ್ಕೆ, 3ನೇ ಮದ್ವೆಯಾದ; ಕೊನೆಗೆ ಆಕೆಯಿಂದಲೇ ಕೊಲೆಯಾದ!

ವಿದ್ಯಾ ಪಾಟೀಲ್ ಮತ್ತು ಗಜಾನನ

ವಿದ್ಯಾ ಪಾಟೀಲ್ ಮತ್ತು ಗಜಾನನ

ಮೃತ ಗಜಾನನ ಪತ್ನಿಯರು ದೂರವಾಗಿದ್ದಕ್ಕೆ ವಿದ್ಯಾಳನ್ನು ರಿಜಿಸ್ಟರ್ ಮದುವೆಯಾಗಿದ್ದರು. ಓರ್ವ ಮಗನ ಜೊತೆ ಬಸೂರ್ತೆ ಗ್ರಾಮದಲ್ಲಿ ಬೇಕರಿ ಇರಿಸಿಕೊಂಡು ಜೀವನ ನಡೆಸುತ್ತಿದ್ದರು. ಮದುವೆ ಬಳಿಕ ವಿದ್ಯಾ ಸಹ ತನ್ನ ಮಕ್ಕಳೊಂದಿಗೆ ಗಜಾನನ ಮನೆಯಲ್ಲಿ ವಾಸವಾಗಿದ್ದಳು.

  • Share this:

ಜೀವನದಲ್ಲಿ ಮದುವೆ (Marriage) ಅನ್ನೋದು ಒಂದು ಬಾರಿ ಎಂಬ ಮಾತು ಸುಳ್ಳಾಗಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಜಗಳಕ್ಕೂ ದಂಪತಿ (Couple) ವಿಚ್ಛೇದನ (Divorce) ಪಡೆದುಕೊಂಡು ಪ್ರತ್ಯೇಕವಾಗಿ ಜೀವನ ನಡೆಸಲು ಆರಂಭಿಸುತ್ತಾರೆ. ಒಂಟಿ ಜೀವನ ಬೇಸರವಾದಾಗ ಎರಡನೇ ಮದುವೆಗೆ (Second Marriage) ಮುಂದಾಗುತ್ತಾರೆ. ಆದ್ರೂ ಕೆಲವರ ಜೀವನ ಚೆನ್ನಾಗಿರಲ್ಲ. ಈಗ ಅಂತಹವುದೇ ಘಟನೆ  ಬೆಳಗಾವಿ(Belagavi)ಯಲ್ಲಿ ನಡೆದಿದೆ. ವ್ಯಕ್ತಿಯೋರ್ವನ ಕೊಲೆ ಸಂಬಂಧ ಬೆಳಗಾವಿ ಗ್ರಾ. ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.  ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿಯಾದ ಗಜಾನನ ನಾಯಕ್ ಪತ್ನಿಯಿಂದಲೇ ಕೊಲೆಯಾದ ದುರ್ದೈವಿ. ಇಬ್ಬರು ಪತ್ನಿಯರೂ ದೂರವಾಗಿದ್ದಕ್ಕೆ ಗಜಾನನ ನಾಯಕ್ ವಿಧವೆ (Widow) ವಿದ್ಯಾ ಎಂಬಾಕೆಯನ್ನು ಮದುವೆಯಾಗಿದ್ದರು. ಆದರೆ ಈ ಮೂರನೇ ಪತ್ನಿಯೇ ತನ್ನ ಜೀವ ತೆಗೆದುಕೊಳ್ತಾಳೆ ಎಂಬ ವಿಷ್ಯ ಗಜಾನನರಿಗೆ ಗೊತ್ತಿರಲಿಲ್ಲ.


ಮೃತ ಗಜಾನನ ಪತ್ನಿಯರು ದೂರವಾಗಿದ್ದಕ್ಕೆ ವಿದ್ಯಾಳನ್ನು ರಿಜಿಸ್ಟರ್ ಮದುವೆಯಾಗಿದ್ದರು. ಓರ್ವ ಮಗನ ಜೊತೆ ಬಸೂರ್ತೆ ಗ್ರಾಮದಲ್ಲಿ ಬೇಕರಿ ಇರಿಸಿಕೊಂಡು ಜೀವನ ನಡೆಸುತ್ತಿದ್ದರು. ಮದುವೆ ಬಳಿಕ ವಿದ್ಯಾ ಸಹ ತನ್ನ ಮಕ್ಕಳೊಂದಿಗೆ ಗಜಾನನ ಮನೆಯಲ್ಲಿ ವಾಸವಾಗಿದ್ದಳು.


ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ಗಜಾನನ


ಗಜಾನನ ಮೂರನೇ ಪತ್ನಿ ವಿದ್ಯಾಳಿಗಾಗಿ ಸಾಲ ಮಾಡಿಕೊಂಡು ಮನೆ ಸಹ ಕಟ್ಟಿಸಿದ್ದರು. ಆದ್ರೆ ಕೆಲ ದಿನಗಳಿಂದ ವ್ಯಾಪಾರ ಚೆನ್ನಾಗಿ ನಡೆಯದ ಕಾರಣ ಗಜಾನನ ಬೇಕರಿ ಮುಚ್ಚಿದ್ದರು. ಆರ್ಥಿಕ ನಷ್ಟವಾದ ಹಿನ್ನೆಲೆ ಮನೆ ಮಾರಲು ಗಜಾನನ ನಿರ್ಧರಿಸಿದ್ದರು. ಆದ್ರೆ ವಿದ್ಯಾ ಮನೆ ಮಾರಾಟಕ್ಕೆ ಒಪ್ಪಿರಲಿಲ್ಲ.


ಇದನ್ನೂ ಓದಿ:  Kalaburagi: ಪಲ್ಲಂಗದಾಸೆಗಾಗಿ ಪ್ರಾಣ ಕಳೆದುಕೊಂಡ ಮಹಿಳೆ: ವಿದೇಶದಲ್ಲಿ ಪತಿ, ಇಲ್ಲಿ ಮತ್ತೊಬ್ಬನ ಜೊತೆ ಸಂಬಂಧ


ಮನೆ ಮಾರಾಟಕ್ಕೆ ಒಪ್ಪದೇ ಕೊಲೆಗೆ ಸ್ಕೆಚ್ ಹಾಕಿದ್ಳು!


ಮನೆ ಮಾರಾಟ ಮಾಡಲು ಒಪ್ಪದಿದ್ರೆ ತನ್ನ ಜೊತೆಗೆ ಇರುವ ವಿಷಯವನ್ನು ಎಲ್ಲರಿಗೂ ತಿಳಿಸೋದಾಗಿ ಗಜಾನನ ಬೆದರಿಕೆ ಹಾಕಿದ್ದರಂತೆ. ಇದರಿಂದ ವಿದ್ಯಾ ಪತಿಯ ಕೊಲೆಗೆ ಸ್ಕೆಚ್ ಹಾಕಿದ್ದಳು. ಕೊಲೆಗೆ ಗೆಳೆಯ ಪರಶುರಾಮ್ ಗೋಂದಳಿ ಮತ್ತು ಮಗ ಹೃತಿಕ್ ಸಹಾಯ ಪಡೆದುಕೊಂಡಿದ್ದಾಳೆ.


ಕಂಠಪೂರ್ತಿ ಮದ್ಯ ಕುಡಿಸಿ ಕೊಲೆ


ಫೆಬ್ರವರಿ 21ರಂದು ಪತಿಗೆ ತನ್ನ ಮಗನನ್ನು ಊರಿನಲ್ಲಿ ಬಿಟ್ಟು ಬಾ ಅಂತ ಹೇಳಿದ್ದಾಳೆ. ಪತ್ನಿ ಮಾತು ಕೇಳಿದ ಗಜಾನನ ಮೊದಲ ಮಗನನ್ನು ಬೆಳಗುಂದಿ ಗ್ರಾಮದಲ್ಲಿ ಬಿಟ್ಟು ಬಸೂರ್ತೆಗೆ ಬಂದಿದ್ದಾನೆ. ಮನೆಗೆ ಪತಿಗೆ ವಿದ್ಯಾ ಕಂಠಪೂರ್ತಿ ಮದ್ಯ ಕುಡಿಸಿದ್ದಾಳೆ. ನಶೆಯಲ್ಲಿ ಗಜಾನನ ಮಲಗುತ್ತಿದ್ದಂತೆ ಮನೆಗೆ ಬಂದ ಹೃತಿಕ್ ಮತ್ತು ಪರಶುರಾಮ್ ಕತ್ತು ಸೀಳಿ ಗಜಾನನ ಕೊಲೆ ಮಾಡಿದ್ದಾರೆ.


ಕೊಲೆ ಬಳಿಕ ಗಜಾನನ ಡೈರಿ, ಮೊಬೈಲ್ ಫೋನ್ ಜತೆ ಮೂವರು ಎಸ್ಕೇಪ್ ಆಗಿದ್ದರು. ಮರು ದಿನ ಗಜಾನನ ಮಗ ಅವಧೂತ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾ ಪಾಟೀಲ್ ಮೇಲೆ ಅವಧೂತ್ ಸಂಶಯ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ಪ್ರೇಮಿಗಳ ಆತ್ಮಹತ್ಯೆ


ಮದುವೆಗೆ (Love Marriage) ಪೋಷಕರು (Parents) ವಿರೋಧ ವ್ಯಕ್ತಪಡಿಸಿದ್ದರಿಂದ ಬೇಸರಗೊಂಡ ಜೋಡಿ (Couple) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಆನೇಕಲ್ (Anekal) ಸಂಮದೂರು ಬಳಿಯಲ್ಲಿ ರೈಲಿಗೆ ತಲೆಕೊಟ್ಟ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ:  Shocking News: ತನ್ನ 'ಆ ಅಂಗ'ವನ್ನೇ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವೃದ್ಧ! ಕಾರಣ ಕೇಳಿದ್ರೆ ಶಾಕ್


ಮಣಿ ಮತ್ತು ಅನುಷಾ ಆತ್ಮಹತ್ಯೆಗೆ ಶರಣಾದ ಜೋಡಿ. ಮಾರನಾಯಕನಹಳ್ಳಿಯ ಮಣಿ ಹಾಗೂ ಕೊತ್ತಗೊಂಡಪಲ್ಲಿಯ ಅನುಷಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಸಹ ನಿರ್ಧರಿಸಿದ್ದರು. ಆದ್ರೆ ಇಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು ಎಂದು ವರದಿಯಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು